ಕನ್ನಡದಲ್ಲಿ ‘ತೀಸ್ತಾ’

ಸಂವಿಧಾನದ ಕಾಲಾಳು : ತೀಸ್ತಾ ಸೆತಲ್ವಾಡ್ ನೆನಪುಗಳು.

ಸತ್ಯಾ ಎಸ್. ಕನ್ನಡಕ್ಕೆ ಅನುವಾದಿಸಿದ ಈ ಪುಸ್ತಕವನ್ನು, ಕ್ರಿಯಾ ಮಾಧ್ಯಮ ಸದ್ಯದಲ್ಲೇ ಬಿಡುಗಡೆ ಮಾಡಲಿದೆ!!

ಪುಸ್ತಕದಿಂದ..

ನಾನು ತೀಸ್ತಾ ಸೆತಲ್ವಾಡ್.
ಒಂದು ರೀತಿಯಲ್ಲಿ ನಾನು ಕಾನೂನಿನ ಕೂಸು. ನನ್ನ ಮುತ್ತಾತ, ತಾತ ಮತ್ತು ಅಪ್ಪ- ಮೂವರೂ ಖ್ಯಾತಿವೆತ್ತ ವಕೀಲರು. ನಾನೂ ವಕೀಲಳಾಗುವ ಕನಸು ಕಾಣುತ್ತಿದ್ದೆ.

ನಾನು 7ನೇ ತರಗತಿಯಲ್ಲಿರುವಾಗ, ಬಹುಶಃ 12 ವರ್ಷ ವಯಸ್ಸಿರಬೇಕು, ಒಂದು ದಿನ ಅಪ್ಪ ‘ಆಲ್ ದಿ ಪ್ರೆಸಿಡೆಂಟ್ಸ್ ಮೆನ್’ ಪುಸ್ತಕ ಮನೆಗೆ ತಂದರು. ಅದನ್ನು ಸ್ಟ್ರಾಂಡ್ ಬುಕ್ ಸ್ಟಾಲ್ ನಲ್ಲಿ ಖರೀದಿಸಲಾಗಿತ್ತು. ಅಮೆರಿಕಾದ ವಾಟರ್ ಗೇಟ್ ಪ್ರಕರಣ ಕುರಿತಾದ ಆ ಪುಸ್ತಕ ಓದಿದ ಮೇಲೆ ನನ್ನ ಬದುಕು ಮಗ್ಗಲು ಬದಲಿಸಿತು. ಮತ್ತೆಂದೂ ಬದಲಾಗಲಿಲ್ಲ. ಆ ಪುಸ್ತಕವನ್ನ ಮತ್ತೆ ಮತ್ತೆ ಓದಿದೆ. ತಪ್ಪುಗಳನ್ನು ಬಯಲಿಗೆಳೆದು ಸರಿಯನ್ನು ಪುನರ್ ಸ್ಥಾಪಿಸುವ ಸಲುವಾಗಿ ಆ ಇಬ್ಬರು ಪತ್ರಕರ್ತರು ಮಾಡಿದ್ದ ಅನವರತ ಕೆಲಸ ನನ್ನನ್ನು ಬಹುವಾಗಿ ಆಕರ್ಷಿಸಿತು. ಅಂದು ನನಗೆ ಬದುಕಿನಲ್ಲಿ ಏನು ಮಾಡಬೇಕು ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿ ಹೋಯಿತು.

ಅಪ್ಪನಿಗೆ ಹೇಳಿದೆ – ‘ಪತ್ರಿಕೋದ್ಯಮ ನನ್ನ ಆಯ್ಕೆಯ ವೃತ್ತಿ. ಪತ್ರಿಕೋದ್ಯಮದ ಮೂಲಕ ಕಾನೂನು ವ್ಯವಸ್ಥೆಯನ್ನು ಸ್ಥಾಪಿಸುವುದು ನನ್ನ ಗುರಿ’.

Leave a Reply