ಅದು ಅಮೀರ್ ಖಾನ್ ಅ೦ದ್ರೆ!!

ಅಮೀರ್ ಖಾನ್ ಅ೦ದರೆ…

ದಯಾನ೦ದ್ ಟಿ ಕೆ

ನಮ್ಮ ತಾರೆಯರು ಮಣಪ್ಪುರಂ ಗೋಲ್ಡ್, ಕಲ್ಯಾಣ್ ಜ್ಯೂವೆಲ್ಲರ್ಸ್, ಕಿಂಗ್ ಫಿಶರ್, ಯುಬಿ ಬಿಯರ್ ಗಳ ಬ್ರಾಂಡ್ ಅಂಬಾಸಡರ್ ಗಳಾಗಿ ‘ಚಿನ್ನ ಅಡ ಇಟ್ಟು ಮಜಾ ಮಾಡಿ’, ‘ಬಿಯರ್ ಕುಡಿದು ತೂರಾಡಿ’ ಎಂಬಂಥಹ ಸಮಾಜದ ಸ್ವಾಸ್ಥ ಕೆಡಿಸುವ ಅಪಾಯಕಾರಿ ಜಾಹಿರಾತುಗಳಲ್ಲಿ ಕೋಟಿ ಬಾಚುತ್ತ ಆಕಾಶಕ್ಕೇರಿ ನಾಪತ್ತೆಯಾಗಿ ಹೋದರು. ಅದೇ ಸಂದರ್ಭದಲ್ಲಿಯೇ ಅಮೀರ್ ಖಾನ್ ಎಂಬ ಆಕಾಶದ ತಾರೆಯೊಂದು ನೆಲಕ್ಕಿಳಿದು ಬಂದು ‘ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ’ ಹಮ್ಮಿಕೊಂಡಿರುವ ದೇಶದಲ್ಲಿನ ಬಡಜನರ ಅಪೌಷ್ಠಿಕತೆ ನಿವಾರಣೆಯ ಮಾಧ್ಯಮ ಜಾಗೃತಿ ಆಂದೋಲನದ ಬ್ರಾಂಡ್ ಅಂಬಾಸಡರ್ ಆಗಿ ಕಾರ್ಯನಿರ್ವಹಿಸಲು ಒಪ್ಪಿಗೆ ಸೂಚಿಸಿದ್ದಾರೆ. ಹೋಲ್ಡಾನ್ ಹೋಲ್ಡಾನ್ ‘ಏನ್ ಬಿಟ್ಟಿ ಮಾಡ್ತಿದಾನಾ ಅಮೀರ್ ಖಾನು’ ಅಂತ ಯಾರೂ ಕೆಮ್ಮಂಗೇ ಇಲ್ಲ.. ಅಮೀರ್ ಖಾನ್ ಈ ಕ್ಯಾಂಪೇನ್ ಗಾಗಿ ಚಿಕ್ಕಾಸನ್ನೂ ಪಡೆಯುತ್ತಿಲ್ಲ. ಇದು ಆಕಾಶಕ್ಕೆ ನೆಗೆದು ನಮಗೂ ಜನಕ್ಕೂ ಯಾವ ಸಂಬಂಧವೂ ಇಲ್ಲವೆಂದು ನಾಪತ್ತೆಯಾದ ಲೋಕಲ್ ತಾರೆಗಳಿಗೂ, ನೆಲಕ್ಕಿಳಿದು ಸ್ವಸ್ಥ ಸಮಾಜ ಕಟ್ಟುವ ಕೆಲಸಕ್ಕೆ ಕೈಜೋಡಿಸುತ್ತಿರುವ ಅಮೀರ್ ಖಾನ್ ಗೂ ಇರುವ ಸ್ಪಷ್ಟ ವ್ಯತ್ಯಾಸ. ಲವ್ ಯು ಅಮೀರ್.                      ]]>

‍ಲೇಖಕರು G

June 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

3 ಪ್ರತಿಕ್ರಿಯೆಗಳು

 1. Mallikarjuna Hosapalya

  ಇದೇ ಅಮೀರ್ ಖಾನು ವರ್ಷಾನುಗಟ್ಟಲೆ ಕೊಕಾ ಕೋಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಿದೆ. ಸಾಫ್ಟ್ ಡ್ರಿಂಕ್ಸ್ ಗಳಲ್ಲಿ ವಿಷಕಾರಕ ಅಂಶಗಳಿವೆ ಎಂದು ದೆಹಲಿಯ ಡೌನ್ ಟು ಅರ್ಥ್ ಪತ್ರಿಕೆ ವರದಿ ಮಾಡಿದಾಗ ಇದೇ ಅಮೀರ್ ಖಾನ್ ಕೋಲಾದ ಫ್ಯಾಕ್ಟರಿಯಲ್ಲಿ ಅಡ್ಡಾಡುತ್ತಾ ನಮ್ಮ ಬ್ರಾಂಡ್ ಸೇಫ್ ಎಂದು ವೈದ್ಯರಂತೆ ಹೇಳಿಕೆ ಕೊಡುವಂತಹ ಜಾಹೀರಾತನ್ನೂ ನಾವು ನೋಡಿದ್ದೇವೆ.
  ನಮ್ಮ ಮನೆಗೆ ಯಾರಾದರೂ ಬಾಯಾರಿತೆಂದು ಬಂದಾಗ ಏನು ಮಾಡುತ್ತೇವೆ. ತಣ್ಣನೆ ನೀರು ಕೊಡುತ್ತೇವೆ, ಎಳನೀರು ಕೊಡುತ್ತೇವೆ. ಕೆಲವೆಡೆ ಬೆಲ್ಲ -ಕಬ್ಬಿನ ಉತ್ಪನ್ನ- ಮತ್ತು ನೀರು ಕೊಡುತ್ತಾರೆ. ಆದರೆ ಅಮೀರ್ ಖಾನನ ಒಂದು ಕೋಲಾ ಜಾಹೀರಾತು ಹೀಗಿದೆ.
  ಅಮೀರ್ ಒಂದು ಕಡೆ ಕುಳಿತಿರುತ್ತಾನೆ. ಕೆಲ ಹೆಣ್ಣು ಮಕ್ಕಳು ಅವನ ಬಳಿ ಬಂದು ಬಾಯಾರಿಕೆ ಎಂದು ಹೇಳುತ್ತಾರೆ. ಆತ ಅಲ್ಲಿರುವ ತೆರೆದ ಬಾವಿಗೆ ಬಕೆಟ್ ಬಿಟ್ಟು ಕೋಲಾ ಬಾಟಲಿಗಳನ್ನು ತೆಗೆದುಕೊಡುತ್ತಾನೆ. ಆ ಇಡೀ ದೃಶ್ಯದ ಹಿನ್ನೆಲೆಯಲ್ಲಿ ತೆಂಗಿನಮರಗಳು ಮತ್ತು ಕಬ್ಬಿನ ಗದ್ದೆಗಳು ಇರುತ್ತವೆ.
  ಇದು ಬಾಯಾರಿದಾಗ ಇಡೀ ನಮ್ಮ ಭಾರತೀಯ ಸಂಪ್ರದಾಯ ಅನುಸರಿಸುವ ಪದ್ಧತಿಗಳನ್ನು ಒಡೆಯುವ ಜಾಹೀರಾತು. ಬಾಯಾರಿದಾಗ ಕೇವಲ್ ಕೊಕ್ ಮಾತ್ರ ಕುಡಿಯಬೇಕು ಎಂದು ನಮ್ಮ ಮನಸ್ಸುಗಳನ್ನು ಕಲುಷಿತಗೊಳಿಸುವ ಜಾಹೀರಾತು.

  ಪ್ರತಿಕ್ರಿಯೆ
 2. Ramya

  Even we love Amir Khan. But, not like you writers who romantize things make people god. I don’t know when will our writers stop UGRA PRATAPA.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: