ಅಮ್ಮನ ಮಡಿಲಲ್ಲಿ ಕಾವ್ಯ ಲೋಕದ ಸೆಳೆತ..

ಇದೊಂದು ಸೋಜಿಗ. ‘ಬಹುರೂಪಿ’ ತರುತ್ತಿರುವ ಒಂದು ಕವಿತಾ ಸಂಕಲನವೇ ನೆಪವಾಗಿ ಅಮ್ಮ-ಮಗ ಕವಿತೆ ಎಂದರೇನು ಎನ್ನುವ ಶೋಧಕ್ಕೆ ಹೊರಟಿದ್ದಾರೆ.

‘ಬಹುರೂಪಿ’ ಸದ್ಯದಲ್ಲೇ ಆಕರ್ಷ ಕಮಲ ಅವರ ಕವಿತಾ ಸಂಕಲನವನ್ನು ಹೊರತರುತ್ತಿದೆ. ಇದನ್ನು ಘೋಷಿಸಿದ ಸಂದರ್ಭದಲ್ಲಿ ಆಕರ್ಷ ಕಮಲ ಅವರ ತಾಯಿ, ಖ್ಯಾತ ಕವಯತ್ರಿ ಎಂ ಆರ್ ಕಮಲ ತಮ್ಮ ಮಗನಿಗೆ ಕವಿತೆಯ ಬಗ್ಗೆ ಪಿಸುನುಡಿಗಳನ್ನು ಆಡಿದರು. ಅದು ಇಲ್ಲಿದೆ.

ಇದಕ್ಕೆ ಉತ್ತರವಾಗಿ ಆಕರ್ಷ ‘ನಾ ಬರೆಯಲಾಗದ ಕವಿತೆ ‘ಅಮ್ಮ’ನಿಗೆ..’ ಬರೆದರು. ಅದು ಇಲ್ಲಿದೆ

ಖ್ಯಾತ ಕವಯತ್ರಿ ಲಲಿತಾ ಸಿದ್ಧಬಸವಯ್ಯ ಈ ಎರಡಕ್ಕೂ ತಮ್ಮ ಮಾತನ್ನೂ ಜೋಡಿಸಿದ್ದಾರೆ. ಅದು ಇಲ್ಲಿದೆ

ಈಗ ಧಾರವಾಡದಿಂದ ಬರಹಗಾರ, ಚಿಂತಕ ಅಶೋಕ್ ಶೆಟ್ಟರ್ ತಮ್ಮ ದನಿಗೂಡಿಸಿದ್ದಾರೆ. ಓದಿ

ನೀವೂ ಇದಕ್ಕೆ ಸೇರಿಸುವ ಪಿಸು ಮಾತುಗಳಿದ್ದರೆ avadhimag@gmail.com ಗೆ ಕಳಿಸಿ

ಅಶೋಕ್ ಶೆಟ್ಟರ್ 

ಆಕರ್ಷನ ಕಾವ್ಯದ ಕುರಿತು ನನಗೆ ಕುತೂಹಲ ಮತ್ತು ಪ್ರೀತಿ ಇದೆ. ಆರಂಭಿಕವಾಗಿ ಇಂಗ್ಲೀಷ್ ನಲ್ಲಿ ಬರೆಯುವ ವ್ಯಾಮೋಹದಲ್ಲಿದ್ದು ಸಕಾಲದಲ್ಲಿ ದೊರೆತ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಕನ್ನಡದಲ್ಲಿ ಬರೆಯತೊಡಗಿದ, ಉಜ್ವಲ ಸಾಹಿತ್ಯ ಸೃಷ್ಟಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ತನ್ನ ಅಮ್ಮನ “ಶಕುಂತಳೋಪಾಖ್ಯಾನ” ಸಂಕಲನದಲ್ಲಿರುವಂಥ ಕಾವ್ಯಸೃಷ್ಟಿಯ ಸಂದರ್ಭಕ್ಕಿಂತ ಭಿನ್ನವಾದ ಕಾಲಘಟ್ಟದಲ್ಲಿ, ಅದರೆಲ್ಲ ಗೊಂದಲಗಳ ಸಮೇತ ಬದುಕುತ್ತಿರುವ, ಬರೆಯುತ್ತಿರುವ ಆಕರ್ಷ ಬಾಲಕನಾಗಿದ್ದಾಗ ತನ್ನ ಅಮ್ಮನ ಮಡಿಲಲ್ಲಿ ಕಾವ್ಯವೆಂಬ ಲೋಕದ ಸೆಳೆತಕ್ಕೆ ಪ್ರಾರಂಭಿಕವಾಗಿ ಒಳಗಾದ ಸೆಳೆತವನ್ನು ಗಟ್ಟಿಯಾಗಿ ನೆನಪಿಟ್ಟುಕೊಂಡು ಸಂಭ್ರಮಿಸುತ್ತಿರುವದರಲ್ಲೂ ಒಂದು ಚೆಲುವಿದೆ…

ಹೀಗೇ ಹೇಳುತ್ತ ಹೋಗಬಹುದು.

ಆಕರ್ಷನ ಕಾವ್ಯರಚನೆಯಲ್ಲಿ ಅಕೃತ್ರಿಮವಾದ ಸೃಜನಶೀಲ ಗುಣವಿದೆ ಎಂದು ನನಗೆ ಅನ್ನಿಸುತ್ತದೆ. ಪ್ರಯೋಗಶೀಲತೆ ತುಸು ಹಿನ್ನೆಲೆಯಲ್ಲಿ ಉಳಿದರೂ ತೊಂದರೆಯಿಲ್ಲ. ಈ ಗುಣ ಗಟ್ಟಿಯಾಗಲಿ.

ಇಂಗ್ಲೀಷ್ ನಲ್ಲಿ ಕಾವ್ಯ ಸೃಜಿಸುವ ಮೋಹವೂ ಕ್ರಮೇಣ ಕಡಿಮೆಯಾಗಿ ಅದು ಕನ್ನಡದಲ್ಲ್ಲಿ ಬೇರೂರಲಿ. ಆಮೇಲೆ ಬೇಕಾದರೆ ಅವು ಇಂಗ್ಲೀಷ್ ನಲ್ಲಿ ಅನುವಾದಗೊಳ್ಳಲಿ. ಆಕರ್ಷ್ ನ ಕಾವ್ಯ ತನ್ಬ ಸಿದ್ಧಿಯನ್ನು ಸಾಧಿಸಿದೆ ಅಂತ ಅಲ್ಲ. ಅದು ಪರಿಚಿತ ಇಡಿಯಂಗಳಿಗಿಂತ ಭಿನ್ನವಾಗಿದೆ. ಈ ಕ್ಷಣಕ್ಕೆ ಅದು ಮುಖ್ಯ..

2 comments

  1. ಅಶೋಕ್ ಶೆಟ್ಟರ್ ಅವರೆ, ಫೇಸ್ ಬುಕ್ ನಲ್ಲಿ ಮಗನ ಕವಿತೆಗಳನ್ನು ಓದಿ ಪ್ರತಿಕ್ರಿಯಿಸುವುದನ್ನು ನೋಡಿ ಖುಷಿ ಪಡುತ್ತಿದ್ದೆ…ಈಗ ಪ್ರೀತಿಯಿಂದ ನೀವು ಕೊಟ್ಟಿರುವ ಸಲಹೆ ಸೂಚನೆಗಳಂತೂ ಬಹಳ ಅಮೂಲ್ಯವಾದುವು ಎನ್ನಿಸಿತು… ಹಾಗೆ ನನ್ನ ಮೊದಲ ಸಂಕಲನವನ್ನು ನೆನಪಿಸಿಕೊಂಡು ಹೇಳಿದ್ದು ಸಂತೋಷವಾಯಿತು..ಹಿರಿಯರ ಮಾರ್ಗದರ್ಶನ ಸಿಕ್ಕುತ್ತಿರುವುದು ಅವನ ಭಾಗ್ಯವೇ ಸರಿ..

  2. ಅರ್ಥಪೂರ್ಣವಾದ ಸಲಹೆ.

Leave a Reply