ಅಂದಹಾಗೆ, ನಿಸಾರ್ ಆರೋಗ್ಯದಿಂದ ಇದ್ದಾರೆ.

  ನನಗೆ ಅತ್ಯಂತ ಪ್ರಿಯರಾದ ಹಿರಿಯರ ಪೈಕಿ ಕವಿ ನಿಸಾರ್ ಅಹಮದ್ ಪ್ರಮುಖರು.ನನ್ನ ವಾರಿಗೆಯ ಉಳಿದೆಲ್ಲ ಪತ್ರಕರ್ತ ಮಿತ್ರರಿಗಿಂತ ಹೆಚ್ಚು ವಿಷಯಗಳನ್ನು ನಿಸಾರ್ ನನ್ನೊಂದಿಗೆ ಹೇಳಿಕೊಂಡಿದ್ದಾರೆ.ಪ್ರತಿ ಬಾರಿ ಅವರ ಮನೆಗೆ ಹೋದಾಗಲೂ ಮರೆಯದೆ ತಿಂಡಿ ತಿನ್ನಿಸಿದ್ದಾರೆ.ತಿಂಡಿ ತಿನ್ನದೇ ಹೋದ್ರೆ ಮಾತಾಡೋಲ್ಲ ಕಣಯ್ಯಾ ಎಂದು ಹುಸಿಮುನಿಸು ತೋರಿಸಿದ್ದಾರೆ.ನಾಲ್ಕೇ ನಾಲ್ಕು ಒಳ್ಳೆಯ ಮಾತು ಬರೆದರೆ,ಅದನ್ನೇ ಮಿತ್ರರ ಮುಂದೆ ಹೇಳುತ್ತಾ…ಇವನು ನನ್ನ ಪ್ರೀತಿಯ ಶಿಷ್ಯ ಎಂದು ಹೊಗಳಿದ್ದಾರೆ.ಒಂದೆರಡು ತಿಂಗಳು ಫೋನ್ ಮಾಡದೆ ಹೋದರೆ,ತಾವೇ ಫೋನ್ ಮಾಡಿ ಎಲ್ಲಿ ಹೋಗಿಬಿಟ್ಯಪ್ಪ ಎಂದು ವಿಚಾರಿಸಿಕೊಂಡಿದ್ದಾರೆ. ಇಂಥ ಹಿನ್ನೆಲೆಯ ನಿಸಾರ್ ಅವರು ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆ ಸೇರಿದಾಗ ನಾನಂತೂ ತಲ್ಲಣಿಸಿಹೋದೆ.ನಿನ್ನೆ ಸಾಹಿತ್ಯ ಪರಿಷತ್ನಲ್ಲಿ ಆಕಸ್ಮಿಕವಾಗಿ ಸಿಕ್ಕಿದ ಲಹರಿ ವೇಲು ಅವರು- ‘ಸಾರ್,ನಾಳೆ ನಿಸಾರ್ ಅಹಮದ್ ಅವರನ್ನು ನೋಡಿಕೊಂಡು ಬರೋಣ ಬನ್ನಿ’ ಅಂದರು. ೨೮.೨.೨೦೧೨ರ ಮಂಗಳವಾರ ಮಧ್ಯಾನ ನಾನು,ಲಹರಿ ವೇಲು ಮತ್ತು ನನ್ನ ಸಹೋದ್ಯೋಗಿ ಶ್ರೀನಾಥ್ ಆಸ್ಪತ್ರೆಗೆ ಹೋದೆವಲ್ಲ;ನಮ್ಮನ್ನು ಕಂಡ ತಕ್ಷಣ ನಿಸಾರ್ ಅಹಮದ್ ತುಂಬಾ ಖುಷಿಪಟ್ಟರು.ಮೂರೂ ಜನರ ಕುಟುಂಬದ ಯೋಗಕ್ಷೇಮ ವಿಚಾರಿಸಿದರು.ಮಧ್ಯಾನ ಆಗಿದೆ.ಊಟ ಮಾಡಿದರೋ ಇಲ್ಲವೋ?ಹಸಿದು ಇರಬಾರದು ಕಣ್ರೀ.ಮೊದಲು ಊಟ ಮಾಡಿ ಅಂದು ಕಾಳಜಿ ತೋರಿದರು.ಅವರ ಯೋಗಕ್ಷೇಮವನ್ನು ನಾವು ಕೇಳಬೇಕಿತ್ತು.ಆದರೆ ಅಲ್ಲಿ ಎಲ್ಲಾ ಉಲ್ಟಾ ಆಯಿತು.ಅವರ ಸೌಜನ್ಯ ಕಂಡು ಲಹರಿ ವೇಲು ಅವರು ಕೈಮುಗಿದು ಹೇಳಿದರು: ‘ಸಾರ್,ಇಂಥ ಸಜ್ಜ್ಜನಿಕೆಯ ಮನುಷ್ಯರ ಜೊತೆ ನಾವು ಬದುಕಿದ್ದೀವಲ್ಲ…ನಾವು ಪುಣ್ಯವಂತರು…’ ಅಂದಹಾಗೆ,ಎಲ್ಲರ ಪ್ರೀತಿಯ ನಿಸಾರ್ ಅಹಮದ್ ಆರೋಗ್ಯದಿಂದ ಇದ್ದಾರೆ.ತಮ್ಮ ಬಗ್ಗೆ ಕಾಳಜಿ ತೋರಿದ ಎಲ್ಲರಿಗೂ ಕೃತಜ್ನತೆಗಳನ್ನೂ ತಿಳಿಸಿದ್ದಾರೆ…]]>

‍ಲೇಖಕರು G

February 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

5 ಪ್ರತಿಕ್ರಿಯೆಗಳು

  1. prakash hegde

    Gooooooooood News !
    ಅವರು ಕನ್ನಡಿಗರ ಹೆಮ್ಮೆ..
    ನೂರ್ಕಾಲ ನಮ್ಮೊಂದಿಗೆ ಇರಲಿ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: