ಸುಧಾ ಪತಿ ಚಿದಾನಂದಗೌಡ ಇನ್ನಿಲ್ಲ

ಲೇಖಕಿ, ಉಪನ್ಯಾಸಕಿ ಸುಧಾ ಚಿದಾನಂದಗೌಡ ಅವರ ಪತಿ ಚಿದಾನಂದಗೌಡ ಇಂದು ಮುಂಜಾನೆ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು

ನೀನಾಸಂ ಪದವೀಧರರಾಗಿದ್ದ ಚಿದಾನಂದಗೌಡ ಬಳ್ಳಾರಿ ಜಿಲ್ಲೆಯಲ್ಲಿ ಹಾಗೂ ಮುಖ್ಯವಾಗಿ ಹಗರಿಬೊಮ್ಮನಹಳ್ಳಿಯಲ್ಲಿ ರಂಗಭೂಮಿ ಹಾಗೂ ಸಾಹಿತ್ಯ ಚಟುವಟಿಕೆಯ ಕೇಂದ್ರಬಿಂದುವಾಗಿದ್ದರು.

ಸಮುದಾಯ, ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ದಲಿತ, ರೈತ ಚಳವಳಿಯಲ್ಲಿ ಭಾಗವಹಿಸಿದ್ದರು.

ಕೆಲ ಕಾಲ ಪತ್ರಕರ್ತರಾಗಿದ್ದ ಚಿದಾನಂದಗೌಡ ಅವರು ಪತ್ನಿಯೊಂದಿಗೆ ಸುಯೋಧನ ಪ್ರಕಾಶನ ನಡೆಸುತ್ತಿದ್ದರು

4 comments

  1. ಎಷ್ಟು ಚಿಕ್ಕವಯಸ್ಸಿನಲ್ಲಿ ಸುಧಾಗೆ ಸಂಗಾತಿ ವಿಯೋಗ ಬಂದೊದಗಿತಲ್ಲ,, ಧೈರ್ಯ ಮನೋಬಲಗಳೇ ಸದ್ಯಕ್ಕೆ ಸುಧಾಗೆ ಸಂಗಾತಿಗಳು. ಅವು ಅವರಿಗೊದಗಿ ಬರಲೆಂದು ಪ್ರಾರ್ಥಿಸುವೆ.

  2. ನಮ್ಮ ಸುಧಾ ತಮ್ಮ ಬಾಳಸಂಗಾತಿ ಕಳೆದುಕೊಂಡ ವಿಷಯ ತಿಳಿದು ತುಂಬಾ ದುಃಖವಾಯಿತು, ಅವರಿಬ್ಬರೂ ನಮ್ಮೆಲ್ಲರ ಕುಟುಂಬ ಸದಸ್ಯರಂತಿದ್ದರು, ಆ ಕಾಲಕ್ಕೇನೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಲಿತ ಹಿನ್ನೆಲೆಯ ಸುಧಾ ಅವರು ತಂದೆ ರಾಮಪ್ಪ ನಮ್ಮೂರ ಸರ್ಕಾರಿ ದವಾಖಾನೀಲಿ ವೈದ್ಯರಾಗಿ ಸಾರ್ವಜನಿಕ ಪ್ರೀತಿ ಕೊಳ್ಳೆ ಹೊಡೆದಿದ್ದರು, ಹದಿ‌ರೆಯದವರಿದ್ದ ನೋಡಲೆಂದೇ ವ್ಯಾಧಿಗಳನ್ನು ಆವಹಿಸಿಕೊಂಡು ಅವರಿರುವಲ್ಲಿಗೆ ಹೋಗುತ್ತಿದ್ದೆವು. ಟೆಂಪರೇಚರ್ ಅನ್ನುವ ಬದಲು ಟೆಂಪರ್ ಹೆಚ್ಚಾಗಿದೆ ಸಾರ್ ಎಂದು ನಗೆಪಾಟಲಿಗೆ ಬಲಿಯಾಗುತ್ತಿದ್ದೆವು. ಅವರು ನಮ್ಮ ಸ್ಪೋಕನ್ನಿಂಗಂಲೀಸು ರಿಪೇರಿ ಮಾಡುತ್ತ ಚಿಕಿತ್ಸೆ ನೀಡುತ್ತಿದ್ದರು. ಅದಾದ ಕೆಲವು ವರ್ಷಗಳ ಬಳಿಕ ಹರಪನಹಳ್ಳಿ? ಯಲ್ಲಿ ಅವರ ಮಗಳು ಸುಧಾ, ಹಗರಿಬೊಮ್ಮನಹಳ್ಳಿ ಯಲ್ಲಿ ಚಿದಾನಂದಗೌಡ ಕಥೆ ಕವಿತೆಗಳನ್ನು ಬರೆಯುತ್ತಾ ಹೆಸರು ಮಾಡಿದ್ದರು. ಮುಂದೆ ಅವರೀರ್ವರು ಮದುವೆಯಾಗಿ ಹೊಸ ಇತಿಹಾಸ ಸೃಷ್ಟಿಸಿದರು. ಪರಸ್ಪರ ಅನ್ಯೋನ್ಯತೆಯಿಂದ ಸವರ್ಣೀಯರ ವಿಶ್ವಾಸ ಸೂರೆಗೊಂಡರು. ಗೌಡರು ನಿಲ್ಲಿಸಿದ ಕಥೆ ಕವಿತೆಗಳನ್ನು ಸಮರ್ಥವಾಗಿ ಮುಂದುವರೆಸಿದ, ಆ ಎರಡೂ ಪ್ರಾಕಾರಗಳಲ್ಲಿ ಅನನ್ಯ ಇಳುವರಿ ತೆಗೆದ ನಮ್ಮ ಸುಧಾ ಗಟ್ಟಿಗಿತ್ತಿ. ಅವರು ಇಷ್ಟು ಲಗೂನ ತಮ್ಮ ಬಾಳಗೆಳೆಯ/ ನಮ್ಮೆಲ್ಲರ ಪ್ರೀತಿಯ ಚಿದಾನಂದಗೌಡರನ್ನು ಅಗಲಬಹುದೆಂದು ಅಂದುಕೊಂಡಿರಲಿಲ್ಲ.
    ಅಮ್ಮಾ ಸುಧಾ ಧೈರ್ಯದಿಂದಿರು ಕಣಯ್ಯಾ
    ಕುಂವೀ

  3. ಸ್ನೇಹಜೀವಿ ಸುಧಾರನ್ನು ಸಹಯಾನೋತ್ಸವದಲ್ಲಿ ಭೇಟಿಯಾಗಿದ್ದೆ. ಅವರಿಗೆ ದುಃಖವನ್ನು ಭರಿಸುವ ಶಕ್ತಿ ಬರಲಿ.

  4. ತುಂಬಾ ಬೇಸರವಾಯಿತು.. ಸುಧಾ ಅವರು ಧೈರ್ಯ ದಿಂದ ಇರಲಿ..

Leave a Reply