ಅದೇ ಜಾತಿಕಾರಣದಿಂದಲೇ ‘ದೇಶಕಾಲ’ದ ಇಡೀ ಕೆಲಸವನ್ನು ಸಾರಾಸಗಟಾಗಿ ಬೈದಿದ್ದೀರಿ..

‘ದೇಶ ಕಾಲ’ ವಿಶೇಷ ಸಂಚಿಕೆ ಬಗ್ಗೆ ಮಂಜುನಾಥ್ ಲತಾ ಹಾಗೂ ಚಂದ್ರಶೇಕರ್ ಐಜೂರು ಬರೆದ ಲೇಖನ ಪ್ರಕಟವಾಗಿತ್ತು.

ಜುಗಾರಿ ಕ್ರಾಸ್ ನಲ್ಲಿ ಅದನ್ನು ಚರ್ಚೆಗೆ ಇಡಲಾಗಿತ್ತು.

ಕವಿ ಡಿ ಎಸ್ ರಾಮಸ್ವಾಮಿ ಬರೆದ ಪ್ರತಿಕ್ರಿಯೆಯನ್ನು ಇಲ್ಲಿ ನೀಡಿದ್ದೇವೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ-

ಪ್ರಿಯ ಐಜೂರು ಅವರಲ್ಲಿ,

ನಮಸ್ಕಾರ. ಈಗಷ್ಟೇ ಗೌರಿ ಲಂಕೇಶ್ ಪತ್ರಿಕಯಲ್ಲಿ ಲೇಖನ ಓದಿ ಮುಗಿಸಿ, ಇಮೇಲ್ ನೋಡಿದರೆ ಅದೇ ಲೇಖನ ಗೆಳೆಯ ಸಂದೀಪ ನಾಯಕ್ ಫಾರ್ವರ್ಡ್ ಮಾಡಿದ್ದಾನೆ. ಪತ್ರಿಕೆಯಲ್ಲಿನ ಲೇಖನಕ್ಕಿಂತಲೂ ಮೂಲ ಲೇಖನ ಹೆಚ್ಚು powerful ಆಗಿದೆ. ಬರಹದ ಶೈಲಿ ಮತ್ತು ವ್ಯಂಗ್ಯ ಇಷ್ಟವಾದರೂ ಒಟ್ಟೂ ಲೇಖನದ ಮೂಲಕ ನೀವೇನು ಹೇಳಹೊರಟಿದ್ದೀರೋ ಅನ್ನುವುದಕ್ಕಿಂತಲೂ ನೀವೂ ಸಹ ಅದೇ ಜಾತಿಕಾರಣದಿಂದಲೇ ದೇಶಕಾಲದ ಇಡೀ ಕೆಲಸವನ್ನು ಸಾರಾಸಗಟಾಗಿ ಬೈದಿದ್ದೀರಿ ಅನ್ನಿಸಿತು.

ಇಷ್ಟಕ್ಕೂ ಪ್ರತಿ ಪತ್ರಿಕೆಯೂ ಒಂದೊಂದು ಹಿಡ್ಡನ್ ಅಜೆಂಡಾ ಇಟ್ಟುಕೊಂಡೇ ವಿಶೇಷ ಸಂಚಿಕೆ ರೂಪಿಸುತ್ತವೆಂಬ ಸಾಮಾನ್ಯ ಸತ್ಯ ನಮ್ಮೆಲ್ಲರಿಗೂ ಗೊತ್ತು. ಅದು ಕಮರ್ಷಿಯಲ್ ಆಗಿರಬಹುದು ಅಥವಾ ಆ ಪತ್ರಿಕೆ ಒಪ್ಪಿಕೊಂಡ ತತ್ವ ಸಿದ್ಧಾಂತವೇ ಆಗಿರಬಹುದು. ಮೂಲ ’ಲಂಕೇಶ್ ಪತ್ರಿಕೆ’ ನಮ್ಮೆಲ್ಲರಲ್ಲೂ ಹುಟ್ಟಿಸಿದ್ದ ಜಾಗೃತಿ, ರಾಜಕೀಯ ಪ್ರಜ್ಞೆ, ಸಾಂಸ್ಕೃತಿಕ ಚಿಂತನೆಗಳನ್ನು ಈಗಿನ ಎರಡೆರಡು ಲಂಕೇಶ್ ಆಗಲೀ ಅಥವ ನೀವಿಬ್ಬರೂ ಕೆಲಸ ಮಾಡಿದ ಕನ್ನಡ ಟೈಮ್ಸ್ ಆಗಲಿ ಮಾಡಲು ಸಾಧ್ಯವಾಯಿತೇ ಅನ್ನುವುದೂ ಇಲ್ಲಿ ಮುಖ್ಯ.

ನೀವು ಒಪ್ಪಿ ಅಥವ ಬಿಡಿ. ದೇಶಕಾಲ ವಿಶೇಷದಲ್ಲಿರುವ ಅನಂತಮೂರ್ತಿ, ಜಯಂತ ಕಾಯ್ಕಿಣಿ, ಕಾಗಿನೆಲೆ, ನುಗಡೋಣಿಯವರುಗಳ ಕತೆ, ವಸುದೇಂಧ್ರನ ಕಾದಂಬರಿ, ಕನ್ನಡ ನಾಡಿನ ಭವಿಷ್ಯ ಕುರಿತಂತೆ ಇರುವ ಸಂದರ್ಶನಗಳ ಮಾಲಿಕೆ, ನಿಜಕ್ಕೂ ಬಹಳ ಕಾಲ ಮನಸ್ಸಲ್ಲಿ ನಿಲ್ಲುವಂಥವು. ಆದರೆ ೨೧ ಲೇಖಕರ ಆಯ್ಕೆ, ೨೧ ಪುಸ್ತಕಗಳು ಇತ್ಯಾದಿ ಯಾದಿಯೆಲ್ಲ ಅವರವರ ಮರ್ಜಿಗಳು. ಈಗ ಅದೇ ಆಯ್ಕೆಸಮಿತಿಗೆ ಕೇಳಿದರೆ ಬೇರೆಯದೇ ಪಟ್ಟಿಕೊಟ್ಟಾರು. ಸಂಚಿಕೆಯ ಬೆಲೆಯ ಬಗ್ಗೆ ನಿಮ್ಮ ತಕರಾರು ಒಪ್ಪಬಹುದಾದರೂ ಜಾಹೀರಾತಿನ ಬೆಂಬಲವಿಲ್ಲದೇ ಪ್ರಕಾಶನ ಕೆಲಸ ಎಷ್ಟು ದುಬಾರಿಯದು ಎನ್ನುವುದೂ ಎಲ್ಲರಿಗೂ ತಿಳಿದ ಸತ್ಯವೇ ಆಗಿದೆ.

ಕಡೆಗೊಂದು ಮಾತು:

ನೀವು ಬಹುತೇಕ ಲೇಖಕರನ್ನು ಜಾತಿಕಾರಣದಿಂದಲೇ ಒಪ್ಪುವ/ನಿರಾಕರಿಸುವ ಅಪಾಯದ ಹಾದಿ ತುಳಿಯುತ್ತಲಿದ್ದೀರಿ. ಏಕೆಂದರೆ ಮೊನ್ನೆ ಕೆಂಡಸಂಪಿಗೆಯ ಕುರಿತು ಬರೆದಾಗಲೂ ಅನ್ಯಥಾ ಜಾತಿಯನ್ನೇ ಮೂಲವನ್ನಾಗಿಸಿಕೊಂಡೇ ನಿಮ್ಮೆಲ್ಲ ವಾದವನ್ನೂ ಮಂಡಿಸಿದ್ದಿರಿ. ಇಂಥ ಮಾತುಗಳು ಮುಜುಗರ ಹುಟ್ಟಿಸುತ್ತವೆ.ಇನ್ನು ಅಕಾರಣ ಎಲ್ಲರನ್ನೂ ಚೆಡ್ಡಿಗಳನ್ನಾಗಿಸುವುದು ಮತ್ತು ಬೈರಪ್ಪನವರ ಹೆಸರು ಎಳೆದು ತರುವುದು ಏಕೆ? ಕುವೆಂಪು ಅವರನ್ನು ಕೇವಲ ಶೂದ್ರತ್ವದಿಂದಲೇ ನೋಡುವುದೂ ಕೂಡ ಅಪಾಯಕಾರಿ.ಇದು ನನ್ನ ಪ್ರಾಮಾಣಿಕ ಅನ್ನಿಸಿಕೆ. ಈ ಮೂಲಕ ದೇಶಕಾಲವನ್ನಾಗಲೀ ಅಥವ ವಿಜಯಕರ್ನಾಟಕವನ್ನಾಗಲೀ ಬೆಂಬಲಿಸುತ್ತಿಲ್ಲ. ಹೆಚ್ಚು ಹೆಚ್ಚು ಪಾರದರ್ಶಕವಾಗುತ್ತಿರುವ ಈ ಕಾಲದಲ್ಲಾದರೂ ನಾವೆಲ್ಲ ದೈನೇಸಿತನ ಬಿಟ್ಟು ನಿಜವನ್ನೇ ನಂಬುವವರಾಗೋಣ. ವಿಶ್ವಾಸವಿರಲಿ.

-ಡಿ.ಎಸ್.ರಾಮಸ್ವಾಮಿ

‍ಲೇಖಕರು avadhi

June 26, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

6 ಪ್ರತಿಕ್ರಿಯೆಗಳು

 1. ಸಂದೀಪ್ ಕಾಮತ್

  ಪ್ರೀತಿಯ ವಿವೇಕ್ ಶಾನಭಾಗ ರೇ,

  ತಮ್ಮ ’ ದೇಶಕಾಲ ’ ವಿಶೇಷ ಸಂಚಿಕೆಯನ್ನು ನಾನು ಬಹಳ ಖುಷಿಯಿಂದ ಓದಿದ್ದೆ.ಆದರೆ ಈಗ ಪಶ್ಚಾತ್ತಾಪ ಆಗ್ತಾ ಇದೆ.

  ನಾನು ಬೈ ಮಿಸ್ಟೇಕ್ ಎಲ್ಲಾ ಲೇಖನ ,ಕಥೆ,ಕವನಗಳನ್ನು ಓದಿದ್ದೇನೆ.ಓದಿದ ಕಥೆ ಕವನಗಳನ್ನು ಈಗ ಡಿಲೀಟ್ ಮಾಡಲು ನನ್ನ ಮೆದುಳು ಹಾರ್ಡ್ ಡಿಸ್ಕ್ ಅಲ್ಲ .ಹಾಗಾಗಿ ಏನೂ ಮಾಡೊದಿಕ್ಕೆ ಆಗಲ್ಲ .ಆ ಬಗ್ಗೆ ನನಗೆ ಬೇಸರವಿದೆ.ಐಟಿ ಬಿಟಿಯವರ ಕೃಪೆಯಿಂದ ಏನಾದ್ರೂ ಮೆದುಳಿನಿಂದ ’ಬೈ ಮಿಸ್ಟೇಕ್ ಆಗಿ ಓದಿದ’ ಆಯ್ದ ಕಥೆ ಕವನಗಳನ್ನು ಡಿಲೀಟ್ ಮಾಡುವ ಸೌಲಭ್ಯ ಒದಗಿ ಬಂದಲ್ಲಿ ನನ್ನಂಥ ಬಡಪಾಯಿಗಳಿಗೆ ಅನುಕೂಲವಾಗುತ್ತದೆ.

  ನನ್ನ ತಕರಾರನ್ನು ಓದಿ ಮುಂದಿನ ’ ದೇಶಕಾಲ’ ದ ಹೊತ್ತಿಗೆ ನಿಮ್ಮ ತಪ್ಪನ್ನು ಸರಿಪಡಿಸಿದಲ್ಲಿ ಬಹಳ ಅನುಕೂಲವಾಗುತ್ತದೆ.

  ನಾನು ದೇಶಕಾಲದ ಎಲ್ಲಾ ಕಥೆ ,ಕವನ,ಲೇಖನಗಳನ್ನು ಲೇಖಕರ ಜಾತಿ ಗೊತ್ತಿಲ್ಲದೆ ಓದಿದೆ ಅನ್ನೋದೇ ನನ್ನ ತಕರಾರು.ನಾನು ಐಟಿ ಉದ್ಯಮದಲ್ಲಿ ಕೆಲಸ ಮಾಡುತ್ತಿರುವುದರಿಂದ ನನಗೆ ಬಹುತೇಕ ಲೇಖಕರ ಜಾತಿ ,ಪಂಥ ,ಅವರು ಬಲ ಪಂಥೀಯರೋ ಎಡಪಂಥೀಯರೋ ಅನ್ನುವದರ ಅರಿವು ಅಷ್ಟೊಂದು ಇಲ್ಲ.ಒಂದು ಬೇಸರದ ಸಂಗತಿ ಅಂದ್ರೆ ಈ ಲೇಖಕರ ಜಾತಿಗಳನ್ನು ಗೂಗಲ್,ವಿಕಿಪಿಡಿಯಾದಲ್ಲಿ ಹುಡುಕಿದರೂ ಆ ಬಗ್ಗೆ ಸರಿಯಾದ ಮಾಹಿತಿ ದೊರಕಿಲ್ಲ.ಹಾಗಾಗಿ ಮುಂದಿನ ’ದೇಶಕಾಲ’ ವಿಶೇಷ ಸಂಚಿಕೆಯಲ್ಲಿ ಎಲ್ಲಾ ಲೇಖಕರ ಕಿರು ಪರಿಚಯವನ್ನು(ಜಾತಿ,ಉದ್ಯೋಗ ,ಎಡಪಂಥ/ಬಲಪಂಥ etc) ಹಾಕಿದಲ್ಲಿ ನಮ್ಮಂಥ ಬಡಪಾಯಿಗಳು ‘ ಆಯ್ದ ’ ಲೇಖಕರ ಲೇಖನ,ಕಥೆ,ಕವನಗಳನ್ನಷ್ಟೇ ಓದಲು ಅನುಕೂಲವಾಗುತ್ತದೆ.

  ನಿಮ್ಮ ಸರ್ ನೇಮ್ ಶಾನಭಾಗ ಅಂತ ಇರೋದ್ರಿಂದ ನೀವೂ ಕೂಡ ಕೊಂಕಣಿ ಅನ್ನೋ ಅನಿಸಿಕೆಯಿಂದ ನಾನು ಈಗಾಗಲೇ ಖರೀದಿಸಿರೋ ’ ದೇಶಕಾಲ ’ವನ್ನು ಹಿಂತಿರುಗಿಸುತ್ತಿಲ್ಲ.ಒಂದು ವೇಳೆ ನೀವು ಬೇರೆ ಶಾನಭಾಗರಾಗಿದ್ದಲ್ಲಿ ದಯವಿಟ್ಟು ತಿಳಿಸಿ ’ದೇಶಕಾಲ ವಿಶೇಷ’ ಸಂಚಿಕೆಯನ್ನು ವಿಶೇಷ ಚೀಲದಲ್ಲಿ ವಾಪಾಸ್ ಕಳಿಸುತ್ತೇನೆ.

  ಪ್ರೀತಿಯಿಂದ(ಕೊಂಕಣಿಯಾದಲ್ಲಿ ಮಾತ್ರ),
  ಸಂದೀಪ್ ಕಾಮತ್

  ಪ್ರತಿಕ್ರಿಯೆ
 2. Jyothi

  Jaathi geethi, konkani ginkani anthella oduvaadadre raajakaaranigaLigu namagu yaava vyatyasavoo illa.. oLLeyadella ellindale barali adannu sweekarisona. Kuvempu badukiddare thumba novu anubhavista iddaru. Shhodra.. Brahmana ivella baree vote bank ge maatra.. katheyalli nyoonate iddare adara bagge `arogyakara’ charche aagali.. ee thharada cheap charche dayavittu beda.

  ಪ್ರತಿಕ್ರಿಯೆ
 3. Sandhya

  First of all the people who have written the article are reading the Deshakaala with “POORVA GRAHA PEEDITA ALOCHANEGALU” so they have come out with these thoughts.
  Ofcourse when I saw Deshakala vishesha first : I too felt , why some prominent people have not been included’ anta. Always there is scope for the improvement allava. But we must learn to appreciate the effort/spirit which is put behind this book……..maatanaadishtu idu easy allavalla!
  But the peple who have written this article themselves are suffering from Jaatyadharita Keelarime anta anisuttide.

  ಪ್ರತಿಕ್ರಿಯೆ
 4. aditi

  sandya madam avare, idella yava effortu?spiritu?. maasti entha hottinalli patrike tandiddare gotte? fha. gu. halakatti kashtapattu sampadisida patrikeya sanchikegalannu nodiddira? adigaru endadaru pratibhege anyaya madiddara? champa 45 vrshagalinda sankramana tarutiddarembudu tilidideye tayi? avaru tanda vishesh sanchikegala lekka gotte? emargency kaladallu vishesh sanchike tandiddare. deshakaladavarige hanada korateyitte? bareyalu nintavara korateyitte? kharidisalu iruva NRI odugara korateyitte?. innoo sari madabahudittu…. sarimadabahudittu…. anta nimge namge holeyodadare avarige holeyade iruttadeye?. olleya kelasa madidare jati meeri preetisona. illdiddare jatiya prshne ashtu sulbhavagi tallihalu baruvudilla. jatiya prshne ettidagella avaru jativadigalu antadare adu nimma hosakalada maudya. tayi onchooru kannu teredu nodi. manushyana evil ashtu saralavadaddalla.

  ಪ್ರತಿಕ್ರಿಯೆ
 5. B.Rajesh, Mysore

  ರಾಮಸ್ವಾಮಿಯವರೆ, ಈಗ ನನಗೆ ತಿಳಿದದ್ದೇನೆಂದರೆ, ನೀವು ಇಲ್ಲಿಯವರೆಗೆ ರೂಪಿಸಿದ ಯಾವುದೇ ಸಂಚಿಕೆಗಳಾಗಿರಲಿ, ಲೇಖನಗಳಾಗಿರಲಿ ಯಾವುದೇ ಸಾಹಿತ್ಯಿಕ ಚಟುವಟಿಕೆಗಳ ಹಿಂದೆ ಒಂದು ಹಿಡನ್ ಅಜೆಂಡ ಇದೆ ಎಂದು. ಇದ್ದರೆ ಅದು ಯಾವುದು? ಹಾಗೆ ಇಲ್ಲಿಯವರೆಗಿನ ಯಾವ ಸಂಚಿಕೆಗಳು ಅಂತಹ ಒಂದು ಹಿಡನ್ ಅಜೆಂಡಾದಿಂದ ರೂಪಿತವಾಗಿದೆ ಎಂದು ತಿಳೀಸುವಿರಾ? ಪ್ರತಿ ವಿಶೇಷ ಸಂಚಿಕೆಗಳಿಗು ತನ್ನದೇ ಆದ ಒಂದು ಉದ್ದೇಶವಿರುತ್ತದೆ. ಹೀಗೆ ಸಾರ್ವಜನಿಕವಾಗಿ ನಿಮ್ಮ ಹಿಡನ್ ಅಜೆಂಡಾಗಳ ಬಗ್ಗೆ ಪ್ರಸ್ತಾಪಿಸಿ ನಿಮ್ಮ ಬೂಟಾಟಿಕೆತನವನ್ನು ಬಯಲು ಮಾಡಿದ್ದೀರಿ ಎಂದೇ ನನ್ನ ಅನಿಸಿಕೆ.

  ನಿಮ್ಮ ಪ್ರತಿರ್ಕಿಯೆ ವಸ್ತುನಿಷ್ಟವಾಗಿಲ್ಲ ಹಾಗೆ ಲೇಖಕರ ಬಗೆಗಿನ ಹಾಗೂ ಲಂಕೇಶ್ ಪತ್ರಿಕೆ ಬಳಗ ಹಾಗೂ ಕನ್ನಡ ಟೈಮ್ಸ್ ಪತ್ರಿಕೆಯ ಬಗೆಗಿನ ನಿಮ್ಮ ಪ್ರತಿರ್ಕಿಯೆ ಕೂಡ ಪೂರ್ವಗ್ರಹಪೀಡಿತ. ನಿಮ್ಮ ಪ್ರಕಾರ ದೇಶ ಕಾಲ ಈ ಐದು ವರ್ಷದಲ್ಲಿ ಮಾಡಿರುವಂತ ಸಾಧನೆಯಾದರು ಏನು ತಿಳಿಸಿ.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಸಂದೀಪ್ ಕಾಮತ್Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: