ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಮಾರಂಭದ ಫೋಟೋ ಆಲ್ಬಂ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದಾನ ಮಾಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಬಿ ಎಚ್ ಅನಿಲ್ ಕುಮಾರ್, ಖಾತೆಯ ಸಂಸದೀಯ ಕಾರ್ಯದರ್ಶಿ ಗೋಪಾಲಸ್ವಾಮಿ, ಇಲಾಖೆಯ ನಿರ್ದೇಶಕರಾದ ಕೆಎಂ ಜಾನಕಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು

ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್ ಅವರು ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷರಾದ  ಡಾ ಅರವಿಂದ ಮಾಲಗತ್ತಿ ಅವರು ಅಕಾಡೆಮಿಯನ್ನು ಪ್ರಾಧಿಕಾರವಾಗಿ ಮಾರ್ಪಡಿಸುವಂತೆ ಮನವಿ ಮಾಡಿದರು.

ಖ್ಯಾತ ವಿದ್ವಾಂಸ ಪ್ರೊ ಬಿ ಎ ವಿವೇಕ ರೈ, ಕವಯತ್ರಿಯರಾದ ವಿನಯಾ ವಕ್ಕುಂದ, ಡಾ ಎಚ್ ಎಲ್ ಪುಷ್ಪ ಹಾಗೂ ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದರು.

ಚಿತ್ರಗಳು: ಶ್ರೀಜಾ ವಿ ಎನ್ / ಯೋಗೇಶನಾಯಕ ಆರ್ / ರಮ್ಯ ಶ್ರೀ ಎಸ್

 

Leave a Reply