ಪಿಜ್ಜಾ ಕವಿತೆ

ದೀಪ್ತಿ ಭದ್ರಾವತಿ 

ನಾನು ಶಬರಿಯಲ್ಲ ಮಾರಾಯ
ಇಂಟರ್ ನೆಟ್ ಜಾಲಾಡಿದರೆ
ಸಾಕು ರಾಮನಲ್ಲದಿದ್ದರೆ
ರಾವಣನಾದರೂ ಸಿಕ್ಕಿಯಾನು
ಬೆಣ್ಣೆಯ ಮಾತುಗಳ ತುಸು
ಬೆಂಕಿಯಂತೆ ಆಡಿಯಾನು

ಕಾದು ಕೂರುವುದಿಲ್ಲ
ಒಂದೊಂದೇ ಹಣ್ಣ ಹೆಕ್ಕಿಟ್ಟುಕೊಂಡು
ಆಕಾಶದಲಿ ರಸ್ತೆ ಹುಡುಕುತ್ತಾ
ಹಸಿವಾಗಿದ್ದರೆ ಬಾ ಜೊತೆಯಲ್ಲಿ
ಒಂದಿಷ್ಟು ದೂರ ಸಾಗಿ ಪಿಜ್ಜಾ ತಿಂದು
ಬರೋಣ

ಬೆಳ್ಳಿಗೂದಲಿನ ಚಾಮರ ಬೀಸುವವರೆಗೂ
ಗೆರೆ ಗೀಚುತ್ತಾ ನಿಲ್ಲುವುದಿಲ್ಲ
ಕಾಲ ಹೆಬ್ಬೆರಳಿನಲಿ
ನಿಲುವುಗನ್ನಡಿ ಕಣ್ಣು ಹೊಡೆಯುವ
ಗಳಿಗೆಯಲಿ ಕರಗುತ್ತೇನೆ
ನೀನೂ ಕಿರೀಟವಿಟ್ಟುಕೊಂಡು
ಹುಡುಕಬೇಡ
ಈಗ ಇಲ್ಯಾರೂ…

6 comments

  1. ತುಂಬಾ ಚನ್ನಾಗಿದೆ ಮೆಡಮ್ ಕವಿತೆ..
    ಇಷ್ಟವಾಯ್ತು

Leave a Reply