ಭಾರತ ಭಾಗ್ಯ ವಿಧಾತ..

ಇದು 'ಅವಧಿ' Exclusive Coverage

BBV- Inauguration @ Kalagrama

This slideshow requires JavaScript.

Bharata Bhagya Vidhata

ಹೀಗೆ ಮೂಡಿತು “ಭಾರತ ಭಾಗ್ಯ ವಿಧಾತ”

ಎನ್ ಆರ್ ವಿಶುಕುಮಾರ್ 

ಅವರ ಚಿತ್ರ ಸದಾ ನನ್ನ ಚಿತ್ತವನ್ನು ಕಾಡುತ್ತದೆ .ನಮ್ಮ ದೇಶ ಅವರನ್ನು ಏಕೆ ಒಮ್ಮನಸ್ಸಿನಿಂದ ಒಪ್ಪಿಕೊಳ್ಳುತ್ತಿಲ್ಲ? ಗಾಂಧೀಜಿಯವರನ್ನು ಮಹಾತ್ಮ ಎಂದು ಸಂಭೋದಿಸಿದ ಭಾರತ ಅವರನ್ನು ಏಕೆ ಕೇವಲ ‘ಸಂವಿಧಾನ ಶಿಲ್ಪಿ’ ಎಂದಷ್ಟೇ ಕರೆದು ಸುಮ್ಮನಾಗುತ್ತಿದೆ?

ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಮಧುರ ಸಂಬಂಧ ಇರಲಿಲ್ಲ. ಅಂಬೇಡ್ಕರ್ ಅವರ ನಡೆಗಳಿಗೆ ಗಾಂಧಿ ತಡೆಗೋಡೆ ಇಡುತ್ತಿದ್ದರು. ಅಂಬೇಡ್ಕರ್ ಕೇವಲ ತಳವರ್ಗಗಳ ಸುಧಾರಣೆಗಾಗಿ ಹೋರಾಡಿದ ನಾಯಕರು. ಭಾರತದ ಜನಸಮುದಾಯವನ್ನು ಜಾತಿಯ ಆಧಾರದಲ್ಲಿ ವಿಭಜಿಸಲು ಪ್ರಯತ್ನಿಸಿದರು.. ಇತ್ಯಾದಿ ಗೊಂದಲಗಳು ದೇಶದ ಕೆಲವರ  ಮನದಲ್ಲಿರುವುದನ್ನು ಕಂಡು ನೋವಾಗುತ್ತಿತ್ತು.

 

ಅಂಬೇಡ್ಕರ್ ನಮ್ಮ ದೇಶದ ಒಬ್ಬ ಮಹಾನ್ ನಾಯಕರು, ಜಗತ್ತಿನ ಪ್ರತಿಭಾವಂತ ಅರ್ಥಶಾಸ್ತ್ರಜ್ಞರು, ಅಪರಿಮಿತವಾಗಿ ದೇಶವನ್ನು ಪ್ರೀತಿಸಿದವರು, ಸಮಾಜದ ಎಲ್ಲ ವರ್ಗದ ಜನರಿಗೂ ಒಳಿತಾಗುವಂತಹ ಕಾರ್ಯಗಳನ್ನು ಮಾಡಿದ್ದಾರೆ …ಇತ್ಯಾದಿ ವಿಷಯಗಳನ್ನು ಸಾಮಾನ್ಯ ಜನರಿಗೆ ಹೇಗೆ ಮನದಟ್ಟು ಮಾಡುವುದು ಎನ್ನುವ ವಿಷಯ ನನ್ನ ಮನಸ್ಸಿನಲ್ಲಿ ಹಲವಾರು ವರ್ಷಗಳಿಂದ ಕೊರೆಯುತ್ತಲೇ ಇತ್ತು.

ಕಳೆದ ವರ್ಷ ರಾಜ್ಯದಲ್ಲಿ ಅಂಬೇಡ್ಕರ್ ಅವರ 125 ನೇ ವರ್ಷಾಚರಣೆಯ ವಿಷಯ ಪ್ರಸ್ತಾಪವಾದಾಗ ನಮಗೆ ಒಂದು ಅಪರೂಪದ ಸಂದರ್ಭ ಒದಗಿ ಬಂತು.

Read more

ಭಾರತ ಭಾಗ್ಯ ವಿಧಾತ: ಧ್ವನಿ-ಬೆಳಕು ಕಾರ್ಯಕ್ರಮಕ್ಕೆ ವರ್ಣರಂಜಿತ ಚಾಲನೆ

e872dba5-c432-4d1f-af73-fb589e6fa202ಭಾರತದಲ್ಲಿ ಸಂವಿದಾನ ಇರುವವರೆಗೂ ಡಾ.ಬಿ.ಆರ್. ಅಂಬೇಡ್ಕರ್ ಅವರು ಅಮರ, ಕಾನೂನಿಗಿಂತ ದೊಡ್ಡವರಿಲ್ಲ ಎನ್ನುವ ಮಾತಿದೆ, ಆ ಕಾನೂನುಗಳ ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದು ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಅವರು ಹೇಳಿದರು.

ec13c443-f04c-4d60-b947-321da249aad7ಇಂದು ಅವರು ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದ ಕಲಾಗ್ರಾಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ಭಾರತ ಭಾಗ್ಯ ವಿಧಾತ”-ಧ್ವನಿ ಬೆಳಕು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿ ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು ಶಿರ್ಷಿಕೆ ಸಹ ಅದ್ಭುತವಾಗಿದೆ ಎಂದರು.

 

Featured Category

ಭಾರತ ಭಾಗ್ಯ ವಿಧಾತ’ Special