ಜಾಲಾರ ಹೂ ಹುಡುಕುತ್ತಾ..

ಶ್ವೇತಾರಾಣಿ ಮಹೇಂದ್ರ 

ಜಾಲಾರ ಹೂ ನೋಡಬೇಕೆಂಬ ನನ್ನ ಇಚ್ಚೆಗೆ ಜೊತೆಯಾದವರು ತುಮಕೂರಿನ ಸಂವೇದನಾಶೀಲ ಮನಸ್ಸುಗಳು.

ಇಳಿ ಹೊತ್ತಿನಲ್ಲಿ ಜಾಲಾರ ನೋಡಲು ಜಾಣೆಯರ ದಂಡು ದೇವರಾಯನದುರ್ಗಕ್ಕೆ ಪಯಣ ಬೆಳೆಸಿತು.

ನಮಗೆ ಮೊದಲಿಗೆ ಹೂವಿನ ವಾಸನೆ ಗ್ರಹಿಸಲು ಸಾಧ್ಯವಾಯಿತು ಹೂವು ಕಾಣಲಿಲ್ಲ.. ಹೂವು ನೋಡಲಾಗಲಿಲ್ಲ ಎಂಬ ನಿರಾಸೆಭಾವ ಆವರಿಸಿತು…

ನಮ್ಮಲ್ಲಿದ್ದ ಉತ್ಸಾಹ ಜಾಲಾರವನ್ನು ಜಾಲಾಡದೆ ಬಿಡಲಿಲ್ಲ

ಕೊನೆಗೂ ಸಿಕ್ಕಿತು ಜಾಲಾರ….

ಹೂವನ್ನು ನೋಡಿದ ತೃಪ್ತಿ ಒಂದಡೆಯಾದರೆ ಹೆಚ್ಚು ಹೂವು ನೋಡಲಾಗಲಿಲ್ಲವಲ್ಲ ಎಂಬ ಸಣ್ಣ ಅತೃಪ್ತಿ.. ಇನ್ನೊಮ್ಮೆ ಬರುವೆವು ಎಂದು ಹೇಳುತ್ತಾ ಅವಿಸ್ಮರಣೀಯ ನೆನಪುಗಳ ಬುತ್ತಿಯೊಂದಿಗೆ ಮರಳಿದೆವು.

2 comments

    • ಕರ್ನಾಟಕದಲ್ಲಿ ಈ ಹೂ ಯಾವ ಪ್ರದೇಶದಲ್ಲಿ ನೋಡಲು ಸಿಗುತ್ತದೆ?

Leave a Reply