ಸುಪ್ತೋಷ್ಣ

 ನಾಗರಾಜ್ ರೋಣೂರು 


ಐಸ್ ಕ್ಯಾಂಡಿ
ಘಂಟೆಯ ಟಣ್ ಟಣ್
ನಾದವು
ಮಧುರಾತಿ ಮಧುರ
ನೆನಪುಗಳ
ಮಂಜುಗಡ್ಡೆ.
ಒಂದನಿಯೂ
ಕರಗದಂತೆ
ಸಂರಕ್ಷಿಸಿದ
ಭಿನ್ನ – ಭಿನ್ನ
ಪರಿಮಳಗಳು.


ಅವು ಕಡ್ಡಿಗೆ
ಸಿಕ್ಕಿಸಿದ ಒಡನಾಡಿಗಳಂಗೆ
ಅಂಕೆ – ಸಂಖೆಯಿಲ್ಲದ
ಸವಿ – ಸವಿ
ಒಡನಾಟದ
ಬಣ್ಣ ಬಣ್ಣದ
ಕ್ಯಾಂಡಿಗಳ
ಹೊದಿಕೆಗಳು.

ಇಂದು
ಉತ್ಕಟ ಪ್ರೀತಿಯ
ನಿರೀಕ್ಷೆಯಲಿ
ಒಂದೊಂದಾಗಿ ಆ ಹೊದಿಕೆಗಳನು ಬಿಚ್ಚಲು
ಜತನದಿಂದ ಕುಳಿತೆ…
ಆದದ್ದೇನು
ಅಲ್ಲಿರುವುದು
ಕರಗಿಹೋದ ಅವ್ಯಕ್ತ
ಸಿಹಿ ರೇಖೆಗಗಳು ಮಾತ್ರ.

ಕಾರಣ
ಪದ್ಯದ ಶೀರ್ಷಿಕೆಯೇ..!

 

Leave a Reply