ಅವಧಿ ೧೪ರ ವಸಂತ

ಸ್ಪೆಷಲ್ ಕವಿತೆ: ಲಲಿತಾ ಸಿದ್ಧಬಸವಯ್ಯನವರ ‘ಈಟೊಂದು ನರದೊಗಲು‌ ಹನ್ನೆರಡು ಬಣ್ಣ..’

ಸ್ಪೆಷಲ್ ಕವಿತೆ: ಲಲಿತಾ ಸಿದ್ಧಬಸವಯ್ಯನವರ ‘ಈಟೊಂದು ನರದೊಗಲು‌ ಹನ್ನೆರಡು ಬಣ್ಣ..’

ಲಲಿತಾ ಸಿದ್ಧಬಸವಯ್ಯ ಅಡ್ಡೆಸರು ಇಟ್ಟೋರು ಒಂಟೋದರುಹಿಂದೆಮುಂದೆ ಸಂತೆದಾರಿ ಅಂತ ಬೊಗಳಿಜೀವಬೆರಸೆ ಇರೋರ ಗತಿ ಏನೇಳಿನೀವು ಅಪ್ಪನಿಗುಟ್ಟಿದ ಅಪ್ಪಂತೋರು ಉತ್ತರವೇಳಿಹೊತಾರೆಯೆದ್ರೆ ಮಕ...

ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ..

ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ..

ಇದು ಚಂದ್ರಶೇಖರ ಕಂಬಾರರ ಸಾಲು. ನಮ್ಮದೂ ಅದೇ ಸೊಲ್ಲು. ಸರಿಯಾಗಿ 14 ವರ್ಷಗಳಿಂದ ನಮ್ಮ ಕೈಹಿಡಿದು ಬಂದ ನಿಮಗಲ್ಲದೆ ಇನ್ನಾರಿಗೆ ಮೊದಲ ಶರಣಾರ್ಥಿ ಸಲ್ಲಬೇಕು. ಹೈದರಾಬಾದ್ ನ ರಾಮೋಜಿ...

ಸಂಪಾದಕರ ನುಡಿ

Editorial

‘ಅವಧಿ’ಗೆ ಒಂದು ಮನ್ನಣೆ

ಜಿ ಪಿ ಬಸವರಾಜು ಅವರ ಕವಿತೆಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೋ ಅಷ್ಟೇ ಆಕರ್ಷಿಸಿದ್ದು ಅವರ ಚಿಂತನೆಗಳು. 'ಬರಹಗಾರ ನೀನು ಯಾರ ಪರ?' ಎಂದು ನಿಜಕ್ಕೂ ಆತಂಕದಿಂದ ಕೇಳಬೇಕಾದ ದಿನಗಳು ಇವು. ಬಹುಷಃ ಜಿ ಪಿ ಬಸವರಾಜು ಅವರನ್ನು ಬಿಟ್ಟು. ಅವರ ಸಮಾಜಮುಖಿ ಚಿಂತನೆಗಳು ಅವರ ಬರಹದ ಆರಂಭದ ದಿನಗಳಿಂದ ಇಲ್ಲಿಯವರೆಗೂ ಪ್ರಶ್ನಾತೀತವಾಗಿಯೇ ಉಳಿದಿವೆ.   ನಾನು ಬಸವರಾಜು ಅವರನ್ನು ಓದಿ ಬೆಳೆದವನು. ಅವರ ಕವಿತೆ, ಪ್ರವಾಸ ಕಥನಕ್ಕೆ ಮಾರು ಹೋದವನು. ಅವರ ಕೈಕುಲುಕಿದ್ದು ನಾನು ಇನ್ನೂ ಕಾಲೇಜು ಓದುತ್ತಿದ್ದ ದಿನಗಳಲ್ಲಿ ಮಂಗಳೂರಿಗೆ ಸಂಕಿರಣಕ್ಕೆಂದು ಹೋದಾಗ. ಮಂಗಳೂರಿನಲ್ಲಿ ಕೊಣಾಜೆಯಿಂದ ಬೈಕ್ ಏರಿ ಕಡಲನ್ನು ಬಗಲಲ್ಲಿ ಇಟ್ಟುಕೊಂಡು ಸಾಗುತ್ತಿದ್ದ ಬಸವರಾಜು ಅವರ ಚಿತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.  ನಂತರ 'ಪ್ರಜಾವಾಣಿ'ಯ ಅಂಗಳದಲ್ಲೇ ನಾವಿಬ್ಬರೂ...

ಮತ್ತಷ್ಟು ಓದಿ

ಸಂಡೇ ಸ್ಪೆಷಲ್

Sunday Special

ಬೇಲಿಯನು ಜಿಗಿಯುವ ಚಿಟ್ಟೆಯ ಜಾಡು ಕಾಲಗರ್ಭದಲ್ಲಿರುವ ಕರುಣೆಯ ಹಾಡು

ಬೇಲಿಯನು ಜಿಗಿಯುವ ಚಿಟ್ಟೆಯ ಜಾಡು ಕಾಲಗರ್ಭದಲ್ಲಿರುವ ಕರುಣೆಯ ಹಾಡು

ಸುಧಾ ಆಡುಕಳ ಇದ್ದಕ್ಕಿದ್ದಂತೆ ಗೆಳೆಯ ಅಪರಿಚಿತನಾದ ಅವರ ಒಂಟಿತನಕ್ಕೆ ದಾರಿಯೂ ಮರುಗುತ್ತಿದೆ ಹೌದು, ಅನೇಕ ವರ್ಷಗಳವರೆಗೆ ಒಟ್ಟಾಗಿ ನಡೆದವರು, ಇದ್ದಕ್ಕಿದ್ದಂತೆ ಅವರಿಗೆ ನೇರ ಸಂಬಂಧವೇ ಇರದ  ಅದ್ಯಾವುದೋ ವಿಷಯದ ಬಗ್ಗೆ ಮುನಿಸಿಕೊಂಡು, ಒಬ್ಬರ ಮೇಲೊಬ್ಬರು ಕೆಸರೆರಚಿಕೊಳ್ಳುವ ವಿಚಿತ್ರವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಭಿನ್ನ ಗುರಿಗಳೆಡೆಗೆ ಗಮಿಸುವವರ ಮಾತು ಬಿಡಿ, ಒಂದೇ ಗುರಿಯೆಡೆಗೆ ಸಾಗುವ ಭಿನ್ನ ದಾರಿಯ ಪಥಿಕರು ಕೂಡ ಒಟ್ಟಿಗೆ ಬೆರೆಯದ, ಪರಸ್ಪರ ಸಂವಾದಿಸಲಾಗದ ಸಂದಿಗ್ಧವನ್ನು ತಂದಿಟ್ಟುಕೊಂಡಿದ್ದೇವೆ. ಅನ್ಯವನ್ನು ಒಳಗೊಳ್ಳುವ ಈ ಮಣ್ಣಿನ ಮೂಲಗುಣ ಇದ್ದಕ್ಕಿದ್ದಂತೆ ಬದಲಾಗಿಹೋಯಿತೆ? ಭೂತಕಾಲದಿಂದ...

ಡಾ. ಎಂ ಜಿ ಹೆಗಡೆ ಸಂದರ್ಶನ- ಅನ್ಯವ ಕಂಡು ಹಿಗ್ಗಬೇಕು

ಡಾ. ಎಂ ಜಿ ಹೆಗಡೆ ಸಂದರ್ಶನ- ಅನ್ಯವ ಕಂಡು ಹಿಗ್ಗಬೇಕು

ಶ್ರೀಪಾದ್‌ ಭಟ್‌ ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಕುಮಟಾದ ಡಾ. ಎ. ವಿ. ಬಾಳಿಗಾ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಎಂ. ಜಿ. ಹೆಗಡೆ ವಿಮರ್ಶಕ, ಪುಸ್ತಕಗಳ ಸಂಪಾದಕ ಮತ್ತು ತಾಳಮದ್ದಲೆಯ ಅರ್ಥಧಾರಿ. ನಾಲ್ಕು ನಾಟಕಗಳನ್ನು...

ಮತ್ತಷ್ಟು ಓದಿ
ಒಂದು ಜೀವಮಾನಕ್ಕಾಗುವಷ್ಟು ತೇವ  ಎದೆಗಿಳಿಯಿತು

ಒಂದು ಜೀವಮಾನಕ್ಕಾಗುವಷ್ಟು ತೇವ ಎದೆಗಿಳಿಯಿತು

ಉದಯ ಗಾಂವಕಾರ ಕೊರೋನಾ ಕಾಲದ ಟಿಪ್ಪಣಿಗಳು ಲಾಕ್ ಡೌನ್‍ನ ಮೊದಲ ಎರಡು ದಿನಗಳು ಹೇಗೋ ಕಳೆದವು. ಕುಟುಂಬಿಕರೆಲ್ಲ ಬಹಳ ಸಮಯದ ಮೇಲೆ ಒಟ್ಟಿಗೆ...

ಮತ್ತಷ್ಟು ಓದಿ
ನಮಗೇ ಹೂವು ಶೃಂಗಾರ.. ಸೂರಕ್ಕಿಗೆ ಅದೇ ಆಹಾರ..

ನಮಗೇ ಹೂವು ಶೃಂಗಾರ.. ಸೂರಕ್ಕಿಗೆ ಅದೇ ಆಹಾರ..

ಪ್ರಸಾದ್ ಶೆಣೈ ಆರ್.ಕೆ. ಮಧ್ಯಾಹ್ನವಾದರೆ ಸಾಕು, ನಮ್ಮ ಮನೆ ಅಂಗಳದ ತುಂಬೆಲ್ಲಾ ಸೂರಕ್ಕಿಗಳದ್ದೇ ಹಾಡು, ಕ್ರೋಟಾನು ಗಿಡದಲ್ಲಿ, ರತ್ನಗಂಧಿ ಹೂವಿನ...

ಮತ್ತಷ್ಟು ಓದಿ
ಶಾಲೆಯೆಂಬ ಸ್ಥಾವರ ಜಂಗಮವಾಗುತ್ತಿರುವ ಕಥೆ

ಶಾಲೆಯೆಂಬ ಸ್ಥಾವರ ಜಂಗಮವಾಗುತ್ತಿರುವ ಕಥೆ

ಅಭಿಲಾಷಾ ಎಸ್ ಸಾಮಾಜಿಕ ಅಂತರದ ನೆರಳಲ್ಲಿ ಹುಟ್ಟಿಕೊಂಡ  ದೂರ ಶಿಕ್ಷಣದ ಹಾಡು-ಪಾಡು. ‘ಶಾಲೆ’ ಎಂದಾಕ್ಷಣ ಮನಸ್ಸೊಳಗೆ ಮೊದಲು ಕೇಳಿಬರುವುದು...

ಮತ್ತಷ್ಟು ಓದಿ
ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ ವಿಸ್ಮಯಕಾರಿ. ಜಾತಿ,ಮತ, ಪಂಥಗಳನ್ನು ನೋಡದೆ... ದೇಶ ಭಾಷೆಗಳನ್ನು ಗಮನಿಸದೆ ಪ್ರಾರಂಭವಾಗುವ ಸ್ನೇಹ,  ಒಮ್ಮೊಮ್ಮೆ ಖುಷಿ ನೀಡುತ್ತದೆ. ಮನದಲ್ಲಿ ನೆನಪುಗಳ ಹೂದೋಟವನ್ನು ನಿರ್ಮಿಸುತ್ತದೆ....

ಕಾಡಿದ ಆಕೆಯ ಕವನ

ಕಾಡಿದ ಆಕೆಯ ಕವನ

ಅಹಲ್ಯಾ ಬಲ್ಲಾಳ್ ಇತ್ತೀಚೆಗೆ  ನಮ್ಮ ಸುತ್ತಮುತ್ತ  ಹಾಸಲುಂಟು ಹೊದೆಯಲುಂಟು ಎಂಬಷ್ಟು  ದುಃಖ, ಸಾವು ನೋವುಗಳೇ. ಜೊತೆಗೆ ಅಷ್ಟೇ ಸಲೀಸು  ಭಯ, ಕೋಪ, ಹತಾಶೆಗೆ ಸುಲಭವಾಗಿ ಜಾರಿಬಿಡಲು ಪ್ರಚೋದನೆಯೂ. ಇಂದಿನ ಈ ಸವಾಲುಗಳ  ಸಮ್ಮುಖದಲ್ಲೇ ಮಾನವೀಯ ಕರುಣೆ ಎಂಬ ಧ್ರುವ ತಾರೆ...

ಅಸಂಗತ

ಅಸಂಗತ

ರಮೇಶ ಗುಲ್ವಾಡಿ ನನಗೆ ಮೊದಲು ನೀರು ಕುಡಿಯಬೇಕೆನಿಸಿತು.  ಗಂಟಲ ದ್ರವವೆಲ್ಲಾ ಆರಿ ಹೋದಂತಾಗಿ ಮಾತನಾಡುವ ಶಕ್ತಿಯನ್ನೇ ಕಳೆದುಕೊಂಡೆನೇನೋ  ಅನ್ನಿಸುವಂತೆ , ಕಣ್ಣುಗಳೂ ಮಂಜು ಮಂಜಾದಂತೆ ಎಲ್ಲವೂ ಅಸ್ಪಷ್ಟ. ಈಗಷ್ಟೇ ಆರು ಅಡಿ ಅಂತರದಲ್ಲಿ ಕುಳಿತಿದ್ದವರೆಲ್ಲಾ ಮೈಲುಗಳಷ್ಟು ದೂರವಾದಂತೆ ಎಲ್ಲವೂ ಅಯೋಮಯ ! ಏನಾಗುತ್ತಿದೆ...

ಕಿಟಕಿಯೊಳಗಿಂದ..

ಕಿಟಕಿಯೊಳಗಿಂದ..

ಧೀರಜ್ ಬೆಳ್ಳಾರೆ ಕಿರುಗತೆಗಳು ಕಿಟಕಿಯೊಳಗಿಂದ ಎಚ್ಚರವಾದಾಗ 8.50 ದಿನನಿತ್ಯದಂತೆ ರೂಮಿನ ಕಿಟಕಿಯಿಂದ ಹೊರನೋಡುತ್ತಾ ಕೂರುವುದು ರೇವಂತನ ಅಭ್ಯಾಸ. ಹೆಚ್ಚಾಗಿ ಹುಡುಗೀರನ್ನ ನೋಡೋ ಅವನು ಲಾಕ್ ಡೌನ್ ಆದ್ರಿಂದ ಯಾರೂ ಸಿಗದೆ ಸುತ್ತ ಮುತ್ತ ಗಮನಿಸಲಾರಂಭಿಸಿದ. ಹೊಸತೊಂದು ಜಗತ್ತು ಕಣ್ಣಮುಂದೆ ಬಂದಿಳಿಯಿತು. ರಸ್ತೆಯ ಬದಿಯಲ್ಲೊಂದು...

ಅವ್ವನ ಜಗಳ

ಅವ್ವನ ಜಗಳ

ಕೆ. ಪಿ ಲಕ್ಷ್ಮಣ ಗೌತಮಿಗೆ ಒಬ್ಬನೇ ಮಗಒಬ್ಬ ಮಗನಿರುವ ಅವ್ವಂದಿರನ್ನೊಮ್ಮೆ ಮಾತಾಡಿಸಿಕಡಲು,ಕಾಡು,ಬೆಟ್ಟ, ಗುಡ್ಡನದಿ, ಕಣಿವೆಗಳ ಒಡತಿಯರು ತಾವೇಅನ್ನುವಂಗೆ ಮೆರೆಯುತ್ತಾರೆಮಗ ಕಣ್ಣ ಮುಂದಿದ್ದರೆ ಸಾಕುಉಣ್ಣುತ್ತಾ ಆಡುತ್ತಾ ಓಡಾಡುತ್ತಾ ರೇಗಾಡುತ್ತಾ ಇವಳದು ಒಳಗೊಳಗೆ ಕುಣಿತಕಡಲು ಕಾಡು ಬೆಟ್ಟ ಗುಡ್ಡ ನದಿ ಕಣಿವೆಗಳ ಒಡತಿಅಷ್ಟಾದರೂ...

ಇಬ್ಬಂದಿ

ಇಬ್ಬಂದಿ

ಜಾಹಿಧಾ ನಾನಾಗ ….ಅಮ್ಮನ ಮಡಿಲಲ್ಲಾಡುತ್ತಿದ್ದ ಹೂ ಕೂಸುನನಗಾಗ ತಿಳಿದಿರಲ್ಲಿಲ್ಲ…ನನ್ನ ಹೆತ್ತವಳೊಬ್ಬ ಹಿಂದು ಹೆಂಗಸು ಎಂದುಇದೂ ತಿಳಿದಿರಲಿಲ್ಲ…ನನ್ನ ತೊಗಲೊಳಗೆನೆತ್ತರು ಸುರಿದವನೊಬ್ಬ ಮುಸ್ಲಿಮನೆಂದು….. ನಾನು ಬೆಳೆದೆ…ಬೆಳೆಯುತ್ತಾ…ಮೈನೆರೆದೆ..ಪಕ್ಕದ ಮನೆಯ ಹುಡುಗಿಯೊಬ್ಬಳು ಬಂದು…ಕೊಬ್ಬರಿ ಬೆಲ್ಲವ ಕೊಟ್ಟುನೀರೆರೆದು.....

ಇದು ಹಿಂದೂ ನೆಡೆದದ್ದೇ, ಮುಂದೆಯೂ ನೆಡೆಯುವಂಥದ್ದೇ..

ಇದು ಹಿಂದೂ ನೆಡೆದದ್ದೇ, ಮುಂದೆಯೂ ನೆಡೆಯುವಂಥದ್ದೇ..

ಮೂಲ ಲೇಖಕರು ~ ಮೀನಾ ಕಂದಸಾಮಿಕನ್ನಡಾನುವಾದ: ಸಂವರ್ತ 'ಸಾಹಿಲ್' ಹತ್ರಾಸ್ ಎಂಬಲ್ಲಿಪೊಲೀಸರುಅತ್ಯಾಚಾರಕ್ಕೊಳಗಾದ ಹೆಣ್ಣಿನ ಮನೆಯನ್ನೇ ಸುತ್ತುವರಿದುಆಕೆಯ ಹೆಣವನ್ನುಅಪಹರಿಸುತ್ತಾರೆಖೂನಿ ರಾತ್ರಿಯಲ್ಲಿಆಕೆಯ ತಾಯಿಯ ಗೋಳಿಗೂ ಕಿವಿಗೊಡದೆಹೆಣವನ್ನು ಸುಡುತ್ತಾರೆದಲಿತರಿಗೆ ರಾಜಕೀಯ ಶಕ್ತಿಇಲ್ಲದ ನಾಡಿನಲ್ಲಿಅವರಿಗೆರೊಚ್ಚಿಗೇಳಲೂ...

ಅಭಾವ

ಅಭಾವ

ಕೀರ್ತಿ ಬೈಂದೂರು ನಿನಗಂತೂ ಸದಾ ಹೊರಡುವುದಕ್ಕೆ ಗಡಿಬಿಡಿಆಯಾಸದ ಹಂಗಿಲ್ಲ ನಿನಗೆಕೊಟ್ಟಿದ್ದರಲ್ಲವೆ ಅನುಭವಕ್ಕೆಇಸ್ತ್ರಿಯಾದ ಬಟ್ಟೆ, ಘಮಿಸುವ ಪರ್ಫ್ಯೂಮ್ನಿನಗಿಷ್ಟೇ ಸಾಕುಬಿಡು!ಹಸಿರು ಬ್ಲೌಸ್ ಇಲ್ಲದ ಹಳದಿ ಸೀರೆಗುಲಾಬಿ ಹೊಂದುತ್ತದೆಂದು ನೀನು ಕೊಟ್ಟೆಬಳೆ ಒಡೆದು ಗಾಜು ಹರಡಿತುಅಲ್ಲೇ ಸರಿಸಿ ನಕ್ಕೆ ನೀನುಕಣ್ಣಲ್ಲೇ ಹೊರಡುವ...

ಔತಣ

ಔತಣ

ಕಾವ್ಯ ಎನ್. ಮನಮನೆ -೧-ಸಾಲೆಮನೆಯೆದುರಿನ ಮೂರುದಾರಿ ಕೂಡುವಲ್ಲಿನುಗ್ಗೇಕಾಯಿಯಂತ ರಾಮನಾಥ ಮತ್ತುಕೊಟ್ಟೆಕಡುಬಿನಂತ ನಾನು ಜಟಾಪಟಿಗೆ ಬಿದ್ದೆವುತಿಪ್ಪರಲಾಗ ಹೊಡೆದರೂ ಈಗನೆನಪಾಗಲೊಲ್ಲದ ಘನ ಕಾರಣವೊಂದಕ್ಕೆ.ಕುತ್ತಿಗೆಗೊಂದು ಕೈಹಾಕಿಮತ್ತೊಂದರಲ್ಲಿ ಸಿಕ್ಸರು ಬಾರಿಸುತಿದ್ದನನ್ನ ಪುರಾತನಪಟ್ಟಿಗೆ ಮಣಿದಾತಅಲ್ಲಿಂದಾಚೆ ನನ್ನ...

ದೇವರು ಬರೆದ ರಂಗೋಲಿ

ದೇವರು ಬರೆದ ರಂಗೋಲಿ

ಗಣೇಶ ಹೊಸ್ಮನೆ ಅದೊಂದು ಮಂಜಿನ ಹನಿಗಳ ಮುಂಜಾನೆತೆರೆದ ಬಯಲಲಿ ಬೆಳೆದ ಗಿಡ ಮರಸೆಳೆವ ತರುಲತೆ ಹನಿಗಳು ಪೋಣಿಸಿದಮಣಿ ಮುತ್ತುಗಳ ಮಾಲೆಆ ಮರಕೂ ಈ ಮರಕೂಎಳೆದ ಎಳೆಗಳ ಮೇಲೆ,ಮುತ್ತು ಮುತ್ತುಗಳಲ್ಲೂಹೊಳೆವ ಹೊಂಗಿರಣಉರಿವ ಸೂರ್ಯನ ಛಾಯೆ ಅದೆಲ್ಲೋ ಅಷ್ಟೇ ನಿದ್ದೆಯಿಂದೆಚ್ಚೆತ್ತ ಚಿಟ್ಟೆಕೊರಳ ತಿರುವಿ ಮೈಗೊಡವಿಬೀಸುತ ಹಗುರಾಗಿ...

ನಾನು, ಅಜ್ಜಿ ಮತ್ತು ಗುಡ್ಡ..

ನಾನು, ಅಜ್ಜಿ ಮತ್ತು ಗುಡ್ಡ..

ನಭಾ ನಾನು ನಡೆಯಲು ಕಲಿತನಾನು ನೋಡಲು ಕಲಿತಆ ಊರ ಬೆನ್ನಿಗಿತ್ತು ಬೋಳುಗುಡ್ಡಚಂದ್ರ ಆ ಗುಡ್ಡದಲಿಎಣ್ಣೆಯ ಬಟ್ಟಲಿನಂತೆ ಹೊಳೆಯುತ್ತಿದ್ದಸೂರ್ಯ ಬಿಸಿಲಿಗೆ ಬೆವರಿಗುಡ್ಡದ ಕನ್ನಡಿಯಲಿ ಬೆವರೊರೆಸಿಕೊಳ್ಳುತ್ತಿದ್ದ. ಮಳೆಯೆಂದರೆ ಗುಡ್ಡದ ಮೈನೀರೆಂದೇ ತಿಳಿದಿದ್ದೆದೊಡ್ಡ ದನಿಯ ಕಿರುಚು ರೆಕಾರ್ಡಿನ ಟ್ಯ್ರಾಕ್ಟರುಗಳುಒಂದೇ ಸಮ ಗುಡ್ಡದ...

ಮೈಲಿಗೆ

ಮೈಲಿಗೆ

ಆದಿತ್ಯ ಪ್ರಸಾದ್ ಪಾಂಡೇಲು ಸಂತಾಪಗಳು ನೆಪಗಳಿಗಷ್ಟೆಆರೈಕೆ ಹಾರಿಕೆಯ ತೋರಿಕೆಗಳಂತೆಬೆಚ್ಚನೆಯ ಮನೆಗಳಲಿ ಹಬೆಯಾಡುವ ಚಹಾಗಳನಡುವೆ ಫೋಟೊ ಕ್ಲಿಕ್ಕಿಸಿಕೊಳ್ಳುವ ನಮಗೆತಿಳಿದೀತೆ ಕಾಲ ಬಿರುಕುಗಳ ದೀರ್ಘ ಅರ್ಥ! ಬೆಳಗ ಹೊತ್ತಿಗೂ ಚುಕ್ಕಿ ಬೆಳಕುಓರೆಗೆ ಕಾಣುವ ಖಾಲಿ ಒಲೆಯ ಭೀಕರ ನೆರಳುತುಂಬಿದ ಚೀಲಗಳಲ್ಲಿ ಸೋರಿ ಹೋದ ನಿದಿರೆಗಳುನಾಳೆಗೂ...

ಜಾಹೀರಾತು

ಸುಮಾ ಆನಂದರಾವ್ ಸರಣಿ: ನನ್ನ ನೆನಪಿನ ಹಡಗು

ಸುಮಾ ಆನಂದರಾವ್ ಸರಣಿ: ನನ್ನ ನೆನಪಿನ ಹಡಗು

। ನಿನ್ನೆಯಿಂದ । ಅನಿಯಮಿತ   ಕಲ್ಪನೆ  ಸ್ಮೃತಿಗಳ  ಖಜಾನೆ  ನೆನಪಿನಾ ಬುತ್ತಿ .  ನಿಸರ್ಗದ ಭವ್ಯ ಸುಂದರ ದೃಶ್ಯಗಳು ಸಂತಸ ಸಂಭ್ರಮ  ಗಾನ  ಮೌನ  ಗಂಭೀರ  ಹೀಗೆ  ಹಲವಾರು ಮಜಲುಗಳ ಸಮ್ಮಿಲನ.ನಮ್ಮ್ಮೆಲ್ಲರನ್ನು  ಕೂರಿಸಿಕೊಂಡ ಎತ್ತಿನ ಗಾಡಿ ದಕ್ಷಿಣಾಭಿಮುಖವಾಗಿ ಊರಿನೆಡೆಗೆ ಹೊರಟಿತು. ಎತ್ತುಗಳು ಕತ್ತಿಗೆ  ಕಟ್ಟಿದಾ ಗಂಟೆಯ...

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...

ಬೆಚ್ಚಿ ಬಿದ್ರಾ…?

ಬೆಚ್ಚಿ ಬಿದ್ರಾ…?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ...

‘ಎಗ್ಲಾಂಟೈನ್ ಜೆಬ್’ ನೆನಪಲ್ಲಿ…

‘ಎಗ್ಲಾಂಟೈನ್ ಜೆಬ್’ ನೆನಪಲ್ಲಿ…

‘ಬಾಲ ಒಂದಿಲ್ಲ ಅಷ್ಟೇ...’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡಿನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಮಕ್ಕಳ ಕೇಂದ್ರಿತ ಪುಸ್ತಕಗಳ ಪ್ರತಿಷ್ಠಿತ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ....

ಎಂ ಎ ಸುಬ್ರಮಣ್ಯ ಜೊತೆ ‘ಫಟಾ ಫಟ್’

ಎಂ ಎ ಸುಬ್ರಮಣ್ಯ ಜೊತೆ ‘ಫಟಾ ಫಟ್’

ಪ್ರತೀ ವರ್ಷ ಅತ್ಯುತ್ತಮ ಪ್ರಕಾಶನಕ್ಕೆ 'ಅಂಕಿತ' ದತ್ತಿ ನಿಧಿ ಪ್ರಶಸ್ತಿ ಈ ಬಾರಿ ಹುಬ್ಬಳ್ಳಿಯ 'ಸಾಹಿತ್ಯ ಪ್ರಕಾಶನ'ಕ್ಕೆ ಸಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಈ ಪ್ರಶಸ್ತಿ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಪ್ರಕಾಶನದ ಮಾಲೀಕರಾದ ಎಂ ಎ ಸುಬ್ರಮಣ್ಯ ಅವರನ್ನು ʼಅವಧಿʼ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ....

ಯಾವ ‘ಮೋಹನ’ ಮುರಲಿ ಕರೆಯಿತೋ…

ಯಾವ ‘ಮೋಹನ’ ಮುರಲಿ ಕರೆಯಿತೋ…

ಸಂಗೀತ ರವಿರಾಜ್ ನನ್ನನ್ನು ಅತಿಯಾಗಿ ಕಾಡಿದ ಅಗಲಿಕೆಗಳಲ್ಲಿ ಇದೂ ಒಂದು. ನಿರಂತರ ಒಡನಾಟದಲ್ಲಿ, ಮಾತುಕತೆಯಲ್ಲಿ ಇಲ್ಲದೆ ಇದ್ದರು ಕೆಲವುಸಾವು ನಮ್ಮನ್ನು ತೀರಾ ವಿಚಲಿತಗೊಳಿಸಿಬಿಡುತ್ತದೆ. ಇಂತಹ ಅಪರೂಪದ ವ್ಯಕ್ತಿಗಳು ನಮ್ಮ ನಡುವಿನಿಂದ ಸದ್ದಿಲ್ಲದೆ ಎದ್ದುಹೋಗಿಬಿಡುತ್ತಾರೆ. ನನ್ನನುಭವದಲ್ಲಿ ಹೀಗೆ ಇದ್ದು ಸಾದ ಸೀದವಾಗಿ ಬದುಕಿ...

ಸುಮಾ ಆನಂದರಾವ್ ಸರಣಿ: ನನ್ನ ನೆನಪಿನ ಹಡಗು

ಸುಮಾ ಆನಂದರಾವ್ ಸರಣಿ: ಕನಸು ನನಸಾಯ್ತು

ಕನಸಿನಯಾನದ ಕಾಡುವ ಕ್ಷಣಗಳಿಗೆ ನನಸಾಗುವ ಯೋಗ ಕೂಡಿಬಂದಿತು. ಏಕತಾನತೆಯ ದಿನಗಳಿಗೆ ಬಿಡುಗಡೆಯ ಭಾಗ್ಯ. ಬಾಲ್ಯದ ಅವಿಸ್ಮರಣೀಯ ಸಂತಸದ ದಿನಗಳು ಅವು. ನಾಳೆ ರಜೆಯ ಮಜಾ ಸವಿಯಲು ತಾತನ  ಊರಿಗೆ ಪಯಣ,  ಭರದಿ ಸಿದ್ಧತೆ  ನಡೆಯುತ್ತಿದೆ  ಅಪ್ಪ ನಾವೆಲ್ಲಾ ಅಲ್ಲಿ ಕಳೆಯುವ ದಿನಗಳ ಬಗ್ಗೆ ಕಾಳಜಿ...

ಅಂದಿನಿಂದಿಂದಿಗೆ

ಅಂದಿನಿಂದಿಂದಿಗೆ

ಶ್ಯಾಮಲಾ ಮಾಧವ ಮೊರೆಯುವ ಕಡಲು. ವಿಶಾಲ ಮರಳ ಹಾಸು. ಗಾಳಿಯಲೆಯಾಡುವ ಸುವಿಶಾಲ ಚಬುಕಿನ ತೋಪು. ಅದರ ನಡುವೆ ವೃತ್ತಾಕಾರದ, ಕಟ್ಟೆಯಿರದ, ಇಳಿಯಲು ಕಲ್ಲು ಕಟ್ಟಿದ ಮೆಟ್ಟಲುಗಳ ನಡುಮಧ್ಯೆ ನೀರಿರುವ ತೋಡುಬಾವಿಗಳು. ಚಬುಕಿನ ಸಸಿಗಳಿಗೂ, ತೆಂಗುಗಳಿಗೂ ನೀರುಣಿಸಲು ಕೊರೆದ ಬಾವಿಗಳವು. ತೋಪಿನಾಚೆ ತೆಂಗುಗಳು ತಲೆದೂಗುವ ಹಿತ್ತಿಲುಗಳಲ್ಲೂ...

ಡೇವಿಡ್ ಮತ್ತು‌ ದಿಶಾ ಎಂಬೆರೆಡು ಮರಗಳು …

ಡೇವಿಡ್ ಮತ್ತು‌ ದಿಶಾ ಎಂಬೆರೆಡು ಮರಗಳು …

ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು....

ಬಾ ಕವಿತಾ

ಸಾವೆಂದರೆ ಹೀಗೆಯೇ..

ಸಾವೆಂದರೆ ಹೀಗೆಯೇ..

ಚಂದ್ರಶೇಖರ ಹೆಗಡೆ ಎಲ್ಲ ಇದ್ದೂ ಇಲ್ಲವಾಗುವುದೆ ? ಇಲ್ಲದಿರುವುದಕ್ಕೆ ಬೆನ್ನುಬಿದ್ದು  ಖಾಲಿಯಾಗುವುದೆ ? ಹಸಿರು ತುಂಬಿದ್ದರೂ ಬರಡು  ಕೊರಡಾದೆನೆಂದು ವ್ಯಸನಿಯಾಗಿ...

ಆನಾ ಆಹ್ಮತೋವಾ ನೆನೆದು

ಆನಾ ಆಹ್ಮತೋವಾ ನೆನೆದು

    ಜಿ.ಪಿ.ಬಸವರಾಜು ನಡುಗುವ ಕೈಗಳಿಂದ ನಿನ್ನ ಎದೆಯ ಪದಗಳನು ಎತ್ತಿಕೊಂಡೆ: ಸೆರೆಮನೆಯ ಮಹಾ ಗೋಡೆಯ ಈಚೆ ನೀನೊಂದು ಗುಬ್ಬಚ್ಚಿ, ಒಂಟಿ ನಿಂತು ಮೊರೆಯಿಡುವ ನಿನ್ನ...

Jugari Cross

ಜನರ ಮುಗ್ಧತೆ ದುರುಪಯೋಗ ಪಡಿಸಿಕೊಳ್ಳುವ ಗಂಗಾವತಿ ಪ್ರಾಣೇಶ್

ಜನರ ಮುಗ್ಧತೆ ದುರುಪಯೋಗ ಪಡಿಸಿಕೊಳ್ಳುವ ಗಂಗಾವತಿ ಪ್ರಾಣೇಶ್

ಸಂಗಮೇಶ್‌ ಮೆಣಸಿನಕಾಯಿ ಉತ್ತರ ಕರ್ನಾಟಕದ ಭಾಷೆಯು ಕರ್ನಾಟಕದ ಎಲ್ಲ ಊರುಗಳ ಕನ್ನಡಕ್ಕಿಂತ ಭಿನ್ನವಾಗಿದೆ. ಅದು ಫಿಲ್ಟರ್‌ ಇಲ್ಲದ ಭಾಷೆಯು ಹೌದು. ಖ್ಯಾತ ಹಾಸ್ಯ ಸಾಹಿತಿ, ವಿದೂಷಕ ಗಂಗಾವತಿ ಪ್ರಾಣೇಶ್‌ ಅವರು ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಜನರನ್ನು ನಗಿಸಲು ಹೆಚ್ಚಾಗಿ ಉತ್ತರ ಕರ್ನಾಟಕದ ಭಾಷೆ ಹಾಗೂ ಅಲ್ಲಿನ ಜನರ ಜೀವನ ಶೈಲಿಯ ಕುರಿತು ಮಾತನಾಡುತ್ತಾರೆ. ಹೀಗೆ ಮಾತನಾಡುವ ಭರದಲ್ಲಿ ಭಾಷೆಯ ವೈವಿಧ್ಯತೆಯ ಬಗ್ಗೆ ಹೇಳುತ್ತ ಸುಳ್ಳುಗಳನ್ನೂ ಸೃಷ್ಟಿಸುತ್ತಿದ್ದಾರೆ. ಹಾಗೂ ಉತ್ತರ ಕರ್ನಾಟಕದ ಜನರ ಭಾಷೆಯ ವಿಷಯವಾಗಿ ಹೀಯಾಳಿಸುವುದು, ಅಲ್ಲಿನ ಜನರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದಿದ್ದಾರೆ ಖ್ಯಾತ ಪತ್ರಕರ್ತ ಸಂಗಮೇಶ್‌ ಮೆಣಸಿನಕಾಯಿ. ವಿದೂಷಕ Gangavathi B. Pranesh ಅವರು ನನಗೆ ಕಳೆದ ೧೮...

ಮತ್ತಷ್ಟು ಓದಿ

ಜಾಹೀರಾತು

ಜನರ ಮುಗ್ಧತೆ ದುರುಪಯೋಗ ಪಡಿಸಿಕೊಳ್ಳುವ ಗಂಗಾವತಿ ಪ್ರಾಣೇಶ್

ಜನರ ಮುಗ್ಧತೆ ದುರುಪಯೋಗ ಪಡಿಸಿಕೊಳ್ಳುವ ಗಂಗಾವತಿ ಪ್ರಾಣೇಶ್

ಸಂಗಮೇಶ್‌ ಮೆಣಸಿನಕಾಯಿ ಉತ್ತರ ಕರ್ನಾಟಕದ ಭಾಷೆಯು ಕರ್ನಾಟಕದ ಎಲ್ಲ ಊರುಗಳ ಕನ್ನಡಕ್ಕಿಂತ ಭಿನ್ನವಾಗಿದೆ. ಅದು ಫಿಲ್ಟರ್‌ ಇಲ್ಲದ ಭಾಷೆಯು ಹೌದು. ಖ್ಯಾತ ಹಾಸ್ಯ ಸಾಹಿತಿ, ವಿದೂಷಕ...

ಮತ್ತೂರು ಕೃಷ್ಣಮೂರ್ತಿ ಕೃತಿಚೌರ್ಯ ಮಾಡಿದ್ದರೇ..??

ಮತ್ತೂರು ಕೃಷ್ಣಮೂರ್ತಿ ಕೃತಿಚೌರ್ಯ ಮಾಡಿದ್ದರೇ..??

ಆ ಕಾಲದಲ್ಲಿಯೇ ಕೃತಿಚೌರ್ಯವಾಗಿತ್ತೇ ಎನ್ನುವುದಕ್ಕೆ ಇಲ್ಲಿದೆ ಉತ್ತರ. ಇದು 'ಸಂಯುಕ್ತ ಕರ್ನಾಟಕ'ದ ಒಳಗೆಯೇ ನಡೆದ ಕೃತಿಚೌರ್ಯದ ಪ್ರಕರಣ. ಹೆಸರಾಂತ ಮತ್ತೂರು ಕೃಷ್ಣಮೂರ್ತಿ ಅವರು...

ಅಕ್ಷರ ಕಳ್ಳರಿದ್ದಾರೆ ಎಚ್ಚರ…

ಅಕ್ಷರ ಕಳ್ಳರಿದ್ದಾರೆ ಎಚ್ಚರ…

ಇತ್ತೀಚೆಗೆ ಕೃತಿಚೌರ್ಯಗಳಂತಹ ಘಟನೆಗಳು ನಡೆಯುತ್ತಲೇ ಇವೆ. ವಾಟ್ಸಾಪ್‌ , ಫೇಸ್‌ ಬುಕ್‌ ನಲ್ಲಂತೂ ಯಾವೂದೇ ಭಯವಿಲ್ಲದೇ ರಾಜಾರೋಷವಾಗಿ ಕೃತಿಚೌರ್ಯಗಳು ಹೆಚ್ಚಾಗಿ ನಡೆಯುತ್ತಿವೆ....

ಬ್ಯಾರಿ ಅಕಾಡೆಮಿ ಗೋಳಿಗೆ ಹನೀಫ್ ಉತ್ತರ

ಬ್ಯಾರಿ ಅಕಾಡೆಮಿ ಗೋಳಿಗೆ ಹನೀಫ್ ಉತ್ತರ

ಬ್ಯಾರಿ ಲಿಪಿಗೆ ಸಂಬಂಧಿಸಿ ನಾನು ಕೇಳಿದ ಹತ್ತು ಪ್ರಶ್ನೆಗಳಿಗೆ ಹಿರಿಯ ಪತ್ರಕರ್ತರು, ಕನ್ನಡದ ಕತೆಗಾರರು, ಬ್ಯಾರಿ ಸಾಹಿತ್ಯ ಸಂಸ್ಕೃತಿಗೆ ಅಪಾರ ಕೆಲಸ ಮಾಡಿದ ಬಿ.ಎಂ. ಹನೀಫ್...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

ಅಚ್ಚುಮೆಚ್ಚಿನವು

Your Favourites

ನಿಮ್ಮ ಮೆಚ್ಚಿನ ಲೇಖನ
ಪ್ರಮುಖ ವಿಶೇಷ ಲೇಖನಗಳು
ಅವಧಿ ಆಯ್ಕೆಗಳು

‍ಪುಸ್ತಕದ ಪರಿಚಯ

Book Shelf

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ, ಬೇರಿನ್ನೆಲ್ಲಿಯದೋ, ಇನ್ನೂ ಇಲ್ಲದೇ ಇರುವುದೋ, ಯಾವುದೇ ಆದರೂ, ಆ ಜಗತ್ತಿನಲ್ಲಿ ಕತೆಗೆ ಯೋಗ್ಯ ಚಿತ್ರ, ಪಾತ್ರ, ಘಟನೆಗಳನ್ನು ಎತ್ತಿಕೊಂಡು, ಕೌತುಕ, ಕುತೂಹಲ, ಕಾಣ್ಕೆಗಳ ಚೌಕಟ್ಟಿನಲ್ಲಿ...

ಮತ್ತಷ್ಟು ಓದಿ
ಜಯಮೋಹನ್ ಅವರ ‘ನೂರು ಸಿಂಹಾಸನಗಳು’

ಜಯಮೋಹನ್ ಅವರ ‘ನೂರು ಸಿಂಹಾಸನಗಳು’

ಪ್ರಸನ್ನ ಸಂತೆಕಡೂರು 'ನೂರು ಸಿಂಹಾಸನಗಳು' ಮಲಯಾಳಂ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದವಾಗಿರುವ ಒಂದು ಕಿರು ಕಾದಂಬರಿ. ಇದರ ಮೂಲ ಲೇಖಕರು ಜಯಮೋಹನ್ ಅವರು, ಇದು ಐ.ಎ.ಎಸ್. ಅಧಿಕಾರಿಯೊಬ್ಬರ ಆತ್ಮಕಥೆ. ಇದನ್ನು ಕನ್ನಡಕ್ಕೆ ಅನುವಾದ ಮಾಡಿರುವವರು ಶಿವಮೊಗ್ಗದಲ್ಲಿ ನೆಲೆಸಿರುವ ಕೆ. ಪ್ರಭಾಕರನ್ ಅವರು. ಮಲಯಾಳಂ ಸಾಹಿತ್ಯ ಕನ್ನಡ...

‘ಮಾಯಾಕನ್ನಡಿ’ಯೊಳಗಿನ ಮಲೆಯಾಳ ಪೆಣ್ ಕಥೆಗಳು

‘ಮಾಯಾಕನ್ನಡಿ’ಯೊಳಗಿನ ಮಲೆಯಾಳ ಪೆಣ್ ಕಥೆಗಳು

ಪಾರ್ವತಿ ಐತಾಳ ‘ಮಾಯಾಕನ್ನಡಿ’ ಮಲೆಯಾಳದ ೧೪ ಮಂದಿ ಕಥೆಗಾರ್ತಿಯರ ಹದಿನಾರು ಸುಂದರ ಸಣ್ಣಕಥೆಗಳ ಸಂಕಲನ. ಮಲೇಯಾಳದ ಮೊದಲ ಕಥೆಗಾರ್ತಿ ಲಲಿತಾಂಬಿಕಾ ಅಂತರ್ಜನಂ ಅವರಿಂದ ಆರಂಭಿಸಿ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಶೀಬಾ ಇ.ಕೆ. ವರೆಗೆ ಎಲ್ಲ ಕಥೆಗಾರ್ತಿಯರನ್ನು ಅನುವಾದಕಿ ಕಮಲಾ ಹೆಮ್ಮಿಗೆ ಕನ್ನಡದ ಓದುಗರ ಮುಂದೆ ತಂದು...

ರಾಜೇಂದ್ರ ಚೆನ್ನಿಯವರ ‘ಧಾರವಾಡದ ಪಡ್ಡೆದಿನಗಳು’

ರಾಜೇಂದ್ರ ಚೆನ್ನಿಯವರ ‘ಧಾರವಾಡದ ಪಡ್ಡೆದಿನಗಳು’

ಪ್ರಸನ್ನ ಸಂತೇಕಡೂರು ಧಾರವಾಡ ಅಂದ ತಕ್ಷಣ ನಿಮಗೆ ಏನು ಜ್ಞಾಪಕ ಬರುವುದು? ಧಾರವಾಡ ಅಂದರೆ ಪೇಡ, ಖಾನಾವಳಿಗಳು, ಬೇಂದ್ರೆಯವರ ಸಾಧನ ಕೇರಿ, ಕರ್ನಾಟಕ ವಿಶ್ವವಿದ್ಯಾನಿಲಯ, ಹಿಂದುಸ್ತಾನಿ ಸಂಗೀತದ ಅತಿರಥ ಮಹಾರಥರಾದ ಪಂಡಿತ್ ಭೀಮಸೇನ್ ಜೋಷಿ, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್ ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಕುಮಾರ...

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest