ಅದಕ್ಕೇ ಇರಬೇಕು ಕಣ್ಣೀರು ಹೆಪ್ಪುಗಟ್ಟುವುದಿಲ್ಲ – ಕೆಲವು ಹನಿಗವಿತೆಗಳು

ಅದಕ್ಕೇ ಇರಬೇಕು ಕಣ್ಣೀರು ಹೆಪ್ಪುಗಟ್ಟುವುದಿಲ್ಲ – ಶಾ೦ತಿ ಕೆ ಎ ಗೆಳೆಯಾ ಕಣ್ಣೀರು ಕೆಂಪಗಿಲ್ಲ ಅಷ್ಟೇ.. ಆದರದು ಹೃದಯ ಸುರಿಸುವ ರಕ್ತ… ಎದೆಯಾಳದ ಗಾಯದ ಆಳ ಹೊರಗೆ ತಿಳಿಯುವುದಿಲ್ಲ.. ಅದಕ್ಕೇ..ಇರಬೇಕು.. ಕಣ್ಣೀರು ಹೆಪ್ಪುಗಟ್ಟುವುದಿಲ್ಲ.. * ಗೆಳೆಯಾ, ಸರಿರಾತ್ರಿಯಲ್ಲೊಮ್ಮೆ.. ತಂಗಾಳಿಯಾಗಿಯಾದರೂ..ಬಂದು ಸೋಕಿ ಹೋಗು.. ಒಡಲೊಳಗಿನ ತಪನೆಗಿಷ್ಟು.. ತಂಪು ಸಿಗಲಿ… * ಚೆಲುವು ನಲಿವುಗಳ ಬಗೆ ಬರೆಯಬೇಕೆನಿಸಿದರೂ.. ಬರೆಯಲಾರೆ ಗೆಳೆಯಾ.. ಯಾಕೆಂದರೆ .. ನನ್ನ ಅಂತರಂಗದ ಅರಮನೆಯಲ್ಲಿ.. ವಿರಹ ವಿಷಾದಗಳದ್ದೇ ರಾಜ್ಯಭಾರ!! * ಗೆಳೆಯಾ, ಆ ಬಯಲಲ್ಲಿ … ನಿಲ್ಲದ ಗಾಳಿಯ ಅಬ್ಬರವಿತ್ತು.. ನೆತ್ತಿಗೆ ನೆರಳಿರಲಿಲ್ಲ… ಹನುಮಂತನ ಗುಡಿಯಿತ್ತು.. ಅಲ್ಲಿ ಘಂಟೆಯಿರಲಿಲ್ಲ.. ಹಾರು ಹಕ್ಕಿಗಳ ಹಿಂಡಿತ್ತು.. ಅವು ಹಾಡುತ್ತಿರಲಿಲ್ಲ.. ನಾವಿಬ್ಬರೂ ನಡೆದ ದಾರಿ ನೆನಪಿತ್ತು.. ಆದರೆ ಅಲ್ಲಿ ನಿನ್ನ ಹೆಜ್ಜೆಗುರುತುಗಳಿರಲಿಲ್ಲ!]]>

‍ಲೇಖಕರು G

May 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

ಕೋಟೆ ಬಾಗಿಲಿಗೆ ಬಂದವರು..

ಕೋಟೆ ಬಾಗಿಲಿಗೆ ಬಂದವರು..

ಮಂಜುನಾಥ್ ಚಾಂದ್ ಧರೆಯ ಒಡಲಿನಿಂದತೊರೆಗಳಾಗಿ ಬಂದವರಗುಂಡಿಗೆಗೆ ತುಪಾಕಿಹಿಡಿಯುವ ಮುನ್ನದೊರೆ ತಾನೆಂದು ಬೀಗಿಸೆಟೆಯುವ ಮುನ್ನನಿನ್ನ ದುಃಖ ನನ್ನ...

ಕಲಾಕೃತಿಗೆ ಜೀವವಾಗಿ ಬಂದವಳು…

ಕಲಾಕೃತಿಗೆ ಜೀವವಾಗಿ ಬಂದವಳು…

ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು  ಕಡು ಬಿಸಿಲಿನ...

6 ಪ್ರತಿಕ್ರಿಯೆಗಳು

 1. adhiti

  ತುಂಬಾ ಚೆನ್ನಾದ ಹಾಗೂ ಎದೆಯಾಳದ ನೆನಪನ್ನು ಮರುಕಳಿಸುವ ಕವಿತೆಗಳು

  ಪ್ರತಿಕ್ರಿಯೆ
 2. D.RAVI VARMA

  ಚೆಲುವು ನಲಿವುಗಳ ಬಗೆ
  ಬರೆಯಬೇಕೆನಿಸಿದರೂ..
  ಬರೆಯಲಾರೆ ಗೆಳೆಯಾ..
  ಯಾಕೆಂದರೆ ..
  ನನ್ನ ಅಂತರಂಗದ ಅರಮನೆಯಲ್ಲಿ..
  ವಿರಹ ವಿಷಾದಗಳದ್ದೇ ರಾಜ್ಯಭಾರ!!
  *ಕವನ ಎದೆತಟ್ಟಿ,ಮನಮುಟ್ಟುವಸ್ತು ಚೆನ್ನಾಗಿದೆ, ಕನ್ನೆರಿನ ಬಗ್ಗೆ ಓಶೋ ತುಂಬಾ ಅರ್ಥಪೂರ್ಣವಾಗಿ ಮಾತನಾಡಿದ್ದಾರೆ ಅವರು ಹೇಳುವಹಾಗೆ ” ತುಂಬಾ ಆಳವಾದ ನೋವಾಗಿದ್ದಾಗ, ಅತ್ಯಂತ ಆನಂದದ ಕ್ಷಣದಲ್ಲಿದ್ದಾಗ, ನೀವು ತುಂಬಾ ಘಾಡವಾದ ಪ್ರೀತಿಯಲ್ಲಿದ್ದರು ಕಣ್ಣೀರು ಬರಬಹುದು ,ನೀವು ಘದವಾದ ಮೌನದಲ್ಲಿದ್ದಗಳು ಕಣ್ಣೇರು ಬರಬಹುದು ಕನ್ನೆರಿಗೆ ತನ್ನದೇ ಆದ ಸೌಂದರ್ಯವಿದೆ, ಅದು ಒಂದು ಶಬ್ಧಗಲ್ಲಿದ ಕಾವ್ಯ ಅದು ಹೃದಯದಿಂದ ಹೃದಯಕ್ಕೆ ಕೇಳಬಲ್ಲ ಹಾಡು ಕಾನೀರಿನ ಭಾಷೆ ಅದು ಒಂದು ಆಳವಾದ mounabasheyaagiruttade “, ಮೇಡಂ ನಿಮ್ಮ ಕವನ ತುಂಬಾ ತುಂಬಾ ಇಷ್ಟವಾಯಿತು, ಥ್ಯಾಂಕ್ಸ್ ಟು ಅವಧಿ . ಓಶೋ ಅವರ ಲೇಖನ ನಾನು ಅನುವಾದಿಸಿ ನನ್ನ ಬ್ಲಾಗ್ನಲ್ಲಿ ಹಾಕಿದ್ದೇನೆ ಒಮ್ಮೆ ಸಾದ್ಯವಾದರೆ ಓದಿ
  ರವಿ ವರ್ಮ ಹೊಸಪೇಟೆ
  ,

  ಪ್ರತಿಕ್ರಿಯೆ
 3. D.RAVI VARMA

  ಗೆಳೆಯಾ,
  ಆ ಬಯಲಲ್ಲಿ …
  ನಿಲ್ಲದ ಗಾಳಿಯ ಅಬ್ಬರವಿತ್ತು..
  ನೆತ್ತಿಗೆ ನೆರಳಿರಲಿಲ್ಲ…
  ಹನುಮಂತನ ಗುಡಿಯಿತ್ತು..
  ಅಲ್ಲಿ ಘಂಟೆಯಿರಲಿಲ್ಲ..
  ಹಾರು ಹಕ್ಕಿಗಳ ಹಿಂಡಿತ್ತು..
  ಅವು ಹಾಡುತ್ತಿರಲಿಲ್ಲ..
  ನಾವಿಬ್ಬರೂ ನಡೆದ ದಾರಿ ನೆನಪಿತ್ತು..
  ಆದರೆ ಅಲ್ಲಿ ನಿನ್ನ ಹೆಜ್ಜೆಗುರುತುಗಳಿರಲಿಲ್ಲ!
  Share
  6ಗೆಳೆಯಾ,
  ಆ ಬಯಲಲ್ಲಿ …
  ನಿಲ್ಲದ ಗಾಳಿಯ ಅಬ್ಬರವಿತ್ತು..
  ನೆತ್ತಿಗೆ ನೆರಳಿರಲಿಲ್ಲ…
  ಹನುಮಂತನ ಗುಡಿಯಿತ್ತು..
  ಅಲ್ಲಿ ಘಂಟೆಯಿರಲಿಲ್ಲ..
  ಹಾರು ಹಕ್ಕಿಗಳ ಹಿಂಡಿತ್ತು..
  ಅವು ಹಾಡುತ್ತಿರಲಿಲ್ಲ..
  ನಾವಿಬ್ಬರೂ ನಡೆದ ದಾರಿ ನೆನಪಿತ್ತು..
  ಆದರೆ ಅಲ್ಲಿ ನಿನ್ನ ಹೆಜ್ಜೆಗುರುತುಗಳಿರಲಿಲ್ಲ!
  Share
  6ಗೆಳೆಯಾ,
  ಆ ಬಯಲಲ್ಲಿ …
  ನಿಲ್ಲದ ಗಾಳಿಯ ಅಬ್ಬರವಿತ್ತು..
  ನೆತ್ತಿಗೆ ನೆರಳಿರಲಿಲ್ಲ…
  ಹನುಮಂತನ ಗುಡಿಯಿತ್ತು..
  ಅಲ್ಲಿ ಘಂಟೆಯಿರಲಿಲ್ಲ..
  ಹಾರು ಹಕ್ಕಿಗಳ ಹಿಂಡಿತ್ತು..
  ಅವು ಹಾಡುತ್ತಿರಲಿಲ್ಲ..
  ನಾವಿಬ್ಬರೂ ನಡೆದ ದಾರಿ ನೆನಪಿತ್ತು..
  ಆದರೆ ಅಲ್ಲಿ ನಿನ್ನ ಹೆಜ್ಜೆಗುರುತುಗಳಿರಲಿಲ್ಲ!
  Share
  6ನನಗೆ ನಿಜಕ್ಕೂ ಅಸ್ಕ್ಷ್ಹರ್ಯವಾಗುತ್ತಿದ್ದೆ, ಈ ಎಲ್ಲ ಬರಹಗಾರರು,ಬರಹಗರ್ತಿಯರ್ ಇಸ್ತುವರ್ಷ ಎಲ್ಲಿ ಕಳೆದು ಹೋಗಿದ್ದರು ,ನಾನು ಅವಧಿಯಲ್ಲಿ ಹೊಸ ಹೊಸ ಲೇಖಕ,ಲೇಖಕಿ ಅವರ ಅಂತರಾಳದ ನೋವು,ಭಾವನೆಗಳನ್ನು ಕಾವ್ಯಕ್ಕೆ,ಲೇಖನಕ್ಕೆ ರೂಪಾನ್ತಿರಿಸುವುದನ್ನು ನೋಡಿ avakkagiddene , ಅವಧಿ ಈ ಎಲ್ಲ ಬರಹಗರನ್ನು, ಅವರ ಚಿಂತನೆಗಳನ್ನು, ಅವರ ಹಲಹಲಿಕೆಗಳನ್ನು ನಮ್ಮಂಥ ಓದುಗರಿಗೆ ಪರಿಚಯಿಸಿ,ಓದಿಸಿದ್ದಕ್ಕೆ ನಾನು ಅವಧಿಗೆ ರುನಿಯಸ್ತೆ

  ಪ್ರತಿಕ್ರಿಯೆ
 4. D.RAVI VARMA

  ನನಗೆ ನಿಜಕ್ಕೂ ಅಸ್ಕ್ಷ್ಹರ್ಯವಾಗುತ್ತಿದ್ದೆ, ಈ ಎಲ್ಲ ಬರಹಗಾರರು,ಬರಹಗರ್ತಿಯರ್ ಇಸ್ತುವರ್ಷ ಎಲ್ಲಿ ಕಳೆದು ಹೋಗಿದ್ದರು ,ನಾನು ಅವಧಿಯಲ್ಲಿ ಹೊಸ ಹೊಸ ಲೇಖಕ,ಲೇಖಕಿ ಅವರ ಅಂತರಾಳದ ನೋವು,ಭಾವನೆಗಳನ್ನು ಕಾವ್ಯಕ್ಕೆ,ಲೇಖನಕ್ಕೆ ರೂಪಾನ್ತಿರಿಸುವುದನ್ನು ನೋಡಿ avakkagiddene , ಅವಧಿ ಈ ಎಲ್ಲ ಬರಹಗರನ್ನು, ಅವರ ಚಿಂತನೆಗಳನ್ನು, ಅವರ ಹಲಹಲಿಕೆಗಳನ್ನು ನಮ್ಮಂಥ ಓದುಗರಿಗೆ ಪರಿಚಯಿಸಿ,ಓದಿಸಿದ್ದಕ್ಕೆ ನಾನು ಅವಧಿಗೆ ರುನಿಯಸ್ತೆ

  ಪ್ರತಿಕ್ರಿಯೆ
 5. sandhya

  ನಾವಿಬ್ಬರೂ ನಡೆದ ದಾರಿ ನೆನಪಿತ್ತು..
  ಆದರೆ ಅಲ್ಲಿ ನಿನ್ನ ಹೆಜ್ಜೆಗುರುತುಗಳಿರಲಿಲ್ಲ! ….ತುಂಬಾ ಇಷ್ಟ ಆಯ್ತು 🙂

  ಪ್ರತಿಕ್ರಿಯೆ
 6. shama, nandibetta

  ನಾವಿಬ್ಬರೂ ನಡೆದ ದಾರಿ ನೆನಪಿತ್ತು..
  ಆದರೆ ಅಲ್ಲಿ ನಿನ್ನ ಹೆಜ್ಜೆಗುರುತುಗಳಿರಲಿಲ್ಲ! …
  ಕಲ್ಪನಾತೀತ ನೋವು ವಿಷಾದ ತುಂಬಿದ ಸಾಲುಗಳು
  ತುಂಬಾ ಇಷ್ಟ ಆಯ್ತು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: