ಅಕ್ಷತಾ ಜೊತೆಗೆ ‘ನಾವು ನಮ್ಮಲ್ಲಿ’

ನಾವು ನಮ್ಮಲ್ಲಿ ಕಾವ್ಯ ಮಾಲೆ

ಸಾಹಿತ್ಯ-ಸಂಸ್ಕೃತಿಯಲ್ಲಿ ಆಸಕ್ತಿ ಇದ್ದ ಯುವ ಮನಸ್ಸುಗಳು ಸೇರಿ ಕೊಟ್ಟೂರಿನಲ್ಲಿ ದಶಕದ ಹಿಂದೆ ಹುಟ್ಟು ಹಾಕಿದ್ದೇ ಬಯಲು ಸಾಹಿತ್ಯ ವೇದಿಕೆ. ಈ ವೇದಿಕೆ ಪ್ರತಿವರ್ಷ ಸಾಹಿತ್ಯಲೋಕಕ್ಕೆ ಕಣ್ಣು ತೆರೆಯುತ್ತಿದ್ದ ಯುವ ಮನಸ್ಸುಗಳನ್ನು ಕಲೆ ಹಾಕಿ ಅವರ ಸಂವೇದನೆ ಮತ್ತು ಮುಕ್ತ ಸಂವಾದಕ್ಕೆ ಅವಕಾಶ ಮಾಡಿಕೊಡಲು ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮ `ನಾವುನಮ್ಮಲ್ಲಿ’ . ಬಯಲು ಸಾಹಿತ್ಯ ವೇದಿಕೆ ಹುಟ್ಟುಹಾಕಿದವರು ನಾಲ್ಕಾರು ಜನರಾದರೆ, ನಾವು ನಮ್ಮಲ್ಲಿ ಕಾರ್ಯಕ್ರಮದ ಮೂಲಕ ಹೊರಹೊಮ್ಮಿದವರು ನೂರಾರು. ಸ್ನೇಹ ಮತ್ತು ಸಾಹಿತ್ಯದ ಬಗೆಗಿನ ಅದಮ್ಯ ಪ್ರೀತಿ ನಾವು ನಮ್ಮಲ್ಲಿ ಬಳಗವನ್ನು ಹಿಡಿದಿಟ್ಟಿದೆ ಮತ್ತು ವಿಸ್ತರಿಸುತ್ತಿದೆ.

ಚದುರಿ ಹೋದಲೆಲ್ಲ ಸಾಹಿತ್ಯದ ಕಂಪನ್ನು ಕೊಡೊಯ್ಯುವಲ್ಲಿ ಕ್ರಿಯಾಶೀಲವಾಗಿರುವ ನಾವು ನಮ್ಮಲ್ಲಿ ಬಳಗ ಕಾವ್ಯ ಮಾಲೆಯ ಪ್ರಕಾಶನಕ್ಕೆ ಅಹರ್ನಿಶಿಯ ಜೊತೆ ಕೈ ಜೋಡಿಸಿದೆ. ಇದೀಗ ಪ್ರಕಟಗೊಳ್ಳುತ್ತಿರುವ ಅರುಣ್ ಜೋಳದ ಕೂಡ್ಲಗಿಯ ‘ಅವ್ವನ ಅಂಗನವಾಡಿ’ ಸಂಕಲನ ಈ ಮಾಲಿಕೆಯ ಮೊದಲ ಕೊಡುಗೆ. ನಾವು ನಮ್ಮಲ್ಲಿ ಬಳಗದ ಗೆಳೆಯರಾದ ಉಷಾ ಮತ್ತು ನಿರಂಜನ ತಮ್ಮ ಕಂದ ತೇಜಸ್ವಿಯ ಹೆಸರಿನಲ್ಲಿ ಈ ಸಂಕಲನದ ಪೋಷಕತ್ವ ವಹಿಸಿಕೊಂಡಿದ್ದಾರೆ.

ಬಯಲು ಸಾಹಿತ್ಯ ವೇದಿಕೆಯ ನಿರ್ಮಾರ್ತೃಗಳಾದ ನಿರಂಜನ, ಸಿದ್ದು ದೇವರಮನಿ, ಪೀರ್ ಭಾಷಾ, ಚಿದಾನಂದ ಸಾಲಿ, ವಿಕ್ರಮ ವಿಸಾಜಿ, ಆನಂದ ಋಗ್ವೇದಿ, ಉಷಾರಾಣಿ ಹಡಗಲಿ, ಅಂಚೆ ಕೊಟ್ರೇಶ್ ಮತ್ತು ನಾವು ನಮ್ಮಲ್ಲಿ ಬಳಗದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ಎಲ್ಲ ಸ್ನೇಹಿತರಿಗೂ ಹಾಗೂ ಈ ಸಂಕಲನವನ್ನು ಪ್ರಕಾಶಿಸಲು ಅನುಮತಿ ಇತ್ತ ಅರುಣ್ ಜೋಳದ ಕೂಡ್ಲಗಿ, ಸಲಹೆ ನೀಡಿದ ಭಾರತೀದೇವಿಗೆ ದನ್ಯವಾದಗಳು.

ಅಕ್ಷತಾ

ಅಹರ್ನಿಶಿಯ ಪರವಾಗಿ

‍ಲೇಖಕರು avadhi

July 6, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This