ಅಂದು ಉಪ್ಪು, ಇಂದು ಬೀಜ..

  ಕೃಷಿ ಮತ್ತು ಆಹಾರದಲ್ಲಿ ಕುಲಾಂತರಿ ವಿರೋಧಿಸಿ, ಕರ್ನಾಟಕದ ಬೀಜ ಸಂಪತ್ತು ಮೆರೆಸುವ ರಾಜ್ಯವ್ಯಾಪಿ ಆಂದೋಲನ ಅಂದು, ಪ್ರಕೃತಿ ಪುಕ್ಕಟೆಯಾಗಿ ಕೊಟ್ಟ ಉಪ್ಪಿನ ಮೇಲೆ ಬಿಟೀಷರು ತೆರಿಗೆ ಹೇರಿದಾಗ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆಸಿದರು. ಹಿಡಿ ಉಪ್ಪು ಎತ್ತಿ ಹಿಡಿದು ದೇಶದ ಸರ್ವಸ್ವತಂತ್ರತೆಯನ್ನು ಸಾರಿದರು. ಇಂದು, ಪ್ರಕೃತಿ ನಮಗೆ ಪುಕ್ಕಟೆಯಾಗಿ ಕೊಟ್ಟಿರುವ ಬೀಜವನ್ನು ಬಹುರಾಷ್ಟ್ರೀಯ ಬೀಜ ಕಂಪನಿಗಳು ದೋಚಿ ದುಬಾರಿ ಬೆಲೆಗೆ ಮಾರುತ್ತಿವೆ. ‘ಒಂದು ದೇಶವನ್ನು ವಶಪಡಿಸಲು ಕೃಷಿಯನ್ನು ನಿಯಂತ್ರಿಸಬೇಕು; ಕೃಷಿಯನ್ನು ವಶಪಡಿಸಲು ಬೀಜ ಕಸಿಯಬೇಕು’ ಎಂದರಿತ ಚತುರ ಕಾರ್ಪೋರೆಟ್ ಬಹುರಾಷ್ಟ್ರೀಯ ಬೀಜ ಕಂಪನಿಗಳು ನಮ್ಮ ಬೀಜ ಭಂಡಾರಕ್ಕೆ ಕನ್ನ ಹಾಕಿವೆ. ಪ್ರತಿಯೊಂದು ಬೀಜವನ್ನೂ ಮನೆಯಲ್ಲೇ ಇಟ್ಟುಕೊಳ್ಳುತ್ತಿದ್ದ ರೈತರನ್ನು ಅಂಗಡಿಯಿಂದ ಪ್ಯಾಕೆಟ್  ಬೀಜ ಕೊಂಡು ತರುವ ಸ್ಥಿತಿಗೆ ತಂದಿವೆ. ಬೀಜ, ಗೊಬ್ಬರ, ಔಷಧಿಗಳಿಗೆ ರೈತರು ತಮ್ಮನ್ನು ಅವಲಂಬಿಸುವಂತೆ ಮಾಡಿ, ಸಾಲದ ಬಲೆಗೆ ಸಿಕ್ಕಿಸಿ ರೈತರು ಆತ್ಮಹತ್ಯೆಯ ಹಾದಿ ಹಿಡಿಯುವಂತೆ ಮಾಡಿವೆ. ಹೈಬ್ರಿಡ್ ಬೀಜಗಳ ಮೂಲಕ ಮಿಶ್ರ ಬೆಳೆ ಪದ್ಧತಿಗಳನ್ನು, ರೈತರ ಸ್ಥಳೀಯ ಬೀಜ ಸಂಪತ್ತನ್ನು ನಾಶಮಾಡಲು ಪ್ರಾರಂಭಿಸಿದ ಕಂಪನಿಗಳು ಈಗ ಕುಲಾಂತರಿ ಬೀಜಗಳ ಮೂಲಕ ಇದರ ಸರ್ವನಾಶಕ್ಕೆ ಹೊರಟಿವೆ. ತಮಗೆ ಬೇಕಾದ ಆಹಾರ, ಜಾನುವಾರುಗಳಿಗೆ ಮೇವು ಕೊಡುವಂಥ ಬೀಜಗಳನ್ನು ಹಾಕುತ್ತಿದ್ದ ಸ್ವತಂತ್ರವನ್ನೇ ಕಳೆದುಕೊಂಡು ರೈತರು ಏಕಬೆಳೆ ಪದ್ಧತಿಗೆ ಶರಣಾಗಿ ಬಿಟ್ಟಿದ್ದಾರೆ. ಬಹುರಾಷ್ಟ್ರೀಯ ಬೀಜ ಕಂಪನಿಗಳಿಗೆ ಬೀಜ ಒಂದು ಮಾರಾಟದ ಸರಕು. ಆದರೆ ನಮಗೆ ಬೀಜ ನಮ್ಮ ಕೃಷಿಯ ಕೇಂದ್ರ. ಬೀಜದಿಂದಲೇ ಜನ ಜಾನುವಾರುಗಳಿಗೆ ಆಹಾರ; ನಮ್ಮ ಭೂಮಿಗೆ ಫಲವತ್ತು; ನಮ್ಮ ಹಬ್ಬ ಆಚರಣೆಗಳಲ್ಲೆಲ್ಲಾ ಬೀಜವೇ ಪ್ರಧಾನ; ಬೀಜದಿಂದ ನೆನಪುಗಳು, ಸಂಬಂಧಗಳು ಉಳಿಯುತ್ತವೆ, ಸಂಸ್ಕೃತಿ ಬೆಳೆಯುತ್ತದೆ; ಬೀಜವಿದ್ದರೆ ಸ್ವತಂತ್ರ; ಬೀಜ ನಮ್ಮ ಭಾಷೆಯಿದ್ದ ಹಾಗೆ. ಬೀಜವೊಂದು ಕಣ್ಮರೆಯಾದಾಗ ನಾವು ಇವೆಲ್ಲವನ್ನೂ ಕಳೆದುಕೊಳ್ಳುತ್ತೇವೆ. ಇಂಥ ಬೀಜವನ್ನು ಕುಲಾಂತರಿ ತಂತ್ರಜ್ಞಾನ ಕೊಲ್ಲುತ್ತದೆ. ಯಾವುದೋ ಒಂದು ಜೀವಿಯ ವಂಶವಾಹಿಯನ್ನು ಅದಕ್ಕೆ ಸಂಬಂಧವೇ ಇಲ್ಲದ ಬೇರೊಂದು ಜೀವಿಯಲ್ಲಿ ಸೇರಿಸಿ ಕೊಲೆಗಾರ ಬೀಜಗಳನ್ನು ಸೃಷ್ಟಿ ಮಾಡುತ್ತಾರೆ. ಮರು ಹುಟ್ಟು ಕೊಡುವ ಬೀಜದ ಮೂಲಗುಣವನ್ನೇ ನಾಶಮಾಡುತ್ತಾರೆ.   ರೈತರಿಗೂ, ಗ್ರಾಹಕರಿಗೂ ಇದು ಆಘಾತಕಾರಿ ಸುದ್ದಿ ಕಳೆದ ಕೆಲ ವರ್ಷಗಳಿಂದ ಕರ್ನಾಟಕದಲ್ಲಿ ಕುಲಾಂತರಿ ಬಿ.ಟಿ ಹತ್ತಿಯ ಅವಾಂತರವನ್ನು ನೋಡಿದ್ದೇವೆ. ಬಿಟಿ ಹತ್ತಿ ಬೆಳೆಯಲು ಪ್ರಾರಂಭಿಸಿದ ಮೂರೇ ವರ್ಷದಲ್ಲಿ ರೈತರು ತಲೆಮಾರುಗಳಿಂದ ಬೆಳೆಯುತ್ತಿದ್ದ ಹತ್ತಿ ಬೀಜಗಳೆಲ್ಲಾ ಮಾಯವಾದವು. ಸರ್ಕಾರ ಹತ್ತಿ ಬೀಜ ಉತ್ಪಾದಿಸಿ ರೈತರಿಗೆ ವಿತರಿಸುವುದನ್ನು ನಿಲ್ಲಿಸಿ ರೈತರನ್ನು ಕಂಪನಿಗಳ ಬಾಗಿಲಿಗೆ ತಂದು ನಿಲ್ಲಿಸಿಬಿಟ್ಟಿತು. ರೈತರು ಕೆಜಿಗೆ 2500 ರೂಪಾಯಿ ತೆತ್ತು ಕಂಪನಿಗಳಿಂದ ಬಿಟಿ ಹತ್ತಿ ಬೀಜ ಕೊಳ್ಳುವಂತೆ ಮಾಡಿತು. ಬಿಟಿ ಹತ್ತಿಗೆ ಕಾಯಿಕೊರಕದ ಬಾಧೆ ಇಲ್ಲದಿರುವುದರಿಂದ ಕೀಟ ನಾಶಕದ ಖರ್ಚು ಉಳಿದು, ಬೆಳೆ ನಷ್ಟ ತಪ್ಪಿ ಆದಾಯ ದುಪ್ಪಟ್ಟಾಗುತ್ತದೆ ಎಂದು ಕಂಪನಿಗಳು ಹೇಳಿಕೊಂಡದ್ದೆಲ್ಲಾ ಪೂರ್ತಿ ಸುಳ್ಳಾಯಿತು. ಈಗ ರೈತರಿಗೆ ಉಳಿದಿರುವುದು ಬಿಟಿ ವಿಷ ಹತ್ತಿಸಿಕೊಂಡ ಹೊಲಗಳು. ಅಲ್ಲಿ ಹಾಕಿದ ಬೇರೆ ಬೆಳೆಗಳೂ ಕಮರಿ ಹೋಗುತ್ತಿವೆ. ಜೇನು, ದುಂಬಿಗಳು ಮಾಯವಾಗಿವೆ. ಹತ್ತಿ ಗಿಡದ ಉಳಿಕೆ, ಹತ್ತಿ ಹಿಂಡಿಗಳನ್ನು ತಿನ್ನುವ ಜಾನುವಾರುಗಳು ವಿಚಿತ್ರ ಚರ್ಮ ರೋಗಗಳಿಂದ ನರಳುತ್ತಿವೆ. ಜಾನುವಾರುಗಳಲ್ಲಿ ಗರ್ಭಪಾತ, ಬಂಜೆತನಗಳು ತುಂಬಾ ಹೆಚ್ಚಾಗಿದೆ. ಕುಲಾಂತರಿ ಹತ್ತಿ ವಿಷ ನಮ್ಮ ಆಹಾರದಲ್ಲೂ ಎಣ್ಣೆಯ ಮೂಲಕ ಸೇರಿಕೊಂಡಿದೆ.   ಮುಂಬರುವ ದಿನಗಳು ಇನ್ನೂ ಭಯಾನಕ. ಭತ್ತ, ಗೋಧಿ, ಜೋಳ, ಬದನೆ, ಬೆಂಡೆ, ಕೋಸು, ಟೊಮಾಟೊ, ಆಲೂಗೆಡ್ಡೆ, ಬಾಳೆ, ಪಪಾಯ ಮುಂತಾದ 28ಕ್ಕೂ ಹೆಚ್ಚು ಆಹಾರ ಬೆಳೆಗಳನ್ನು ಕುಲಾಂತರಿಗೊಳಿಸುವ ಪ್ರಯೋಗಗಳು ನಡೆದಿವೆ. ಇದರಿಂದ ಮುಂದಿನ ದಿನಗಳಲ್ಲಿ ಜನ ಜಾನುವಾರುಗಳ ಪರಿಸ್ಥಿತಿ ಇನ್ನೂ ಹದಗೆಟ್ಟು, ನಾವು ಬೆಳೆಯುತ್ತಿರುವ ಆಹಾರ ಬೆಳೆಗಳ ತಳಿಗಳೆಲ್ಲಾ ನಾಶವಾಗಿ ಹೋಗುತ್ತದೆ. ಕುಲಾಂತರಿ ಆಹಾರ ತಿನ್ನುವುದರಿಂದ ಬೆಳವಣಿಗೆ ಕುಂಠಿತವಾಗುವುದು, ಸಹಿಷ್ಣು ಶಕ್ತಿ ಕುಗ್ಗುವುದು, ಜೀರ್ಣಾಂಗಗಳು ಹಿಗ್ಗಿ ಕ್ಯಾನ್ಸರ್ ನಂತ ಬೆಳವಣಿಗೆಯಾಗುವುದು, ಸಂತಾನ ಶಕ್ತಿ ಕುಂದುವುದು, ಚರ್ಮದ ತೀವ್ರ ಅಲರ್ಜಿಯಂಥ ಪರಿಣಾಮಗಳು ಪ್ರಪಂಚದಾದ್ಯಂತ ವಿವಿಧ ಅಧ್ಯಯನಗಳಿಂದ ಸಾಬೀತಾಗಿವೆ. ತಾಯಿ ಗರ್ಭದಲ್ಲಿರುವ ಭ್ರೂಣವನ್ನು ಇದು ಪ್ರವೇಶಿಸಿರುವುದು ಕಂಡು ಬಂದಿದೆ. ಇಲ್ಲೆಲ್ಲ ಜನರ ಹಿತ ಕಾಪಾಡಬೇಕಾದ ಸರ್ಕಾರ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಕಂಪನಿಗಳ ಜೊತೆ ಶಾಮೀಲಾಗಿ ಜನರಿಗೆ ದ್ರೋಹ ಮಾಡುತ್ತಿವೆ. ತಮ್ಮ ಸ್ವಂತ ಬೀಜವನ್ನು ಕೈಬಿಡುವಂತೆ ಸರ್ಕಾರ ರೈತರ ಮೇಲೆ ಒತ್ತಡ ಹೇರುತ್ತಿದೆ. ಜನ ಸಿಟ್ಟೆದ್ದು ಹೋರಾಟ ನಡೆಸಿದಾಗ ಸರ್ಕಾರ ಬಿಟಿ ಬದನೆಯನ್ನು ತತ್ಕಾಲಿಕವಾಗಿಯಾದರೂ ನಿಲ್ಲಿಸಬೇಕಾಗಿ ಬಂತು. ಇದರಿಂದ ಎಚ್ಚೆತ್ತ ಕುಲಾಂತರಿ ಪರ ಶಕ್ತಿಗಳು ಮತ್ತೂ ಬಿರುಸಾದ ಪ್ರಚಾರದಲ್ಲಿ ತೊಡಗಿ ಕುಲಾಂತರಿ ಆಹಾರ ಬೆಳೆಗಳಿಗೆ ಅನುಮೋದನೆ ಪಡೆದುಕೊಳ್ಳಲು ಕೀಳುಮಟ್ಟದ ರಾಜಕೀಯ ನಡೆಸಿವೆ. ಕಂಪನಿಗಳ ಹಿತ ಕಾಪಾಡುವ, ಕುಲಾಂತರಿಗೆ ಒತ್ತಾಸೆಯಾಗುವ, ರೈತರ ಬೀಜ ನಾಶಮಾಡುವ ‘ಬಿಆರ್ಎಐ (ಬಯೊಟೆಕ್ನಾಲಜಿ ರೆಗ್ಯುಲೆಟರಿ ಅಥಾರಿಟಿ ಆಫ್ ಇಂಡಿಯಾ) ಮಸೂದೆ’, ‘ಬೀಜ ಮಸೂದೆ-2010’ಗಳನ್ನು ಜಾರಿಗೆ ತರಲು ಪಟ್ಟು ಹಿಡಿದಿವೆ. ಈ ಮಸೂದೆಗಳೇನಾದರೂ ಕಾಯಿದೆಗಳಾಗಿ ಬಂದುಬಿಟ್ಟರೆ, ತಮ್ಮ ಸ್ವಂತ ಬೀಜ ಉಳಿಸಿಕೊಳ್ಳುತ್ತಿರುವ ರೈತರನ್ನು, ಕುಲಾಂತರಿಯ ಅಪಾಯಗಳ ಬಗ್ಗೆ ಮಾತನಾಡುತ್ತಿರುವ ನಮ್ಮೆಲ್ಲರನ್ನೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಬಿಡುತ್ತಾರೆ.   ಕರ್ನಾಟಕವನ್ನು ಬಹುರಾಷ್ಟ್ರೀಯ ಬೀಜ ಕಂಪನಿಗಳ ಈ ದುರಾಕ್ರಮಣದಿಂದ ಪಾರುಮಾಡಿದ್ದಲ್ಲದೆ ನಮ್ಮ ಕೃಷಿ, ಜನ, ಜಾನುವಾರು ಮತ್ತು ಪರಿಸರಕ್ಕೆ ಉಳಿಗಾಲವಿಲ್ಲ. ಕುಲಾಂತರಿಯ ಬೇರನ್ನು ಕಿತ್ತೊಗೆಯುವ ಮತ್ತು ಕರ್ನಾಟಕದ ಮಹಾನ್ ಕೃಷಿ ಪರಂಪರೆ, ಬೀಜ ಶ್ರೀಮಂತಿಕೆಗಳ ಬೇರನ್ನು ಗಟ್ಟಿಗೊಳಿಸುವ ಕೆಲಸಗಳೆರಡೂ ಇಲ್ಲಿ ಒಟ್ಟೊಟ್ಟಿಗೆ ಆಗಬೇಕಿದೆ. ಕರ್ನಾಟಕದಲ್ಲಿ ವಿವಿಧ ಪ್ರದೇಶಕ್ಕೆ ಹೊಂದಿಕೊಂಡಂಥ ವಿಧ ವಿಧವಾದ ಬೆಳೆ ಪದ್ಧತಿಗಳಿದ್ದು ಅವುಗಳಿಗೆ ಬೇಕಾದ ಬೀಜ ಸಂಪತ್ತು ಅಪಾರವಾಗಿದೆ, ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ. ಇದನ್ನು ರೈತರ ಮನೆ-ಮನಸ್ಸುಗಳಿಂದ ಅಳಿಸಿಹಾಕುವ ಕೆಲಸ ದೊಡ್ಡ ರೀತಿಯಲ್ಲಿ ನಡೆಯುತ್ತಿದೆ. ನಮ್ಮ ಮಹಾನ್ ಕೃಷಿ-ಬೀಜ ಪರಂಪರೆಯನ್ನು ಭದ್ರವಾಗಿ ನೆಲೆನಿಲ್ಲಿಸುವ ಮೂಲಕವೇ ನಾವಿಂದು ಈ ಬಹುರಾಷ್ಟ್ರೀಯ ಬೀಜ ಕಂಪನಿಗಳ ದುರಾಕ್ರಮಣವನ್ನು ಸೆದೆಬಡಿಯ ಬೇಕಾಗಿದೆ. ಆದ್ದರಿಂದಲೇ ಬೀಜವನ್ನು ಕಾಪಾಡಿ ಬೀಜ ಬ್ಯಾಂಕ್ಗಳಲ್ಲಿ ಇಡುವುದು ಮಾತ್ರವಲ್ಲ, ಅದರ ಸಂಕೀರ್ಣ ಸಂಬಂಧಗಳ ನೆಲೆಯನ್ನೇ ಗಟ್ಟಿಗೊಳಿಸಬೇಕಾಗಿದೆ. ‘ಅಂದು ಉಪ್ಪು ಇಂದು ಬೀಜ’ ಘೋಷವಾಕ್ಯದ ಕರ್ನಾಟಕ ಕುಲಾಂತರಿ ವಿರೋಧಿ ಆಂದೋಲನ ಈ ದಿಕ್ಕಿನ ಹೋರಾಟವಾಗಿದೆ. ಕರ್ನಾಟಕದ ಶ್ರೀಮಂತ ಬೀಜ ಪರಂಪರೆ, ವೈವಿಧ್ಯಮಯ ಕೃಷಿ ಪದ್ಧತಿಗಳನ್ನು ಎತ್ತಿಹಿಡಿದು ರೈತ ಸಮುದಾಯದ ಮೇಲೆ ಕವಿದ ಮಂಪರನ್ನು ಸರಿಸುವ, ಸಮುದಾಯದ ಬೀಜ ಸಂಪತ್ತಿನ ಮೇಲೆ ದುರಾಕ್ರಮಣ ಮಾಡಿರುವ ಬಹುರಾಷ್ಟ್ರೀಯ ಬೀಜ ಕಂಪನಿಗಳನ್ನು ಬಡಿದೋಡಿಸುವ ಹೋರಾಟ ಇದು. ಆರೋಗ್ಯಪೂರ್ಣ ಆಹಾರ, ಜಾನುವಾರುಗಳಿಗೆ ಮೇವು ಕೊಡುವಂಥ ಉತ್ತಮ ಬೆಳೆ ಬೆಳೆಯುವ ನಮ್ಮ ಹಕ್ಕನ್ನು ಎತ್ತಿಹಿಡಿಯುವ ಹೋರಾಟ ಇದು. ಆಂದೋಲನದ ಭಾಗವಾಗಿ ಕರ್ನಾಟಕದ ವಿವಿಧ ವಲಯಗಳಲ್ಲಿ ಬೀಜ ಶೋಧ ಜಾಥಾ ಮತ್ತು ವಿಚಾರ ಮಂಥನಗಳು ಜನವರಿ 29, 2012ರಿಂದ ಎರಡು ತಿಂಗಳುಗಳ ಕಾಲ ನಡೆಯುತ್ತಿವೆ. 2012ರ ಏಪ್ರಿಲ್ನಲ್ಲಿ ಎರಡು ದಿನಗಳ ಬೃಹತ್ ಸಮಾವೇಶದಲ್ಲಿ ಬೆಂಗಳೂರಿನಲ್ಲಿ ಇದು ಸಮಾಗಮಗೊಳ್ಳುತ್ತದೆ. ಬನ್ನಿ, ಆಂದೋಲನದಲ್ಲಿ ಪಾಲ್ಗೊಳ್ಳಿ. ಸಹಸ್ರಾರು ವರ್ಷಗಳಿಂದ ನಾವು ಉಳಿಸಿಕೊಂಡು ಬಂದ ಬೀಜ ಸಂಪತ್ತನ್ನು ಒಮ್ಮೆಗೇ ನುಂಗಿ ಬಿಡಬಲ್ಲೆನೆಂಬ ಕಾರ್ಪೋರೆಟ್ ಅಹಂಕಾರವನ್ನು ಇಂದೇ ಅಡಗಿಸೋಣ. ತಪ್ಪಿದರೆ ಈಗ ಕಳೆದುಕೊಂಡದ್ದನ್ನು ಮತ್ತೆಂದೂ ಹಿಂದಕ್ಕೆ ಪಡೆಯಲಾರೆವು. ಅಂದು ಉಪ್ಪಿನ ಮೇಲೆ ಹಕ್ಕು ಸಾರುವ ದಂಡಿ ಯಾತ್ರೆ ಇಂದು ಬೀಜದ ಮೇಲೆ ಹಕ್ಕು ಸಾರುವ ಬೀಜ ಯಾತ್ರೆ ನಮ್ಮ ಹಕ್ಕೊತ್ತಾಯಗಳು -ಕೃಷಿ ಮತ್ತು ಆಹಾರದಲ್ಲಿ ಕುಲಾಂತರಿ ತಂತ್ರಜ್ಞಾನ ನಿಷೇಧಿಸಬೇಕು – ಕರ್ನಾಟಕವನ್ನು ಕುಲಾಂತರಿ ಮುಕ್ತ ರಾಜ್ಯ ಎಂದು ಘೋಷಿಸಬೇಕು -ಬಿಆರ್ಎಐ  ಮಸೂದೆ, ಬೀಜ ಮಸೂದೆ-2010ಗಳನ್ನು ಶಾಶ್ವತವಾಗಿ ಕೈಬಿಡಬೇಕು -ಬೀಜ ತಳಿಗಳ ಮೇಲೆ ರೈತರ/ಸಮುದಾಯದ ಹಕ್ಕನ್ನು ಎತ್ತಿ ಹಿಡಿಯಬೇಕು, ಬಹುರಾಷ್ಟ್ರೀಯ ಬೀಜ ಕಂಪನಿಗಳ ದುರಾಕ್ರಮಣದಿಂದ ಮುಕ್ತಗೊಳಿಸಬೇಕು. – ಸ್ಥಳೀಯ ಬೀಜಗಳ ಮೇಲೆ ಸ್ಥಳೀಯವಾಗಿಯೇ ಕೆಲಸ ಮಾಡಲು ಒತ್ತಾಸೆ ಕೊಡಬೇಕು ಕನರ್ಾಟಕ ಕುಲಾಂತರಿ ವಿರೋಧಿ ಆಂದೋಲನ – ಸೇಜ್ ಕನರ್ಾಟಕ ತುಮಕೂರು ಜಿಲ್ಲೆಯಲ್ಲಿ ಅಂದು ಉಪ್ಪು ಇಂದು ಬೀಜ ಜಾಥಾ ಕಾರ್ಯಕ್ರಮ ತುಮಕೂರು ಜಿಲ್ಲೆಯ ಎಲ್ಲಾ ಹತ್ತು ತಾಲ್ಲೂಕುಗಳಲ್ಲಿ ಬೀಜ ಜಾಥಾ ನಡೆಯುತ್ತಿದ್ದು ದಿನಾಂಕ 29.1.2012ರಂದು ಬೆಳಿಗ್ಗೆ 10 ಘಂಟೆಗೆ ಶಿರಾದ ಕಳ್ಳಂಬೆಳ್ಳದಲ್ಲಿ ಉದ್ಘಾಟನೆಗೊಂಡು 7.2.2012ರಂದು ತುಮಕೂರಿನ ಬಳಗೆರೆಯಲ್ಲಿ ಮುಕ್ತಾಯಗೊಳ್ಳುತ್ತದೆ. ಜಾಥಾ ಕಾರ್ಯಕ್ರಮದ ಮಾರ್ಗಸೂಚಿ ಮತ್ತು ವಿವರಗಳು ಈ ಕೆಳಗಿನಂತಿವೆ. ದಿನಾಂಕ ತಾಲ್ಲೂಕು ಜಾಥಾ ನಡೆಯುವ ಸ್ಥಳ 29-1-2012, ಭಾನುವಾರ – ಶಿರಾ- ಹಾಲು ಉತ್ಪಾದಕರ ಸಹಕಾರ ಸಂಘದ ಆವರಣ, ಕಳ್ಳಂಬೆಳ್ಳ 30-1-2012, ಸೋಮವಾರ- ಪಾವಗಡ -ಕತಿಕ್ಯಾತನಹಳ್ಳಿ, ಚಿಕ್ಕನಕುಂಟೆ (ತ್ಯಾರಮಲ್ಲೇಶರ ತೋಟ) 31-1-2012, ಮಂಗಳವಾರ- ಮಧುಗಿರಿ -ಬಡವನಹಳ್ಳಿ ಸಮೀಪದ ರಂಗಾಪುರದ ರೈತ ಕಾಮಣ್ಣನ ತೋಟ 1-2-2012, ಬುಧವಾರ- ಕೊರಟಗೆರೆ- ಕೊರಟಗೆರೆ ಪ್ರಧಾನ ಅಂಚೆ ಕಛೇರಿ ಹಿಂಭಾಗದ ಕುರಂಗರಾಜರ ತೋಟ 2-2-2012, ಗುರುವಾರ- ಕುಣಿಗಲ್- ಸಂತೇಮಾವತ್ತೂರು ಗ್ರಾಮ 3-2-2012, ಶುಕ್ರವಾರ -ತುರುವೇಕೆರೆ -ಗುಡ್ಡೇನಹಳ್ಳಿ ಗ್ರಾಮ 4-2-2012, ಶನಿವಾರ -ತಿಪಟೂರು -ಬಿದರೆ ಗುಡಿ ಆಲದ ಮರದ ಆವರಣ 5-2-2012, ಭಾನುವಾರ- ಚಿಕ್ಕನಾಯಕನಹಳ್ಳಿ -ತರಬೇನಹಳ್ಳಿ ಷಡಾಕ್ಷರಿಯವರ ತೋಟ 6-2-2012, ಸೋಮವಾರ- ಗುಬ್ಬಿ -ಅಮ್ಮನಘಟ್ಟ ಶಂಕರಪ್ಪನವರ ತೋಟ 7-2-2012, ಮಂಗಳವಾರ -ತುಮಕೂರು -ನಾಗವಲ್ಲಿ ಸಮೀಪದ ಬಳಗೆರೆ ಜಯ ಫಾರಂ   ಸಂಯೋಜನೆ ಮತ್ತು ಸಂಘಟನೆ : ತುಮಕೂರು ವಿಜ್ಞಾನ ಕೇಂದ್ರ ಮತ್ತು ತಾಲ್ಲೂಕು ವಿಜ್ಞಾನ ಕೇಂದ್ರಗಳು ಸಹಕಾರ ಸಹಯೋಗ: ಬೈಫ್ (ಬಡರ್್-ಕೆ), ತಿಪಟೂರು ಸಾವಯವ ಕೃಷಿ ಪರಿವಾರಗಳು, ತುಮಕೂರು ಜಿಲ್ಲೆ ಕನರ್ಾಟಕ ರಾಜ್ಯ ರೈತ ಸಂಘದ ಘಟಕಗಳು, ತುಮಕೂರು ಜಿಲ್ಲೆ ಕೃಷಿಕ ಸಮಾಜದ ತಾಲ್ಲೂಕು ಘಟಕಗಳು, ತುಮಕೂರು ಜಿಲ್ಲೆ ಹಾಲು ಉತ್ಪಾದಕರ ಸಹಕಾರ ಸಂಘಗಳು ಕಿಡ್ಸ್ ಸಂಸ್ಥೆ, ಮಧುಗಿರಿ ಇಕ್ರಾ ಸಂಸ್ಥೆ, ಕೊರಟಗೆರೆ ಫೋರಂ ಸಂಸ್ಥೆ, ಕೊರಟಗೆರೆ ಐ.ಡಿ.ಎಫ್. ಸಂಸ್ಥೆ, ಕುಣಿಗಲ್ ಸೃಜನಾ ಸಂಸ್ಥೆ, ಸಿ.ಎನ್.ಹಳ್ಳಿ ಜಾಡು, ಸಿ.ಎನ್.ಹಳ್ಳಿ ಅಭಿವೃದ್ಧಿ ಸಂಸ್ಥೆ, ಗುಬ್ಬಿ ಮದರ್ ಸಂಸ್ಥೆ, ಶಿರಾ ಮಹಿಳಾ ಸಂಘಟನೆಗಳು, ತುಮಕೂರು ಜಿಲ್ಲೆ ಸಂಪರ್ಕ: ಸಿ. ವಿಶ್ವನಾಥ್: 94486 59699 ರಾಮಕೃಷ್ಣಪ್ಪ: 91413 88171 ಎನ್ ಮೃತ್ಯುಂಜಯಪ್ಪ 94489 70967 ರಾಯಚೂರು-ಕೊಪ್ಪಳ-ಬಳ್ಳಾರಿ-ದಾವಣಗೆರೆ ವಲಯದ ಬೀಜ ಜಾಥಾ ದಿನಾಂಕ 8.2.2012ರಿಂದ 15.2.2012 ಕನರ್ಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕಗಳು ಸಾವಯವ ಕೃಷಿ ಮಿಷನ್ನ ಜಿಲ್ಲಾ ಘಟಕಗಳು ಎಐಸಿಸಿಟಿಯು, ಕೊಪ್ಪಳ ಘಟಕ ಕನ್ನಡನೆಟ್.ಕಾಮ್ ಕವಿಸಮೂಹ, ಕೊಪ್ಪಳ ಲೇಬರ್ ವೆಲ್ಫೇರ್ ಟ್ರಸ್ಟ್, ಗಂಗಾವತಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ ಭಾರತೀಯ ಕಿಸಾನ್ ಸಂಘ, ಬಳ್ಳಾರಿ ಘಟಕ ತುಂಗಭದ್ರಾ ಬಚಾವೋ ಆಂದೋಲನ ಸಮಿತಿ, ಕೊಪ್ಪಳ ಕನರ್ಾಟಕ ಆದಿವಾಸಿ ಜನಸೇವಾ ಸಂಘ, ಕೊಪ್ಪಳ ವೀರ ಕನ್ನಡಿಗ ಸಂಘಟನೆ, ಕೊಪ್ಪಳ ಇಕ್ರಾ, ಸಂಸ್ಥೆ, ಬಳ್ಳಾರಿ ಬೈಫ್ ಸಂಸ್ಥೆ, ಹರಪನಹಳ್ಳಿ – ಇವರ ಸಹಯೋಗದಲ್ಲಿ 8 ದಿನಗಳ ಕಾಲ ಜೀಪ್ ಜಾಥಾ.. ದಿನಾಂಕ ಜಾಥಾದ ವಿವರ 8. 2.2012: ಉದ್ಘಾಟನೆ: ರಾಯಚೂರು. ರಾಯಚೂರು, ಮಾನ್ವಿ, ಲಿಂಗಸುಗೂರು ತಾಲ್ಲೂಕುಗಳ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸಿ ಲಿಂಗಸುಗೂರಿನಲ್ಲಿ ತಂಗುತ್ತದೆ. 9.2.2012: ಲಿಂಗಸುಗೂರು, ಸಿಂಧನೂರು ತಾಲ್ಲೂಕುಗಳ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸಿ ಕೊಪ್ಪಳ ಜಿಲ್ಲೆ ಪ್ರವೇಶಿಸುತ್ತದೆ. ಗಂಗಾವತಿ ತಾಲ್ಲೂಕಿನ ನವಲಿಯಲ್ಲಿ ತಂಗುತ್ತದೆ. 10.2.2012: ನವಲಿಯಿಂದ ಹೊರಟು ಗಂಗಾವತಿ, ಕುಷ್ಠಗಿ ತಾಲ್ಲೂಕುಗಳ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸಿ ಕುಷ್ಟಗಿಯಲ್ಲಿ ತಂಗುತ್ತದೆ. 11.2.2012: ಕುಷ್ಟಗಿಯಿಂದ ಹೊರಟು ಯಲಬುರ್ಗ, ಕೊಪ್ಪಳ ತಾಲ್ಲೂಕುಗಳ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸಿ ಕೊಪ್ಪಳದಲ್ಲಿ ತಂಗುತ್ತದೆ. 12.2.2012: ಕೊಪ್ಪಳದಲ್ಲಿ ಒಂದು ದಿನದ ಸಮಾವೇಶ. ಅಂದೇ ಜಾಥಾ ಬಳ್ಳಾರಿ ಜಿಲ್ಲೆಯನ್ನು ಹೊಸಪೇಟೆಯ ಮುಖಾಂತರ ಪ್ರವೇಶಿಸುತ್ತದೆ. ಹೊಸಪೇಟೆ, ಹಗರಿಬೊಮ್ಮನಹಳ್ಳಿ ತಾಲೂಕುಗಳ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಂಚರಿಸಿ ಹಗರಿಬೊಮ್ಮನಹಳ್ಳಿಯಲ್ಲಿ ತಂಗುತ್ತದೆ. 13.2.2012: ಹಗರಿಬೊಮ್ಮನಹಳ್ಳಿಯಿಂದ ಹೊರಟು ಹೂವಿನ ಹಡಗಲಿ ಮತ್ತು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕುಗಳಲ್ಲಿ ಸಂಚರಿಸಿ ಕೂಡ್ಲಗಿ ತಾಲೂಕಿನ ಕೊಟ್ಟೂರಿನಲ್ಲಿ ತಂಗುತ್ತದೆ. 14.2.2012: ಕೊಟ್ಟೂರಿನಿಂದ ಹೊರಟು ದಾವಣಗೆರೆ ಜಿಲ್ಲೆಯ ಜಗಳೂರು, ಬಳ್ಳಾರಿ ಜಿಲ್ಲೆಯ ಸಂಡೂರು, ಕೂಡ್ಲಗಿ ತಾಲೂಕುಗಳಲ್ಲಿ ಸಂಚರಿಸಿ ಕೂಡ್ಲಗಿ ಸಮೀಪದ ಕಕ್ಕುಪ್ಪಿಯಲ್ಲಿ ತಂಗುತ್ತದೆ. 15.2.2012: ಕೂಡ್ಲಗಿಯಲ್ಲಿ ಸಮಾವೇಶ. ಸಂಪರ್ಕ: ಮಹಾಂತೇಶ ಕೊತಬಾಳ: 8762700200 ವಿ. ಗಾಯತ್ರಿ: 080 25283370 ಲಿಂಗರಾಜ ನವಲಿ: 9449237312 ಚಾಮರಸ ಮಾಲಿ ಪಾಟೀಲ: 9448815850 ಜಿ ವೀರಣ್ಣ: 9448000870 ಬಿ ಎಸ್ ಆವಜಿ: 9945253735 ಎಂ ಬಸವರಾಜ: 9902528748 ಜಿ ಸೋಮಶೇಖರ್: 9731746779 ಮೈಸೂರು ವಲಯದ ಜಾಥಾ ವಿವರ ದಿನಾಂಕ 1.2.2012ರಿಂದ 31.3.2012 ಜೀಪ್ ಜಾಥಾ ಜಿಲ್ಲೆಗಳು: ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಮತ್ತು ಹಾಸನ ಮೈಸೂರು ವಲಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಸುಮಾರು 10 ದಿನಗಳ ಕಾಲ ಜಾಥಾ ಸಂಚರಿಸುತ್ತಾ ಎಲ್ಲಾ ತಾಲೂಕುಗಳ ಸಾಧ್ಯವಾದಷ್ಟೂ ಗ್ರಾಮಗಳನ್ನು ತಲಪುತ್ತದೆ. ಅಂತಿಮವಾಗಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸಮಾವೇಶಗಳು ನಡೆಯುತ್ತವೆ. ದಿನಾಂಕ ಜಾಥಾದ ವಿವರ 1.2.2012ರಿಂದ 10.22012: ಮೈಸೂರು ಜಿಲ್ಲೆ 11.2.2012ರಿಂದ 20.2 2012: ಚಾಮರಾಜನಗರ ಜಿಲ್ಲೆ 21.2.201ರಿಂದ 1.3.2012 : ಮಂಡ್ಯ ಜಿಲ್ಲೆ 4.2.3012ರಿಂದ 14.3.2012: ರಾಮನಗರ ಜಿಲ್ಲೆ 15.3.2012ರಿಂದ 25.3.2012: ಹಾಸನ ಜಿಲ್ಲೆ ಸಹಕಾರ ಸಹಯೋಗ: ಕನರ್ಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕಗಳು ಜೀವಾಮೃತ, ಆರಂಭ ಬಳಗ ನೇಸರ ಸಾವಯವ ಕೃಷಿಕರ ಬಳಗ, ನಿಸರ್ಗ ನೈಸಗರ್ಿಕ ಆಹಾರಕೇಂದ್ರ, ಬಾನುಲಿ ಕೃಷಿಕರ ಬಳಗ, ಮೈಸೂರು ಪ್ರಕೃತಿ ಫುಡ್ಸ್ ಇಕ್ರಾ, ಮೈಸೂರು, ರಾಮನಗರ ಗ್ರೀನ್ ಫೌಂಡೇಷನ್, ರಾಮನಗರ ಸಾವಯವ ಕೃಷಿ ಪರಿವಾರದ ಜಿಲ್ಲಾ ಘಟಕಗಳು ಸಂಪರ್ಕ: ಸುನಂದಾ ಜಯರಾಂ: 9980823318; ಹೊನ್ನೂರು ಪ್ರಕಾಶ್: 9481818510; ಉಗ್ರ ನರಸಿಂಹ ಗೌಡ: 9448090061; ಕೆ. ಸತ್ಯ ಶಂಕರ್: 9242120294; ಎಲ್.ಸಿ.ಚನ್ನರಾಜ್: 994519836 ಬಸವರಾಜು ಬಿ ಸಂತೇಶಿವರ: 9482118587 ಗದಗ್ ವಲಯದ ಜಾಥಾ ವಿವರ ದಿನಾಂಕ 1.2.2012ರಿಂದ 31.3.2012 ಜೀಪ್ ಜಾಥಾ ಜಿಲ್ಲೆಗಳು: ಬೆಳಗಾಂ, ಧಾರವಾಡ, ಗದಗ್, ಹಾವೇರಿ ಮತ್ತು ಉತ್ತರಕನ್ನಡ ಗದಗ್ ವಲಯದಲ್ಲಿ ಫೆಬ್ರವರಿಯ ಎರಡನೇ ವಾರದಲ್ಲಿ ಜೀಪ್ ಜಾಥಾ ನಡೆಯುತ್ತದೆ. ವಲಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಸಂಚರಿಸುವ ಜಾಥಾ ಧಾರವಾಡದಲ್ಲಿ ಸಮಾವೇಶದಲ್ಲಿ ಸಮಾಗಮಗೊಳ್ಳುತ್ತದೆ. ಸಹಕಾರ ಸಹಯೋಗ: ಗ್ರೀನ್ ಫೌಂಡೇಷನ್, ಧರಿತ್ರೀ ಸಾವಯವ ಕೃಷಿಕರ ಬಳಗ, ಸಿರಿಕೃಷಿ, ಸಹ್ಯಾದ್ರಿ ಪರಿಸರ ವಧರ್ಿನಿ; ಸಾವಯವ ಕೃಷಿ ಪರಿವಾರದ ಜಿಲ್ಲಾ ಘಟಕಗಳು; ಕಾಕೋಳು ಜಲ ಸಂರಕ್ಷಣಾ ಸಮಿತಿ ಸಂಪರ್ಕ: ಡಿ.ಡಿ.ಭರಮಗೌಡ್ರ: 9591388158; ಸಂಗಪ್ಪ ಕೋರಿ(ಗದಗ್); 9448390329 ತೋಟಪ್ಪ ಹಳ್ಳಿಕೇರಿ: 9739080045, ಚನ್ನಬಸಪ್ಪ ಕೊಂಬಳಿ: 9845890411(ಹಾವೇರಿ), ಬಿ.ಬಿ ನಿಲಜಗಿ ; 9449083692(ಬೆಳಗಾಂ); ಶಿವರಾಜ್ ಸಿ: 9449778665, ಪ್ರಕಾಶ್ ಭಟ್: 9008452447(ಧಾರವಾಡ); ರಮೇಶ್ ಹೆಗ್ಗಡೆ: 9482416418 (ಸಿರಸಿ) ಜಾಥಾದ ವಿಶೇಷತೆಗಳು: ಬೀಜಗಳ ಪ್ರದರ್ಶನ ಬೀಜದ ಮಹತ್ವ ಸಾರುವ ಮತ್ತು ಬೀಜಗಳ ಮಾಹಿತಿವುಳ್ಳ ಭಿತ್ತಿಚಿತ್ರಗಳ ಪ್ರದರ್ಶನ ಬೀಜ ಗೀತೆಗಳ ಗಾಯನ ಬೀಜ ಮಸೂದೆ, ಬಿ.ಆರ್.ಎ.ಐ. ಮಸೂದೆಗಳು, ಕೃಷಿಯ ಮೇಲೆ ಕಾಪರ್ೊರೆಟ್ ಕಂಪನಿಗಳ ದುರಾಕ್ರಮಣ, ಬಿಟಿ ಹತ್ತಿ ಮತ್ತು ಕುಲಾಂತರಿ ಬೆಳೆಗಳು ಇತ್ಯಾದಿ ಕುರಿತ ಚಚರ್ೆ ಬೀಜ ಸ್ಥಿತಿಗತಿ ಮತ್ತು ಬೀಜ ಕಾಪಾಡುವುದರ ಮಹತ್ವ ಕುರಿತು ರೈತರೊಂದಿಗೆ ಸಂವಾದ ನಾಟಿ ಬೀಜ ಸಂಗ್ರಹಕಾರರ ಅನುಭವಗಳ ವಿಚಾರ ವಿನಿಮಯ ಉತ್ತಮ ನಾಟಿ ಬೀಜಗಳ ಸಂಗ್ರಹಕಾರರಿಗೆ ಸನ್ಮಾನ ನಿರ್ಣಯಗಳು ಮತ್ತು ಮುಂದಿನ ದಾರಿ ಫೆಬ್ರವರಿ ಮತ್ತು ಮಾಚರ್್ ತಿಂಗಳುಗಳಲ್ಲಿ ಕನರ್ಾಟಕದ ಇತರ ಜಿಲ್ಲೆ ಮತ್ತು ವಲಯಗಳಲ್ಲಿ ಜಾಥಾ ಕಾರ್ಯಕ್ರಮ ನಡೆಯುತ್ತಿದ್ದು ವಿವರಗಳನ್ನು ಸದ್ಯದಲ್ಲೇ ಕೊಡಲಾಗುವುದು.]]>

‍ಲೇಖಕರು G

February 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This