ಪ್ರತಿಭಾ ಮಾತು

ಮಾನ್ಯರೇ 

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಬಗ್ಗೆ ಫೇಸ್ ಬುಕ್ ನಲ್ಲಿ ನಾನು ಒಂದು ಟೀಕೆಯನ್ನು ಹಾಕಿ ತಕ್ಷಣವೇ ತೆಗೆದು ಹಾಕಿದ್ದೇನೆ. ಅಷ್ಟರಲ್ಲಿ ಅದು ಪ್ರಚಾರಕ್ಕೆ ಬಂದುಬಿಟ್ಟಿತು. ಆ ಟೀಕೆಯ ಕುರಿತಂತೆ ನಾನು ಪ್ರಾಮಾಣಿಕವಾಗಿ ಕ್ಷಮಾಪಣೆ ಕೇಳುತ್ತೇನೆ ಮತ್ತು ಆ ಟೀಕೆಯ ಹಿಂದೆ ದುರುದ್ದೇಶವಿರಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ.

ನಾನು ದೇಶಭಕ್ತಳು ಮತ್ತು ವಿಂಗ್ ಕಮಾಂಡರ್ ಅಭಿನಂದನ್ ಬಗ್ಗೆ ನನಗೆ ಅಪಾರ ಗೌರವ ಇದೆ.

ಇಡೀ ಪ್ರಕರಣದ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡುತ್ತಿದ್ದಾಗ ಕೆಲವು ತಪ್ಪು ಅರ್ಥೈಸುವಿಕೆಯಿಂದಾಗಿ ಈ ಪ್ರಮಾದ ಉಂಟಾಯಿತು. ನನ್ನ ತಪ್ಪನ್ನು ಸರಿಪಡಿಸಿಕೊಂಡಿದ್ದೇನೆ ಮತ್ತು ಈ ತಪ್ಪಿನಿಂದಾಗಿ ನನ್ನ ದೇಶಭಕ್ತಿ ಕುರಿತ ನಿಲುವಿನಲ್ಲಿ ಯಾವುದೇ ಕೊರತೆ ಉಂಟಾಗಿಲ್ಲ ಎಂದು ಪ್ರಮಾಣ ಮಾಡುತ್ತೇನೆ ಹಾಗೂ ಬೇಷರತ್ ಕ್ಷಮಾಪಣೆ ಕೇಳುತ್ತಿದ್ದೇನೆ.

ವಂದನೆಗಳೊಂದಿಗೆ

ನಿಮ್ಮ ವಿಶ್ವಾಸಿ
ಪ್ರತಿಭಾ ನಂದಕುಮಾರ್ 

1 comment

  1. ಬಹು ದೊಡ್ಡಗುಣ.‌ ತಮ್ಮ ದೇಶಭಕ್ತಿಗೆ ನಮ್ಮದೊಂದು ನಮಸ್ಕಾರ.‌

Leave a Reply