‘ಅಮ್ಮ’ನಿಗೆ ಶಿವರಾಮ ಕಾರಂತ ಪ್ರಶಸ್ತಿ

ಖ್ಯಾತ ಚಿಂತಕರೂ ಹಾಗೂ ಲೇಖಕರೂ ಆದ ಡಾ ವಿಜಯಾ ಅವರಿಗೆ ಪ್ರತಿಷ್ಠಿತ ಶಿವರಾಮ ಕಾರಂತ ಪ್ರಶಸ್ತಿ ಘೋಷಿಸಲಾಗಿದೆ.

ಮೂಡಬಿದರೆಯ ಡಾ ಶಿವರಾಮ ಕಾರಂತ ಪ್ರತಿಷ್ಠಾನ ನೀಡುವ ಈ ಪ್ರಶಸ್ತಿಯನ್ನು ಡಾ ವಿಜಯಾ ಅವರು ವಿವಿಧ ರಂಗಗಳಿಗೆ ನೀಡಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ ಜಯಪ್ರಕಾಶ ಮಾವಿನಕುಳಿ ತಿಳಿಸಿದ್ದಾರೆ.

ಈ ಪ್ರಶಸ್ತಿಯ ಸ್ಥಾಪಿಸಿ ೨೦ ವರ್ಷಗಳಾಗಿದ್ದು ಸಾಹಿತ್ಯ, ಪತ್ರಿಕೋದ್ಯಮ ಸಾಮಾಜಿಕ ಚಳವಳಿಗೆ ಡಾ ವಿಜಯಾ ಅವರು ನೀಡಿರುವ ಕೊಡುಗೆ ಅನನ್ಯವಾಗಿದ್ದು ಶಿವರಾಮ ಕಾರಂತರ ಚಿಂತನೆಗಳ ಪ್ರತಿನಿಧಿಯಾಗಿದ್ದಾರೆ ಎಂದು ಪ್ರತಿಷ್ಠಾನ ತಿಳಿಸಿದೆ.

ಡಾ ವಿಜಯಾ ಅವರಿಗೆ ‘ಅವಧಿ’ಯ ಶುಭಾಶಯಗಳು 

1 comment

  1. ವಿಜಯಕ್ಕ , ಅಭಿನಂದನೆಗಳು. ಎಸರು ಕೊತಕೊತ ಕುದಿವಾಗ ಬಿದ್ದ ಬೇಳೆಕಾಳಿಗೆ ಚೆನ್ನಾಗಿ ಕುದ್ದೂ ಕುದ್ದೂ ಬೆಂದಿರುವೆ , ಬಾ ಪ್ರೈಸ್ ಕೊಡ್ತೀವಿ ಅಂದರೆ ಏನೆನಿಸಬಹುದು ಅಂತ ಯೋಚಿಸ್ತಿದ್ದೀನಿ.

Leave a Reply