Big BREAKING NEWS: ‘ಪ್ರಜಾವಾಣಿ’ ಮತ್ತು ‘ಅವಧಿ’ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಇದೇ ಮೊದಲ ಬಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸ್ಥಾಪಿಸಿರುವ ಎರಡು ಹೊಸ ಪ್ರಶಸ್ತಿಗಳಿಗೆ 

‘ಪ್ರಜಾವಾಣಿ’ ಮತ್ತು ‘ಅವಧಿ’ ಆಯ್ಕೆಯಾಗಿದೆ.

ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ಅವರು ಇಂದು ಸಂಜೆ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕನ್ನಡ ಸಾಹಿತ್ಯದ ಬೆಳವಣಿಗೆಗೆ, ಸಂವಾದಕ್ಕೆ ಕಾಣಿಕೆ ನೀಡಿದ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮಕ್ಕೆ ಅಕಾಡೆಮಿ ಈ ವರ್ಷದಿಂದ ಪ್ರಶಸ್ತಿ ನೀಡಲು ನಿಶ್ಚಯಿಸಿದೆ.

ತೀರ್ಪುಗಾರ ಮಂಡಳಿ ಮುದ್ರಣ ಮಾಧ್ಯಮಕ್ಕಾಗಿ ‘ಪ್ರಜಾವಾಣಿ’ ಯನ್ನೂ ಹಾಗೂ ಡಿಜಿಟಲ್ ಮಾಧ್ಯಮಕ್ಕೆ ‘ಅವಧಿ’ಯನ್ನೂ ಆಯ್ಕೆ ಮಾಡಿದೆ.

ಪ್ರಶಸ್ತಿ ಫಲಕ, ೨೫ ಸಾವಿರ ರೂಗಳನ್ನು ಪ್ರಶಸ್ತಿ ಒಳಗೊಂಡಿದೆ 

 

26 comments

  1. ಅಭಿನಂದನೆಗಳು ಅವಧಿ ಮತ್ತು ಪ್ರಜಾವಾಣಿಗೆ

  2. ಅಭಿನಂದನೆಗಳು ಸರ್….
    ತಮಗೂ ಹಾಗೂ ಅವಧಿ ತಂಡದ ಎಲ್ಲರಿಗೂ…

  3. ‘ಅವಧಿ’ಗೆ ಪ್ರಶಸ್ತಿ ಲಭಿಸಿರುವುದು ಸಂತಸದ ವಿಷಯ. ಶ್ರೀ ಜಿ ಎನ್ ಮೋಹನ್ ಮತ್ತು ‘ಅವಧಿ’ ತಂಡಕ್ಕೆ ಹಾರ್ದಿಕ ಅಭಿನಂದನೆಗಳು..

  4. ‘ಅವಧಿ’ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದ್ದಕ್ಕೆ ಅಭಿನಂದನೆಗಳು.

  5. ನಿಷ್ಠೆಯಿಂದ ಮಾಡುವ ಯಾವುದೇ‌ ಕಾರ್ಯಕ್ಕೆ ಪ್ರತಿಫಲ ಸಿಗುತ್ತದೆ ಉದಾಹರಣೆ ಅವಧಿ ಸಾಕ್ಷಿ

  6. ‘ಅವಧಿ’ಗೆ ಪ್ರಶಸ್ತಿ ಲಭಿಸಿರುವುದು ಸಂತಸದ ವಿಷಯ. ಶ್ರೀ ಜಿ ಎನ್ ಮೋಹನ್ ಮತ್ತು ‘ಅವಧಿ’ ತಂಡಕ್ಕೆ ಹಾರ್ದಿಕ ಅಭಿನಂದನೆಗಳು…

  7. ಅವಧಿಗೆ, ಅವಧಿ ತಂಡಕ್ಕೆ ಅಭಿನಂದನೆಗಳು.ತುಂಬ ಸಂತಸದ ಸಂಗತಿ ಇದು.

  8. ಅಭಿನಂದನೆಗಳು ಅವಧಿ. ಅಕಾಡೆಮಿಯ ಈ ನವ ಪ್ರಶಸ್ತಿಯ ಮೊದಲ ಭಾಜನಳಾಗಲು “ಅವಧಿ” ಸದಾ ಅರ್ಹಳು. ಪ್ರಜಾವಾಣಿಯು ಮುದ್ರಣ ಮಾಧ್ಯಮದಲ್ಲೆಂತೋ ಅಂತೆಯೆ, ಅವಧಿಯು ಡಿಜಿಟಲ್ ಮಾಧ್ಯಮದಲ್ಲಿ ಮುಂದಿನವರಿಗೆ ಮಾದರಿ ಹಾಕಿಕೊಟ್ಟ ಸದಭಿರುಚಿಯ ಪತ್ರಿಕೆ. ಮುಂದೆಯೂ ನಮ್ಮ ಅವಧಿ ಮಾದರಿಯಾಗಿ ಇರುವಳೆಂದು ನಂಬಿರುವೆ.

Leave a Reply