ಧಾರವಾಡದಲ್ಲಿ ನಮಗೆ ‘ಪಂಜುರ್ಲಿ’ಯೇ ಅನ್ನದಾತ

ಜಮೀಲ್ ಸಾವಣ್ಣ

ಮೊದಲನೇ ದಿನ ನಾವು ಧಾರವಾಡಕ್ಕೆ ಹೋದಾಗ ಬುಕ್ಸ್‌ ಎಲ್ಲಾ ಅನ್‌ಲೋಡ್‌ ಮಾಡಿದ್ವಿ. ಅಷ್ಟು ಹೊತ್ತಿಗೆ ರಾತ್ರಿ ಹತ್ತೂ ಮುಕ್ಕಾಲು ಆಗಿತ್ತು. ನಮ್ಮ ಜೊತೆ ಬಂದ ಹುಡುಗರಿಗೆ ಊಟ ಕೊಡಿಸಿ ನಾನು, ಯತಿರಾಜ್‌ ಸಾರ್ ಇಬ್ರೂ ಇನ್ನೇನು ಬಾಗಿಲು ಹಾಕೋಂಥ ಹೋಟೆಲ್‌ಗೆ ಹೋದ್ವಿ. ಅದೇನೂ ನಮಗೆ ಅಷ್ಟೊಂದು ಹಿಡಿಸಲಿಲ್ಲ. ಆದರೆ ನಮಗೆ ಬೇರೆ ದಾರಿ ಏನೂ ಇರಲಿಲ್ಲ. ಅದಕ್ಕೇ ಅಲ್ಲೇ ಊಟ ಮಾಡೋ ಪರಿಸ್ಥಿತಿ ಬಂತು.

ಆದರೆ ಎರಡನೇ ದಿನ ಬೆಳಗ್ಗೇನೇ ಒಂದೆರಡು ಹೋಟೆಲ್‌ ನೋಟ್‌ ಮಾಡಿ ಇಟ್ಕೊಂಡ್ಬಿಟ್ವಿ. ಆದ್ರೂ ಸ್ಟಾಲ್‌ನಲ್ಲಿದ್ದ ಹುಡುಗರಿಗೆ ಊಟ ಕೊಡಿಸಿ ನಾವು ಲಾಡ್ಜ್‌ಗೆ ಬರೋ ಸಮಯಕ್ಕೆ ಹನ್ನೊಂದು ಗಂಟೆ ಆಗೋದು. ಬೆಂಗಳೂರು ಎಂಪೈರ್‌ ಥರಾ ಯಾವ್ದಾದ್ರೂ ಹೋಟೆಲ್‌ ಇರತ್ತೇ ಅನ್ಕೊಂಡು ಹುಡುಕ್ಕೊಂಡು ಹೋದಾಗ ಈ ಪಂಜುರ್ಲಿ ಹೋಟೆಲ್‌ ಸಿಕ್ತು.

ಅಲ್ಲಿ ನಮ್ಗೆ ಪರಿಚಯ ಆದ ವ್ಯಕ್ತಿ ಪ್ರೀತೇಶ್‌ ಶೆಟ್ಟಿ ಎನ್ನೋ ಯುವಕ. ಬಹಳ ಆದರದಿಂದ ಆರ್ಡರ್‌ ತಗೊಂಡು ನಮ್ಗೆ ಯಾವ್ದು ಬೆಸ್ಟೋ ಅದನ್ನ ಕೊಟ್ಟು, ಎಲ್ಲಿಂದ ಬಂದಿದ್ದೀವಿ ಅಂತೆಲ್ಲಾ ಬಹಳ ಬಹಳ ಖುಷಿಯಾಗಿ ವಿಚಾರಿಸ್ಕೊಂಡರು.

ಅದೇನೋ ಗೊತ್ತಿಲ್ಲ. ಅವರು ಸ್ನೇಹಜೀವಿ ಅಂತಾನೋ ಏನೋ ತಕ್ಷಣವೇ ಕ್ಲೋಸ್‌ ಆದ್ವಿ.

ಅದೇ ಥರ ನಾವು ಎರಡ್ನೇ ದಿನಾನೂ ಕಣ್ಮುಚ್ಕೊಂಡು ಅಲ್ಲೇ ಹೋದ್ವಿ. ಎಷ್ಟು ಹೊತ್ತಿಗೆ ಮುಚ್ತೀರಿ ಅಂದಾಗ ಹನ್ನೆರಡು ಗಂಟೆ ಅಂದಿದ್ದರು ಪ್ರೀತೇಶ್‌ ಶೆಟ್ಟಿ. ಆವತ್ತು ಕೂಡ ಯಾವುದು ಬೆಸ್ಟೋ ಅದನ್ನೇ ನಮಗೆ ಕೊಟ್ಟರು.

ಆದರೆ ಮೂರನೇ ದಿನ ನಾವು ಅಂಗಡಿ ಮುಚ್ಚಿ ಪ್ಯಾಕಿಂಗ್‌ ಮುಗಿಸೋ ಹೊತ್ತಿಗೆ ಬಹಳ ಲೇಟ್‌ ಆಗಿತ್ತು. ಹೆಚ್ಚು ಕಡಿಮೆ ರಾತ್ರಿ ಹನ್ನೊಂದೂ ಮುಕ್ಕಾಲಾಗಿತ್ತು.

ವಿಧಿಯಿಲ್ಲದೇ ನಾನು ಮತ್ತು ಯತಿರಾಜ್‌ ಸಾರ್ ಎಲ್ಲಾರಿಗು ಊಟ ತಂದ್ಬಿಡೋಣ ಅಂತ ಕಾರಲ್ಲಿ ಹೊರಟ್ವಿ. ನಮ್ಮ ಗೆಳೆಯರು ಮೂವರು ಕೂಡ ಊಟ ಮಾಡಿರ್ಲಿಲ್ಲ. ಯಾಕೋ ಈಗ್ಲೇ ಹೋಗದಿದ್ರೆ ರಿಸ್ಕು ಅನ್ಕೊಂಡು ಹೊರಟಾಗ ಯತಿರಾಜ್‌ ಸಾರ್, ಫೋನ್‌ ಟ್ರೈ ಮಾಡಾಣ ಅಂತ ಟ್ರೈ ಮಾಡಿದ್ರು. ಗೂಗಲ್‌ಗೆ ಹೋಗಿ ಪಂಜುರ್ಲಿ ನಂಬರ್‌ ಹುಡುಕಿ ಅದಕ್ಕೆ ಫೋನ್‌ ಮಾಡಿದ್ವಿ.

ಸಾರ್‌ ನಾವು ನಿಮ್ಮ ಹೋಟೆಲ್‌ಗೆ ಬರೋ ದಾರೀಲಿದ್ದೀವಿ. ದಯವಿಟ್ಟು ನಮ್ಗೆ ಆರು ವೆಜ್‌ ಬಿರ್ಯಾನಿ ಪಾರ್ಸೆಲ್‌ ಮಾಡಿಡಿ ಅಂತಂದಾಗ ಒಂದಿಷ್ಟೂ ಯೋಚ್ನೆ ಮಾಡ್ದೇ ನಾವು ಬರ್ತೀವೋ ಇಲ್ವೋ ಅಂತ ಕೂಡ ಗೊತ್ತಿಲ್ದಿದ್ರೂ ʼಬನ್ನಿ ಸಾರ್‌ ರೆಡಿ ಮಾಡ್ತೀನಿʼ ಅಂತ ಹೇಳಿ ನಮ್ಮನ್ನ ಟ್ರಸ್ಟ್‌ ಮಾಡಿದ್ರು.

ಇದು ನಿಜವಾಗ್ಲೂ ಅನ್ನಬ್ರಹ್ಮನ ಋಣ!

ಶಟರ್‌ ಮುಚ್ಚಿದ್ರು. ಬಾಗಿಲು ಬಡಿದಾಗ ಶಟರ್‌ ತೆಗೆದು ನಗುತ್ತಾ ಸ್ವಾಗತಿಸಿದರು ರಾತ್ರಿ ಹನ್ನೆರಡೂ ಹತ್ತರಲ್ಲಿ!

ಪಾರ್ಸೆಲ್‌ ಬಂತು. ನಾವೀವಾಗ ಬೆಂಗಳೂರಿಗೆ ಹೊರಡ್ತಿದ್ದೀವಿ ಅಂದಾಗ ಫೋನ್‌ ನಂಬರ್‌ ಎಕ್ಸ್‌ಚೇಂಜ್‌ ಮಾಡಿಕೊಂಡ್ರು.

ಊಟ ರಾತ್ರಿ ಒಂದೂವರೆಗೆ ಮಾಡಿದಾಗಲೂ ಬಹಳ ರುಚಿಯಾಗಿತ್ತು. ನಮ್ಮ ಮನಸ್ಸಿಗೆ ಏನೋ ಖುಷಿ.

ಯತಿರಾಜ್‌ ಸಾರ್ ಅವರ ಪ್ರೆಸೆನ್ಸ್‌ ಆಫ್‌ ಮೈಂಡ್‌ ಇಂದ ಫೋನ್‌ ಮಾಡಿದ್ದೂ, ಅದರಿಂದ ಊಟ ಸಿಕ್ಕಿದ್ದೂ ಬಹಳ ಸಂತೋಷದ ವಿಚಾರ. ನಾವಲ್ಲದೇ ನಮ್ಮನ್ನು ನಂಬಿ ಇನ್ನೂ ಆರು ಜನ ಇದ್ದರು. ಅವರೂ ನಾವು ತರುವ ಊಟಕ್ಕೆ ಕಾಯುತ್ತಿದ್ದರು…

ಪ್ರೀತೇಶ್‌ ಶೆಟ್ಟಿ, ನೀವು ನಿಮ್ಮ ಹೆಸರಿಗೆ ಸರಿಯಾಗಿ ಬಹಳ ಪ್ರೀತಿಯಿಂದ ನಿಮ್ಮ ಗಿರಾಕಿಗಳನ್ನ ನಗ್ತಾ ನಗ್ತಾ ಈ ರಾತ್ರಿ ಹನ್ನೆರಡು ದಾಟಿದಾಗ್ಲೂ ಮಾತಾಡಿಸ್ತೀರಿ. ನಿಮ್ಮ ಹೆಸರು ನಿಮಗೆ ಸಾರ್ಥಕ ಅಂದೆ. ಅದಕ್ಕೂ ಒಂದು ದೊಡ್ಡ ನಗೆ ಬೀರಿದರು ಪ್ರೀತೇಶ್‌ ಶೆಟ್ಟಿ.

Thank you very much Prithesh Shetty

Shree Panjurlli Hotel

Dharwad-Belgaum Rd, Opposite K.C Park, Alnavar, Dharwad, Karnataka 580008
0836 244 0970 https://g.co/kgs/9cfdcF

2 comments

 1. ಶ್ರೀ ಜಮೀಲ್ ಸಾವಣ್ಣ ಅವರಿಗೆ,
  ನಲ್ಮೆಯ ನಮಸ್ಕಾರಗಳು.
  ಧಾರವಾಡದ ತಮ್ಮ ಅನುಭವ ಹಂಚಿಕೊಂಡಿದ್ದೀರಿ. ಹಾಗೇ ಶ್ರೀ ಪ್ಶ್ರೀತೇಶ್ ಶೆಟ್ಟಿ ಅವರ ಆತಿಥ್ಯದಬಗ್ಗೆ ಬರೆದಿದ್ದೀರಿ. ಉತ್ತರ ಕರ್ನಾಟಕದ ಮಾನ ಕಾಯ್ದ ದಕ್ಷಿಣ ಕನ್ನಡದ ಶೆಟ್ಟಿಯವರಿಗೆ ಅನಂತ ವಂದನೆಗಳು.
  ತಾವು ಹೋಗಿದ್ದು ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶನದಲ್ಲಿ ಅಧಿಕೃತವಾಗಿ ಭಾಗವಹಿಸಲು. ತಮ್ಮ ಆದರ ಆತಿಥ್ಯದ ಸಂಪೂರ್ಣ ಜವಾಬ್ದಾರಿ ಸ್ವಾಗತ ಸಮಿತಿಗೆ ಸೇರಿದ್ದು. ಅವರು ತಪ್ಪೆಸಗಿದ್ದಾರೆ. ಎಲ್ಲೆಲ್ಲಿ ಮುಂದೆ ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗುತ್ತವೆಯೋ ಅಲ್ಲಲ್ಲಿಯ ಸ್ವಾಗತ ಸಮಿತಿಯವರು ಇಂಥಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಿ. ಯಾಕೆಂದರೆ ಎಲ್ಲ ಕಡೆ ಶ್ರೀ ಪ್ರೀತೇಶ್ ಶೆಟ್ಟಿಯಂತವರು ಸಿಗಬೇಕಲ್ಲ?
  ವಂದನೆ ಗಳು.
  ಧನ್ಯಕುಮಾರ ಮಿಣಜಗಿ

Leave a Reply