ಅದೆಲ್ಲಿ ಹಾರಿ ಹೋದವೋ ಆ ಎಲ್ಲ ಹಕ್ಕಿಗಳು , ಆ ಎಲ್ಲ ಚಿಂತನೆಗಳು

ರವಿವರ್ಮ ಹೊಸಪೇಟೆ

ಬರ ಅಂದ್ರೆ ಎಲ್ಲರಿಗು ಇಷ್ಟ …… ಸಾಯಿನಾಥ್ ಅವರ ಚಿಂತನೆ, ಅದಕ್ಕೆ ಪ್ರತಿಕ್ರಯಿಸಿದ, ಸ್ಪಂದಿಸಿದ ಬರಹಗಳನ್ನು, ಆ ಅರ್ಥಪೂರ್ಣ ಕಾರ್ಯಕ್ರಮ, ಅದು ಉಂಟುಮಾಡಿದ ಸಂಚಲನ, ಸಾಯಿನಾಥ ಅವರ ವಿಚಾರಧಾರೆ , ಆ nero guests  ಚಿತ್ರ ಎಲ್ಲವು ನನ್ನನ್ನು ತುಂಬಾ ಕಾಡುತ್ತಿವೆ, ಇನ್ನು ಪುಸ್ತಿಕೆ ತಲುಪಿಲ್ಲ, ಅದಷ್ಟು ಬೇಗ ಓದಬೇಕೆನ್ನುವ ಉತ್ಕಟತೆಯಲ್ಲಿ ಇರುವಾಗ ಎಂ,ಎಸ್ ಸತ್ಯು ಅವರ ಬರ ಸಿನೆಮಾ ಕಾಡುತ್ತಿದೆ, ಬೀದರ್ ಜಿಲ್ಲೆಯ ಒಂದು ಕುಗ್ರಾಮದಲ್ಲಿ ಅದು ಚಿತ್ರಿಕರಣಗೊ೦ಡಿದ್ದು ಆ ಸಿನಿಮಾದಲ್ಲಿ ಜನನಿ ಹಾಡಿದ ಹಾಡು ಕೂಡ “ಒಂದಾನೊಂದು ಊರೂ , ಆ ಊರಿಗೆ ಮಳೆ ಇಲ್ಲ .ಆ ಊರಿಗೆ ಬೆಳೆ ಇಲ್ಲ , ಮಳೆರಾಯ ಕ್ವಾಪದಲಿ ದೇಶಾಂತರ ಹೋಗವನೆ, ಅ೦ದಾವೆ ಹೋಯಿತಲ್ಲೋ, ಚಂದಾವೆ ಹೋಯಿತಲ್ಲೋ, ಬಡವನ ದನವೊಂದು ಸಗಣಿಯ ಇಕ್ಕದೆ ನೆಲವ ಸಾರಿಸಲಿಲ್ಲ,…….’ ಹಿಂದೆ ಸಮುದಾಯ ಸಂಘಟನೆ ರಾಜ್ಯಾದ್ಯಂತ ಜಾಥಗಳನ್ನು ಹಮ್ಮಿಕೊಂಡು ಇಡೀ ನಾಡಿನ ಪ್ರಗತಿಪರ ಶಕ್ತಿಗಳನ್ನು ಒಗ್ಗೂಡಿಸಿ, ನಾಟಕ, ಹಾಡು, ಸಂವಾದ, ಚರ್ಚೆ, ಪ್ರತಿಭಟನೆ, ಮೂಲಕ ಈ ನಾಡಿನಲ್ಲಿ ಒಂದು ಹೊಸ ಪ್ರವಾಹವನ್ನೇ ತಂದಿತ್ತು. ಅದೆಲ್ಲಿ ಹಾರಿ ಹೋದವೋ ಆ ಎಲ್ಲ ಹಕ್ಕಿಗಳು , ಆ ಎಲ್ಲ ಚಿಂತನೆಗಳು ….. ಆಗ ಹಾಡುತ್ತಿದ್ದ ಎರಡು ಬರದ ಹಾಡುಗಳು ಪ್ರೇಕ್ಷಕರನ್ನು ಮೂಕ ವಿಸ್ಮಯರನ್ನಾಗಿಸಿದ್ದವು, ಅದೆಷ್ಟೋ ಸಾರಿ ನಾನು ಈ ಹಾಡುಕೇಳುತ್ತ ಅತ್ತುಬಿಟ್ಟಿದ್ದೆ …….. ಬರದ ಕಾಲದಲ್ಲಿ ಸರಕಾರ “ಕೂಲಿಗಾಗಿ ಕಾಳು” ಕೊಡುವ ಪದ್ಧತಿ ಇಂದಿಗೂ ಇದೆ, ಅಲ್ಲಿ ಆ ಅವಧಿಯಲ್ಲಿ ತನ್ನ ಗೋದಾಮು ನಲ್ಲಿರುವ ಬಹುಕಾಲದ ಹಿಂದಿನ ಅಕ್ಕಿಯನ್ನು ಕೂಲಿಗಾಗಿ ಕೊಡುವ, ಅದನ್ನು ತಿ೦ದ ಮೇಲಾದ ಪರಿಣಾಮವನ್ನು ಈ ಜನಪದ ಹಾಡು ಹೃದಯಂಗಮವಾಗಿ ಚಿತ್ರಿಸಿದೆ . ಅನ್ನೆಕಾರ ಅರಸು ನಿನ್ನ ಸಂಬಳ ಸಾಕಯ್ಯ, ಹನ್ನೆರಡು ವರ್ಷದ ಹಳೆ ಅಕ್ಕಿ ಅನ್ನವುಂಡು , ಚೆನ್ನೀಗ ನನ ತಮ್ಮ ಬಡಾವಾದ, ಬಡವರು ಸತ್ತರೆ, ಸುಡಲಾಕ ಸೌದಿಲ್ಲೊ , ಒಡಲಾ ಬೆನ್ಕ್ಯಗಾ ಹೆಣ ಬೆಂದೂ . ಓದಲ ಬೆನ್ಕ್ಯಗಾ ಹೆಣ ಬೆಂದೂ ,ದ್ಯಾವರಾ , ಬಡವರಿಗೆ ಸಾವಾ ಕೊಡಬ್ಯಾಡೋ……… ೨ ಬಣ್ಣದ ಗುಬ್ಯಾರು ಮಳೆರಾಯ , ಅವರು ಮಣ್ಣಾಗಿ ಹೋದಾರು ಮಳೆರಾಯ, ಬಣ್ಣದ ಗುಬ್ಯಾರು ,ಮಣ್ಣಾಗಿ ಹೋದಾರು , ಅನ್ಯಾದ ದಿನ ಬಂದು ಮಳೆರಾಯ . ಒಕ್ಕಲ ಗೆರ್ಯಾಗ ಮಳೆರಾಯ , ಅವರು ಮಕ್ಕಳ ಮರ್ಯಾರೋ ಮಳೆರಾಯ, ಮಕ್ಕಳ ಮಾರಿ, ರೊಕ್ಕ ಹಿಡಕೊಂಡು , ಬತ್ತಂತ ತಿರಿಗ್ಯರೋ ಮಳೆರಾಯ . ಗಂಡುಳ್ಳ ಬಾಲ್ಯಾರೋ ಮಳೆರಾಯ , ಅವರು ಬಿಕ್ಷಕ ಹೊ೦ಟಾರೋ  ಮಳೆರಾಯ ಗಂಡುಲ್ಲ ಬಾಲ್ಯಾರೋ ಬಿಕ್ಷಕ ಹೊ೦ಟಾರೋ ಅನ್ಯಾದ ದಿನಬಂದು ಮಳೆರಾಯ . ಸೋಗಿ ಹಿತ್ತಿನ್ಯಾಗ ಮಳೆರಾಯ , ಅವರು ಅಪುವನ್ನು ಬೇರಿಸ್ಯರೋ ಮಳೆರಾಯ ಸಣ್ಣ ಕೂಸಿಗೆ ಮನ್ನಿಸಿ ಉಣಿಸ್ಯಾರೋ, ಕಣ್ಣನ್ನೇ ಮುಚ್ಯವೋ ಮಳೆರಾಯ ನೀ ಯಾವಾಗ ಬಂದೆಪ್ಪ ಮಳೆರಾಯ   ಹೀಗೆ ಇನ್ನು ಹತ್ತಾರು ಹಾಡುಗಳನ್ನು ಹಲಗೆ ಹೊಡೆಯುತ್ತ ಹಾಡಿದಾಗ ಪ್ರೇಕ್ಷಕರು ಅದಕ್ಕೆ ಸ್ಪಂದಿಸಿ ಕಣ್ಣೇರು ಹಾಕಿದ್ದು ನನಗಿನ್ನೂ ಕಾಡುತ್ತಿದೆ.  ]]>

‍ಲೇಖಕರು G

July 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

2 ಪ್ರತಿಕ್ರಿಯೆಗಳು

  1. t.surendra rao

    priya geleya, nimma nenapige rekke hachchikondu haaruviraadare eegalu aa hakkigalu mattu chintanegalu jeevanta siguttave. samudaaya innoo jeevantavaagide. nimmanta samaajada damanitara novige midiyuva geleyaru sikkare adu modalinante kriyaasheelavaguttade. banni kaijodisi.samparkisi dooravaani 9449528643

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: