ಬೇಲಿದಾಟಿದ ಬಾಲೆಯ ನೆರಳೇ ಕಾಣುತ್ತಿಲ್ಲ

ಅನಿಲ್ ಗುನ್ನಾಪೂರ ನಾನು ಸುಮ್ಮನೆ ಮರಳುಗಾಡಿನಲ್ಲಿ ಮುತ್ತು ಹುಡುಕುತ್ತಿದ್ದೇನೆ ಸಮುದ್ರದ ಅರಿವೇ ಇಲ್ಲ ಮುತ್ತು ಸಿಗುವುದೆಲ್ಲಿ ಎಂಬುದು ನನಗೂ ತಿಳಿದಿಲ್ಲ ಗುಳಿಕೆನ್ನೆಯ ಮೇಲೆ ಅಧರಗಳಿರಿಸಿದ ಗುರುತು ಆರದಂತೆ ಕಾಪಾಡಿಕೊಂಡಿರುವೆ ಯಾರಿರಿಸಿರಬಹುದೆಂದು ಈವರೆಗೂ ಗೊತ್ತಾಗಿಲ್ಲ ನಾನು ಸುಮ್ಮನೆ ಒಂಟಿಗಾಲಿನಲ್ಲಿ ನಿಂತು ಕಾಯುತ್ತಿದ್ದೇನೆ ಇನ್ನೊಂದು...

ಅದಕ್ಕೇ ಅನ್ನೋದು ‘ ಜವಾರಿ ಮಂದಿ’ ಯ ಹೃದಯ ಅಂತ

ಕಿರಣ್ ಭಟ್ ಹೊನ್ನಾವರ ನಿನ್ನೆ ಊರಿಗೆ ಹೊರಟಿದ್ದೆ. ಸಂಜೆ ಹೊತ್ತಿಗೆ ಸಣ್ಣಗೆ ಮಳೆ ಸುರುವಾಗಿತ್ತು. ಮಳೇಲಿ ತೊಯ್ಯೋದನ್ನ ತಪ್ಪಿಸ್ಕೊಳ್ಳೋಕೆ ಬಸ್ ಸ್ಟ್ಯಾಂಡ್ ಒಳಹೊಕ್ಕೆ.ಜನ, ದನ, ನಾಯಿಗಳೆಲ್ಲ ಮಳೆಯ ಕಾರಣ ಬಸ್ ಸ್ಟ್ಯಾಂಡ್ ನ್ನೇ ಆಶ್ರಯಿಸಿದ್ದವು. ನಾನು ನಿಂತ ಜಾಗದಿಂದ ಸ್ವಲ್ಪ ದೂರದಲ್ಲಿ...

ಪ್ಯಾರನ ಪ್ಯಾರೆ ಪತಂಗ ಹಾರಿಸಿದಾಕೆ

ಅಮೀನ.ಮ.ಅತ್ತಾರ ನನ್ನ ಭಾವನೆಗಳನೆ ಬಣ್ಣವಾಗಿಸಿಕೊಂಡು ಮೊಹಬ್ಬತನ ಚಿತ್ರ ಬಿಡಿಸಿದ ಸಖಿಯೆ ನೀನಧ್ಭುತ ಕಲಾವಿದೆ. ಕಣ್ಣೋಟದಲೆ ಖೈದಿಯಾಗಿಸಿ ಮನದರಮನೆಯೊಳಗೆ ಒಲುಮೆಯ ಮಧುರ ಸಜೆ ನೀಡಿದ ವರದೇವತೆ ನಿನ್ನ ಮೊಗದ ಕಿರಣವೊಂದು ಸೋಕಿ ಬರ್ಬಾದ್ ಬದುಕು ಬೆಳಗಿದೆ. ತುಟಿಯಂಚಿನ ಕಿರುನಗೆಯ ಕಾಣಿಕೆಗೆ ದಿಲ್ನ ದರ್ದಿನ...

ಕ್ಯಾಸ್ಟ್ರೋ ಕಥೆ ಬಿಡುಗಡೆ ಮತ್ತು ಪ್ರತಿಮೆ ಭಂಜನೆ ವಿಚಾರಗೋಷ್ಟಿ

ಜಿಎಸ್ಸೆಸ್ ಅಪರೂಪದ ಜಾತ್ಯತೀತ ವ್ಯಕ್ತಿಯಾಗಿದ್ದರು..

ಡಿ.ಎಸ್.ನಾಗಭೂಷಣ ಇದೇ 12ರಂದು ಶಿವಮೊಗ್ಗದಲ್ಲಿ ಪ್ರದಾನ ಮಾಡಿದ ಜಿಎಸ್‌ಎಸ್ ಪುರಸ್ಕಾರವನ್ನು ಸ್ವೀಕರಿಸಿ ನಾನು ಆಡಿದ ಮಾತುಗಳ ಲಿಖಿತ ರೂಪ ಮೊಟ್ಟ ಮೊದಲಿಗೆ ನನಗೆ ಈ ಜಿಎಸ್‌ಎಸ್ ಪುರಸ್ಕಾರ ನೀಡುತ್ತಿರುವ ಶಿವಮೊಗ್ಗದ ಜಿಎಸೆಸ್ ಪ್ರತಿಷ್ಠಾನದ ಎಲ್ಲ ಪದಾಧಿಕಾರಿಗಳಿಗೆ, ವಿಶೇಷವಾಗಿ ಅದರ ಅಧ್ಯಕ್ಷರಾದ ಶ್ರೀಮತಿ...

ಭೂಮಿಯ ಕೆಳಗೂ ಮಳೆ..

ಎಲ್ ಸಿ ನಾಗರಾಜ್ ‘water womb ‘ ಎಂಬುದೊಂದು ಪರಿಕಲ್ಪನೆಯಿದೆ – ಇದನ್ನ ಜಲಗರ್ಭ ಅಥವಾ ಜಲಮಂಡಲ ಎಂಬುದಾಗಿ ತಿಳಿಯಬಹುದು. ನೈಸರ್ಗಿಕ ಬೇಸಾಯದ ಬಗ್ಗೆ ಕಾವ್ಯಮಯ ದರ್ಶನವನ್ನ ಕಟ್ಟಿರುವ ಜಪಾನಿ ಝೆನ್ ಮಾಸ್ಟರ್ ಮೊಸಾನೊಬು ಫುಕುವೋಕ ಅವರ ‘ Natural way...

ಓಹೋ.. ಅಜ್ಜಿ ಮನೆ!!

ವಾರವೊಂದರಿಂದ ಸುಮಾರು ೧೦-೧೫ ಬೇರೆ ಬೇರೆ ಬೇಸಿಗೆ ಶಿಬಿರದ ಜಾಹೀರಾತುಗಳು ಕಣ್ಣಿಗೆ ಬಿದ್ದಿವೆ.. ಫೇಸ್‌ಬುಕ್ಕಿನಲ್ಲಿ, ಪಾಂಪ್ಲೆಟ್ಟುಗಳಲ್ಲಿ , ದಾರಿಬದಿಯ ಪೋಸ್ಟರ್ ಗಳಲ್ಲಿ ಹೀಗೆ ಸುಮಾರು ರೂಪದಲ್ಲಿ! ಇದನ್ನೆಲ್ಲಾ ನೋಡುತ್ತಿದ್ದಂತೆ ಬೇಸಿಗೆ ರಜೆ ಬಂತೆಂಬ ನೆನಪಾಗಿ ಒಂದೆಡೆ ಖುಷಿ ಹೊನಲಾಗಿ ಹರಿದರೆ ಮತ್ತೊಂದೆಡೆ...

ಕನ್ನಡಿ ಮುಂದೆ ಎಂಥಾ ಸಾಬಸ್ಥ ಮನುಷ್ಯನೂ ಮಂಗ ಆಗ್ತಾನೆ..

ಕೇಶವ ರೆಡ್ಡಿ ಹಂದ್ರಾಳ ಇತ್ತೀಚೆಗೆ ಮಲಗುವ ಕೋಣೆಗೆ ಮಾಡಿಸಿದ ಡ್ರೆಸ್ಸಿಂಗ್ ಟೇಬಲ್ಲಿನಲ್ಲಿ ನಿಲುವುಗನ್ನಡಿಯನ್ನು ಕೂಡ ಜೋಡಿಸಲಾಗಿದೆ. ರೂಮಿನಲ್ಲಿ ಓಡಾಡುವಾಗ, ಮಲಗುವಾಗ ಈ ಕನ್ನಡಿಯಂತೂ ವಿಪರೀತವಾಗಿ ಸೆಳೆಯುತ್ತದೆ. ಕ್ಷಣ ಕಾಲವಾದರೂ ಅದರ ಮುಂದೆ ನಿಂತು ನನ್ನನ್ನು ನಾನು ತಲಾಶು ಮಾಡಿಕೊಳ್ಳುವ ಕಾಯಶ್ಯು ನನ್ನಲ್ಲಿ...

ಆ ನಕ್ಷತ್ರಗಳು ಮಿಂಚದೇ ಮಾಯವಾದವು..

ಮಂಗಳಾ ಬಿ   ಇಷ್ಟವಿರುವೆ ಈಗಲೂ- ಮೊದಲಿನಂತೆ ಕವಿತೆಗಳನು ಬರೆಯದಿದ್ದರೂ, ಆಗಿನಂತೆ ಮಾತುಗಳ ಆಡದಿದ್ದರೂ, ಅಂದಿನಷ್ಟು ಹುಚ್ಚುಕನಸ ಹೇಳದಿದ್ದರೂ.. ಇಷ್ಟವಿರುವೆ ಈಗಲೂ- ಮೊದಲಿನಂತೆ ಕಣ್ಣನೋಟ ಚೆಲ್ಲದಿದ್ದರೂ, ಆಗಿನಂತೆ ತುಂಟನಗುವ ಬೀರದಿದ್ದರೂ, ಅಂದಿನಷ್ಟು ಕೇಳುವ ಕಿವಿಗಳಿಲ್ಲದಿದ್ದರೂ, ಇಷ್ಟವಿರುವೆ ಈಗಲೂ- ಜೊತೆಗಿರಬೇಕು ಎಂಬ ತುಡಿತ...