ಮುತ್ತುಗ
-ಕೆ ಅಕ್ಷತಾ
ಮೆತ್ತನೆ ಕಳ್ಳಿ ಮುತ್ತ ಮತ್ತಲ್ಲಿ
ನತ್ತೇರಿಸಿ ನಕ್ಕವಳೇ ಮುತ್ತುಗ
–
ಹೆಸರಲ್ಲೇನಿದೆೆ ಎಂದು ನಿನ್ಯಾರು ಕೇಳುವರೇ?
ಹೆಸರಲ್ಲೇ ಎಲ್ಲ ಹೊತ್ತವಳೇ ಮುತ್ತುಗ
–
ಮುತ್ತಿಂದ ಚಿತ್ತಾಗಿ ಮುತ್ತಿಂದ ಮತ್ತೇರಿ
ಕೆಂಪು ಕೆಂಪಾದವಳೇ ಮುತ್ತುಗ
–
ಇಡಿ ಒಡಲು ಕೆಂಪಾಗಿ
ಕಂಪಿನ ಕಡಲಾಗಿ, ಮುಗಿಲಾಗಿ ನಿಂತವಳೇ ಮುತ್ತುಗ
–
ಸರಸಕ್ಕೆ ಸೆಳೆದರೂ ನಲ್ಲ ಓಗೊಡಲಿಲ್ಲ
ಕಾದು ಕೆಂಡವಾದವಳೇ ಮುತ್ತುಗ
–
ಅರಸಿಕನೆಂದು ಹಂಗಿಸಹೋದವಳ
ಕೆನ್ನೆ ಕೆಂಪೇರಿತೇಕೆ ಮುತ್ತುಗ
–
ಹಂಗಿಸಿ-ಭಂಗಿಸಿ ಪಡೆಯುವುದಾದರೂ ಏನು?
ವಿಷಾದದ ಸ್ಥಾಯಿಯಲ್ಲೂ ಜೀವಂತಿಕೆ ಚಿಮ್ಮುವ ಮುತ್ತುಗ
–
ಒಲುಮೆಯ ಹೂವೆಂದು ಎಷ್ಟು ಬಣ್ಣಿಸಿದರೇನು
ವಿರಹವೇನು ತಪ್ಪಲಿಲ್ಲ ಮುತ್ತುಗ
–
ಒಲುಮೆ-ವಿರಹ ಎರಡರಲ್ಲೂ
ಬಣ್ಣ ಕಳೆದುಕೊಳ್ಳದವಳೇ ಮುತ್ತುಗ
–
ವಿರಹ ಮುಗಿದ ಘಳಿಗೆಯಲ್ಲೇ ಉತ್ಸವದ ಆಶೆಯೂ
ವಿರಹೋತ್ಸವಕ್ಕೆ ಸಜ್ಜು ಮುತ್ತುಗ
–
ಒಬ್ಬಳೇ ಬರಲಿಲ್ಲ, ಒಬ್ಬಳೇ ನಿಲಲಿಲ್ಲ
ವಸಂತನ ಕರೆದವಳೇ ಮುತ್ತುಗ
ಮಾಗಿಯ ಮರೆಯದವಳು ಮುತ್ತುಗ.
ಅವನಿರದ ದಿನಗಳಲ್ಲಿ
ನಂದಿನಿ ಹೆದ್ದುರ್ಗ ಹಾಗೆ ಅಂದುಕೊಂಡಮೊದಲ ದಿನಅದು.ಮಾಮೂಲಿನಂತಿದ್ದೆ ಮೂರನೇ ದಿನಬರೀ ಹುಃಗುಟ್ಟೆಮನಸ್ಸೆಲ್ಲಿದೆ ಎಂದಆರನೇ...
वहोत अच्छे….
`muttu’gaaaa