Bengaluru International Film Festival 2017

ಇದು 'ಅವಧಿ' Exclusive Coverage

 

This slideshow requires JavaScript.

REGISTRATION IS CLOSED!

Registrations for the Biffes 2017 is closed. 

If you have registered online, please collect the pass at the venue.
Provide transaction details and one passport size photo.

 

BIFFES2017 Special

 • ಪ್ರೇಕ್ಷಕರ ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ
  ಮೈಸೂರಿನಲ್ಲಿ ನಡೆದ 9 ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆಯ ಬಳಿಕ ಸಾಂಸ್ಕೃತಿಕ ಸಮಾರಂಭವು ಏರ್ಪಟ್ಟಿತು. ಕನ್ನಡ ಚಿತ್ರರಂಗ ನಡೆದು ಬಂದ ಹಾದಿಯ ಕುರಿತಾದ ಲೇಸರ್ ಶೋಗೆ ವೀಕ್ಷಕರು ಮನಸೋತರು.  ಇತರೆ ಸಾಂಸ್ಕೃತಿಕ ಕಾರ್ಯಕ್ರಮದುದ್ದಕ್ಕೂ ಚಪ್ಪಾಳೆ ಶಿಳ್ಳೆ, ಕೇಕೆಗಳು ಮೊಳಗುತ್ತಿದ್ದುದು ಸಾಮಾನ್ಯವಾಗಿತ್ತು.      
 • ಇಲ್ಲಿದೆ ಪ್ರಶಸ್ತಿ ಬಾಚಿದ ಚಿತ್ರಗಳ ಲಿಸ್ಟ್
  9 ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿದ್ದದ್ದು ಒಟ್ಟು ಹನ್ನೊಂದು ವಿಭಾಗಗಳು. 15 ಸ್ಕ್ರೀನ್ ಗಳು ಬರೋಬ್ಬರಿ 200 ಸಿನಿಮಾಗಳು. ಇಂಥಹ ಬೃಹತ್ ಪೈಪೋಟಿಯಲ್ಲಿ ಪ್ರಶಸ್ತಿ ಬಾಚಿಕೊಳ್ಳೋದು ಅಂದ್ರೆ ಸುಮ್ನೆನಾ ? ಒಂದೊಂದು ಚಿತ್ರಕ್ಕೂ ಮತ್ತೊಂದು ಚಿತ್ರ ಪೈಪೋಟಿ ನೀಡ್ತಾನೇ ಇರುತ್ತೆ. ಇಂಥಹ ಟಫ್ ಫೈಟ್ ಗಳಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡೋದು ಇನ್ನೂ ಚಾಲೆಂಜ್ ಆಗಿರುತ್ತೆ. ಆದರೂ ಮೈಸೂರಿನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರಗಳನ್ನು ಘೋಷಿಸಲಾಯ್ತು.  
 • ಸಿನಿಮೋತ್ಸವ ಸಮಾರೋಪದಲ್ಲಿ ಗಣ್ಯರು
  ನಾಡಗೀತೆಗೆ ಗೌರವ ಸಲ್ಲಿಸಿದ ಬಳಿಕ 9 ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪ ಸಮಾರಂಭ ಸಾಂಗೋಪಾಂಗವಾಗಿ ನೆರವೇರಿತು. ರಾಜ್ಯಪಾಲರಾದ ವಜುಭಾಯ್ ವಾಲಾ, ಸಚಿವ ಹೆಚ್ ಸಿ ಮಹದೇವಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಎಂ ಲಕ್ಷ್ಮಿನಾರಾಯಣ, ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಸಿನಿಮೋತ್ಸವದ ಕುರಿತು ಮಾತನಾಡಿದರು.
 • ಸಮಾರೋಪ ಸಮಾರಂಭ ಹೀಗೆ ಶುರುವಾಯ್ತು
  ಅತ್ತ ಸೂರ್ಯ ಜಾರಿ ಚಂದ್ರನೇಳುವ ಹೊತ್ತು. ಮೈಸೂರು ನಗರದ ಮೈಸೂರು ಪ್ಯಾಲೆಸ್ ಅಂಗಳದಲ್ಲಿ ಮೈದಳೆದು ನಿಂತಿತು ರಂಗು ರಂಗಿನ ಲೋಕ. ಅದು 9 ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪ ಸಮಾರಂಭ. ರಾಜ್ಯಪಾಲರಾದ ವಜುಭಾಯ್ ವಾಲಾ, ಸಚಿವ ಹೆಚ್ ಸಿ ಮಹದೇವಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಎಂ ಲಕ್ಷ್ಮಿನಾರಾಯಣ, ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಮತ್ತು ಇತರೆ ಅಧಿಕಾರಿಗಳು ವೇದಿಕೆ ಅಲಂಕರಿಸುತ್ತಿದ್ದಂತೆಯೇ ನಾಡಗೀತೆಯೊಂದಿಗೆ ಸಮಾರೋಪ ಸಮಾರಂಭ ಶುರುವಾಯ್ತು. ಆ ಕ್ಷಣಗಳ ಛಾಯಚಿತ್ರಗಳನ್ನು ನೀವಿಲ್ಲಿ ನೋಡಬಹುದು.    
 • ಸಮಾರೋಪದಲ್ಲಿ ಸಿಹಿ ನೆನಪುಗಳನ್ನು ಮೆಲುಕಿದ ಗಣ್ಯರು
  ಅಭೂತಪೂರ್ವ ಯಶಸ್ಸನ್ನು ಸಾಧಿಸಿದ 9 ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗವಹಿಸಿದ ರಾಷ್ಟ್ರೀಯ ಅಂತರರಾಷ್ಟ್ರೀಯ ಗಣ್ಯರು ಸಮಾರೋಪ ಸಮಾರಂಭಕ್ಕಾಗಿ ಮೈಸೂರಿಗೆ ತೆರಳಿದ್ದರು. ಮೈಸೂರು ಪ್ಯಾಲೆಸ್ ನ ಆವರಣದಲ್ಲಿನ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಪರಸ್ಪರ ಕುಶಲೋಪರಿ ವಿಚಾರಿಸುವುದು, ಛಾಯಾಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳುವುದು ಕಂಡುಬಂತು. ಆ ಕ್ಷಣಗಳ ಕ್ಲಿಕ್ ಗಳನ್ನು ನಿಮಗಿಲ್ಲಿ ನೀಡಲಾಗಿದೆ.
 • ಸಾಗರೋಪಾದಿ ಪ್ರೇಕ್ಷಕರು ಸೇರಿದರು ಸಮಾರೋಪಕ್ಕೆ…
  9ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಮೈಸೂರು ನಗರದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಜಾತ್ರೆಯೋಪಾದಿ ಸೇರಿದ್ದರು. ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ನೆರೆದ ಪ್ರೇಕ್ಷಕರ ಛಾಯಾಚಿತ್ರಗಳನ್ನು ಇಲ್ಲಿ ನೀಡಲಾಗಿದೆ.
 • ಸಿನಿಮೋತ್ಸವದ ಸಮಾರೋಪದ ಸಮಾರೋಪದ ಅಂತಿಮ ಕ್ಷಣಗಳ ಪರಿಶೀಲನೆ
  9ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪ ಕಾರ್ಯಕ್ರಮ ಆರಂಭಕ್ಕೆ ಕ್ಷಣಗಣನೆ ಆರಂಭಕ್ಕೂ ಮುಂಚೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಎಂ ಲಕ್ಷ್ಮಿನಾರಾಯಣ ಅವರು ಕಾರ್ಯಕ್ರಮದ ಸಿದ್ದತೆಗಳನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಜೊತೆಯಲ್ಲಿದ್ದರು.
 • BREAKING NEWS: ‘ಹರಿಕಥಾ ಪ್ರಸಂಗ’ ‘ಉಪ್ಪಿನ ಕಾಗದ’ಕ್ಕೆ ಗೌರವ
  ಅನನ್ಯ ಕಾಸರವಳ್ಳಿ ನಿರ್ದೇಶನದ ‘ಹರಿಕಥಾ ಪ್ರಸಂಗ’ ಭಾರತೀಯ ಸಿನೆಮಾಗಳ ಸ್ಪರ್ಧಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದೆ. ಬಿ ಸುರೇಶ್ ನಿರ್ದೇಶನದ ಉಪ್ಪಿನ ಕಾಗದ ನೆಟ್ ಪ್ಯಾಕ್ ಅಂತರ ರಾಷ್ಟ್ರೀಯ ತೀರ್ಪುಗಾರ ಮಂಡಳಿಯ ಕನ್ನಡ ಸ್ಪರ್ಧಾ ವಿಭಾಗದ ಪ್ರಶಸ್ತಿ ಗಳಿಸಿದೆ ಕನ್ನಡಡಾ ಎರಡು ಸಿನೆಮಾಗಳು  
 • ಸಿನಿಮೋತ್ಸವ ಸಮಾರೋಪಕ್ಕೆ ಸಜ್ಜಾಗಿದೆ ಮೈಸೂರು
  ಇನ್ನೇನು ಕೆಲವೇ ಕ್ಷಣಗಳಲ್ಲಿ ಸಂಭ್ರಮದ ಸಿನಿಮೋತ್ಸವದ ಸಮಾರೋಪ ಸಮಾರಂಭ ಅರಮನೆ ನಗರಿಯಲ್ಲಿ ನಡೆಯಲು ಮೈಸೂರು ಸಿದ್ಧಗೊಂಡಿದೆ. ದೇಶ ವಿದೇಶಗಳ ಗಣ್ಯಾತಿಗಣ್ಯರು ಪಾಲ್ಗೊಳ್ಳುವ ಈ ಸಮಾರಂಭದ ಅಧ್ಯಕ್ಷತೆಯನ್ನು ಸಿಎಂ ಸಿದ್ಧರಾಮಯ್ಯ ಅವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಪೂರ್ವ ತಯಾರಿಯ ಕೆಲವು ಛಾಯಾಚಿತ್ರಗಳನ್ನು ನಿಮಗಿಲ್ಲಿ ನೀಡಲಾಗಿದೆ.
 • ಸಮಾರೋಪ ಸಮಾರಂಭಕ್ಕೆ ಶುರುವಾಯ್ತು ಕ್ಷಣಗಣನೆ…
  ಅದ್ಧೂರಿಯಾಗಿ ನಡೆದ 9 ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಸಿನಿ ರಸಿಕರ ಮನಗೆದ್ದು ಯಶಸ್ವಿಯಾಗಿದೆ. ಒಟ್ಟಾರೆಯಾಗಿ 6000 ಡೈಲಿ ಪಾಸ್ ಪಡೆದು ಸಿನಿಮೋತ್ಸವದಲ್ಲಿ ಪ್ರೇಕ್ಷಕರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಪಾತ್ರರಾಗಿದ್ದಾರೆ. ಇಂದು ಈ ಯಶಸ್ವಿ ಸಿನಿಮೋತ್ಸವದ ಸಮಾರೋಪ ಸಮಾರಂಭ ನಡೆಯುತ್ತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜ್ಯಪಾಲರಾದ ವಜುಭಾಯ್ ವಾಲಾ ಅವರು ಪ್ರಶಸ್ತಿ ವಿತರಿಸಲಿರುವ ಈ ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್ ಸಿ ಮಹದೇವಪ್ಪ, ತನ್ವೀರ್ ಸೇಠ್, ಪ್ರಿಯಾಂಕ್ ಎಂ ಖರ್ಗೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಎಂ …