ಪ್ರಿಯರೆ,
ಈಗಾಗಲೇ ಐದು ಸುಸಜ್ಜಿತ ಪುಸ್ತಕ ಮಳಿಗೆಗಳನ್ನು ಹೊಂದಿರುವ ನವಕರ್ನಾಟಕ ಪ್ರಕಾಶನ ಸಂಸ್ಥೆ ತನ್ನ ಆರನೇ ಪುಸ್ತಕ ಮಳಿಗೆಯನ್ನು ಮಂಗಳೂರಿನಲ್ಲಿ ತೆರೆಯಲಿದೆ. ಮಂಗಳೂರಿನಲ್ಲಿ ಇದು ನಮ್ಮ ಎರಡನೇ ಮಳಿಗೆ.
ಶ್ರೀ ಜಿ.ಏನ್. ಆಶೋಕವರ್ಧನ ಅವರು ಕಳೆದ 36 ವರ್ಷಗಳಿಂದ ಮಂಗಳೂರಿನ ಬಲ್ಮಠದ ಶರಾವತಿ ಕಟ್ಟಡದಲ್ಲಿ ‘ಅತ್ರಿ ಬುಕ್ ಸೆಂಟರ್ ‘ ಮಳಿಗೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಈಗ ವೃತ್ತಿ ಜೀವನದಿಂದ ವಿಶ್ರಾಂತರಾಗಲು ಬಯಸಿದ್ದಾರೆ. ಅವರ ‘ಅತ್ರಿ ಬುಕ್ ಸೆಂಟರ್’ ಇದೇ ಏಪ್ರಿಲ್ 1 ರಿಂದ ನಮ್ಮ ‘ನವಕರ್ನಾಟಕ ಪುಸ್ತಕ ಮಳಿಗೆ’ ಆಗಲಿದೆ. ಇದರ ಉದ್ಘಾಟನೆ ಹಾಗೂ ಅದೇ ಸಂದರ್ಭದಲ್ಲಿ ನಡೆಯಲಿರುವ ‘ತುಳುವರ ಮೂಲತಾನ ಆದಿ ಆಲಡೆ’ ಕೃತಿಯ ಲೋಕಾರ್ಪಣೆ ಸಮಾರಂಭದ ಆಮಂತ್ರಣ ಲಗತ್ತಿಸಿದ್ದೇವೆ. ದಯವಿಟ್ಟು ಭಾಗವಹಿಸಿ.
ವಂದನೆಗಳು,
ಆರ್.ಎಸ್ . ರಾಜಾರಾಂ
ಪ್ರಿಯರೆ,
ಜಿ ಎನ್ ಅಶೋಕವರ್ಧನ ಅವರು ೩೬ ವರ್ಷಗಳವರೆಗೆ ನಡೆಸಿದ ಅತ್ರಿ ಬುಕ್ ಸೆಂಟರ್
ನವ ಕರ್ನಾಟಕ ಪುಸ್ತಕ ಮಳಿಗೆಯಾಗಿಯೇ ಮುಂದುವರೆಯುವುದು ಸಂತೋಷದ ಸಂಗತಿ.
ನಿಮಗೆ ಎಲ್ಲ ಒಳಿತನ್ನೂ ಹಾರೈಸುತ್ತೇನೆ.