ಅಕ್ಕ ಸಮ್ಮೇಳನ: ಚರ್ಚೆಗೆ ಸ್ವಾಗತ …


ಅಕ್ಕ ಸಮ್ಮೇಳನದಲ್ಲಿ ಕಲಾವಿದರಿಗೆ ಹಾಗೂ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಊಟೋಪಚಾರವನ್ನು ಮಾಡದೇ ಅಕ್ಕ ಕಾರ್ಯಕರ್ತರು ನಮಗೆಲ್ಲ ಘೋರ ಅವಮಾನವನ್ನು ಮಾಡಿದರು ಎಂದು ಕನ್ನಡ ಸಂಸ್ಕೃತಿ, ಪ್ರಚಾರ ಮತ್ತು ವಾರ್ತಾ ಇಲಾಖೆಯ ಅಧಿಕಾರಿಗಳು ಆರೋಪಿಸಿರುವ ಬಗ್ಗೆ  ಅಕ್ಕ ಸಂಘಟನೆಯ ಅಧ್ಯಕ್ಷ ರವಿ ಡಂಕಣಿಕೋಟೆ ಹಾಗು ಅಕ್ಕ ವಿಶ್ವಸ್ಥ ಮಂಡಳಿ ಅಧ್ಯಕ್ಷ  ಅಮರನಾಥ ಗೌಡ  ಸ್ಪಷ್ಟನೆ ನೀಡಿದ್ದಾರೆ ಅದು ಇಲ್ಲಿದೆ . ಈ ಬಗ್ಗೆ ನಮ್ಮ ಜುಗಾರಿ ಕ್ರಾಸ್ ನಲ್ಲಿ ಚರ್ಚೆಗೆ ಸ್ವಾಗತ
ಸ್ವಯಂ ಪ್ರೇರಿತ ಕಾರ್ಯಕರ್ತರೇ ಅಕ್ಕ ಸಮ್ಮೇಳನದ ಜೀವಾಳ
ಸ್ವಯಂ ಸೇವಕರ ಸಮರ್ಥನೆ ಮತ್ತು ಹುರುಳಿಲ್ಲದ ಆರೋಪಗಳ ಖಡಾಖಂಡಿತ ತಿರಸ್ಕಾರ

ಆರನೆಯ ವಿಶ್ವ ಕನ್ನಡ ಸಮ್ಮೇಳನ ಈ ವರ್ಷ  ನ್ಯೂ ಜೆರ್ಸಿಯ ಎಡಿಸನ್ ನಗರದಲ್ಲಿ ಅದ್ದೂರಿಯಿಂದ ನಡೆದ ಬಗ್ಗೆ ಎಲ್ಲರಿಗೂ ಗೊತ್ತಿರುವುದು ಸರಿಯಸ್ಟೆ. ಈ ಸಂಬಂಧ ಸಮ್ಮೇಳನದ ಮುಖ್ಯಾಂಶಗಳನ್ನು ತಿಳಿಸುತ್ತಾ ಹಾಗೂ ಕನ್ನಡ ಸಂಸ್ಕೃತಿ, ಪ್ರಚಾರ ಮತ್ತು ವಾರ್ತಾ ಇಲಾಖೆಯ ಕಾರ್ಯದರ್ಶಿಗಳು ಮಾಡಿದ ಹುರುಳಿಲ್ಲದ ಆರೋಪಗಳನ್ನು ತಿರಸ್ಕರಿಸುವುದು ಈ ಪತ್ರಿಕಾ ಪ್ರಕಟಣೆಯ ಉದ್ದೇಶ.
ಕರ್ನಾಟಕದಿಂದ ಹೊರಗೆ ಕನ್ನಡಿಗರು ಆಯೋಜಿಸಿ ನಡೆಸುವ ಸಮಾರಂಭಗಳಲ್ಲಿ ಅಕ್ಕ ಸಮ್ಮೇಳನವು ಮುಂಚೋಣಿಯಲ್ಲಿ ನಿಲ್ಲುತ್ತದೆ. ಒಂದೇ ಚಾವಡಿಯ ಅಡಿಯಲ್ಲಿ ಶುಕ್ರವಾರದಿಂದ ಭಾನುವಾರದ ವರೆಗೆ ಸುಮಾರು ೨೫ ಸಾವಿರಕ್ಕಿಂತಲೂ ಹೆಚ್ಚು ಊಟಗಳನ್ನು ಸರಬರಾಜು ಮಾಡಿ ಇತಿಹಾಸವನ್ನು ನಿರ್ಮಿಸಿದ ಗೌರವಕ್ಕೆ ಅಕ್ಕ ಪಾತ್ರವಾಗುತ್ತದೆ.
ಮುಖ್ಯವಾಗಿ ಸಮಾರಂಭದ ಕಾರ್ಯಕ್ರಮಗಳು ಶುಕ್ರವಾರದಿಂದ ಆರಂಭವಾಗುವುದಿದ್ದರೂ ಸಹ ಹವಾಮಾನ ವೈಪರೀತ್ಯದಿಂದಾಗಿ ನ್ಯೂ ಜೆರ್ಸಿ ಪ್ರಾಂತ್ಯಕ್ಕೆ ಹರಿಕೇನ್ ಎಲ್ಲಿ ಬಂದು ಅಪ್ಪಳಿಸಿ ಸಮಾರಂಭದ ಕಳೆ ಕುಂದುವುದೋ ಎಂದು ಸಮ್ಮೇಳನದ ಆಯೋಜಕರು ಹಾಗೂ ನೂರಾರು ಕಾರ್ಯಕರ್ತರು ಹಗಲೂ ರಾತ್ರಿ ವಿಶ್ರಾಂತಿ ಇಲ್ಲದೇ ಕಾರ್ಯಕ್ರಮ ನಡೆಯುವ ಪ್ರದೇಶವನ್ನು ಸಜ್ಜುಗೊಳಿಸುವತ್ತ ಗಮನವಿಟ್ಟಿದ್ದು ವಿಶೇಷ ?.
ಎಂದಿನಂತೆ ಈ ಸಮ್ಮೇಳನವೂ ಸಹ ಸ್ವಯಂ ಸೇವಕರಿಂದಲೇ ನಡೆದಿದ್ದು, ಈ ಸಮ್ಮೇಳನದ ಯಶಸ್ಸಿನ ರೂವಾರಿಯಾಗಿ ಹಲವು ತಿಂಗಳಿನಿಂದ ಕಸ್ಪ ಪಟ್ಟು ದುಡಿದ ಕಾರ್ಯಕರ್ತರೇ ಆ ಕೀರ್ತಿಗೆ ಭಾಜನರಾಗುತ್ತಾರೆ ಎನ್ನುವುದು ಬಹಳ ಮುಖ್ಯವಾದ ವಿಚಾರ. ಈ ನಿಟ್ಟಿನಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಸಮ್ಮೇಳನಗಳನ್ನು ನಡೆಸಿಕೊಂಡು ಬಂದ ಕೀರ್ತಿ ಹಾಗೂ ಗೌರವಗಳಿಗೆ ಅಕ್ಕ ಪಾತ್ರವಾಗಿದೆ, ಹಾಗೂ ತನ್ನ ಒಡಲಾಳದಲ್ಲಿ ಅನೇಕ ಅನುಭವಗಳನ್ನು ಸಂಗ್ರಹಿಸಿದೆ.
ಕರ್ನಾಟಕದಿಂದ ದೂರವಿದ್ದೂ ನಾಡಿನ ಪರ ಚಿಂತನೆ ವಿಚಾರಗಳನ್ನು ತಾವು ಎಂದೂ ಕಡಿಮೆ ಮಾಡಿಕೊಳ್ಳೋದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಶುಕ್ರವಾರದ ಬಿಸಿನೆಸ್ ಫೋರಮ್ಮಿನ ಕಾರ್ಯಕ್ರಮಗಳು ಪ್ರಾರಂಭವಾದವು.
ಸಾಕಷ್ಟು  ಸಂಖ್ಯೆಯಲ್ಲಿ ಸೇರಿದ ಜನಸ್ತೋಮ ನಾಡಿನ ಹಿರಿಯ ಉದ್ಯಮಿಗಳು. ಸರ್ಕಾರದ ಪ್ರತಿನಿಧಿಗಳು, ಮಂತ್ರಿ-ಮಹೋದಯರನ್ನೊಳಗೊಂಡ ಕಾರ್ಯಕ್ರಮಗಳಲ್ಲಿ ಉದ್ಯಮಗಳನ್ನು ಬೆಳೆಸುವ ನಿಟ್ಟಿನ ಜೊತೆಯಲ್ಲೇ ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆಯ ಅವಕಾಶಗಳನ್ನು ಚರ್ಚಿಸುವ ಅನೇಕ ಯೋಜನೆಗಳನ್ನೊಳಗೊಂಡಿತ್ತು.
ಈ ಕಾರ್ಯಕ್ರಮಗಳನ್ನು ಉದ್ಭಾಟಿಸಿ ಮಾತನಾಡಿ “…ಎಲ್ಲಿದ್ದರೂ ನಮ್ಮ ಬೇರುಗಳನ್ನು ನಾವು ಮರೆಯಬಾರದು, ನಮ್ಮ ಜೀವನದ ಅವಶ್ಯಕತೆಗಳಿನುಸಾರವಾಗಿ ಇಲ್ಲಿ ಬಂದು ನೆಲೆಸಿದ್ದು, ಆ ಮೂಲಕ ನಮ್ಮತನವನ್ನು ಮರೆಯಬಾರದೆನ್ನುವ ನಿಟ್ಟಿನಲ್ಲಿ ಈ ರೀತಿಯ ಸಮ್ಮೇಳನವನ್ನು
ಆಯೋಜಿಸಲಾಗಿದೆ…ಕರ್ನಾಟಕಕ್ಕೆ ಇನ್ನೂ ಹೆಚ್ಚು ಇಂಡಸ್ಟ್ರಿಗಳು ಹಾಗೂ ಉದ್ಯಮಗಳು ಬರಬೇಕು, ನಾವು ಕರ್ನಾಟಕದ ಜನರು ಹಾಗೂ ಕರ್ನಾಟಕದ ಸರ್ಕಾರ ಎಂದೂ ಈ ಬಿಸಿನೆಸ್ಸಿನ ಆಲೋಚನೆಗಳನ್ನು ತೆರೆದ ಹೃದಯದಿಂದ ಸ್ವಾಗತಿಸುತ್ತೇವೆ. ಈ ರೀತಿ ಜ್ಯೋತಿ ಬೆಳಗುವುದರ ಮೂಲಕ ಸಾಂಕೇತಿಕವಾಗಿ ಆರಂಭವಾದ ಕಾರ್ಯಕ್ರಮಗಳು ನಾವು ಎಲ್ಲರೂ ಸಂಘಟನೆಗೊಂಡು ಕತ್ತಲನ್ನು ತಳ್ಳಿ ಬೆಳಕನ್ನು ಆಹ್ವಾನಿಸಿದ ಹಾಗೆ ಹೊಸ ಆಲೋಚನೆಗಳು ಈ ಮೂಲಕ ಮೂಡಿಬರಲಿ…” ಎಂದು ಶಂಕರಮೂರ್ತಿಯವರು ಹಾರೈಸಿದಿದ್ದುದನ್ನು ನಾವು ಯಾರೂ ಮರೆಯಲಾರೆವು.
ಇದಕ್ಕೆ ವ್ಯತಿರಿಕ್ತವಾಗಿ ಶುಕ್ರವಾರದ ಬಿಸಿನೆಸ್ ಫೋರಮ್ಮಿನಲ್ಲಿ ಬಲವಂತದಿಂದ ಭಾಗವಹಿಸಿದಂತೆ ಕಂಡು ಬಂದ ಕನ್ನಡ ಸಂಸ್ಕೃತಿ, ಪ್ರಚಾರ ಮತ್ತು ವಾರ್ತಾ ಇಲಾಖೆಯ ಅಧಿಕಾರಿಗಳು ಕೇವಲ ಅಲ್ಲಿದ್ದ ಇಡ್ಲಿ, ವಡೆ, ಉಪ್ಪಿಟ್ಟನ್ನು ತಿನ್ನಲು ಬಂದವರಂತೆ ಕಂಡುಬಂದುದು ಅತಿಶಯವಲ್ಲ. ಮುಖ್ಯಮಂತ್ರಿಗಳು ಮತ್ತು ಕೈಗಾರಿಕೆ ಸಚಿವರು ಕೊನೆ ಘಳಿಗೆಯಲ್ಲಿ ಬರಲಿಲ್ಲವೆಂದು ಗೊತ್ತಾದ ತಕ್ಷಣ ಈ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದೂ ಅಲ್ಲದೇ ಬಿಸಿನೆಸ್ ಫೋರಮ್ಮಿನಲ್ಲಿ ಮಾತನಾಡಿ ಎಂದು ಕಾರ್ಯದರ್ಶಿ ಮತ್ತು ನಿರ್ದೇಶಕರಿಬ್ಬರನ್ನು ನಾವು ಎಷ್ಟು  ಮನವಿ ಮಾಡಿಕೊಂಡರೂ, ಮಾತನಾಡಲು ಅಂಶಗಳನ್ನು ಬರೆದುಕೊಡುತ್ತೇವೆಂದರೂ, ಕೊನೆಗೂ ಇವರು ಮಾತನಾಡಲು ಒಪ್ಪಿಕೊಳ್ಳಲಿಲ್ಲ.

ನಾಡಿನ ಸದ್ಗತಿಗೆ, ಉದ್ಯಮಿಗಳ, ಅಧಿಕಾರಿಗಳ ಉಪಯೋಗಕ್ಕೆಂದೇ ಎಲ್ಲೆಲ್ಲಿಂದಲೋ ಸಿ.ಇ.ಓ.ಗಳನ್ನು ಓಲೈಸಿ ಕರೆಸಿ ಒಂದು ವಿಶೇಷ  ವೇದಿಕೆಯಡಿ ಇಡೀ ದಿನ ಶುಕ್ರವಾರ ಒಂದೂವರೆ ಕೋಟಿ ರೂಪಾಯಿಗಳಿಗೂ ಹೆಚ್ಚಿನ ವೆಚ್ಚದಲ್ಲಿ ನಡೆಸಿಕೊಟ್ಟ ಬಿಸಿನೆಸ್ ಫೋರಮ್ಮಿನ ಸದುಪಯೋಗ ಪಡೆದುಕೊಳ್ಳಬೇಕು ಎನ್ನುವ ಕಲ್ಪನೆ ಕೊನೆಗೂ ಇವರಿಗೆ ಬರದಿದ್ದುದು ನಮ್ಮ ದುರಾದೃಸ್ಟ.
ಕನ್ನಡ ನಾಡಿನ ಕಲೆ-ಸಂಸ್ಕೃತಿಗಳನ್ನು ಪ್ರದರ್ಶಿಸಲು ಅಕ್ಕ ನೀಡಿದ ೩೫ ಜನ ಕಲಾವಿದರ ಪಟ್ಟಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿ, ನಮ್ಮಲ್ಲಿರುವ ಇ-ಮೇಲ್ ದಾಖಲೆಗಳ ಪ್ರಕಾರ ಸೆಪ್ಟೆಂಬರ್ ೧ ರಂದು ಮುಂಜಾನೆ ಒಂಭತ್ತೂ ಮುಕ್ಕಾಲಿಗೆ ಕೊನೆಯ ಘಳಿಗೆಯಲ್ಲಿ ಅವರಿಗೆ ಬೇಕಾದ ೩೭ ಜನ ಕಲಾವಿದರ ಪಟ್ಟಿಯನ್ನು ಒದಗಿಸಿ ಸ್ವಯಂ ಸೇವಕರಿಂದ ಗುಲಾಮಗಿರಿಯನ್ನು ನಿರೀಕ್ಷಿಸಿ ಇಲ್ಲಿಗೆ ಬಂದ ಕೀರ್ತಿ ಇವರಿಗೆ ಸಲ್ಲುತ್ತದೆ.
ಕರ್ನಾಟಕದಲ್ಲಿ ಕೆಲಸಗಾರರಿಂದ ನಡೆಯುವ ವ್ಯವಸ್ಥೆಗೂ ಇಲ್ಲಿ ತಮ್ಮ ಪ್ರಯತ್ನ ಮೀರಿ ಶ್ರಮಿಸುವ ಕಾರ್ಯಕರ್ತರ ಸತ್ಕಾರಕ್ಕೂ ವ್ಯತ್ಯಾಸಗಳಿರುತ್ತವೆ, ನಾವು ಅನುಸರಿಸಿಕೊಂಡು ನಡೆಯಬೇಕು ಎನ್ನುವ ಮೂಲಭೂತ ತಿಳುವಳಿಕೆಯನ್ನೂ ಈ ಅಧಿಕಾರಿಗಳು ವ್ಯಕ್ತಪಡಿಸದಿರುವುದು ನಮಗೆಲ್ಲ ದಿಗ್ಭ್ರಮೆ ತಂದಿದೆ.

ಜಾತಿ-ಮತ-ಶಿಫಾರಸ್ಸುಗಳ ಆಧಾರದ ಮೇಲೆ ಇವರುಗಳು ಕಲಾವಿದರನ್ನು ಆಯ್ದುಕೊಂಡ ಬಗ್ಗೆ  ಸಾಕಷ್ಟು  ಈಗಾಗಲೇ ಪ್ರಕಟವಾಗಿದ್ದು, ಇವರು ಆಯ್ದುಕೊಂಡ ಕಲಾವಿದರ ಪಟ್ಟಿಯನ್ನು ನೋಡಿದಾಗ ಇವರ ಆಯ್ಕೆಯ ಆಳ ಹಾಗೂ ವಿಸ್ತಾರವನ್ನು ಎಂಥವರೂ ಅರಿತುಕೊಳ್ಳಬಹುದಾಗಿದೆ.
ಇನ್ನು ಇವರು ಮಾಡಿರುವ ಮುಖ್ಯ ದೂರುಗಳಲ್ಲಿ – ಕಲಾವಿದರಿಗೆ ಹಾಗೂ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಊಟೋಪಚಾರವನ್ನು ಮಾಡಲಿಲ್ಲ ಎಂಬ ವಿಚಾರಕ್ಕೆ ನಾವು ಇಲ್ಲಿ ಇವರಿಗೋಸ್ಕರ ಊಟ-ವಸತಿ-ಪಾನೀಯ ಮೊದಲಾದವುಗಳಿಗೆ ಖರ್ಚು ಮಾಡಿದ್ದಕ್ಕೆ ದಾಖಲೆಗೋಸ್ಕರ ಬೇಕಾದಷ್ಟು ರಶೀದಿಗಳನ್ನು ತೋರಿಸಬಹುದು ಹಾಗೂ ಊಟೋಪಚಾರಕ್ಕೆ ಹಾಗೂ ಅತಿಥಿ ಸತ್ಕಾರಕ್ಕೆ ನಿಗದಿಗೊಂಡ ಕಾರ್ಯಕರ್ತರು ಆತ್ಮಸಾಕ್ಷಿಯಾಗಿ ಶ್ರಮಿಸಿದ ಅನೇಕ ಉದಾಹರಣೆಗಳನ್ನು ಕೊಡಬಹುದು.
ಜೊತೆಗೆ ಸಮ್ಮೇಳನದ ಸಂಚಾಲಕರೊಬ್ಬರ ಮನೆಯಲ್ಲಿ ೨೪ ಕ್ಕೂ ಹೆಚ್ಚು ಅತಿಥಿ ಹಾಗೂ ಕಲಾವಿದರನ್ನು ಎಲ್ಲ ರೀತಿಯಿಂದಲೂ ಆದರಿಸಿ ಸತ್ಕರಿಸಿದ ಉದಾಹರಣೆಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದು ನಮಗೆಲ್ಲ ನಿರಾಶೆ ಮೂಡಿಸಿದೆ. ಅಕ್ಕ ಕಾರ್ಯಕ್ರಮವಿರಲಿ ಅಥವಾ ಮತ್ತೊಂದಿರಲಿ, ತಮ್ಮ ಮನೆಗೆ ಆಗಮಿಸಿದ ಅತಿಥಿಗಳನ್ನು ಸತ್ಕರಿಸಿ ಆದರಿಸುವುದು ನಮ್ಮೆಲ್ಲರ ಹುಟ್ಟುಗುಣ, ಸ್ವಭಾವ ಹಾಗೂ ಧರ್ಮ; ನಾವು ನಮ್ಮಲ್ಲಿ ಆಗಮಿಸಿದ ಪ್ರತಿಯೊಬ್ಬರನ್ನೂ ತಲತಲಾಂತರದಿಂದ ನಮ್ಮ ಕೈಲಾದಸ್ಟರ  ಮಟ್ಟಿಗೆ ನೋಡಿಕೊಂಡಿರುವುದು ನಮ್ಮ ಪರಂಪರೆ, ಹೀಗಿರುವಲ್ಲಿ ’ಅಕ್ಕ ಕಾರ್ಯಕರ್ತರು ನಮಗೆಲ್ಲ ಘೋರ ಅವಮಾನವನ್ನು ಮಾಡಿದರು’ ಎಂಬ ಅರೋಪ ಇಡೀ ಅನಿವಾಸಿ ಕನ್ನಡಿಗರಿಗೆ ಹಾಗೂ ಈ ಸಮ್ಮೇಳನದ ಕಾರ್ಯಕರ್ತರುಗಳಿಗೆ ಮಾಡಿರುವ ಅವಮಾನ.
ಹಾಸ್ಪಿಟಾಲಿಟಿ – ಅತಿಥಿ ಸತ್ಕಾರಕ್ಕೆಂದೇ ಕಂಕಣ ತೊಟ್ಟು ನಿಂತು, ಅನೇಕ ತಿಂಗಳುಗಳಿಂದ ತಯಾರಿ ನಡೆಸಿದ ಕಾರ್ಯಕರ್ತರ ಅಭಿಲಾ? ಹಾಗೂ ಆಕಾಂಕ್ಷೆಗಳಿಗೆ ಒಂದೇ ಒಂದು ಪ್ರೋತ್ಸಾಹದ ಮಾತನಾಡದೇ, ತಮ್ಮ ಕುಟುಂಬ-ಕೆಲಸ ಮೊದಲಾದವುಗಳನ್ನು ಬದಿಗೊತ್ತಿ ಕನ್ನಡದ ಕಲಾವಿದರ ಸೇವೆಗೆ ನಿಂತ ಇಂಜಿನಿಯರು-ಡಾಕ್ಟರು ಮೊದಲಾದ ಕರ್ಮ ಜೀವಿಗಳನ್ನು ಜೀತದಾಳುಗಳ ಥರ ನೋಡಿಕೊಂಡು, ಅಲ್ಲಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಉದಾಹರಣೆಗಳನ್ನೂ ಸೇರಿಸಿ ನೋಡಿದಾಗ, ಅವರೆಲ್ಲರಿಗೆ ಈ ದರ್ಪಿಸ್ಟ         ಅಧಿಕಾರಿಗಳು ಮಾಡಿದ ಅವಮಾನವಲ್ಲದೇ ಮತ್ತೇನು?
ಈ ಹಿಂದಿನ ಬಾಲ್ಟಿಮೋರ್ ಮತ್ತು ಚಿಕಾಗೋ ಸಮ್ಮೇಳನಗಳಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳಾಗಲೀ, ಉಪಮುಖ್ಯಮಂತ್ರಿಗಳಾಗಲೀ, ಅಥವಾ ಅಧಿಕಾರಿಗಳಾಗಲೀ ತಮಗೆ ಯಾವುದೇ ವಿ.ಐ.ಪಿ.ಯ ಪೋ?ಣೆಯೂ ಬೇಡ ತಾವು ಜನಸಾಮಾನ್ಯರಲ್ಲೇ ಒಬ್ಬರಾಗಿ ಸತ್ಕಾರವನ್ನು ಸ್ವೀಕರಿಸುತ್ತೇವೆ ಎಂದು ಸಭ್ಯತೆಯನ್ನು ಮೆರೆದ ಉದಾಹರಣೆಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿ ನಡೆದುಕೊಂಡವರು ಈ ವರ್ಷದ ಸಮ್ಮೇಳನದಲ್ಲಿ ಭಾಗವಹಿಸಿದ ಕರ್ನಾಟಕ ಸರ್ಕಾರದ ಅಧಿಕಾರಿಗಳು.
ಮುಖ್ಯ ವೇದಿಕೆಯಲ್ಲಿ ಸುಮಾರು ನಲವತ್ತೈದು ನಿಮಿಷ ಗಳ ಕಾಲ ಮಾತನಾಡಲು ಅವಕಾಶ ಕೊಟ್ಟರೂ ಅದು ಇನ್ನೂ ಸಾಲದು, ಸಮ್ಮೇಳನದ ಸ್ಮರಣ ಸಂಚಿಕೆ ಮೊದಲಾದ ಪುಸ್ತಕ ಬಿಡುಗಡೆಯಿಂದ ಹಿಡಿದು ಕಲಾವಿದರನ್ನು ಗೌರವಿಸಲು ಸಿಕ್ಕ ಅವಕಾಶಗಳಲ್ಲಿ ಅನುವು ಮಾಡಿಕೊಟ್ಟ ಮೇಲೂ ಅವರ ವೇದಿಕೆಯ ಮೇಲೆ ಮೆರೆಯುವ ದಾಹ ಹಿಂಗದೇ ಹೋಯಿತು.
ಇನ್ನು ಅಲ್ಲಿಂದ ಇಲ್ಲಿಗೆ ಕರೆತಂದ ಕಲಾವಿದರುಗಳನ್ನು ಇವರುಗಳು ದುಡಿಸಿಕೊಂಡ ಪರಿಯೆಂತು? ನಮ್ಮಲ್ಲಿರುವ ಇ-ಮೇಲ್, ಫ್ಯಾಕ್ಸ್ ಮೊದಲಾದ ದಾಖಲೆಗಳ ಆಧಾರದ ಮೇಲೆ ಹೇಳುವುದಾದರೆ, ಕೆಲವು ಮುಖ್ಯ ಕಲಾವಿದರನ್ನು ಬಿಟ್ಟು ಉಳಿದವರಿಗೆ ಕೇವಲ ಎರಡು ಅಥವಾ ಮೂರು ನಿಮಿಷದ ಕಾಲಾವಕಾಶವನ್ನು ಕೇಳಿಕೊಳ್ಳಲಾಗಿತ್ತು.
ಆದರೆ ನಮ್ಮ ಕಾರ್ಯಕ್ರಮದ ಪಟ್ಟಿಯ ಪ್ರಕಾರ ನಾವು ಕರ್ನಾಟಕದ ಪ್ರತಿಯೊಬ್ಬ ಕಲಾವಿದರಿಗೂಕನಿಷ್ಟ  30 ನಿಮಿಷಗಳ ಅವಕಾಶವನ್ನು ಮಾಡಿಕೊಟ್ಟಿದ್ದೇವೆ. ಇವರು ಕರೆದುಕೊಂಡು ಬಂದ ಕೆಲವರು ಯಾವುದೇ ಕಾರ್ಯಕ್ರಮಕ್ಕೂ ತಯಾರಿ ನಡೆಸಿದ್ದಂತೆ ನಮಗೆ ಕಂಡು ಬರದೇ ಕೊನೇ ಘಳಿಗೆಯಲ್ಲಿ ಸಿಕ್ಕ ಕಲಾವಿದರ ಪಟ್ಟಿಯಿಂದಾಗಿ ಪ್ರತಿಯೊಬ್ಬರಿಗೂ ಮುಖ್ಯ ವೇದಿಕೆಯಲ್ಲಿ ಕಾರ್ಯಕ್ರಮದ ಅವಕಾಶವನ್ನು ಮಾಡಲಾಗದ ಅನಿವಾರ್ಯತೆ ಇತ್ತು.
ಅಮೇರಿಕದ ವಿವಿಧೆಡೆಯಿಂದ ಹಾಗೂ ವಿಶ್ವದೆಲ್ಲೆಡೆಯಿಂದ ಬಂದ ಕಲಾವಿದರ ಜೊತೆಗೆ ಕರ್ನಾಟಕದ ಕಲಾವಿದರನ್ನೂ ಬ್ಯಾಲೆನ್ಸ್ ಮಾಡುವುದು ನಮ್ಮ ಗುರಿಯಾಗಿತ್ತು. ನಾಟ್ಯ, ನಟನೆ, ನಾಟಕ, ಸಂಗೀತ, ಹಾಸ್ಯ, ಹಿರಿಯರ ಕಾರ್ಯಕ್ರಮಗಳು, ಕಿರಿಯರ ಕಾರ್ಯಕ್ರಮಗಳು ಮೊದಲಾದವುಗಳನ್ನು ನಾಲ್ಕಾರು ವೇದಿಕೆಗಳಲ್ಲಿ ಅಚ್ಚುಕಟ್ಟಾಗಿ ನೆರವೇರಿಸಿ ಎಲ್ಲರಿಗೂ ಸರಿಸಮಾನವಾದ ಅವಕಾಶವನ್ನು ಕಲ್ಪಿಸುವುದು ನಮ್ಮ ಆಶಯವಾಗಿದ್ದರೆ ತಾವು ಕರೆದುಕೊಂಡು ಬಂದ ಕೆಲವು ಬಿ-ಗ್ರೇಡ್ ಕಲಾವಿದರಿಗೆ, “ತಮ್ಮವರಿಗೆ” ಮೊದಲ ಆದ್ಯತೆಯನ್ನು ಕೊಡಬೇಕು ಎನ್ನುವ ಪಟ್ಟು ಈ ಅಧಿಕಾರಿಗಳದಾಗಿತ್ತು.
ಜೊತೆಗೆ ಕರ್ನಾಟಕದಿಂದ ಬಂದ ಕಲಾವಿದರಿಗೆ ಈ ಸಾರಿ ಆರ್ಟಿಸ್ಟ್ ಕೋಆರ್ಡಿನೇಟರ್ ಅನ್ನು ಕರ್ನಾಟಕದ ಅಧಿಕಾರಿಗಳು ನೇಮಕ ಮಾಡದಿದ್ದುದು ಅವರ ಮಿತಿಗೆ ಹಿಡಿದ ಕನ್ನಡಿಯಾಗುತ್ತದೆ, ವಾಡಿಕೆಯಂತೆ ಅವರು ಕೋಆರ್ಡಿನೇಟರುಗಳನ್ನು ನೇಮಿಸಿದ್ದರೆ ಕಲಾವಿದರು  ಕಷ್ಟ  ಪಡುವುದು ತಪ್ಪುತ್ತಿತ್ತೇನೋ.
ಅಲ್ಲದೇ, ಒಂದು ವಿಮಾನ ನಿಲ್ದಾಣದಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡಿದಲ್ಲಿ ಬ್ಯಾಗೇಜುಗಳಲ್ಲಿ ಗೊಂದಲವಾಗುವುದು ಸಹಜ ಹಾಗೂ ನಿರೀಕ್ಷಿತ, ’ತಮ್ಮ ಸಾಮಾನು ಸರಂಜಾಮುಗಳು ಸರಿಯಾದ ಸಮಯಕ್ಕೆ ಬರಲಿಲ್ಲ…’ ಎನ್ನುವ ಗೋಳನ್ನೂ ಅಕ್ಕನ ಮೇಲೇ ಎತ್ತಿ ಹಾಕುವ ಇವರ ತಿಳುವಳಿಕೆಯ ಮಿತಿ ಎಂಥವರಿಗೂ ಅರ್ಥವಾದೀತು.
ಇನ್ನು ಹಣಕಾಸಿನ ವಿಚಾರಕ್ಕೆ ಬರುವುದಾದರೆ – ಸರ್ಕಾರದಿಂದ ಹತ್ತಿರ ಹತ್ತಿರ ಒಂದು ಕೋಟಿ ರೂಪಾಯಿಯ? ಅನುದಾನವನ್ನು ನೀಡಲಾಗಿದೆ ಎಂದು ತೋರಿಸಲಾಗಿದೆ. ಈ ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರದ ಉಳಿದ ಇಲಾಖೆಗಳಿಂದ ಬೇರೆ ಧನ ಸಹಾಯ ಸಿಕ್ಕಿರುವುದು ನಿಜ, ಆದರೆ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಅಕ್ಕ ಸಮೇಳನಕ್ಕೆ ದೊರೆತದ್ದು ಕೇವಲ ನಲವತ್ತೈದು ಲಕ್ಷ ರುಪಾಯಿಗಳು ಮಾತ್ರ. ಅಕ್ಕ ಸಮ್ಮೇಳನದ ಪರವಾಗಿ ಉಳಿದೆಲ್ಲ ವ್ಯವಸ್ಥೆಯನ್ನು ಮಾಡಿರುವುದರಿಂದ ಇವರುಗಳು ಕಲಾವಿದರನ್ನು ಅಲ್ಲಿಂದ ಇಲ್ಲಿಗೆ ಕರೆದುಕೊಂಡು ಬರುವುದಕ್ಕೆ ಇನ್ನುಳಿದ ಐವತ್ತೈದು ಲಕ್ಷ ರೂಪಾಯಿಗಳು ಖರ್ಚಾಗಿವೆಯೇ ಎನ್ನುವುದು ಒಳ್ಳೆಯ ಪ್ರಶ್ನೆ.
ಕರ್ನಾಟಕದ ಸರ್ಕಾರದ ಹಣವನ್ನು ತಾವು ಮುಖ್ಯ ವೇದಿಕೆಯ ಮೇಲೆ ಮಾತನಾಡುವವರೆಗೂ ಯಾವ ಕಾರಣಕ್ಕೂ ಡಿಪಾಸಿಟ್ ಮಾಡಬಾರದು ಎಂದು ತಾಕೀತು ಮಾಡಿ ಉದ್ಧಟತನವನ್ನು ಪ್ರದರ್ಶಿಸಿದ ಕೀರ್ತಿ ಮತ್ತೊಬ್ಬ ಅಧಿಕಾರಿಗೆ ಸಲ್ಲುತ್ತದೆ, ಹಾಗೂ ಅವರ ಸಣ್ಣ ಗುಣವನ್ನು ತೋರಿಸುತ್ತದೆ. ವಿಶ್ವದಾದ್ಯಂತ ಕನ್ನಡ ಪರ ಕೆಲಸ ಮಾಡುವ ಯಾವುದೇ ಸಂಘಟನೆಗೂ ಕರ್ನಾಟಕ ಸರ್ಕಾರ ಗುರುತಿಸಿ ನೀಡುವ ಅನುದಾನವನ್ನು ಇವರುಗಳು ತಮ್ಮ ವೈಯಕ್ತಿಕ ಹಣವನ್ನು ಕೊಡುತ್ತಿದ್ದಂತೆ ಕಂಡುಬಂದಿದ್ದು ನಮ್ಮ ಅನುಭವ.
ಈ ಸಮ್ಮೇಳನದ ಅಂಗವಾಗಿ ಮೊಟ್ಟ ಮೊದಲನೇ ಬಾರಿಗೆ ರಕ್ತದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಲು ನಮ್ರವಾಗಿ ಮಾಡಿಕೊಂಡ ವಿನಂತಿಯನ್ನು ಮನ್ನಿಸದ ಕೀರ್ತಿಯೂ ಈ ಅಧಿಕಾರಿಗಳಿಗೆ ಸಲ್ಲುತ್ತದೆ.
ವಿಶ್ವದ ಸಹಸ್ರಾರು ಜನ ಕನ್ನಡಿಗರನ್ನು ಒಂದು ಸಮ್ಮೇಳನದ ಅಂಗವಾಗಿ ವಾರದ ಎರಡು-ಮೂರು ದಿನಗಳ ಕಾಲ ಒಂದೇ ಸೂರಿನಡಿ ಆಯೋಜಿಸಿ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡುವ ಪ್ರಯತ್ನಗಳಲ್ಲಿ ಲೋಪ-ದೋ?ಗಳು
ಕಂಡುಬರುವುದು ಸಹಜ. ಅಮೇರಿಕದಲ್ಲಿ ೧೯೯೮ ರಿಂದ ಇಲ್ಲಿಯವರೆಗೆ ಕಳೆದ ಹನ್ನೆರಡು ವರ್ಷ ಗಳ ಅನುಭವವಿರುವ ಅಕ್ಕ ಸಂಸ್ಥೆಯಾಗಲೀ ಅಥವಾ ಅನವರತ ದುಡಿಯುವ ಕಾರ್ಯಕರ್ತರಿಗಾಗಲೀ ತಮ್ಮ ಅತಿಥಿಗಳ ಯೋಗಕ್ಷೇಮವನ್ನು ನೋಡಿಕೊಳ್ಳುವ ಮೂಲಭೂತ ವಿಚಾರವನ್ನು ಕೆಲವು ಧಾಸ್ಟ್ಯ ತುಂಬಿದ ಅಧಿಕಾರಿಗಳಿಂದ ನಾವು ಕಲಿಯಬೇಕಾಗಿಲ್ಲ.
ಐ.ಎ.ಎಸ್. ಮೊದಲಾದವುಗಳನ್ನು ಮಾಡಿಕೊಂಡ ಸರ್ಕಾರಿ ಸೇವಕರಾಗಿರುವ ಇವರುಗಳು ವೃತ್ತಪತ್ರಿಕೆಗಳಲ್ಲಿ ನೂರಕ್ಕೆ ನೂರು ನೆಗೆಟಿವ್ ಆಗಿ ಬರೆದ ಲೇಖನಗಳೇ ಇವರ ವ್ಯಕ್ತಿತ್ವಕ್ಕೆ ಹಿಡಿಯುವ ಕನ್ನಡಿ. ಸಮ್ಮೇಳನದ ಅಂಗವಾಗಿ ಎರಡು ಸುಂದರವಾದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರೂ, ಮುಗ್ಧ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸಾವಿರಾರು ಜನರು ಸಂತೋಷ ಪಟ್ಟಿದ್ದರೂ, ನಮ್ಮ ಪರಂಪರೆ ಸಂಪ್ರದಾಯಗಳನ್ನು ಕಂಡು ಸಂಭ್ರಮಿಸಿದ್ದರೂ ಅವುಗಳೆಲ್ಲ ಇವರ ಕಾಮಾಲೆ ಕಣ್ಣಿಗೆ ಕಾಣದೇ ಹೋದವೆ?.
ಕರ್ನಾಟಕ ಸರ್ಕಾರದ ಅಧಿಕಾರಿಗಳಾಗಿ ಬರೆದ ಇವರ ವರದಿಯನ್ನಾಗಲೀ ಮತ್ತೊಂದನ್ನಾಗಲೀ ಇವರ ಹಿರಿಯರು ಅಥವಾ ಮತ್ತೊಬ್ಬರು ನೋಡಿ ಅನುಮತಿ ನೀಡಿದ್ದಾರೆಯೇ ಅಥವಾ ಇವರೇ ಈ ಲೇಖನವನ್ನು ಬರೆದರೋ ಅಥವಾ ಅಕ್ಕನ ಹೆಸರಿಗೆ ಮಸಿಬಳಿಯುವ ಪ್ರಯತ್ನವಾಗಿ ಬೇರೆ ಯಾರದ್ದೋ ಕಿಡಿಗೇಡಿಗಳ ಕೈವಾಡವಿದೆಯೋ ಯಾರು ಬಲ್ಲರು?
ಇವರುಗಳು ನಿಜವಾಗಿಯೂ ಅನಿವಾಸಿಗಳ ಕಷ್ಟ ವನ್ನು ಬಲ್ಲವರಾಗಿದ್ದರೆ, ಸ್ವಲ್ಪವಾದರೂ ಕನ್ನಡತನ, ನಾಡು-ನುಡಿಯ ಬಗ್ಗೆ ಕಳಕಳಿ ಉಳ್ಳವರಾಗಿದ್ದರೆ ಕಾರ್ಯಕ್ರಮಗಳಲ್ಲಿ ನಡೆಯುವ ಲೋಪ-ದೋಷ ಗಳನ್ನು ಸರಿಪಡಿಸುವತ್ತ ಶ್ರಮಿಸಬೇಕಾಗಿತ್ತು. ತಮ್ಮ ವೈಯಕ್ತಿಕ ವರ್ಚಸ್ಸಿಗೆ ಸದವಕಾಶ ಸಿಗಲಿಲ್ಲ ಎನ್ನುವ ಸ್ವಾರ್ಥವನ್ನು ಬಿಟ್ಟು ಸರ್ಕಾರಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಿತ್ತು.
ಕೇವಲ ಈ ಅಧಿಕಾರಿಗಳು ಮಾತ್ರ ಕೊಂಕು ನುಡಿದರು ಎನ್ನುವುದನ್ನು ಬಿಟ್ಟರೆ, ಈ ಸಮ್ಮೇಳನದಲ್ಲಿ ಭಾಗವಹಿಸಿದ ಉಳಿದ ಮಂತ್ರಿಗಳು, ಮಹೋದಯರು, ಎಮ್.ಎಲ್.ಎ.ಗಳೆಲ್ಲ ನಮ್ಮನ್ನು ಈ ಸಂದರ್ಭದಲ್ಲಿ ಬೆನ್ನು ತಟ್ಟಲು ಹೇಗೆ ಸಾಧ್ಯ? ರೇಣುಕಾಚಾರ್ಯ, ಶಂಕರಮೂರ್ತಿ, ಜಗದೀಶ ಶೆಟ್ಟರ್, ಶಿವನಗೌಡ ನಾಯಕ್, ರೇ? ಮಂಡಳಿ ಅಧ್ಯಕ್ಷರು, ವಸ್ತು ಪ್ರದರ್ಶನದ ಪ್ರಾಧಿಕಾರದವರು, ಮೊದಲಾದವರೆಲ್ಲ ಇಂದಿಗೂ ನಮಗೆ ಪ್ರಶಂಸೆಯ ಸುರಿಮಳೆಯನ್ನು ಕೊಡುತ್ತಿರುವಾಗ ಕೆಲವೇ ಕೆಲವರ ಅಪವಾದ ಯಾವುದೇ ಸತ್ವವಿಲ್ಲದ್ದು ಎನ್ನದೇ ಬೇರೆ ವಿಧಿಯಿಲ್ಲ.
ಈ ಸಮ್ಮೇಳನದ ಮುಖ್ಯಾಂಶಗಳು ಹಾಗೂ ವಿಶೇಷ ತೆಗಳಿಗಾಗಿ ಈ ಕೆಳಗಿನ ಪಟ್ಟಿಯನ್ನು ನೋಡಿ:
– ಅಕ್ಕ ಕಾರ್ಯಕ್ರಮಗಳೆಲ್ಲ ತಮ್ಮ ವ್ಯಸ್ತ ಜೀವನದಲ್ಲಿ ಈಗಾಗಲೇ ಕಸ್ಟ ಪಡುತ್ತಿರುವ ಸ್ವಯಂ ಕಾರ್ಯಕರ್ತರು ನಡೆಸಿಕೊಡುವ ಸಮಾವೇಶ, ಯಾವ ಕಾರ್ಯಕರ್ತರೂ ಹಣಕ್ಕೋಸ್ಕರ ಇದರಲ್ಲಿ ಭಾಗವಹಿಸದೇ ಎಲ್ಲರಂತೆಯೇ ತಾವೂ ಹಣ ಖರ್ಚು ಮಾಡಿಕೊಂಡು ಹಲವಾರು ತಿಂಗಳುಗಳಿಂದ ಶ್ರಮಿಸಿದ ಅಂಗವಾಗಿ ಈ ಕಾರ್ಯಕ್ರಮಗಳು ನಡೆದುಕೊಂಡು ಬರುವ ಪರಂಪರೆ ಹುಟ್ಟಿ, ಬೆಳೆದು ಬಂದಿದೆ.
– ಈ ವ? ಸಮ್ಮೇಳನ ಆಯೋಜಿಸಿದ ನ್ಯೂ ಜೆರ್ಸಿಯ ಬೃಂದಾವನ ಕನ್ನಡ ಸಂಘ ಇತ್ತೀಚಿಗೆ  ತನ್ನ ಐದನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ೩೭ ಸಮಿತಿಗಳಲ್ಲಿ ಕೇವಲ ಮುನ್ನೂರು ಜನರು ವಾಲಂಟರಿಯಾಗಿ ಕೆಲಸ ಮಾಡಿ ಇಷ್ಟು  ದೊಡ್ಡ ಸಮ್ಮೇಳನವನ್ನು ಆಯೋಜಿಸಿರುವುದು ಹೆಚ್ಚಿನ ವಿಶೇಷ  ಹಾಗೂ ಹೆಮ್ಮೆಯ ವಿಷಯ.
– ಈ ವರ್ಷದ  ಸಮ್ಮೇಳನದ ಹಿನ್ನೆಲೆಯಲ್ಲಿ ಅತ್ಯಂತ ಕಸ್ಟ ದ ಆರ್ಥಿಕ ಪರಿಸ್ಥಿತಿ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ, ಇಂಥ ಸಂದರ್ಭದಲ್ಲೂ ಧೃತಿಗೆಡದೆ ತಮ್ಮ ಕೈಯಿಂದ ಹಣ ಹಾಕಿಕೊಂಡು ಕನ್ನಡ ಸೇವೆಯ ಹೆಸರಿನಲ್ಲಿ ಕಡಿಮೆ ಸಂಪನ್ಮೂಲಗಳನ್ನು ಬಳಸಿ ಹೆಚ್ಚಿನ ನಿರೀಕ್ಷೆಯನ್ನು ತಲುಪಿದ್ದು ಈ ಸಮ್ಮೇಳನದ ಮುಖ್ಯ ಅಂಶ.
– ವಿಶ್ವದೆಲ್ಲೆಡೆಯ ಕನ್ನಡಿಗರನ್ನು ಸಮಾನವಾಗಿ ಗೌರವಿಸುವುದು ಹಾಗೂ ಪ್ರತಿನಿಧಿಸುವುದು, ಜೊತೆಗೆ ಕಾರ್ಯಕ್ರಮಗಳಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳುವುದು ಈ ಸಮಾರಂಭದ ಮುಖ್ಯ ಉದ್ದೇಶಗಳಲ್ಲೊಂದು.
-ರಿಜಿಸ್ಟ್ರೇಶನ್ : ಅತ್ಯಂತ ಕಡಿಮೆ ಬೆಲೆಗೆ, ಅಂದರೆ ೧೨೫ ಡಾಲರುಗಳಿಗೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ನೋಂದಾವಣೆ ಮಾಡಿದ್ದರು. ಒಟ್ಟು ನಾಲ್ಕು ಸಾವಿರಕ್ಕೂ ಹೆಚ್ಚು ಜನ ನೋಂದಾವಣೆ ಮಾಡಿಕೊಂಡವರು.
– ಸಮ್ಮೇಳನದ ಅಂಗವಾಗಿ ಪ್ರಕಟಗೊಂಡ ಸುಂದರವಾದ ಐದು ಪುಸ್ತಕಗಳ ಬೆಲೆಯೇ ಸುಮಾರು ಐವತ್ತು ಡಾಲರುಗಳಿಗೂ ಹೆಚ್ಚು, ಪ್ರತಿಯೊಂದು ಕುಟುಂಬಕ್ಕೂ ತಲಾ ಐದು ಪುಸ್ತಕಗಳನ್ನು ವಿತರಿಸಲಾಗಿದೆ.
– ಅಹಾರ: ಒಂದೇ ಸೂರಿನಡಿಯಲ್ಲಿ ಸುಮಾರು ನಾಲ್ಕು ಸಾವಿರ ಜನಕ್ಕೂ ಹೆಚ್ಚು ಜನ ಕನ್ನಡಿಗರಿಗೆ ಸ್ಥಳದಲ್ಲೇ ಅಡುಗೆ ಮಾಡಿ ಬಡಿಸಿದ ಕೀರ್ತಿ ಈ ಸಮ್ಮೇಳನದ ಆಹಾರ ಸಮಿತಿಯವರಿಗೆ ಸೇರುತ್ತದೆ. ಒಂದೇ ಚಾವಡಿಯ ಅಡಿಯಲ್ಲಿ ಶುಕ್ರವಾರದಿಂದ ಭಾನುವಾರದ ವರೆಗೆ ಸುಮಾರು ೨೫ ಸಾವಿರಕ್ಕಿಂತಲೂ ಹೆಚ್ಚು ಊಟಗಳನ್ನು ಸರಬರಾಜು ಮಾಡಿ ಇತಿಹಾಸವನ್ನು ನಿರ್ಮಿಸಿದ ಗೌರವಕ್ಕೆ ಅಕ್ಕ ಪಾತ್ರವಾಗುತ್ತದೆ.
– ವಸತಿ: ಕೊನೇ ಘಳಿಗೆಯಲ್ಲಿ ಕಲಾವಿದರ ಪಟ್ಟಿ ಸಿಕ್ಕರೂ ಪ್ರತಿಯೊಬ್ಬರಿಗೂ ಅನುಕೂಲಕ್ಕೆ ತಕ್ಕ ಹಾಗೆ ವ್ಯವಸ್ಥೆ ಮಾಡಿಕೊಡಲಾಗಿದೆ. ಎಲ್ಲ ಕಡೆಯಿಂದ ಬಂದ ಅತಿಥಿಗಳಿಂದಾಗಿ, ಕೊನೆಯ ದಿನದಲ್ಲಿ ಹೆಚ್ಚಿದ ರಿಜಿಸ್ಟ್ರೇಶನ್ ನ್ನಿಂದಾಗಿ ಹತ್ತಿರದ ಹೊಟೇಲುಗಳಲ್ಲಿ ವಸತಿ ಸೌಲಭ್ಯಗಳನ್ನು ಆಯೋಜಿಸಲಾಗಿತ್ತು, ಸಾವಿರಾರು ಜನರಿಂದ ವಸತಿ ವ್ಯವಸ್ಥೆ ಕೆಲಮಟ್ಟಿಗೆ ಸಂಕಸ್ಟ ಕ್ಕೆ ಒಳಗೊಂಡಿದ್ದು ನಿಜ.
– ಕಾರ್ಯಕ್ರಮಗಳನ್ನು ಎರಡು ಮುಖ್ಯ ವೇದಿಕೆಗಳಲ್ಲಿ ಹರಡಿ ಕರ್ನಾಟಕದ ಕಲಾವಿದರಿಗೆ ಎಲ್ಲರಂತೆ ಸಮಾನ ಅವಕಾಶವನ್ನು ಕೊಡಲಾಗಿತ್ತು; ಗುಬ್ಬಿ ವೀರಣ್ಣ ವೇದಿಕೆ ಹಾಗೂ ರಾಣಿ ಚೆನ್ನಮ್ಮ ವೇದಿಕೆಗಳು ಈ ಎರಡು ಮುಖ್ಯ ವೇದಿಕೆಗಳು.
– ಕೇವಲ ಎರಡೇ ಎರಡು ದಿನಗಳಲ್ಲಿ ಸಂಪೂರ್ಣ ವೇದಿಕೆಯನ್ನು ಸಜ್ಜುಗೊಳಿಸಿ, ಅಲಂಕರಿಸಿದ ಕೀರ್ತಿ ದೆಕೊರೆಶನ್  ಸಮಿತಿಯವರಿಗೆ ಸೇರುತ್ತದೆ, ಗುರುವಾರದಿಂದ ಭಾನುವಾರದವರೆಗೆ ನಿರಂತರವಾಗಿ ದುಡಿದು ಅತಿಥಿಗಳನ್ನು ಆಧರಿಸಿದ ಕೀರ್ತಿ ರಿಸೆಪ್ಷನ್ ಸಮಿತಿ ಹಾಗೂ ರಿಜಿಸ್ತ್ರೇಶನ್ನು ಸಮಿತಿಯವರಿಗೆ ಸೇರುತ್ತದೆ. ಮೊಟ್ಟ ಮೊದಲನೇ ಭಾರಿಗೆ ಶುಕ್ರವಾರದ ಮೈಸೂರಿನ ದಸರೆಯನ್ನು ನೆನಪಿಗೆ ತರುವ ಆನೆ ಅಂಬಾರಿ ಹಾಗೂ ೨೫ ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ ಶನಿವಾರದ ಮೆರವಣಿಗೆಗಳು ಜನಪ್ರಿಯ ಕಾರ್ಯಕ್ರಮಗಳು.
– ಇಡೀ ದಿನ ಶುಕ್ರವಾರ, ಪ್ರತ್ಯೇಕ ವೇದಿಕೆಯಲ್ಲಿ ನಡೆದ ಬಿಸಿನೆಸ್ಸ್ ಫೋರಮ್ಮಿನ ಕಾರ್ಯಕ್ರಮಗಳು ಎಲ್ಲ ದೃಷ್ಟಿಯಿಂದ ಅತ್ಯುತ್ತಮವಾದವು ಹಾಗೂ ಕರ್ನಾಟಕದ ಹೂಡಿಕೆ, ಬೆಳವಣಿಗೆ ದೃಷ್ಟಿಯಿಂದ ಮಹತ್ತರವಾದವು.
– ಶನಿವಾರ, ಬೆಂಗಳೂರಿನಿಂದ ಮುಖ್ಯಮಂತ್ರಿಗಳು ಕೆಲವು ಗಣ್ಯರೊಡಗೂಡಿ ಹಾಗೂ ಅಮೇರಿಕದ ಮುಖ್ಯವೇದಿಕೆಯಲ್ಲಿ ಒಟ್ಟೊಟ್ಟಿಗೆ ನಡೆಸಿಕೊಟ್ಟ “ಯಾವ ಮೋಹನ ಮುರಳಿ ಕರೆಯಿತೋ” ಜಂಟಿ ವಿಡಿಯೋ ಕಾನ್‌ಫರೆನ್ಸ್ ಕಾರ್ಯಕ್ರಮ ಈ ಸಮ್ಮೇಳನದ ಮುಖ್ಯ ಆಕರ್ಷಣೆಗಳಲ್ಲೊಂದು.
– ವರ್ಣ ರಂಜಿತ ಮುಖ್ಯ ಸ್ಮರಣ ಸಂಚಿಕೆ ’ಸಿಂಚನ’ದ ಜೊತೆಗೆ, ಮಕ್ಕಳಿಗೋಸ್ಕರ ಹಿರಿಯರು ಬರೆದ ಲೇಖನಗಳ ಹಾಗೂ ಚಿತ್ರಗಳ ವರ್ಣ ರಂಜಿತ ಪುಸ್ತಕ ’ಗುಬ್ಬಿಗೂಡು’, ಹಾಗೂ ವೈಚಾರಿಕ ಪ್ರಬಂಧ ಸಂಕಲನ ’ಕನ್ನಡ ಪ್ರಜ್ಞೆ’ ಜೊತೆಗೆ ಕಥಾ ಸ್ಪರ್ಧೆಯ ಆಯ್ದ ಕಥೆಗಳನ್ನೊಳಗೊಂಡ ಸಂಕಲನ ’ದೀಪ ತೋರಿದೆಡೆಗೆ’ – ಎಲ್ಲವೂ ಸೇರಿ ಸುಮಾರು ೧೧೦೦ ಪುಟಗಳಿಗೂ ಹೆಚ್ಚನ್ನು ಸಮ್ಮೇಳನಕ್ಕೆ ಭಾಗವಹಿಸಿದ ಪ್ರತಿಯೊಂದು ಕುಟುಂಬಕ್ಕೂ ಮುಕ್ತವಾಗಿ ಹಂಚಲಾಗಿದೆ.
– ಸ್ಮರಣ ಸಂಚಿಕೆ ಸಮಿತಿಯವತಿಯಿಂದಲೇ ಕರ್ನಾಟಕದ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆಯೊಂದನ್ನು ಆಯೋಜಿಸಿ ಸುಮಾರು ೪೫೦ ಕ್ಕೂ ಹೆಚ್ಚು ಪ್ರಬಂಧಗಳನ್ನು ಕ್ರೋಢೀಕರಿಸಿ ಮೌಲ್ಯಮಾಪನ ಮಾಡಿಸಿ ವಿಜೇತರನ್ನು ಗುರುತಿಸಲಾಗಿದೆ. ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದವರು ಕರ್ನಾಟಕದಾದ್ಯಂತ ಇರುವ ವಿದ್ಯಾರ್ಥಿಗಳು, ಇವರಲ್ಲಿ ಶೇಕಡಾ ಎಪ್ಪತ್ತು ಜನ ಬೆಂಗಳೂರೇತರರು.
– ಈ ಸಮ್ಮೇಳನದಲ್ಲಿ ಅಕ್ಷಯ ಪಾತ್ರೆ ಕ್ಯಾಂಪೇನಿನಡಿಯಲ್ಲಿ ೨೦ ಸಾವಿರ ಡಾಲರುಗಳನ್ನು ಸಂಗ್ರಹಿಸಲಾಗಿದೆ, ಜೊತೆಗೆ ಅಕ್ಷಯಪಾತ್ರೆ ಚಾರಿಟಿಯ ಬಗ್ಗೆ ಎಲ್ಲರಲ್ಲೂ ಮನವರಿಕೆ ಮಾಡಿಕೊಡಲಾಗಿದೆ.
ತಮಗೆ ಅನೇಕ ಕ?ಗಳಿದ್ದರೂ ಅನಿವಾಸಿಗಳಾಗಿ ಕರ್ಮ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಪರ ಆಲೋಚನೆಗಳಿಗೆ ಸಾಧ್ಯವಾದ? ಬೆಂಬಲ ಕೊಡುತ್ತಾ ವಿಶ್ವ ಮಾನವ ಸಂದೇಶವನ್ನು ಅಕ್ಷರಶಃ ಮೈಗೂಡಿಸಿಕೊಂಡ ಕನ್ನಡಿಗರ ಸಂಘಗಳ ಒಂದು ಹಿರಿಯ ಧ್ವನಿ – ಅಕ್ಕ ಸಮ್ಮೇಳನ. ಕರ್ನಾಟಕದಿಂದ ಬಂದ ಅಧಿಕಾರಿಗಳಾಗಲೀ, ಬೇರೆ ಯಾರೇ ಆಗಲಿ ಇನ್ನಾದರೂ ಈ ರೀತಿಯ ಉದ್ಧಟತನದ ಹೇಳಿಕೆಗಳನ್ನು ಕೊಡುವ ಮೊದಲು ಚೆನ್ನಾಗಿ ಯೋಚಿಸುವುದು ಒಳ್ಳೆಯದು.
ನಮ್ಮ ಸಮ್ಮೇಳನ ನಮಗೆ ಖುಷಿ ತಂದಿದೆ, ಈ ಸಂತೋಷ ದಲ್ಲಿ ಭಾಗವಹಿಸಿದ ಎಲ್ಲರಿಗೂ ನಮ್ಮ ಅನಂತಾನಂತ ವಂದನೆಗಳು, ಎಲ್ಲಕ್ಕಿಂತ ಮುಖ್ಯವಾಗಿ ಸ್ವ ಇಚ್ಛೆಯಿಂದ ಈ ಸಂಭ್ರಮದಲ್ಲಿ ಅಹರ್ನಿಶೆಯೂ ಕಾಯಕದಲ್ಲಿ ತೊಡಗಿದ ಸ್ವಯಂ ಸೇವಕರಿಗೆ ಈ ಯಶಸ್ವಿ ಸಮ್ಮೇಳನವನ್ನು ನಡೆಸಿಕೊಟ್ಟದ್ದಕ್ಕಾಗಿ ನಮ್ಮ ಹೃದಯಪೂರ್ವಕ ವಂದನೆಗಳು, ಅಭಿನಂದನೆಗಳು.

‍ಲೇಖಕರು avadhi

September 17, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

9 ಪ್ರತಿಕ್ರಿಯೆಗಳು

 1. D P SATISH, SENIOR EDITOR CNN-IBN

  I fully agree with AKKA’s arguement. Bureaucrats are the biggest jokers on the earth. Instead of tolerating their tantrums, AKKA should have kicked them out.
  Who is this Jayaramaraje Urs? Is he the king of Mysore? Government of Karnataka should sack him immediately.
  I had received at least 10-15 calls from ‘ fake artists ‘ from Karnataka requesting me to help them to get US Visa after the US Consul in Madras rejected their Visa application.
  I had bluntly told them that I would not help jokers like them and AKKA conference did not need their presence.
  I am now happy that I did not send a few more jokers to AKKA.
  My Best
  D P Satish
  Senior Editor CNN-IBN
  New Delhi

  ಪ್ರತಿಕ್ರಿಯೆ
 2. srinivasdeshpande

  Dear akka sammelana kartare,
  Omme Karnnatakada Mudabidarege bandu nodi, namma Dr. M.Mohan Alva hege ekangiyaagi, swa prathiste illadeye,yaara prasamshe bayasade yaara hangigu olagaagade, acchu kattagi matthu athyanntha samaya paalane haagu samyama dinda “Alvas Nudisiri” nadesuttare yendu. Akkadavarella omme bandu nodi. Nijavaada kannada seve endare yenu yendu arthavaadeethu. “Dikhaava hai waste trust only taste” -Srinivas Deshpande

  ಪ್ರತಿಕ್ರಿಯೆ
 3. aitappa

  VERY GOOD.AKKA SAMMELANA MADIDDAKKE SARTHAKAVAGIDE.KALAVIDARU,SAHITIGALU,PATRAKARTARU ADHIKARIGALU ELLA SERI NIMAGE CENNAGI MANGALARATI MADIDDARE.KEVALA CITY ORIENTED AAGI NIVU KARESIKONDADAKKE HEEGE AGABEKU

  ಪ್ರತಿಕ್ರಿಯೆ
 4. ಆನಂದ

  ಭಾರತದಲ್ಲಿ ಲಾಬಿ ನೆಡೆಸಿದಂತೆ ಜಾತಿ, ಪ್ರಭಾವ, ಅಧಿಕಾರದ ಹೆಸರಲ್ಲಿ ಮೆರೆದಂತೆ ಅಲ್ಲಿಯೂ ಕೂಡ ಮಾಡಲು ಹೋದರೆ ಇದೇ ಗತಿ. ಅಕ್ಕ is right. ಅವರಿಗ್ಯಾಕಿರಬೇಕು ಇಂತವರ ಹಂಗು. ಇಲ್ಲಿಂದ ದಂಡು ಕಟ್ಟಿಕೊಂಡು ಪುಕ್ಸಟ್ಟೆ ದುಡ್ಡಿನಲ್ಲಿ ಅಮೆರಿಕಾ ನೋಡಲು ಹೋಗಿ ಇಡ್ಲಿ ವಡೆ ಸಿಗಲಿಲ್ಲ ಬ್ರೆಡ್ಡು ತಿನ್ನಬೇಕಾಯಿತು ಎಂದು ಹಲುಬುವವರಿಗೆ ಸಂತಾಪಗಳು. ಅಲ್ಲಿ ಇದ್ದು ಕನ್ನಡ ಸಮ್ಮೇಳನ ನೆಡೆಸುತ್ತಿರುವುದೇ ಹೆಮ್ಮೆಯ ವಿಷಯ.

  ಪ್ರತಿಕ್ರಿಯೆ
 5. Sagar

  ದೂರ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟಿಕೊಂಡು ಕೆಲವೊಂದು ನಿರ್ಧಾರಗಳನ್ನು ಅಕ್ಕ ಕೈಗೊಳ್ಳ ಬಹುದು,
  ೧) ಭಾರತದಿಂದ ಕಲಾವಿದರನ್ನು ಹಾಗೂ ಅಧಿಕಾರಿಗಳನ್ನು ಕರೆಸಿಕೊಳ್ಳುವುದನ್ನು ನಿಲ್ಲಿಸುವುದು, ಆ ಮೂಲಕ ಅಮೆರಿಕಾದಲ್ಲೀ ಹುಟ್ಟಿ ಬೆಳೆದ ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡುವುದು. ಇದರಿಂದ, ಸ್ಥಳೀಯರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ, ಕನ್ನಡ ಕಲಿಕೆಗೆ ಒಂದು ಪ್ರಬಲ ವೇದಿಕೆ ಸಿಗುವುದು ಮಾತ್ರವಲ್ಲ, ಭಾರತದಿಂದ ಕರೆಸಿಕೊಂಡ ಕಲಾವಿದರ, ಅಧಿಕಾರಿಗಳ ಕಿರಿ ಕಿರಿ ಹಾಗೂ ದೂರು ತಪ್ಪುತ್ತದೆ.
  ಮಾತ್ರವಲ್ಲ ಇಲ್ಲಿ ಇನ್ನೊಂದು ಒಳನೋಟವಿದೆ. ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ, ಹೊರದೇಶದಲ್ಲಿ ಬೆಳೆಸುವ ಕನ್ನಡ ಕಾರ್ಯಕ್ರಮವನ್ನು ಮೂಲ ನಾಡಿನೊಂದಿಗೆ ಒಂದು ಮಟ್ಟದಲ್ಲಿ ಪ್ರತ್ಯೆಕಿಸಿದರೆ, ಒಂದು ವಿಭಿನ್ನ, ಹೊಸ ಹಾಗೂ ಬಹುಮುಖ್ಯವಾಗಿ ಬದುಕಿಗೆ ಹತ್ತಿರವಾಗಿರುವ, ಅಮೆರಿಕ ಹಾಗೂ ಕನ್ನಡ ನಾಡಿನ ಸಮನ್ವಯ ಗುಣಗಳ (a coherent and fortunate combination of various factors and qualities) ಒಂದು ಹೊಸ ಸಂಸ್ಕೃತಿಯನ್ನು ಅಮೆರಿಕನ್ನಡಿಗರು ಹುಟ್ಟು ಹಾಕುವುದು ಒಳ್ಳೆಯದು, ಮಾತ್ರವಲ್ಲ, ಅದು ಇತರೆ ದೇಶಗಳ ಕನ್ನಡಿಗರಿಗೂ ಮಾದರಿಯಾಗಲಿದ, ಅಲ್ಲದೆ, ಸಂಸ್ಕೃತಿಗಳ ವೈರುಧ್ಯದಿಂದ ಉದ್ಭವಿಸುವ ಸಮಸ್ಯೆ ಹಾಗೂ ಸಮನ್ವಯದ ಕೊರತೆಯನ್ನು ನೀಗಿಸುವಲ್ಲಿ ಬಹುಮುಖ್ಯ ಕುಶಲ-ಕ್ರಮವಾಗಲಿದೆ. ಈ ಕುರಿತಾಗಿ ಚರ್ಚಿಸುವುದು ಮುಖ್ಯ.
  ೨) ಮೂಲತಹ ಅಮೇರಿಕ ಹಾಗೂ ಭಾರತ ಎರಡು ವಿಭಿನ್ನ ಸಂಸ್ಕೃತಿಯ ಹಾಗೂ ಜೀವನ ಕ್ರಮದ ದೇಶಗಳು. ಭಾರತದಿಂದ ಬಂದಂತಹ ಕಲಾವಿದರು ಹಾಗೂ ಅಧಿಕಾರಿಗಳು ಭಾರತದ ಮಟ್ಟದಲ್ಲಿ ಅತಿಥಿ ಸತ್ಕಾರದ ನಿರೀಕ್ಷಿಯಲ್ಲಿ ಇರುತ್ತಾರೆ. ಆದರೆ, ಅಮೆರಿಕಾದಂತಹ ಮೂಲತಹ ವಿಭಿನ್ನ ಜೀವನ ಕ್ರಮ ಇರುವ ದೇಶದಲ್ಲಿ ಅದು ಕಷ್ಟ ಸಾದ್ಯ. ಆದ್ದರಿಂದ, ಪರಸ್ಪರ ದೂರುಗಳು, ಹೊಂದಾಣಿಕೆಯಲ್ಲಿ ಕೊರತೆ ಸಾಮಾನ್ಯ.
  ೩) ಹಲವು ನಿರಾಧಾರ ಆರೋಪಗಳ ಮಧ್ಯದಲ್ಲಿ ಹುರುಳಿರುವಂತಹ ಹಣಕಾಸು ನಿರ್ವಹಣೆಯಲ್ಲಿನ ಕೌಶಲ್ಯತೆ ಹಾಗೂ ಪ್ರಾಮಾಣಿಕತೆಯ ಕೊರತೆ ಇಂದ ಉದ್ಭವಿಸುವ ಹಗರಣಗಳು ಮುಚ್ಚಿ ಹೋಗುತ್ತಿವೆ. ಅರ್ಥ ಶೌಚ ಇಲ್ಲದ ವ್ಯಕ್ತಿ, ಸಂಸ್ಥೆ, ರಾಜ್ಯ ಅಥವಾ ದೇಶ ಉದ್ದಾರವಾಗುವ ಭರವಸೆ ಇರುವುದಿಲ್ಲ. ಆದ್ದರಿಂದ, ಪ್ರಸ್ತುತ ನಡೆಯುತ್ತಿರುವ ಚರ್ವಿತ-ಚರ್ವಣ ಚರ್ಚೆಗಳಲ್ಲಿ ನಿಜವಾಗಿಯೂ ಇರುವ (?) ಸಮಸ್ಯೆ ಹಾಗೂ ಕೊರತೆಗಳು ಮುಚ್ಚಿ ಹೋಗುತ್ತಿವೆ. ಇದಾಗದಂತೆ ನೋಡಿಕೊಂಡು ಅಕ್ಕ, ಒಂದು ಚೊಕ್ಕವಾದ ಮಾದರಿಯಾಗಬಲ್ಲಳೆ?.

  ಪ್ರತಿಕ್ರಿಯೆ
 6. ಆಸು ಹೆಗ್ಡೆ

  ಅಕ್ಕಾ,
  ನನ್ನದೊಂದು ವಿನಂತಿ.
  ಮುಂದಿನ ಬಾರಿಯಿಂದ, ಈ ಭ್ರಷ್ಟ ರಾಜಕೀಯ ನಾಯಕರುಗಳು, ಸರಕಾರೀ ಅಧಿಕಾರಿಗಳು ಇವರನ್ನೆಲ್ಲಾ ಹೊರಗಿಟ್ಟು, ಕಲೆ ಸಾಹಿತ್ಯ ಇವುಗಳಿಗೆ ಸಂಬಂಧಿಸಿದ ಮಹನೀಯರನ್ನಷ್ಟೇ ಒಳಗೊಂಡ ಸಮಾವೇಶ ನಡೆಸಿ ನೋಡಿ.
  ನಿಮ್ಮ ಕಾರ್ಯಕ್ರಮ ಆಗುತ್ತದೆ.
  ಶುಭವಾಗಲಿ.

  ಪ್ರತಿಕ್ರಿಯೆ
 7. byregowda m

  helo
  Ee samvaadadalli palgolluttiruva ellarige,
  modalu yogyarannu aike madikondu namma parampareynnu aradeshadalli parichayisi. Ee baari hogidda adeshtu jana nijavaagiyu kalavidaru? Ee prashnege kalavidarannu aike madidavaru uttarisalu saadhyavaguvude? Eeg samooha madhyamagalu namma mushtiyalle ive. avugalannu balasikondu karnataka sarkara koduva hanadind karyakrama aayojisi adannu sariyaagi chitrikarisi vebsite mulaka kaluhisidare athava DVD roopadalli kaluhisidare adanne nodi Ananda paduvaru allave. karnataka sarkarada adhikarigalo athava yaro select maadida aneka kalavidarigu avara kshetrakku yavude sambandhavillada vichara janajanitavaagide. Kadalache udyoga harasi hoda kannadigarella seri tamagaagi aayojisikonda karyakramakke hogi savalattu kodalilla endu halavattukolluva badalu kodabahudadashtu hanavannu kottu avaru anandisuvudannu noduva dodda manassu barali. Kilaadi kalavidara dandannu karedukondu hoguva paripata nillali. nijavaagiyu svaabhimaani kalavidaryaaroo hogalu bayasuvudilla.
  andare akka Aayojakaru madiddella sariembudu nanna uddeshavall. aparoopakkomme horadeshadallin kannadigaru kleyuva samaarambhavannu protsaahisona. namma kalavidaru hogabekaagilla. bekadare allin jana ishtabandavarannu karesikollali. sarkaarakkeke select maaduva marji.

  ಪ್ರತಿಕ್ರಿಯೆ
 8. ranganna k

  “ಅಕ್ಕಾ” ಸಮ್ಮೇಳನಕ್ಕೆ ಹೋದವರಿಗೆ
  “ನೀವು ಹೋದದ್ದು ನಿಮ್ಮ ಅಣ್ಣಾ ತಮ್ಮಂದಿರ ಮನೆಗಳಿಗೆ
  ಹೊರತು,
  ನಿಮ್ಮ ಅತ್ತೆ ಮಾವಂದಿರ ಮನೆಗಳಿಗೆ ಅಲ್ಲಾ!”
  “ಅಕ್ಕಾ”…………………………
  ಅವರಿವರ ಮಾತುಗಳಿಗೆ, ಬೇಸರಗೊಲ್ಲದಿರೆ ಅಕ್ಕಾ…………..
  ಕರ್ನಾಟಕದಲ್ಲಿ ೬ ಕೋಟಿ ಜನ ನಿನ್ನ ಅಕ್ಕ-ತಮ್ಮ, ಅಣ್ಣಾ-ತಂಗಿಯರಿದ್ದರೆ.
  “ಕನ್ನಡಕ್ಕೆ ಕೈ ಎತ್ತು
  ಅದು ಕಲ್ಪವೃಕ್ಷ’ವಾದೀತು,
  ಕನ್ನಡಕ್ಕೆ ದನಿ ಎತ್ತು
  ದನಿ ಪಾಂಚ್ಯಜನ್ಯವಾದೀತು.”
  ಸಪ್ತ ಸಾಗರದಾಚೆ ಮೊಳಗಲಿ ಕನ್ನಡ ಕಹಳೆ…………………….
  ಜೈ ಕರುನಾಡ ಭುವನೇಶ್ವರಿ…………………

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಆಸು ಹೆಗ್ಡೆCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: