ಅಣ್ಣಾ..
ಒಂದು ವರ್ಷದ ಹಿಂದೆ ಆಗಸ್ಟ್ ತಿಂಗಳಲ್ಲಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಆಚರಿಸುವ ದಿನದಂದು ಭಾರತದ ಪ್ರಸಕ್ತ ಆಡಳಿತ ವರ್ಗಗಳಿಗೆ ಕ್ವಿಟ್ ಇಂಡಿಯಾ ಸಂದೇಶವನ್ನು ರವಾನಿಸುವಂತಹ ಒಂದು ಬೃಹತ್ ಚಳುವಳಿ ರೂಪುಗೊಂಡಿತ್ತು. ಗಾಂಧೀವಾದಿ ಎಂದು ಕರೆಯಲ್ಪಡುವ ಅಣ್ಣಾ ಹಜಾರೆ ತಮ್ಮ ಗಾಂಧಿ ಮಾರ್ಗದಲ್ಲಿಯೇ ಒಂದು ಜನಪರ ಆಂದೋಲನವನ್ನು ರೂಪಿಸಿ, ಸತ್ಯಾಗ್ರಹದ ಅಸ್ತ್ರವನ್ನು ಆಳ್ವಿಕರ ಮೇಲೆ ಪ್ರಯೋಗಿಸುವ ಮೂಲಕ ದೇಶದ ಯುವ ಜನತೆಯನ್ನು ಒಂದುಗೂಡಿಸಿದ್ದರು. ತಮ್ಮ ಅಹಿಂಸಾತ್ಮಕ ಚಳುವಳಿಯ ಮೂಲಕ ದೇಶದ ಯುವಜನತೆಯನ್ನು ಆಕಷರ್ಿಸಿದ ಅಣ್ಣಾ ಆಳುವ ವರ್ಗಗಳಲ್ಲಿ ನಡುಕ ಹುಟ್ಟಿಸಿದ್ದೂ ಉಂಟು. ಟೀಂ ಅಣ್ಣಾ ಕೈಗೊಂಡ ಕಾರ್ಯಕ್ರಮಗಳ ಒತ್ತಡ ತಂತ್ರಕ್ಕೆ ಮಣಿದ ಕೇಂದ್ರ ಸಕರ್ಾರ ಲೋಕಪಾಲ್ ಮಸೂದೆಯನ್ನು ಸಿದ್ಧಪಡಿಸಿದ್ದೂ ಆಯಿತು. ಮಸೂದೆಯ ಮೂಲ ಸ್ವರೂಪ ಹೇಗೇ ಇದ್ದರೂ ನಾಲ್ಕು ದಶಕಗಳ ಕಾಲ ನೆನೆಗುದಿಯಲ್ಲಿದ್ದ ಒಂದು ಮಸೂದೆ ಪುನಃ ಚಾಲ್ತಿಗೆ ಬಂದಿದ್ದು ಅಣ್ಣಾ ಹಜಾರೆಯ ಶ್ರಮದಿಂದ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಆದರೆ ಅಣ್ಣಾ ತಂಡದ ನಡೆನುಡಿಗಳು ಪಾರದರ್ಶಕವಾಗಿದ್ದರೂ ಪ್ರಾಮಾಣಿಕವಾಗಿರಲಿಲ್ಲ. ತಮ್ಮ ರಾಜಕೀಯ ಪ್ರಾಬಲ್ಯದ ಮೂಲಕ ತಮ್ಮದೇ ಆದ ಔದ್ಯಮಿಕ ಲೋಕವನ್ನು ಸೃಷ್ಟಿಸಿಕೊಂಡು ಕಾಪರ್ೊರೇಟ್ ಆಧ್ಯಾತ್ಮಿಕತೆಯನ್ನು ಜನತೆಗೆ ಬೋಧಿಸುವ ಬಾಬಾರಾಮದೇವ್ ಅವರೊಡನೆ ಕೈ ಮಿಲಾಯಿಸಿ ಕೈ ಸುಟ್ಟುಕೊಂಡ ಟೀಂ ಅಣ್ಣಾ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಚಾರ ಕೈಗೊಂಡು ಪರೋಕ್ಷವಾಗಿ ಬಿಜೆಪಿಯ ವಿಜಯಕ್ಕೆ ಕಾರಣವಾಗಿದ್ದು ಈಗ ಇತಿಹಾಸ. ತಾವು ಮಾಡುತ್ತಿರುವ ತಪ್ಪನ್ನು ಇತರರು ಎತ್ತಿ ತೋರಿಸಿದ ಮೇಲೂ ಹಿಂದಕ್ಕೆ ಸರಿಯದೆ ಹೋದ ಅಣ್ಣಾ ಹಜಾರೆಯನ್ನು ಗಾಂಧಿವಾದಿ ಎಂದು ಕರೆಯುವುದಾದರೂ ಹೇಗೆ. ಗಾಂಧೀಜಿ ತಮ್ಮ ತಪ್ಪನ್ನು ತಾವೇ ತಿದ್ದುಕೊಳ್ಳುವಂತಹ ದಾಷ್ಟ್ರ್ಯತೆ ಇದ್ದವರು. ಇರಲಿ ಅಣ್ಣಾ ಹಜಾರೆ ಕಾಂಗ್ರೆಸ್ ಅಥವಾ ಯುಪಿಎ ವಿರುದ್ಧ ಪ್ರಚಾರ ಮಾಡಿದ್ದೂ ಸಹ ಒಂದು ಒತ್ತಡದ ತಂತ್ರವೇ ಎಂದು ಒಪ್ಪಿಕೊಳ್ಳೋಣ.
ಆದರೆ ಕನರ್ಾಟಕದಲ್ಲಿ ಬಿಜೆಪಿ ಆಳ್ವಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕರ್ಮಕಾಂಡವನ್ನು ಕುರಿತು ಒಂದೇ ಒಂದು ಮಾತನ್ನೂ ಆಡದೆ ಬೆಂಗಳೂರಿನಲ್ಲಿ ಭ್ರಷ್ಟಾಚಾರ ವಿರೋಧಿ ಸಮಾವೇಶವನ್ನು ನಡೆಸಿದ ಹಜಾರೆ ಸಾಧಿಸಿದ್ದಾದರೂ ಏನು ? ಬಿಜೆಪಿ ಮತ್ತು ಸಂಘಪರಿವಾರದ ಬೆಂಬಲ ಗಳಿಸಿದ್ದೇ ಅಥವಾ ಕಾಂಗ್ರೆಸ್ ವಿರೋಧಿ ಪಕ್ಷಗಳ ಒಲವು ಗಳಿಸಿದ್ದೇ ? ಆರೆಸ್ಸೆಸ್ಗೂ ತಮಗೂ ಸಂಬಂಧವೇ ಇಲ್ಲ ಎಂದು ಹಜಾರೆ ಖಚಿತವಾಗಿ ಹೇಳುತ್ತಿದ್ದಾಗಲೇ ಸಂಘಪರಿವಾರದ ನಾಯಕರು, ಹಜಾರೆ ಅಂದೋಲನಕ್ಕೆ ತಾವು ಒದಗಿಸಿದ ಪರಿಕರಗಳನ್ನು ಕುರಿತು ಡಂಗುರ ಸಾರುತ್ತಿದ್ದುದು ವಿಡಂಬನೆಯಾಗಿ ಕಂಡಿತ್ತು. ಹಜಾರೆ ತಮ್ಮ ಪಕ್ಷಾತೀತ ನಿಲುವಿಗೆ ಬದ್ಧರಾಗಿದ್ದ ಪಕ್ಷದಲ್ಲಿ ಕೂಡಲೇ ಸಂಘಪರಿವಾರದ ನೆರಳಿನಿಂದ ಕೂಡಲೇ ದೂರವಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಹಜಾರೆಗೆ ಜನಬೆಂಬಲ ಅಗತ್ಯವಾಗಿತ್ತು. ಆಂದೋಲನವನ್ನು ಮುನ್ನಡೆಸಲು ತಮ್ಮ ತತ್ವ, ಉದ್ದೇಶ, ಧ್ಯೇಯ, ಆದರ್ಶಗಳಿಗಿಂತಲೂ ಮಾಧ್ಯಮಗಳನ್ನು ಆಕಷರ್ಿಸುವ, ಆಳ್ವಿಕರ ಮನಸೆಳೆಯುವ ಜನಸ್ತೋಮವೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ ಎಂಬ ಭ್ರಮೆ ಹಜಾರೆಯವರನ್ನು ಆವರಿಸಿದ್ದು ಇಡೀ ಆಂದೋಲನದ ದುರಂತ.
ಹಾಗಾಗಿಯೇ ಸ್ವತಃ ಅಕ್ರಮಗಳ ಆರೋಪ ಎದುರಿಸಿದ ಕಿರಣ್ ಬೇಡಿ ಅಥವಾ ಕೋಟ್ಯಂತರ ರೂಗಳ ವ್ಯವಹಾರ ನಡೆಸುವ ಎನ್ಜಿಒ ಒಡೆಯ ಕೇಜ್ರಿವಾಲ್ ಅವರನ್ನು ದೂರ ಇರಿಸುವ ಅಥವಾ ನೇಪಥ್ಯಕ್ಕೆ ಸರಿಸುವ ಪ್ರಯತ್ನವನ್ನೂ ಹಜಾರೆ ಮಾಡಲಿಲ್ಲ. ತಮ್ಮ ಪ್ರತಿರೋಧ ವ್ಯಕ್ತಪಡಿಸಿದರೆ ಚಳುವಳಿ ಎಲ್ಲಿ ಕುಸಿಯುವುದೋ ಎಂಬ ಭೀತಿಗೊಳಗಾಗಿ ಹಜಾರೆ ಅನುಸರಿಸಿದ ಮಾರ್ಗ ಮೌನವ್ರತ. ಅನ್ಯಾಯದ ವಿರುದ್ಧ ಮಾತನಾಡದಿರುವುದು ಅನ್ಯಾಯ ಮಾಡುವುದಕ್ಕಿಂತಲೂ ಹೇಯ ಕೃತ್ಯ ಎಂಬ ಸರಳ ಸಂಗತಿಯನ್ನೂ ಹಜಾರೆ ಗ್ರಹಿಸಲಾಗಲಿಲ್ಲ. ಪರಿಣಾಮ ಟೀಂ ಅಣ್ಣಾ ಎನ್ನುವುದು ಕೆಲವೇ ವ್ಯಕ್ತಿಗಳ ಕೂಟವಾಗಿ ಪರಿಣಮಿಸಿ ತನ್ನ ಆರಂಭಿಕ ಮೊನಚನ್ನು ಕಳೆದುಕೊಳ್ಳಲಾರಂಭಿಸಿತು. ಇದನ್ನು ಗ್ರಹಿಸಿದ ಯುಪಿಎ ಸಕರ್ಾರ ಲೋಕಪಾಲ್ ಮಸೂದೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ರೂಪಿಸಲು ಮುಂದಾಗಿತ್ತು. ಇದು ಅಣ್ಣಾ ಹಜಾರೆಯ ವೈಫಲ್ಯವೂ ಹೌದು, ರಾಜಕೀಯ ವ್ಯವಸ್ಥೆಯ ಚಾಣಾಕ್ಷತನವೂ ಹೌದು.
ಈ ಲೋಪವನ್ನು ಸರಿಗಟ್ಟುವ ನಿಟ್ಟಿನಲ್ಲಿ ಅಣ್ಣಾ ಹಜಾರೆ ತಮ್ಮ ತಂಡವನ್ನು ಪುನರ್ರಚಿಸುವ ಪ್ರಯತ್ನ ಮಾಡಬೇಕಿತ್ತು. ಹಲವು ನಿಷ್ಠಾವಂತ ಸದಸ್ಯರ ರಾಜೀನಾಮೆಯ ಹಿನ್ನೆಲೆಯಲ್ಲಿ ಮತ್ತು ಹಲವು ಸದಸ್ಯರ ವಿರುದ್ಧ ಆರೋಪಗಳ ಹಿನ್ನೆಲೆಯಲ್ಲಿ ಟೀಂ ಅಣ್ಣಾ ತನ್ನ ಪ್ರಾಮಾಣಿಕತೆಯನ್ನು ನಿರೂಪಿಸುವತ್ತ ಕೊಂಚವಾದರೂ ಯೋಚಿಸಬೇಕಿತ್ತು. ಆದರೆ ಕಾಲಕ್ರಮೇಣ ಅಣ್ಣಾ ತಂಡದಲ್ಲಿ ಹಜಾರೆಯವರ ದನಿ ಕ್ಷೀಣಿಸತೊಡಗಿ ಕೇಜ್ರಿವಾಲ್-ಕಿರಣ್ ಬೇಡಿ ಮುಂತಾದವರ ನಾಟಕೀಯ ವರ್ತನೆಗಳೇ ಪ್ರಧಾನವಾಗಿ ವ್ಯಕ್ತವಾಗತೊಡಗಿದ್ದು ಇಡೀ ಅಂದೋಲನದ ಸ್ವರೂಪವನ್ನೇ ಬದಲಾಯಿಸಿದೆ. ಹಾಗಾಗಿಯೇ ಈ ವರ್ಷ ದೆಹಲಿಯ ಜಂತರ್ ಮಂತರ್ನಲ್ಲಿ ಅರಂಭವಾದ ಉಪವಾಸ ಸತ್ಯಾಗ್ರಹ ಕೆಲವೇ ದಿನಗಳಲ್ಲಿ ಅಂತ್ಯಗೊಂಡಿದ್ದು ಅಣ್ಣಾ ಆಂದೋಲನವನ್ನು ವಿಭಿನ್ನ ಹಾದಿಯಲ್ಲಿ ಕೊಂಡೊಯ್ಯಲಾಗುತ್ತಿದೆ. ಕಳೆದ ವರ್ಷದಂತೆ ಈ ವರ್ಷ ಹಜಾರೆಯವರ ಹಿಂದೆ ಜನಸ್ತೋಮ ನಿಲ್ಲದಿರಲು ತಮ್ಮ ತಂಡದ ಎಡಬಿಡಂಗಿ ನೀತಿಗಳೇ ಕಾರಣ ಎಂಬ ವಾಸ್ತವವನ್ನು ಗ್ರಹಿಸದ ಹಜಾರೆ ಜನಬೆಂಬಲ ಗಳಿಸುವ ಸಲುವಾಗಿ ಬಾಬಾ ರಾಮದೇವ್ ಅವರ ಆಶ್ರಯ ಪಡೆದಿದ್ದು ಇಡೀ ಚಳುವಳಿಯ ಬುಡವನ್ನೇ ಅಲುಗಾಡಿಸಿದೆ. ಪರಿಣಾಮ ಜನರ ವಿಶ್ವಾಸವೂ ಕ್ಷೀಣಿಸತೊಡಗಿದೆ.
ಈ ಸಂದರ್ಭದಲ್ಲಾದರೂ ತಮ್ಮ ನಿಲುವು ಬದಲಿಸಿ ತಮ್ಮ ಧ್ಯೇಯೋದ್ದೇಶಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ನಿಧರ್ಾರ ಕೈಗೊಳ್ಳದೆ ಅಣ್ಣಾ ಹಜಾರೆ ರಾಜಕೀಯ ಪಕ್ಷ ರಚಿಸುವ ನಿಧರ್ಾರ ತಳೆದು ತಮ್ಮ ನಿರಶನವನ್ನು ಅಂತ್ಯಗೊಳಿಸಿದ್ದಾರೆ. ಒಂದು ವೇಳೆ ಸಕರ್ಾರ ತಮ್ಮ ಬೇಡಿಕೆಗಳನ್ನು ಈಡೇರಿಸಿದಲ್ಲಿ ಈ ನಿಧರ್ಾರದಿಂದ ಹಿಂದೆಗೆಯುವುದಾಗಿಯೂ ಕೇಜ್ರಿವಾಲ್ ಹೇಳಿದ್ದಾರೆ. ತಾವೇ ಬೀಜ ಬಿತ್ತು ಬೆಳೆಸಿದ ಸುಂದರ ಸಸ್ಯವನ್ನು ತಮ್ಮ ಕೈಯ್ಯಾರೆ ಹೊಸಕಿ ಹಾಕುವ ಹಜಾರೆಯವರ ಈ ಪ್ರವೃತ್ತಿಯನ್ನು ಹೇಗೆ ಒಪ್ಪಲು ಸಾಧ್ಯ ? ಹಜಾರೆಯವರನ್ನು ವಿರೋಧಿಸಿದರೆ ಭ್ರಷ್ಟಾಚಾರದ ಪರ ನಿಂತಂತೆ ಎಂಬ ಭ್ರಮೆಗೊಳಗಾದವರು ಮಾತ್ರ ಟೀಂ ಅಣ್ಣಾ ಕೈಗೊಂಡಿರುವ ನಿರ್ಣಯವನ್ನು ಬೆಂಬಲಿಸಬಹುದಷ್ಟೆ. ಒಂದು ರಾಜಕೀಯ ಪಕ್ಷ ರಚಿಸುವುದಕ್ಕೂ, ಜನಾಂದೋಲವನ್ನು ರೂಪಿಸುವುದಕ್ಕೂ ಇರುವ ಮೂಲಭೂತ ವ್ಯತ್ಯಾಸವನ್ನು ಗ್ರಹಿಸದ ಅಣ್ಣಾ ತಂಡದ ಅಪ್ರಬುದ್ಧತೆ ಕಳೆದ ಚುನಾವಣೆಗಳಲ್ಲೇ ಸ್ಪಷ್ಟವಾಗಿ ಗೋಚರಿಸಿತ್ತು.
ಆಂದೋಲನಗಳು ಆಳುವ ವರ್ಗಗಳ ಮೇಲೆ ಒತ್ತಡ ಹೇರುವ ಮೂಲಕ ಜನಪರ ಆಳ್ವಿಕೆಗೆ ದಾರಿಮಾಡಿಕೊಡುವ ಒಂದು ತಂತ್ರವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸೈದ್ಧಾಂತಿಕ ನೆಲೆಗಟ್ಟು ಇರಲಿ ಇಲ್ಲದಿರಲಿ, ಜನತೆಯಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಮೂಲಕ ಆಳುವ ವರ್ಗಗಳ ಗುಣಲಕ್ಷಣಗಳನ್ನು ಜನತೆಗೆ ಪರಿಚಯಿಸುವ ಮೂಲಕ ಜನತೆಯನ್ನು ಹೋರಾಟಗಳಿಗೆ ಪ್ರಚೋದಿಸುವ ನಿಟ್ಟಿನಲ್ಲಿ ಆಂದೋಲನಗಳು ಹೊರಹೊಮ್ಮುತ್ತವೆ. ರಾಜಕೀಯ ಪ್ರಜ್ಞೆ ಮೂಡಿಸುವುದಕ್ಕೂ, ಸ್ವತಃ ರಾಜಕೀಯ ಪ್ರವೇಶಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಈ ವ್ಯತ್ಯಾಸವನ್ನು ಅಣ್ಣಾ ತಂಡ ಗ್ರಹಿಸದೆ ಇರುವುದು ದುರಾದೃಷ್ಟಕರ. ರಾಜಕಾರಣ ಎಂದರೆ ಪಕ್ಷ ರಾಜಕೀಯ ಮಾತ್ರ ಎಂದು ಭಾವಿಸುವ ಅಣ್ಣಾ ತಂಡದ ಧೋರಣೆ ಒಂದು ಅಪಕ್ವ ಜನಾಂದೋಲನದ ಸಂಕೇತವಾಗಿ ಕಾಣುತ್ತದೆ.
ಇಂದಿನ ಭಾರತ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಒಂದು ಸ್ಪಷ್ಟ ಸೈದ್ಧಾಂತಿಕ ತಳಹದಿ ಇಲ್ಲದೆ, ದೇಶದ ಜನಸಾಮಾನ್ಯರ ಇಂಗಿತಗಳನ್ನು ಗ್ರಹಿಸುವ ಮತ್ತು ತಮ್ಮ ಧ್ಯೇಯೋದ್ದೇಶಗಳನ್ನು ಜನರಿಗೆ ತಿಳಿಸುವ ಆಲೋಚನೆಯೇ ಇಲ್ಲದೆ ಕೇವಲ ಲೋಕಪಾಲ್ ಮಸೂದೆ ಮತ್ತು ಚುನಾವಣಾ ಸುಧಾರಣೆಗಳಿಗಾಗಿ ರಾಜಕೀಯ ಪಕ್ಷ ಸ್ಥಾಪಿಸುವುದು ಏಕಮುಖೀ ಸಂಚಾರವಾಗುತ್ತದೆ. ಅಣ್ಣಾಹಜಾರೆಯವರ ಬದ್ಧತೆ, ಶ್ರದ್ಧೆ, ಪ್ರಾಮಾಣಿಕತೆ ಮತ್ತು ಕಾಳಜಿಗಳನ್ನು ಗೌರವದಿಂದ ಕಾಣುತ್ತಲೇ ಹೇಳುವುದಾದರೆ ಅಣ್ಣಾ ಸುಮ್ಮನಿದ್ದುಬಿಡುವುದು ಒಳಿತು.]]>
ಎಕ್ಸಿಟ್ ಪೋಲ್ ಎನ್ನುವುದು ಒಂದು ಅಂದಾಜು ಪ್ರಕ್ರಿಯೆ..
ನಾ ದಿವಾಕರ್ ಎಕ್ಸಿಟ್ ಪೋಲ್ ಎನ್ನುವುದು ಒಂದು ಅಂದಾಜು ಪ್ರಕ್ರಿಯೆ. ಇಲ್ಲಿ ಷೇರು ಮಾರುಕಟ್ಟೆಯ ಸ್ಥಿರತೆಯನ್ನು ಕಾಪಾಡುವ ಔದ್ಯಮಿಕ...
anna hajareyavara halavaru samasyegala gantinali ondu chintane janapara kalaji yagiruvaga adara bagge chintusuvudu olitallave ?
If anna Hazare had any concern about real issues confronting the common masses of the country he would have carried on his crusade against corruption by keeping away RSS and Ramdev. Hazaare is basically not a democrat as he has desolved team anna on his own. He has dissolved his ideals too in the hacynth of indian politics.
divakar
ಉತ್ತಮ ವಿಶ್ಲೇಷಣೆ
ಇಡೀ ದೇಶದ ಯುವಜನತೆ ಬಯಸುತ್ತಿರುವ ಚಳುವಳಿಯ ನೇತೃತ್ವವನ್ನು ಹೆಗಲಿಗೆ ತೆಗೆದುಕೊಂಡು, ಅದನ್ನು ಸರಿಯಾಗಿ ನಿಭಾಯಿಸಲಾಗದೇ, ಅಡ್ಡದಾರಿಯಲ್ಲಿ ಕೈಬಿಡುವುದರ ಮೂಲಕ ಚಳುವಳಿಗಳಂತಹ ಅಸ್ತ್ರಗಳಿಗೆ ಅಣ್ಣಾ ಹಜಾರೆ ಮಾಡಿದ ಅವಮಾನ ಹಾಗೂ ತಮ್ಮಲ್ಲಿನ ಹೋರಾಟದ ಮನೋಭಾವಗಳ ಬಗ್ಗೆ ನಂಬಿಕೆ ಕಳೆದುಕೊಂಡಿರುವ ವಿಪರ್ಯಾಸ…
Good meaningful analysis of the current situation in India.
I liked the article but not the Anna’s decision:(