ಕಾಡುವ ತೇಜಸ್ವಿ

ನಾಗರಾಜ್ ನವೀಮನೆ

ಒಂದು ಸಂಜೆ
ಜಿಟಿಜಿಟಿ ಮಳೆ
ಯಾವುದೋ ಅಬ್ಬರ
ಮನದೊಳಗೆ ತಲ್ಲಣ

ಹೀಗೆ,
ಎದೆಗೆ ಬಿದ್ದ ಅಕ್ಷರ
ಕಟ್ಟುತ್ತಿತ್ತು ಪದ
ತೇಜಸ್ವಿ ‘ಇನ್ನಿಲ್ಲ’ವೆನ್ನುವ ಸುದ್ದಿ
ಎದೆ ನಡುಗಿ ಜೋರು ಜಡಿಮಳೆ
ಇನ್ನೂ
ರೌದ್ರವಾಯಿತು

ಹೊತ್ತಿಸಿ ಹೋದ ಹಣತೆ
ನೀಡುತ್ತದೆ ಬೆಳಕು
ಎಂದಿಗೂ
ಒಳಗೆ, ನಮ್ಮೊಳಗೆ
ತೇಜಸ್ಸಿನ ತೈಲ
ಮುಗಿಯಬಾರದು ಅಷ್ಟೇ

ಇಷ್ಟಕ್ಕೂ
ಕಾಡಿನ ಬಗೆಗೆ
ಕಥೆ ಹೇಳಿ
ಕಾಡುಗಾನದ ಜೊತೆ
ನೆಂಟಸ್ತಿಕೆ ಬೆಳೆಸಿ
ಅವರು
ಹೋದುದಾದರೂ ಎಲ್ಲಿಗೆ?

ನಗರ ತೊರೆದು
ಹಳ್ಳಿ ಸೇರಿದರು
ಪ್ರಕೃತಿ ಪ್ರೀತಿಸಿ
ಪಕ್ಷಿಗಳ ಪ್ರೇಮಿಸಿ
ವೈಜ್ಞಾನಿಕ ಚಿಂತನೆ ಬೆಳೆಸಿದರು
ಹಾಗಾದರೆ ತೇಜಸ್ವಿ ತಾತನೆಲ್ಲಿ?
ಪ್ರಶ್ನೆ ಕೇಳಿತು ಪುಟ್ಟ ಮಗು

ಕಂದ,
ತೇಜಸ್ವಿ ಸತ್ತಿಲ್ಲ
ನಮ್ಮೊಳಗೆ ಇದ್ದಾರೆ
ಕಾಣುವ ಕಣ್ಣಿಗೆ
ಸ್ಪರ್ಶದ ಅನುಭವಕ್ಕೆ
ಓದಿನ ಮಸ್ತಕಕ್ಕೆ
ಅದು ದಕ್ಕುತ್ತದೆ
ಮೆಲ್ಲಗೆ, ಅಪ್ಪ ಉತ್ತರಿಸಿದ..!

 

2 comments

  1. “ತೇಜಸ್ವಿ ಸತ್ತಿಲ್ಲ ನಮ್ಮೊಳಗೆ ಇದ್ದಾರೆಕಾಣುವ ಕಣ್ಣಿಗೆ ಸ್ಪರ್ಶದ ಅನುಭವಕ್ಕೆಓದಿನ ಮಸ್ತಕಕ್ಕೆಅದು ದಕ್ಕುತ್ತದೆ
    ಮೆಲ್ಲಗೆ, ಅಪ್ಪ ಉತ್ತರಿಸಿದ” Nija .. Chendada kavana adakkke takka chitra

Leave a Reply