‘ನಾನು ನಿಮ್ಮಂತಹ ಮಾನವರೆಂಬ ಮಹಾನ್ ಸಾಗರದ ಒಂದು ಕಣ’ ಎಂದು ತಮ್ಮ ರಾಮಾಯಣ ಬಿಚ್ಚಿಡುವ ಹರಿಪ್ರಸಾದ್ ಬಹುಷಃ ಕನ್ನಡ ಬ್ಲಾಗ್ ಲೋಕಕ್ಕೆ ಖಗೋಳ ಲೋಕವನ್ನು ಪರಿಚಯಿಸುತ್ತಿರುವ ಏಕೈಕ ವ್ಯಕ್ತಿ. ಇವರ ಬತ್ತಳಿಕೆಯಲ್ಲಿ ಮೂರು ಬ್ಲಾಗ್ ಗಳಿವೆ. ಇವರ ಬರಹ ಎಷ್ಟು ಸರಳ ಮತ್ತು ಆಸಕ್ತಿದಾಯಕವಾಗಿರುತ್ತದೆ ಎಂಬುದಕ್ಕೆ ಈ ಲೇಖನ ಓದಿ-
ವ್ಯೋಮದಲ್ಲಿ ಊಟ…
“ಅನ್ನ ದೇವರ ಮುಂದೆ ಇನ್ನು ದೇವರುಂಟೇ? ”
ಅಲ್ಲವೇ ಸ್ವಾಮೀ?
ದಿಲ್ಲಿಯ ಗೌಡನಿಂದ ಹಳ್ಳಿಯ ಗೊಲ್ಲನವರೆಗೆ ಎಲ್ಲರಿಗೂ ಬೇಕು ಆಹಾರ.
ಹಾಗಿರುವಾಗ ಈ ವ್ಯೋಮಯಾನಿಗಳು ಈ ಅನ್ನದೇವನ ಬಿಟ್ಟು ಇರಬಲ್ಲರೆ?
ಹಾಗಿದ್ದಲ್ಲಿ ಅವರು ಏನು ತಿನ್ನುತ್ತಾರೆ? ಹೀಗೆ ತಿನ್ನುತ್ತಾರೆ? ಇತ್ಯಾದಿಗಳು ನಿಮ್ಮ ಕುತೂಹಲದ ಪ್ರಶ್ನೆಗಳು, ಅಲ್ಲವೇ?
ತಡವೇಕೆ? ಬನ್ನಿ ಹಾಗಾದರೆ, ನಾವೂ ನೀವೂ ಒಂದಾಗಿ ವ್ಯೋಮದ ಊಟದ ರುಚಿ ಸವಿಯೋಣ…
ವ್ಯೋಮದಲ್ಲಿ ಮೊದಲ ಬಾರಿಗೆ ಏನನ್ನಾದರೂ ತಿಂದ ವ್ಯೋಮ ಯಾನಿ ಎಂದರೆ ವ್ಯೋಮಕ್ಕೆ ಭೂಮಿಯಿಂದ ಕಳಿಸಲ್ಪಟ್ಟ ಮೊದಲ ಪ್ರಾಣಿ ವ್ಯೋಮನಾಯಿ “Likaa”. (ಚಿತ್ರ ನೋಡಿ)
ಇದು ವ್ಯೋಮದಲ್ಲಿ ತನ್ನ ಜೀವನದ ಕೊನೆಯ ಆಹಾರ ಉಂಡು ಭೂಮಿಯ ವಾತಾವರಣಕ್ಕೆ ತನ್ನನ್ನು ಹೊತ್ತೊಯ್ದಿದ್ದ “Sputnik-2” ಉಪಗ್ರಹದೊಂದಿಗೆ ನುಗ್ಗಿ ಸುತ್ತು ಭಸ್ಮವಾಯಿತು.
ಇನ್ನು ಮಾನವ ವ್ಯೋಮಯಾನಿಗಳಲ್ಲಿ ಅಂತರಿಕ್ಷದಲ್ಲಿ ಏನನ್ನಾದರೂ ತಿಂದ ಮೊದಲ ವ್ಯೋಮಯಾನಿ ರಷ್ಯಾದ ಎರಡನೇ ವ್ಯೋಮಯಾನಿ “Titov”.(ವಾಸ್ತೋಕ್೨ ನೌಕೆ )
ಇನ್ನು ಅಮೇರಿಕಾದ ಬಗ್ಗೆ ಹೇಳುವದಾದರೆ ಅಲ್ಲಿಯ ಜಾನ್ ಗ್ಲೆನ್ ನಂತಹ ಪ್ರಥಮ ಪೀಳಿಗೆಯ ವ್ಯೋಮಯಾನಿ ಗಳಿಗೆ tube ಆಹಾರವನ್ನು ಜಗಿದು ತಿನ್ನುವ ಗ್ರಹಚಾರವಿತ್ತು. ಆಗ ಅವರು NASA ಗೆ ದೂರನ್ನಿತ್ತರು. ಮುಂದಿನ “Sky Lab” (ಅಮೆರಿಕಾದ ಮೊದಲ ವ್ಯೋಮ ನಿಲ್ದಾಣ) ನ ಪ್ರಯಾಣಿಕರಿಗೆ “ಭಾರೀ ಭೋಜನ” !! ಸುಮಾರು ೭೨ ವಿಧದ ಅಹಾರವಿತ್ತಂತೆ ಅಲ್ಲಿ.
ಈಗಿನವರಿಗಂತೂ ಹೇಳುವುದೇ ಬೇಡ. ವ್ಯೋಮಕ್ಕೆ ಹೋಗುವ ಆರು ತಿಂಗಳ ಮೊದಲು “NASA” ದ ವ್ಯೋಮದ ಆಹಾರದ ವಿಭಾಗಕ್ಕೆತಮಗೆ ವ್ಯೋಮದಲ್ಲಿ ತಿನ್ನಲು ಇಡ್ಲಿ ಬೇಕಾದರೆ ಇಡ್ಲಿ, ಮಸಾಲೆ ವ್ಯೋಮದ ಊಟ ಮಸಾಲೆ ದೋಸೆ, ಏನು ಬೇಕೋ ಅದನ್ನು ಕೇಳಿದರಾಯಿತು. ಅದು ನಿಮಗೆ “ವ್ಯೋಮದಲ್ಲಿ” ಅಜೀರ್ಣಕ್ಕೆ ಕಾರಣ ವಾಗುವುದಿಲ್ಲ ಎಂದಾದರೆ ಖಂಡಿತವಾಗಿಯೂ ಅದನ್ನು ಪ್ಯಾಕ್ ಮಾಡಿ ಅಂತರಿಕ್ಷಕ್ಕೆ ಕಳಿಸುತ್ತಾರೆ
ನಮ್ಮ ಭಾರತದ ಪ್ರಥಮ ವ್ಯೋಮಯಾನಿ “ರಾಕೇಶ್ ಶರ್ಮ(ಚಿತ್ರ ನೋಡಿ)” ಅಂತರಿಕ್ಷಕ್ಕೆ ಹೋಗಿದ್ದಾಗ ಮೈಸೂರಿನ CFTRI ನ ವಿಜ್ಞಾನಿಗಳು “ಮಾವಿನಕಾಯಿಹಲ್ವ” ದಂತಹ ಆಹಾರ ತಯಾರಿಸಿ ಕಳಿಸಿದ್ದರು.
ಕೊನೆಯದಾಗಿ ಒಂದು ಪ್ರಶ್ನೆ….
ಈ ಪ್ರಶ್ನೆಯನ್ನು ಜಪಾನಿನ ಒಬ್ಬ ವ್ಯೋಮಯಾನಿಗೆ ಕೇಳಿದ್ದರು…
“ಅಲ್ಲಿನ ಊಟ ಹೇಗೆ ಸ್ವಾಮಿ?”
ಉತ್ತರ…
“ಎಷ್ಟಾದರೂ ಮನೆಯಲ್ಲಿ ತಿನ್ದನ್ತಾಗುತ್ತದೆಯೇ?”…..
ನೀವೇನು ಅಂತೀರಿ?
ಇನ್ನೂ ತಿಳಿಯುವ ಆಸಕ್ತಿ ಇದ್ದರೆ ಭೇಟಿ ಕೊಡಿ…
http://meethariprasad.googlepages.com/myarticles
ಸರಿ ಹಾಗಾದರೆ…
ಮತ್ತೆ ಖಗೋಳದಲ್ಲಿ ಸಿಗೋಣ…
ನಿಮ್ಮ ಪ್ರೀತಿಯ..
ಖಗೋಳ…
Hi Avadhi,
Naanu HariPrasad,
Dhanyavaadagalu kannadada mottamodala
khagola blog endu http://khagola.blogspot.com
annu gurutisiddakke.
ತುಂಬಾ ತುಂಬಾ INTERESTING ಆಗಿದೆ.