ಕಡಿದಾಳು ಶಾಮಣ್ಣ ಅವರನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಎಷ್ಟು ಕಷ್ಟ ಅಂತ ಶಿವಮೊಗ್ಗದಿಂದ ಕೆ ಅಕ್ಷತಾ ಬರೆದಿದ್ದಾರೆ. ‘ಮಯೂರ’ದಲ್ಲಿ ಕಾಡ ತೊರೆಯ ಜಾಡು ಹೆಸರಿನಲ್ಲಿ ಶಾಮಣ್ಣನವರ ಆತ್ಮ ಕಥೆಯನ್ನು ಬರೆದವರು. ಕೆ ಅಕ್ಷತಾ ಬರೆದ ಪತ್ರ ಇಲ್ಲಿದೆ. ಅದರೊಂದಿಗೆ ‘ಅವಧಿ’ ಸಂಗ್ರಹದಲ್ಲಿರುವ ವಿಶೇಷ ಫೋಟೋಗಳನ್ನೂ ನಿಮ್ಮ ಮುಂದಿಡುತ್ತಿದ್ದೇವೆ–
ಶಾಮಣ್ಣ ಅವರ ಈ ಫೋಟೋ ನೋಡುತಿದ್ದಂತೆ ನಂಗೆ ನೆನಪಾದದ್ದು ಮೊನ್ನೆ ಮೊನ್ನೆ `ಆ ದಶಕ ‘ಪುಸ್ತಕದ ಮುಖಪುಟಕ್ಕೆ ಬಳಸಿಕೊಳ್ಳಲು ಅವರದೊಂದು ಫೋಟೋ ಗಾಗಿ ನಾನು ವಾರಗಟ್ಟಲೆ ಹುಡುಕಾಟ ನಡೆಸಿದರೂ ಕೊನೆಗೂ ಅವರ ಮನೆಯಲ್ಲಿ ನಂಗೆ ಅವರೊಬ್ಬರೇ ಇರುವ ಒಂದು ಫೋಟೋ ಕೂಡ ಸಿಕ್ಕಲಿಲ್ಲ ಎಂಬುದು . ಅವರ ಮನೆಯ ಒಂದು ಕೋಣೆಯ ತುಂಬಾ ಜಮಾನದ ವಿವಿದ ಮಾದರಿಯ ಕ್ಯಾಮರಾಗಳು ಮತ್ತು ಶಾಮಣ್ಣ ಕ್ಯಾಮರ ಹಿಡಿದ ದಿನದಿಂದ ಇಂದಿನ ವರೆಗೂ ತೆಗೆದ ಫೋಟೋಗಳು ಶ್ರೀದೇವಿಯವರ ಶ್ರಮದಿಂದ ನೀಟಾಗಿ ಜೋಡಿಸಿಟ್ಟಿರುವ ಸ್ತಿತಿಯಲ್ಲಿ ಕಾಣ ಸಿಗುತ್ತದೆ .
ಆ ಫೋಟೋಗಳ ಆಲ್ಬಮ್ ಅನ್ನು ಒಂದೊಂದಾಗಿ ಬಿಡಿಸಿ ನೋಡುತ್ತಾ ಹೋದರೆ ಅವೇ ಒಂದೊಂದು ಕಥೆ ಹೇಳುತ್ತವೆ. ರೈತಸಂಘ ದ ವಿವಿದ ಹೋರಾಟಗಳು , ನೀನಾಸಂ ಶಿಬಿರಗಳು , ಮಂತ್ರ ಮಾಂಗಲ್ಯ ಸರಳ ಮದುವೆಗಳು , ಕುವೆಂಪು, ತೇಜಸ್ವಿ, ನಂಜುಂಡಸ್ವಾಮಿ ತೀರಿಹೋದಾಗಿನ ನೋವಿನ ಗಳಿಗೆಗಳು, ನೆರೆ, ಬರ, ಹಕ್ಕಿ , ಹೂವು , ಕವಿ , ಹೋರಾಟಗಾರರು ಮತ್ತು ಜನಸಾಮಾನ್ಯರು ಎಲ್ಲರ ಭಾವಚಿತ್ರಗಳ ದೃಶ್ಯ ಕಾವ್ಯ ಗಳು ಅಲ್ಲಿ ನಮಗೆ ಲಬ್ಯವಿದೆ . ನಾನು ತಮಾಷೆ ಮಾಡೋದಿದೆ ಶಾಮಣ್ಣ ಅವ್ರೆ, ಒಂದು ವೇಳೆ ನಿಮ್ಮ ಕಣ್ಣಿಗೆ ಬೀಳದೆ ಇದ್ರೂ ನಿಮ್ಮ ಕ್ಯಾಮರದ ಕಣ್ಣಿಂದ ಮಾತ್ರ ತಪ್ಪಿಸಿಕೊಳ್ಳಲು ಸಾದ್ಯವೇ ಇಲ್ಲ .ಅಂತ .
ಆದರೆ ಅಷ್ಟೆಲ್ಲ ಫೋಟೋಗಳ ಮದ್ಯೆ ಶಾಮಣ್ಣ ಹುಡುಕಿದರೂ ಸಿಗುವುದಿಲ್ಲ . ಎಲ್ಲೋ ಅವರಿವರು ಒತ್ತಾಯ ಮಾಡಿ ಪಕ್ಕದಲ್ಲಿ ನಿಲ್ಲಿಸಿಕೊಂಡಾಗಿನ ಕೆಲವೊಂದು ಫೋಟೋ ಬಿಟ್ಟರೆ ಮತ್ತೆಲ್ಲೂ ಅವರು ಇಲ್ಲ. ನಿಮ್ಮದೊಂದು ಫೋಟೋ ಇಲ್ಲವಲ್ಲ ಶಾಮಣ್ಣ ಅವ್ರೆ ಎಂದು ನಾನು ಲೊಚಗುಟ್ಟಿದರೆ ಅವ್ರು ಅಯ್ಯೋ ಮಾರಾಯ್ರೆ ನಾನೇ ಫೋಟೋಗೆ ಫೋಸ್ ಕೊಡಕ್ಕೆ ಹೋಗಿದ್ರೆ ಇವೆಲ್ಲ ಫೋಟೋನೇ ಇರ್ತಿರಲಿಲ್ಲವಲ್ರಿ ಎನ್ನುವರು .
ಅಂತು ಕೊನೆಗೂ ಅವರ ಬಳಿ ಅವರದ್ದು ಒಂದು ಸಿಂಗಲ್ ಫೋಟೋ ಸಿಗದೇ ಹೋದಾಗ ( ಅವ್ರು ಈ ಬಗ್ಗೆ ಬಹಳ ನಿರುಮ್ಮಳವಾಗಿ ಇದ್ದರು. ಫೋಟೋ ಸಿಗದೇ ಹೋದ್ರೆ ಇವ್ರು ಮುಖಪುಟಕ್ಕೆ ಒಂದು ಹಕ್ಕಿಯದೋ , ಹಸಿರಿನದೋ ಚಿತ್ರ ಬಳಸಿಕೊಳುತಾರೆ ಅಂತ ) ಪತ್ರಿಕಾ ಛಾಯಾಗ್ರಾಹಕ ನಂದನ್ ನಮ್ಮ ನೆರವಿಗೆ ಬಂದು ತಮ್ಮ ಸಂಗ್ರಹದಲ್ಲಿರುವ ಶಾಮಣ್ಣ ಅವ್ರ ಭಾವಚಿತ್ರವನ್ನು ಒದಗಿಸಿದರು .
ಈಗ ನೋಡಿದ್ರೆ ‘ಅವಧಿ’ ಬಳಿಯಲ್ಲೂ ಶಾಮಣ್ಣ ಅವ್ರ ಒಳ್ಳೆಯ ಫೋಟೋ ಇದ್ಯಲ್ಲ . ಮುಂದೆ ಅಷ್ಟು ತಲೆಕೆಡಿಸಿಕೊಳ್ಳುವ ಪ್ರಮೇಯ ಇಲ್ಲ . ಆದರೆ ಈ ಫೋಟೋನಲ್ಲಿ ಶಾಮಣ್ಣ ಅವ್ರ ಹೆಗಲ ಮೇಲೆ ಹಸಿರು ಶಾಲು ಇದ್ಯಲ್ವ ? ಇದ್ದೆ ಇರ್ತದೆ . ಆದರೂ ಕೇಳಿದೆ
ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
Excellent collection.Well done
ಶಾಮಣ್ಣನವರ ಫೋಟೋಗಳು ಖುಷಿ ಕೊಟ್ಟವು. ಮೊನ್ನೆ ಅವರು ಬೆಂಗಳೂರಿಗೆ ಬಂದಿದ್ದಾಗ ಅವರು ಸ್ಟೇಜಿನ ಮೇಲೆ ಇದ್ದಾಗ ಹಲವಾರು ಫೋಟೋಗಳನ್ನು ತೆಗೆದಿದ್ದೆ. ಆದರೆ ಹತ್ತಿರದಿಂದ ತೆಗೆಯಲು ಅವರನ್ನು ಪರಿಚಯ ಮಾಡಿಕೊಂಡು ಪ್ರಯತ್ನಿಸಿದೆ. ಅವರೂ ಸಂಕೋಚದಿಂದಲೇ ಒಪ್ಪಿ ಕೊನೆಗೂ ಒಂದು ಪೋಸ್ ಕೊಟ್ಟರು. ಜೊತೆಗೆ ‘ಅಯ್ಯೋ ನಮ್ಮದೆಲ್ಲ ಯಾಕ್ ಬಿಡ್ರಿ’ ಎಂಬ ಮಾತು ಅವರ ದೊಡ್ಡಗುಣವನ್ನು ತೋರಿಸುತ್ತದೆ.
ಒಂದು ಕಡೆ ನಂಜುಂಡಸ್ವಾಮಿ, ಮತ್ತೊಂದೆಡೆ ತೇಜಸ್ವಿ ನೆನಪು ತರುವಂತಹ ಅವರ ಚಿತ್ರಗಳು. ಇವರೆಲ್ಲರೂ ಒಟ್ಟಿಗಿದ್ದರಿಂದಲೇ ಒಂದೇ ರೀತಿ ಇದ್ದಾರಾ?