ಎಚ್ ಎಸ್ ವೆಂಕಟೇಶಮೂರ್ತಿಯವರ ʼಬುದ್ಧ ಚರಣʼ ಕೃತಿಯನ್ನು ಓದಿದ ನಂತರ
ಅವರಿಗೆ ಪ್ರಿಯವಾದ ಅಷ್ಟಷಟ್ಪದಿ ಪ್ರಕಾರದಲ್ಲಿ ಬರೆದ ಕವಿತೆ

ವಸಂತ ಕುಲಕರ್ಣಿ
ಹಲವಾರು ಪಾರಮಿಯ ಸಂಸ್ಕಾರ ಪಡೆಯುತ್ತ
ಭಾರತದ ಸಂಸ್ಕೃತಿಯ ಸಂಸ್ಕಾರ ಮಾಡಿದ್ದ
ತಥಾಗತನ ಹಿರಿಮೆಯ ಹೇಳುತಿಹ ಸಿರಿಕಾವ್ಯ.
ಲುಂಬಿನಿಯ ವನಸಿರಿಯ ಭುವಿಬಾನ ನಡುವಿನಲಿ
ಅವತರಿಸಿ ಮನುಕುಲಕೆ ಮಧ್ಯಮಾರ್ಗವ ಕಲಿಸಿ
ಉದ್ಧರಿಸಿದವನ ಕಥೆ ಸಾರುತಿಹ ಹಿರಿಕಾವ್ಯ.
ಅಕ್ಕರೆಯತಾಯ್ತಂದೆ, ಸಕ್ಕರೆಯ ಸಿಹಿ ಮೈತ್ರಿ,

ಚುಕ್ಕಿಯಂತಹ ಮಡದಿ, ಕಿಕ್ಕಿರಿದ ಸಿರಿತನವ,
ಮಿಕ್ಕಿ ನಡೆದ ಕರುಣಿಯ ಯಶೋಗಾಥೆಯ ಗೀತೆ.
ಅತಿಯಾದ ಯಾವದೂ ನಿಬ್ಬಾಣವ ನೀಡದು,
ಮಿತಿಯಲ್ಲಿ ಇರುತ ಮೋಹ ಪಾಶವ ಮೀರುತ್ತ
ಮಾನವತೆ ಬೆಳೆವುದೇ ಧಮ್ಮ ಎಂದವನ ಕತೆ.
ಅಮಿತಾಭನ ಅಮಿತ ಒಲವಿನ ವೃತ್ತಾಂತವಿದು
ಸಮ ಶ್ರುತಿಯ ಉಪಾಸಕನ ಕಬ್ಬ ಹಬ್ಬವಿದು.
0 ಪ್ರತಿಕ್ರಿಯೆಗಳು