ಬಯಸಿದ್ದು ಏಕಾಂತ, ದಕ್ಕಿದ್ದು ಏಕಾಂಗಿತನ 

ನವಮಿ ಪ್ರಾರ್ಥನೆ

ಮುಕುಂದಾ ಬೃಂದ

ಬಯಸಿದ್ದು ಏಕಾಂತ
ದಕ್ಕಿದ್ದು ಏಕಾಂಗಿತನ
ಇದಕಲ್ಲವೇ ಹೇಳೋದು
man proposes and god disposes

ಆದರೂ ಒಂದು ಜಿಜ್ಞಾಸೆ
ನೆನಪುಗಳೇ ತುಂಬಿರಲು
ಭಾವಗಳು ಜೊತೆಯಿರಲು
ಏಕಾಂಗಿ ಎಲ್ಲಿ ಏಕಾಂತವೆಲ್ಲಿ ?

ಸಮಾದಿ ಯೋಗದರಿವಿಲ್ಲ
ಸಂಸಾರದಪೇಕ್ಷೆ ತೀರಿಲ್ಲ
ವೈರಾಗ್ಯವೆಲ್ಲಿಂದಬರಬೇಕು
ಜೀವ ಚಪಲದ ಸಿಹಿಕಹಿಯ ಜೀವನದಲಿ ?

ನೀರೆರೆದು ಬೆಳೆಸಬೇಕು ಉತ್ಸಾಹ
ಬತ್ತಿಹೋದ ತೊರೆಯಲ್ಲಿ ನೀರೆಲ್ಲಿದೆ ?
ಮಳೆಗೆ ಹಾತೊರೆದು ಕುಳಿತಿರೆ
ಮತ್ತದೇ ಉದಾಸ ಉಪದ್ರವ ಕಾಡಾಟ

ಋತುಮಾನ ಬದಲೀತು
ತುಂತುರು ಹನಿ ಉದುರೀತು
ಕಾದಿಹೆನು ಶಬರಿಯಂತೆ
ಹೇ ಶ್ರೀರಾಮ ಕರುಣಿಸೂ ಸ್ವೀಕರಿಸಿ ನವಮಿ ಪ್ರಾರ್ಥನೆಯ …

1 comment

Leave a Reply