ಮಮತಾ ಅರಸೀಕೆರೆ 

ಜಿ ಕೆ ರವೀಂದ್ರಕುಮಾರ್ ಇನ್ನಿಲ್ಲ
ನಂಬಿಕೆಯಾಗ್ತಿಲ್ಲ
ಅರಗಿಸಿಕೊಳ್ಳಲಾಗುತ್ತಿಲ್ಲ.
ಹೃದಯಾಘಾತವಂತೆ ..

ಕಳೆದವಾರವಷ್ಟೇ ಎರಡು ಭಾವಗೀತೆಯೊಂದಿಗೆ ಆಕಾಶವಾಣಿಗೆ ಬಾರಮ್ಮ ಅಂದಿದ್ದರು.
ಬೆಂಗಳೂರಿನಲ್ಲಿ ಮೊದಲ ಬಾರಿ ಭೇಟಿಯಾದಾಗ ಅದೆಷ್ಟು ಆತ್ಮೀಯತೆ …
ಈಗ ನಮ್ಮ ನಡುವಿನಿಂದ ಕಾಣೆಯಾಗಿದ್ದೀರಿ.
ಇದು ಅನ್ಯಾಯ ..
ಶ್ರದ್ಧಾಂಜಲಿ ಹೇಳುವ ವಯಸ್ಸಲ್ಲ ನಿಮ್ಮದು..

ಮಂಜುನಾಥ್ ಲತಾ

ನಂಬಲು ಮನಸ್ಸು ಒಪ್ಪುತ್ತಿಲ್ಲ….

ನಿಮ್ಮ ‘ಪ್ಯಾಂಜಿಯಾ’, ‘ಕದವಿಲ್ಲದ ಊರು’, ‘ಪುನರ್ಭವ’ಕ್ಕೆ ನಾನು ಬರೆದ ಬೆನ್ನುಡಿ, ಮೈಸೂರು ಆಕಾಶವಾಣಿಗೆ ಕರೆಸಿ ನನ್ನಿಂದ ಪದ್ಯ ಓದಿಸಿ ಬೆನ್ನು ತಟ್ಟಿ ಕಳಿಸಿ, ಚೆಕ್ ಕೊಟ್ಟು ಕಳಿಸಿ‌‌‌…

ನಿಮ್ಮ ಒಡನಾಟ ಮಾಸಲಾಗದ ನೆನಪು…

ಚಂದ್ರಕಾಂತ ವಡ್ಡು   

ನಾನು ಹುಬ್ಬಳ್ಳಿಯಲ್ಲಿದ್ದಾಗ ನನ್ನನ್ನು ಧಾರವಾಡ ಆಕಾಶವಾಣಿ ಕೇಂದ್ರಕ್ಕೆ ಕರೆಯಿಸಿ ಕಥೆ ಓದಿಸಿದ್ದರು. ಕಳೆದ ತಿಂಗಳು ಸಮಾಜಮುಖಿ ಮೆಚ್ಚಿ ಸಂದೇಶ ಕಳುಹಿಸಿದ್ದರು.

ಅಗಲಿಕೆಯ ಸುದ್ದಿ ಆಘಾತಕಾರಿ.

 

6 Comments

 1. ಸರ್…ನಿಮಗೆ ಶ್ರದ್ಧಾಂಜಲಿ ಹೇಳುವುದಾದರೂ ಹೇಗೆ.ನಾನು ಗ್ರಾಮೀಣ ಬಾಗದವರಿಗೆ ನಿಮ್ಮ ಆಕಾಶವಾಣಿಯ ಮುಖ್ಯ ವಾಹಿನಿಯಲ್ಲಿ ಅವಕಾಶ ಕೊಡ್ತಿಲ್ಲ ಎಂದ ಕೂಡಲೇ ನನ್ನ ಭಾವಗೀತೆ ತರಿಸಿಕೊಂಡು ಹೊಸದನಿ ಹೊಸಬನಿ ಕಾರ್ಯಕ್ರಮಕ್ಕೆ ಅಳವಡಿಸಿಕೊಂಡಿರಿ..ಕೊನೆಯ ಬಾರಿಗೆ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಭೇಟಿಯಾದಿರಿ..ನನಗಿನ್ನೂ ಮಾತನಾಡಬೇಕಿತ್ತು ನಿಮ್ಮೊಡನೆ..ದೇವರಿಗೆಂಥ ದುರಾಸೆ ನೋಡಿ…

 2. ಇದನ್ನು ಹೇಗೆ ನಂಬುವುದು!
  ಕದವಿಲ್ಲದ ಊರಿಂದ ಯಾವ ಕಡೆಯಿಂದ ಹೋದರೂ ಇವರು ಮರಳಿ ಬಂದು ಬಿಡಬಹುದು ಎಂದುಕೊಂಡು ಕಾದು ಕುಳಿತಿದ್ದ ನಮ್ಮ ತಹ ನಿಮ್ಮ ಕಾವ್ಯ ಪ್ರೇಮಿಗಳ ಬಗ್ಗೆ ಕನಿಕರ ಎನಿಸಲಿಲ್ಲವೇ!
  ಡಿ ಎಮ್ ನದಾಫ್ ಅಫಜಲಪುರ

 3. ಜಿ. ಕೆ. ಆರ್. ಸರ್. ನೀವು ನಮ್ಮೆಲ್ಲರ ಮನಸಿನಲ್ಲಿ ಜೀವಂತವಾಗಿರುವಿರಿ. ನೀವಿಲ್ಲವೆಂದು ಬಂದ ಸುದ್ದಿ ಸುಳ್ಳೇ ಆಗಿರಲಿ ದೇವರೇ..

  1. ರವೀಂದ್ರ ಕುಮಾರ್ ಕವಿತೆಗಳನ್ನು ಓದಿ ಇಷ್ಟ ಪಟ್ಟಿದ್ದೆ. ಅವರ ಸಾವಿನ ಸುದ್ದಿ ನೋವು ತಂದಿದೆ
   ಮಂಡಲಗಿರಿ ಪ್ರಸನ್ನ

 4. ಈಗ ಅದು ಹೇಳದೆಯೂ ಮುಗಿಸುವುದನ್ನು ಕಲಿತಿರುವರು –

  ಪ್ರಜಾವಾಣಿಯಲ್ಲಿ ಕವನ ಓದಿದ ಮೇಲೆ ಈ ಸಾಲಿನ ಕುರಿತು ಬಹಳ ಯೋಚಿಸಿದ್ದೆ. ಟೆಂಟ್ ಸಿನಿಮಾದ ಯಾವಾವುದೋ ನೆನಪುಗಳು ಆ ಸಾಲಿನೊಡನೆ ಜೋಡಿಸಿಕೊಂಡವು. ಯಾವ ಯೋಚನೆಗೂ ನಿರ್ದಿಷ್ಟ ಕಾರಣವಿಲ್ಲದೆಯೂ ಇರುತ್ತದೆ ಎನಿಸುತ್ತದೆ‌. ಹೇಳದೆ ಮುಗಿಸಿಬಿಟ್ಟಿರಲ್ಲ ರವೀಂದ್ರ ಜೀ,,

Leave a Reply