ಕರ್ನಾಟಕ ಭವನದಲ್ಲಿ ತೂರಾಡಿದ ನೆನಪಲ್ಲಿ..

ಹಳಕನ್ನಡ ಕವಿಗಳು ಕಂಡ ಮಧುಪಾನಿಗಳು.
ಎಚ್ ಎಸ್ ರೇಣುಕಾರಾಧ್ಯ 

ನಿನ್ನೆಯ ಕರ್ನಾಟಕ ಭವನದ ಘಟನೆಯಿಂದ ನೆನಪಾದ ಪದ್ಯವಿದು.
ಹಳಗನ್ನಡ ಕವಿಯೊಬ್ಬ ಮಧುಪಾನಿಗಳ ಕೆಲ ವಿಶೇಷ ನಡವಳಿಕೆಗಳನ್ನು ಇಲ್ಲಿ ಹೀಗೆ ವಿವರಿಸಿದ್ದಾನೆ.

//ಗಾಳಿಗೆ ಮಾತನಾಡುವರು ಹಾರುವ ಹಕ್ಕಿಗೆ ಜೋಹರೆಂಬರೆ
ಳ್ದೂಳುವ ನಾಯ್ಗೆ ಮುದ್ದುಗೊಡಲೀಕ್ಷಿಸುವರ್ ಮರುಳಿಂಗೆ ಬುದ್ದಿಯಂ
ಹೇಳುವರ್ ಉಟ್ಟುದಂ ಕಳೆದು ನೆತ್ತಿಗೆ ಸುತ್ತುವರ್
ಅಳ್ತಿಯಿಂದೆ ಕಾಡ್ ಕೋಳಿಗಾಳಾಗಿ ಕೂಗುವರ್ ಅದೇಂ ಮಧುಪಾನದ ಸೊರ್ಕು ಸಾಲದೇ //

– ನಶೆ ಏರಿದ ಮಧುಪಾನಿಗಳು ಗಾಳಿಯ ಜೊತೆ ಮಾತನಾಡುವಂತವರು, ಹಾರುವ ಹಕ್ಕಿಗೆ ನಮಸ್ಕಾರ ಮಾಡುವರು, ಊಯ್ಲಿಡುವ ನಾಯನ್ನು ಮುದ್ದಿಸಲು ನೋಡುವರು, ಹುಚ್ಚನಿಗೆ ಬುದ್ಧಿ ಹೇಳುವರು, ಉಟ್ಟ ಬಟ್ಟೆಯ ಕಳಚಿ, ನೆತ್ತಿಗೆ ಕಟ್ಟಿಕೊಳ್ಳುವಂತವರು, ಅತಿ ಪ್ರೀತಿಯಿಂದ ಕಾಡು ಕೋಳಿಯಂತೆ ಕೂಗುವರು, ಇವನ್ನೆಲ್ಲ ಅವರು ಮಾಡುವುದಿಲ್ಲ. ಅವರ ಮಧುಪಾನದ ನಶೆ ಮಾಡಿಸುತ್ತದೆ.

*ವಿಶೇಷ ಸೂಚನೆ
ಇದು ನಮ್ಮನ್ನು ನಾವೇ ತಮಾಷೆ ಮಾಡಿಕೊಳ್ಳುವ ಸಲುವಾಗಿ ಹಾಕಲಾಗಿದೆ.

Leave a Reply