ಅಂಕೋಲೆ ಎಂದರೆ…

jkaikini.jpgಜಯಂತ ಕಾಯ್ಕಿಣಿ

ಅಂಕೋಲಾ ಅಂದರೆ ಅಂಕೋಲೆ. ಅಂಕೋಲೆ ಅಂದರೆ ಬಸ್ ಸ್ಟ್ಯಾಂಡು, ಸುರಗಿ ಮಾಲೆ. ಅಂಕೋಲೆ ಅಂದರೆ ದಿನಕರ ದೇಸಾಯಿ, ಕೆನರಾ ವೆಲ್ ಫೇರ್ ಟ್ರಸ್ಟು, ಜನಸೇವಕ, ಆನಂದ, ಹುದ್ದಾರ.

ಅಂಕೋಲೆ ಅಂದರೆ ಬಂಡಿ ಹಬ್ಬ. ಮರ್ ಬಂಡೀ ಹಬ್ಬ. ರೈತ ಚಳುವಳಿ. ಅಂಕೋಲೆ ಅಂದರೆ ಅಬ್ಬಲಿಗೆ ಮುಡಿಸಿದ ಆಟದ ಪಗಡೆ, ಖಾಜ್ ಮಿಜಿ, ಸಮರ್ಥ ಟಾಕೀಸಿನ ಕಡ್ಡಿಗೆ ಚುಚ್ಚಿಟ್ಟ ಪಾನಪಟ್ಟಿ. ಅಂಕೋಲೆ ಅಂದರೆ ನಡುರಾತ್ರಿಯಲ್ಲಿ ಬಾನಿಗೇರಿ ರೆಕ್ಕೆ ಬಿಚ್ಚಿದ ತ್ರಿವರ್ಣ ಧ್ವಜ, ಜೋಗಿ ಬೀರಣಜ್ಜ, ದಯಾನಂದ ಪ್ರಭು. ಅಂಕೋಲೆ ಅಂದರೆ ಕಬಡ್ಡಿ ವೀರರು, ಮಹಾಲೆ ಚಿತ್ರಕಲೆ, ಸುಬ್ರಮಣ್ಯರ ಹಾರ್ಮೋನಿಯಂ. ಅಂಕೋಲೆ ಅಂದರೆ ಬಾಗಿಲುಗಳನ್ನು ಟುವಾಲಲ್ಲಿ ಕಟ್ಟಿದ ಹಳೇ ಫೋರ್ಡು ಟ್ಯಾಕ್ಸಿಗಳು, ಬುಟ್ಟಿ ಬುಟ್ಟಿ ಈಶಾಡು.

ಅಂಕೋಲೆ ಅಂದರೆ ಸಮಾಜವಾದಿ ಪಕ್ಷ, ಕೊನೆಯ ಗಂಗಾವಳಿ ಬಸ್ಸು, ಎಂ.ಎಚ್.ನಾಯ್ಕರು. ಅಂಕೋಲೆ ಅಂದರೆ ಬಣ್ಣದ ಗಿಡಗಳ ಮನೆಗಳಿಗೆ ಹಸಿರು ತೋರಣಗಳ ಕಟ್ಟಿದ ಶಿವರಾಮ ಕಾರಂತರು, ಪುರುಷೋತ್ತಮನ ಕೈ ಅಡುಗೆ ಮೆಲ್ಲುತ್ತ ದಿನಕರರ ಜತೆ ಹರಟೆಗೆ ಕೂತ ಗೌರೀಶ ಕಾಯ್ಕಿಣಿ, ಪಿಕಳೆ ಮಾಸ್ತರು. ಅಂಕೋಲೆ ಅಂದರೆ ಆಡುಕಟ್ಟೆ, ಭಾಷಣ, ಸಂತೆಯ ಗರಂ ಮಸಾಲೆ. ಅಂಕೋಲೆ ಅಂದರೆ ಗಂಜಿಯ ಸಂತಿಗೆ ನಿನ್ನೆಯ ಬಸಳೆ ಹುಳಗ, ಸಂಗ್ಯಾ ಬಾಳ್ಯಾನ ಕಾಳಗ. ಅಂಕೋಲೆ ಅಂದರೆ ವಿ.ಜೆ. ನಾಯಕ, ಚರ್ಚಾ ಸ್ಪರ್ಧೆ, ನುಡಿಜೇನು.

ಅಂಕೋಲೆ ಅಂದರೆ ಊರು ಕೇರಿಗೆ ಬರದ ರಾಷ್ಟ್ರೀಯ ಹೆದ್ದಾರಿ, ಅಗೋಚರ ಟ್ರಸ್ಟುಗಳ ನಿಶಾನಾದ. ಅಂಕೋಲೆ ಅಂದರ ಅಂಬಾರಕೊಡಲ, ಪುಸ್ತಕದ ಪರಿಮಳ, ವಿಷ್ಣುನಾಯ್ಕ. ಅಂಕೋಲೆ ಅಂದರೆ ಅರಲು ಮಣ್ಣು, ಆತ್ಮೀಯ ಸಣ್ಣು, ಮುಳ್ಳು shabda.jpgಹಣ್ಣು. ಅಂಕೋಲೆ ಅಂದರೆ ಗಜನಿ ಬೇಣ ಹಕ್ಕಲು, ಶಾಲೆಗೆ ಹೊರಟ ಮಕ್ಕಳು. ಅಂಕೋಲೆ ಅಂದರೆ ಹಾಲಕ್ಕಿ ಕೊರಳ ಸರ, ಮಡಲು ಚಪ್ಪರ, ಸದಾ ಎಚ್ಚರ.

ಅಂಕೋಲೆ ಅಂದರೆ ಬೆಲ್ಲ ನೀರು, ಸುಗ್ಗಿ ಹಗಣ, ಬಸ್ಸು ತಪ್ಪಿ ಊಟಕ್ಕೆ ಬಂದ ಮಧ್ಯಾಹ್ನದ ನೆಂಟ. ಅಂಕೋಲೆ ಅಂದರೆ ರೆಕ್ಕೆಗಳ ಪಟಪಟದ, ಮಳೆ ಬಿಸಿಲ ಗಲಗಲದ ಆಲದ ಮರ, ಕರ್ನಾಟಕ ಸಂಘ, ಅಂಕೋಲೆ ಅಂದರೆ.

(“ಶಬ್ದತೀರ”ದಿಂದ ಹೆಕ್ಕಿದ್ದು)

‍ಲೇಖಕರು avadhi

August 8, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ Interviews ಕುವೆಂಪು

ಲಂಕೇಶ್ Interviews ಕುವೆಂಪು

1974 ರಲ್ಲಿ ಲಂಕೇಶ್ ರ ಸಂಪಾದಕತ್ವದಲ್ಲಿ ಪ್ರಕಟವಾದ `ಪಾಂಚಾಲಿ' ಸಂಚಿಕೆಯನ್ನು ಕನ್ನಡ ಸಾಹಿತ್ಯದ ಹಲವು ಮಹತ್ವದ ಬರವಣಿಗೆಗಳ ಕಣಜ ಎನ್ನಬಹುದು....

2 ಪ್ರತಿಕ್ರಿಯೆಗಳು

  1. Mauni

    nijakku, chinnada putagala chinnada shabdagalu. ivattigu ankola andare avugale. adare nanna geleyara hesaru matra bere bere! nannurige ratriye bassu hattabeku anistide!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: