ಇತೀ.. ಚೆನ್ನಮಲ್ಲಿಕಾರ್ಜುನ ಸತಿ..

ಶ್ವೇತಾ ಮಡಿಪ್ಪಾಡಿ 

ಅಕ್ಕಮಹಾದೇವಿಯ ಕಾಲಘಟ್ಟ ಹನ್ನೆರಡನೆಯ ಶತಮಾನ.
ಇಂದಿಗೆ ಸುಮಾರು ಒಂಬೈನೂರು ವರ್ಷಗಳ ಹಿಂದೆ ಬದುಕಿದ್ದ ಹೆಣ್ಣುಮಗಳೊಬ್ಬಳು ಇಪ್ಪತ್ತೊಂದನೆಯ ಶತಮಾನದಲ್ಲೂ
ತನ್ನ ಜೀವಂತಿಕೆಯನ್ನು ಕಾಯ್ದುಕೊಂಡು ಜನಮಾನಸದಲ್ಲಿ ಉಳಿದಿದ್ದಾಳೆ.

ಅಕ್ಕ ಸದಾ ಪ್ರಸ್ತುತತೆಯ ಪ್ರತೀಕವಾಗಿದ್ದಾಳೆ…
೮೦೦ ವರುಷಗಳ ನಂತರವೂ ಸೃಜನಶೀಲತೆಯ ಕೇಂದ್ರವಾಗಿದ್ದಾಳೆ.
ಭಕ್ತಿಯ ಮಾರ್ಗವಾಗಿದ್ದಾಳೆ.
ಶಾಲೆಯ ಪಠ್ಯವಾಗಿದ್ದಾಳೆ. 
ಹಾಡಿನ ವಸ್ತುವಾಗಿದ್ದಾಳೆ…..

ಒಟ್ಟಿನಲ್ಲಿ ಈ ಶತಮಾನದಲ್ಲೂ ಕನ್ನಡ ನಾಡಿನ 
ಯಾರ ಕೇಳಿದರೂ ‘ಗೊತ್ತೂ’….ಎನ್ನುವಷ್ಟು ಜನಮಾನಸದಲ್ಲಿ ಉಳಿದುಬಿಟ್ಟಿದ್ದಾಳೆ….!!!
ಇ೦ಥ ಅಕ್ಕನನ್ನು ಪ್ರದರ್ಶನ ಮಾಧ್ಯಮಕ್ಕೆ ಅದರಲ್ಲೂ ಪ್ರಥಮಬಾರಿಗೆ ಏಕವ್ಯಕ್ತಿ ಪ್ರದರ್ಶನವೊ೦ದಕ್ಕೆ ಒಗ್ಗಿಸುವ ಪ್ರಯತ್ನವೊ೦ದಕ್ಕೆ ಮುಂದುಮಾಡಿದ್ದೇವೆ.

ಇದೇ ಜನವರಿ ೩೧ ಹಾಗೂ ಫೆಬ್ರವರಿ ೧ರ೦ದು ರಂಗಭೂಮಿಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಕ್ಕಮಹಾದೇವಿ ಕುರಿತಾದ ಏಕವ್ಯಕ್ತಿ ರಂಗಪ್ರಯೋಗ
“ಇತೀ… ಚೆನ್ನಮಲ್ಲಿಕಾರ್ಜುನ ಸತಿ…” ಪ್ರದರ್ಶನಗೊಳ್ಳಲಿದೆ …

ನಾಟಕದ ರಚನೆ : ಶಿವಶಂಕರ್ ನೀನಾಸಂ ಹಾಗೂ 
ಶ್ವೇತಾ ಮಡಪ್ಪಾಡಿ
ವಿನ್ಯಾಸ ಹಾಗೂ ನಿರ್ದೇಶನ :ಶಿವಶಂಕರ್ ನೀನಾಸಂ.
ನಮ್ಮ ಈ ರಂಗಪ್ರಯೋಗದ ಮೊದಲ ಪ್ರದರ್ಶನಕ್ಕೆ ತಾವೆಲ್ಲ ಸಾಕ್ಷಿಯಾಗಬೇಕು ಎಂಬುದು ನಮ್ಮ ಮಹದಾಸೆ.
ದಯವಿಟ್ಟು ಬನ್ನಿ.
ತಮಗಾಗಿ ಕಾಯುತ್ತೇವೆ.

Leave a Reply