ದಿನೇಶ್ ಕುಮಾರ್
ಡಾ.ಯು.ಆರ್.ಅನಂತಮೂರ್ತಿ ಮತ್ತೆ ಬರ್ತಾ ಇದ್ದಾರೆ ತಮ್ಮ ಹೊಸ ಕಾದಂಬರಿಯ ಜತೆಯಲ್ಲಿ. ಆದರಿದು ಹೊಸ ಕಾದಂಬರಿಯಲ್ಲ, ಸಂಸ್ಕಾರ ಬರೆಯುವುದಕ್ಕೂ ಮುನ್ನ 1959ರಲ್ಲಿ ಬರೆದ ಅಪ್ರಕಟಿತ ಕಾದಂಬರಿ.
ದಿನೇಶ್ ಕುಮಾರ್
ಡಾ.ಯು.ಆರ್.ಅನಂತಮೂರ್ತಿ ಮತ್ತೆ ಬರ್ತಾ ಇದ್ದಾರೆ ತಮ್ಮ ಹೊಸ ಕಾದಂಬರಿಯ ಜತೆಯಲ್ಲಿ. ಆದರಿದು ಹೊಸ ಕಾದಂಬರಿಯಲ್ಲ, ಸಂಸ್ಕಾರ ಬರೆಯುವುದಕ್ಕೂ ಮುನ್ನ 1959ರಲ್ಲಿ ಬರೆದ ಅಪ್ರಕಟಿತ ಕಾದಂಬರಿ.
ಪ್ರಕಾಶ್ ಕೊಡಗನೂರ್ ಮೆದುಳು, ಹೃದಯ – ಎರಡಕ್ಕೂ ಏಕಕಾಲಕ್ಕೆ ನಾಟುವಂತೆ ಮಾತಾಡಬಲ್ಲ, ಬರೆಯಬಲ್ಲ ಸಮಕಾಲೀನ ಕನ್ನಡದ ಕೆಲವೇ ಲೇಖಕರಲ್ಲಿ...
ಇಲ್ಲಿ ಅಶೋಕರ ಕಿರುಪುಸ್ತಕದ ಬಗ್ಗೆ ಹೇಳುವುದಕ್ಕಿಂತ ಮುಂಚೆ ಕೆಲವು ವಾಕ್ಯಗಳನ್ನು ನೀಡುತ್ತೇನೆ. ಈ ವಾಕ್ಯಗಳನ್ನು ಓದಿ ನಿಮಗೆ ಯಾವ ಭಾವನೆ...
ಬರಗೂರು ರಾಮಚಂದ್ರಪ್ಪ ಡಾ. ಅರ್ಚನಾ ಅವರು ಒಂದು ದಿನ ನಮ್ಮ ಮನೆಗೆ ಬಂದರು. ಅವರ ಪರಿಚಯ ಹೆಚ್ಚೇನೂ ಇರಲಿಲ್ಲ. ಅವರು ನನ್ನ ಗೆಳೆಯ ಡಾ. ಸಣ್ಣರಾಮ...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಕನ್ನಡ ಸಾಹಿತ್ಯ ಲೋಕದ ಡಾನ್ ಗಳಲ್ಲಿ ಶ್ರೀ ಅನಂತ ಮೂರ್ತಿ ಕೂಡ ಒಬ್ಬರು .ಒಂದು ಕಾಲದಲ್ಲಿ ನಮ್ಮಂತಹ ಪಡ್ಡೆಹುಡುಗರಿಗೆ ಓದುವ ಚಟ ಹಚ್ಚಿಕೊಟ್ಟ ಲೇಖಕರದ ಲಂಕೇಶ್,ಅನಂತಮೂರ್ತಿ, ತೇಜಸ್ವಿ, ಸುಬ್ಬಣ್ಣ ಕಾರಂತ, ಕಾರ್ನಾಡ್, ಬೇಂದ್ರೆ, ಕುವೆಂಪು, ದೇವನೂರು.ಆಲನಹಳ್ಳಿ,ಬೆಸಗರಹಳ್ಳಿ ಬ್ರೆಕ್ಟ್, marx ಹೀಗೆ,ಹೀಗೆ ನಾವು ಓದುತ್ತಿದ್ದ,ಪತ್ತೇದಾರಿ ,ಒಂದಿಸ್ತು adult magzinegalinda ನಮ್ಮನ್ನು ಸಾಹಿತ್ಯದ ಹುಚ್ಚಿನತ್ತ ಎಲೆದೊಯ್ದಿದ್ದರು, ಬೀಚಿ, ಶಾಂತಿನಾತ್ ದೇಸಾಯಿ ,ನಿರಂಜನ,ಸಿದ್ದಲಿಂಗಯ್ಯ ಪಟ್ಟಿ ದೊಡ್ಡದಿದೆ ಎಷ್ಟು ಓದಿದೆವೋ, ಎಷ್ಟು ದಕ್ಕಿಸಿಕೊಂದೆವೋ, ಒಮ್ಮೊಮ್ಮೆ ಸುಮ್ಮನೆ ಅವರ ಪುಸ್ತಿಕೆ ಕೈಲ್ಲಿ ಹಿಡಿದುಕೊಂಡು ನಾವು ಬುದ್ದಿ ಜೀವಿಗಳ ಫೋಸ್ ಕೊಡುತ್ತಿದ್ದೆವು ಅವರ ಕಥೆ ಕಾದಂಬರಿಗಳ ಕೆಲವು ಸಾಲುಗಳನ್ನು ನಮ್ಮ ನೋಟ್ ಬೂಕ್ನಲ್ಲೋ,ತರಗತಿಯ,ಬೋಅರ್ಡ್ನ ಮೇಲೆ, ಬರೆದು ಬಿಡುತ್ತಿದ್ದೆ,ಪಾಬ್ಲೋ ನೆರುಡ kavya ವನ್ನು ತೇಜಸ್ವಿನಿ ನಿರಂಜನ ಅನುವಾದಿಸಿದ್ದರು ಅದು ನನ್ನನ್ನು ಎಸ್ಟ್ ಕಾಡಿತ್ತು ಅಂದ್ರೆ ಅದನ್ನು ನುರ್ರರು ಸರಿ ಕಂಡ ಕಂಡಲ್ಲಿ ಬರೆದು ಹಾಕಿದ್ದೆ ಅದು ಹೀಗಿದೆ
“ನಾನೇಕೆ ಮಾತನಾಡುವುದಿಲ್ಲ
ಬಯಕೆಗಳ ಬಗ್ಗೆ,
ಬಳ್ಳಿಗಳ ಬಗ್ಗೆ ,
ನನ್ನ ನಾಡಿನ ,ಮಹಾ ಅಗ್ನಿ ಪರ್ವತಗಳ ಬಗ್ಗೆ,
ಎಂದು ನೀವು ಕೇಳುತ್ತೀರಿ ,
ನೋಡಿ- ಬೀದಿಯ ಮೇಲೆ ರಕ್ತವಿದೆ,
ರಕ್ತವಿದೆ ಬೀದಿಯ ಮೇಲೆ .
ಅನಂತಮೂರ್ತಿ ಅವರ ಕ್ಲಿಪ್ joint ಕಥೆಯಲ್ಲಿ ಒಂದುಮಾತು ನಾನಾಗ ಕಾಲೇಜ್ ಗೋಡೆಯ ಮೇಲೆ ಬರೆದು ಪ್ರಿನ್ಸಿಪಾಲರಿಂದ ಉಗಿಸಿಕೊಂಡಿದ್ದೆ
“ನನ್ನಂತೆ ಕಾಲೇಜಿನ ಮುಂದಿರುವ ಮರದ ಕೆಳಗೆ ಯಾವುದಾದರು ಒಬ್ಬ ಹುಡುಗ ಹುಡಿಗಿಯ ಜೊತೆ ಮಾತನಾಡುತ್ತ ನಿಂತಲ್ಲಿ ,ಅಪ್ರಬುದ್ಧ ಹುದುಗರಿದ್ದಿರಲಿ , ಪ್ರಭುದ್ದ ಅದ್ಯಾಪಕರ ಕಣ್ಣುಗಳು ಅವನ ಮೇಲೆ ” ಲಂಕೇಶರ ಅನುರೂಪ ಚಿತ್ರದ ಹಾಡು “ನೀನಿರುವುದು ನಿಜವಾದರೂ ನಿನ್ನ ಸಂಗ ಸಿಹಿಯಾದರು ,ಏಕಾಂಗಿ ನಾನು ,ಏಕಾಂಗಿ ನೀನು , ಶ್ರೀಕೃಷ್ಣನ ನಾಡಿನಲ್ಲೂ,ವೇದಾಂತದ ಜಾದಿನಲ್ಲು ಏಕಾಂಗಿ ನಾನು, ಏಕಾಂಗಿ ನೀನು ” ಏಕೋ ಅನಂತಮುತಿ ಹೊಸಪುಸ್ತಿಕೆ ಅಂದ್ರೆ ಎಲ್ಲ ನೆನಪಾಯ್ತು ಅವರ
“ನಾನು ಬ್ರಾಹ್ಮಣ್ಯ ಬಿಟ್ಟರು ಬ್ರಾಹ್ಮಣ್ಯ ನನ್ನನ್ನು ಬಿಡಲಿಲ್ಲ” ಅದನ್ನು ನನ್ನ ಗೆಳಯನಿಗೆ ಅವರ quote ಹೇಳಿ ನಾನು cigerette ಬಿಟ್ಟರು cigerette ನನ್ನನ್ನು ಬಿಡಲಿಲ್ಲ
ಅಂತಾ ಹೇಳುತಿದ್ದೆ ,ಅವರ “ಪ್ರೀತಿ, ಸಾವು,ಭಯ” ಪುಸ್ತಿಕೆಗೆ ಕಾದಿರುವೆ,ಈ ಹೊಸ ಪುಸ್ತಿಕೆಗಳ ಪರಿಚಯಿಸುತ್ತಿರುವೆ ಅವದಿಗೆ ನಾನು ಋಣಿ
ರವಿ ವರ್ಮ ಹೊಸಪೇಟೆ
ಅನಂತಮೂರ್ತಿಯವರ ‘ಹೊಸ’ ಕಾದಂಬರಿ ಒಂದು ರೀತಿಯಲ್ಲಿ ಸ್ತಬ್ಧವಾಗಿರುವ ಕನ್ನಡ ನುಡಿ ಲೋಕಕ್ಕೆ ಹೊಸ ಗಾಳಿಯನ್ನು ತರಲೆಂದು ಮೊದಲಿಗೆ ಬಯಸುವೆ. ಅನಂತಮೂರ್ತಿಯವರ ಸಂಸ್ಕಾರ, ಭಾರತೀಪುರ ಕಾದಂಬರಿಗಳೊಳಗೊಂಡಂತೆ ಅವರ ಅನೇಕ ಕತೆಗಳನ್ನು ಓದಿದ್ದೇನೆ. ಮೆಚ್ಚಿದ್ದೇನೆ. ನನಗೆ ಅವರು ದೊಡ್ಡ ಬರೆಹಗಾರ ಎನ್ನುವುದಕ್ಕಿಂತಲೂ ದೊಡ್ಡ ಚಿಂತಕನಾಗಿಯೇ ಅಭಿಮಾನ ಮೂಡಿಸುತ್ತಾರೆ. ಅಶ್ಟೇ ಒಳ್ಳೆಯ ಮಾತುಗಾರರಾದ ಅವರು ಈಗ ಹಾಸಿಗೆ ಹಿಡಿದಿರುವುದು ನಿಜಕ್ಕೂ ದಿಗಿಲು ಹುಟ್ಟಿಸುತ್ತದೆ. ಮುಂದೆ ಏನಾಗುವುದೋ ಎಂದು! ಅನಂತಮೂರ್ತಿಯವರು ಒಂದು ಮಟ್ಟಿಗೆ ಇಂದಿನ ಕನ್ನಡ ಪ್ರಪಂಚವನ್ನು ಎಲ್ಲ ರೀತಿಯಿಂದಲೂ ಪ್ರತಿನಿಧಿಸುತ್ತಿರುವವರು. ಅವರಿಲ್ಲದ ಕನ್ನಡ ನಾಡನ್ನ ಊಹಿಸಿಕೊಳ್ಳುವುದೂ ಕಶ್ಟ. ಅವರು ಮತ್ತೆ ಗೆಲುವಾಗಿ ಹೊಸಹೊಸತನ್ನ ಕನ್ನಡಕ್ಕೆ ನೀಡುವಂತಾಗಲಿ…