ನಾವು ಇರೋವರ್ಗೂನಮ್ ಹೋಟಲ್ಲು..

ರೇಣುಕಾ ಚಿತ್ರದುರ್ಗ 

ಅಲ್ಲಿ ಮೂಲೆಲಿ ಟೀ ಮಾಡ್ತಾ ಅವ್ರಲ! ಅವ್ರು ಮೊದ್ಲು ದುರ್ಗದ ಪ್ರಜ್ವಲ್ ಹೋಟಲ್’ನಲ್ಲಿ ಸರ್ವರ್ ಆಗಿದ್ರಂತೆ. ಊರಿಂದ ದೂರ ಇದ್ದು ಸರ್ವರ್ ಕೆಲಸ ಮಾಡ್ತ, ಬೇಜರಾಗಿ ವಾಪಾಸ್ ಊರಿಗೆ ಬಂದ್ರಂತೆ. ಈಗ ತಮ್ಮದೆ ಸ್ವಂತ ಪುಟಾಣಿ ಹೋಟೆಲ್ ಇಟ್ಟುಕೊಂಡು ಊರಲ್ಲೇ ನೆಮ್ಮದಿಯಾಗಿ ಸುಖ್ವಾಗಿ ಅದೀನಿ ಮ್ಯಾಡಂ ಅಂದ್ರು. ಬಿಸಿ ಬಿಸಿ ಮೆಣಸಿನಕಾಯಿ, ಟೀ, ತಟ್ಟೆ ಇಡ್ಲಿ ಮಾಡಿಕೊಡ್ತಾರೆ. ವ್ಯಾಪಾರ ಚೆನಾಗಿದೆಯಂತೆ.

ಆ ಕೆಲ್ಸ ಚಂದನೋ ಈ ಕೆಲ್ಸ ಚಂದನೋ ಕೇಳಿದೆ. ಇದೇ ಚೆನಾಗಿದೆ ಮ್ಯಾಡಂ. ನಂದೇ ಹೋಟಲ್ಲು, ನಾನೇ ಯಜಮಾನ. ಆರಾಮಾಗಿ ಕೆಲ್ಸ ಮಾಡ್ಕೊಂಡು ಹೊಲನೂ ನೋಡ್ಕೋತ ಇದೀನಿ ಅಂದ್ರು . ಹೀಗೆ ವಲಸೆ ಹೋದ ಜೀವಗಳು ವಾಪಾಸ್ ಹಳ್ಳಿಗೆ ಬರ್ಲಿ.

ಈ ಕಡೆ ಮೂಲೆಲಿ ಇರೋರನ್ನ ನೋಡಿ. ಅಜ್ಜಾವರು ತುಂಬಾ ಸೀರಿಯಸ್ಸಾಗಿ ಈರುಳ್ಳಿ ಕಟ್ ಮಾಡ್ತಾ ಅವ್ರೆ. ಬಹುಶಃ ಅವರ ತಂದೆಯಿರಬಹುದು. ಅವರು ನನ್ ಜೊತೆ ಮಾತಾಡಿಲ್ಲ.

Leave a Reply