ಅನಾಮಿಕ ಕಾಮೆಂಟ್ ವಿರುದ್ಧ ಪತ್ರಕರ್ತರು

b

ಜಯಕುಮಾರ್. ಸಿ

ಹೌದು ಸರ್ ನೀವು ಪ್ರಸ್ಥಾಪಿಸಿರೋ ವಿಚಾರ ಗಂಭೀರವಾದುದಾಗಿದೆ, ಕೆಲವೊಮ್ಮೆ ಅನಗತ್ಯ ಚರ್ಚೆ, ವೈಯುಕ್ತಿಕ ನಿಂದನೆ, ಹೀಗೆ ಇನ್ನು ಏನೇನೋ ಮಾಡುತ್ತಾ ಒಂದು ಅನಾರೋಗ್ಯಕರ ವಾತಾವರಣ ಬ್ಲಾಗ್ ಲೊಕದಲ್ಲಿ ಸೃಷ್ಠಿಯಾಗಿದೆ, ಒಂದು ಸತ್ಯ ಗೊತ್ತಾ ನಮ್ಮ ನಡುವೆಯೇ ನಮ್ಮೆದುರಿಗೆ ಸಜ್ಜನರಂತೆ ನಡೆದುಕೊಳ್ಳುವ ಪತ್ರಕರ್ತ ಮಿತ್ರರು ಇಂಥಹ ‘ಪಾತಕ’ ಗಳಲ್ಲಿ ಭಾಗಿಯಾಗುತ್ತಿದ್ದಾರೆ, ಇನ್ನೊಂದು ಸತ್ಯವೆಂದರೆ ನಮ್ಮ ಬೆನ್ನಿನ ಹಿಂದಿನ ಸತ್ಯಗಳು(ಅವು ಸತ್ಯವೇ ಆಗಿದ್ದರೆ ಅಡ್ಡಿಯಿಲ್ಲ) ಮಿಥ್ಯಗಳು ಬಯಲಿಗೆ ಬರುತ್ತಿವೆ ಮತ್ತು ನೋವುಂಟು ಮಾಡುತ್ತಿವೆ.

ಅನಾಹುತಕಾರಿ ಬೆಳವಣಿಗೆಯೆಂದರೆ ಪತ್ರಕರ್ತರಲ್ಲದವರು ಪತ್ರಕರ್ತರ ಹೆಸರಿನಲ್ಲಿ ಬ್ಲಾಗ್ ಲೋಕಕ್ಕೆ ಸೇರ್ಪಡೆಯಾಗಿದ್ದಾರೆ. ಸತ್ಯ ಹೇಳಲೂ ಯಾವ ಹೆದರಿಕೆಯೂ ಬೇಕಿಲ್ಲ ಇದ್ದದನ್ನು ಇದ್ದ ಹಾಗೆ ಹೇಳಲು ‘ಅನಾನಿಮಸ್’ ಮೊರೆ ಯಾಕೆ ಹೋಗಬೇಕು ಅಲ್ವಾ? ಇನ್ನೊಂದು ಕೆಟ್ಟ ಬೆಳವಣಿಗೆಯೆಂದರೆ ಅನಾನಿಮಸ್ ಕಾಮೆಂಟ್ ಹಾಕಲು ಸ್ಥಳಾವಕಾಶದ ಕೊರೆತೆಯಿಂದಲೋ ಏನೋ ಹಲವರು ಗೊತ್ತುಗುರಿ ಇಲ್ಲದ ಬ್ಲಾಗ್ ಸ್ಪಾಟ್ ತೆರೆದು ತಮ್ಮದೇ ಸೀನಿಯರ್ ಗಳ ಬಗ್ಗೆ, ಸಹದ್ಯೋಗಿಗಳ ಬಗ್ಗೆ, ಸಂಸ್ಥೆಯ ಬಗ್ಗೆ ಬರೆದು ಏನೂ ಅರಿಯದವರಂತೆ ತಮ್ಮ ಅಧಿಕೃತ ಬ್ಲಾಗ್ ನಲ್ಲಿ ಅಂತಹದ್ಪ್ರದೊಂದು ಬ್ಲಾಗ್ ಇದೆ ಎಂದು ಪ್ರಕಟಿಸುವ ಚಾಳಿ ಬೆಳೆಸಿಕೊಂಡಿದ್ದಾರೆ.

ಇದು ಒಳ್ಳೆಯ ಬೆಳವಣಿಗೆಯಲ್ಲ ನೆನಪಿರಲಿ ಯಾವುದೇ ಅನಾನಿಮಸ್ ಬ್ಲಾಗ್ , ಕಾಮೆಂಟ್ ಗಳನ್ನು ಬರೆದರು ಅದರ ಮೂಲ ಪತ್ತೆ ಹಚ್ಚುವ ಸಾಪ್ಟ್ ವೇರ್ ಇದೆ ಅನಾನಿಮಸ್ ಗೆಳೆಯರೇ ಎಚ್ಚರವಿರಲಿ….ಒಂದು ದಿನ ಹಿಟ್ ಅಂಡ್ ರನ್ ಕೇಸ್ ನಲ್ಲಿ ನೀವೆ ಸಿಕ್ಕಿ ಹಾಕಿಕೊಳ್ಳಬಹುದು ಅಥವಾ ಖೆಡ್ಡಾಗೆ ಬೀಳಬಹುದು…! ಮೋಹನ್ ಸರ್ ಒಂದು ಉತ್ತಮ ಚರ್ಚೆ ತಂದಿದ್ದೀರಿ ಧನ್ಯವಾದಗಳು

ಮನೋರಮಾ ಬಿ.ಎನ್

Nice suggestion and discussion..let the world of Blogs become pure and responsible. some ethics and principles and action to be taken. then only Cyber laws will get updated.. Sincere efforts and rules are very essential to fulfill the vacuum and solve problem which has been created by BLOGGISM !

ರವಿಶಂಕರ್ ಭಟ್

I support..

ಜಿ.ಎಸ್.ಬಿ.ಅಗ್ನಿಹೋತ್ರಿ

ನಿಜಕ್ಕೂ ಇದೊಂದು ಆಗಲೇ ಬೇಕಾದ ಕೆಲಸ. ಹೂಳೆತ್ತಲೇ ಬೇಕು. ಈ ಅನಾಮದೇಯ ಬ್ಲಾಗ್ ಗಳ ವಿರುದ್ದ ಖಂಡಿತ ಕ್ರಮ ಅಗತ್ಯ. ವಾಸ್ತವಕ್ಕಿಂತ ಹೊರತಾದುದನ್ನೇ ಬರೆದು ಚಟ ತೀರಿಸಿಕೊಳ್ಳುವ ಇಂಥ ಬ್ಲಾಗಿಗರಿಗೆ ಉದಾಸಿನವೇ ಮದ್ದು ಎಂದು ಕಳೆದೊಂದು ವರ್ಷದಿಂದ ನೋಡುವುದನ್ನೇ ಬಿಟ್ಟಿದ್ದೇನೆ. ಈ ಧ್ವನಿಗೆ ನನ್ನ ಬೆಂಬಲವಿದೆ

InkWatercol_pencil

ಶ್ರೀನಿವಾಸ ಗೌಡ

ನನಗೂ ಮೊದಲು ಮೊದಲಿಗೆ ಈ ಅನಾನಿಮಸ್ ಕಾಮೆಂಟಿರಿಗರಿಗೆ ಉತ್ತರಿಸುವ ಉಮ್ಮೇದಿ ಇತ್ತು ಈಗಿಲ್ಲ, ಬ್ಲಾಗ್ ಓದುಗರೆಲ್ಲ ನಮ್ಮ ಬರಹಗಳನ್ನು ಮೆಚ್ಚಬೇಕು ಅಂತೇನು ಇಲ್ಲ, ಆದರೆ ಜವಾಬ್ದಾರಿಯುತವಾಗಿ ಟೀಕಿಸಿದರೆ ಅದಕ್ಕೊದು ಅರ್ಥ ಇರುತ್ತೆ, ಆದರೆ ವಿನಾಕಾರಣ ಬೈಗುಳ, ಖಾಸಗಿ ವಿಚಾರಗಳ ಪ್ರಸ್ತಾಪ ಮಾಡೋದು ಸರಿಯಲ್ಲ ಕಾಣುತ್ತೆ. ಜವಾಬ್ದಾರಿಯುತ ಕಾಮೆಂಟು ಮಾಡೋ ಪ್ರವೃತ್ತಿ ಬ್ಲಾಗ್ ಓದುಗರಿಗೂ ಬರುವ ಆಶಯ ನನ್ನದು.
ಬ್ಲಾಗ್ ನಲ್ಲಿ ಮುಖ ತೋರಿಸಿ ಬಂದವರ ಕಾಮೆಂಟು ಮಾತ್ರ ಪ್ರಕಟಿಸುವ ತೀರ್ಮಾನ ತೆಗೆದುಕೊಂಡರೆ ಸರಿಯಾಗಬಹುದೇನೋ..

ಗಿರೀಶ್

ಈ ಕೆಲಸಕ್ಕೆ ನಿಮ್ಮೊಂದಿಗೆ ನಾವು ಕೈಜೋಡಿಸುತ್ತೇವೆ.

fist4

ಚಂದ್ರು

ನಿಂದಕರಿರಬೇಕಣ್ಣ ಅಂತ ದಾರ್ಶನಿಕರೂ ಹೇಳಿದ್ದಾರೆ… ಆವಾಗ ಎಲ್ಲರೂ ಕಾಮೆಂಟನ್ನು ನೇರವಾಗಿ ಹೇಳುತ್ತಿದ್ದರು ಅನಿಸುತ್ತೆ, ಇಲ್ಲ ಅಂದಿದ್ರೆ ನೇರವಾಗಿ ಕಾಮೆಂಟ್ ಮಾಡಬೇಕು ಎನ್ನುವುದಕ್ಕೂ ಒಂದು ತ್ರಿಪದಿಯನ್ನು ರಚಿಸಿರುತ್ತಿದ್ದರು ಅನಿಸುತ್ತೆ.

ಕಾಮೆಂಟ್ ಮಾಡಲೂ ಅಡ್ರೆಸ್ ಪ್ರೂಫ್ ಬೇಕಾ? ಕಲಿಗಾಲ ಸ್ವಾಮಿ ಆರೋಪಗಳ ಮೂಲಕ ಆದ್ರೂ ಸರಿ ಟಿಆರ್್ಪಿ ಹೆಚ್ಚು ಮಾಡಿಕೊಳ್ಳಬೇಕು ಎನ್ನುವಂತ ಕಾಲ ಇದು. ನನಗೆ ಬೈಯ್ಯೋದಾದ್ರೆ ನೀನು ಯಾರು ಅಂತ ಹೇಳಿ ನಿಂದಿಸು ಅಂದ್ರೆ ಹೇಗೆ ‘ಸಿಗೋ ನೀನು ವಿಚಾರಿಸಿಕೊಳ್ಳುತ್ತೇನೆ’ ಅಂದ ಹಾಗೆ ಆಯಿತು ನಿಮ್ಮದು.

ನಿರಾಧಾರ ಆರೋಪಗಳಿಗೆ ಉತ್ತರ ಕೊಡಬೇಕಾ, ಜನ ಅದನ್ನು ನಂಬಿ ಬಿಡುತ್ತಾರೆ ಅಂತನಾ? ಯಾವಾಗಿದ್ರೂ ಚಿನ್ನ ಚಿನ್ನನೇ ಕಣ್ರಿ, ಆದ್ರೂ… ಮಾರ್ಕೆಟ್್ನಲ್ಲಿ ನಕಲಿ ಚಿನ್ನನೇ ಜೋರಾಗಿ ಹೊಳೆಯುತ್ತೆ ಅಂತನಾ ನಿಮಗೆ? ಎಷ್ಟು ದಿನಾನ್ರಿ ಅದು ಕೊನೆಗೆ ಬಂಗಾರ ಯಾವುದು ಅಂತ ತಿಳಿದ ಮೇಲೆ….

ನಾನು ಹಳ್ಳಿಂದ ಬಂದಿರೋನ್ರಿ ನನಗೆ ಈ ಬ್ಲಾಗು ಗೀಗು ಏನೂ ತಿಳಿಯಲ್ಲ ಹೂಳು ಎತ್ತೋದು ಅಂದ್ರೆ ಅದು ಒಳ್ಳೆ ಕೆಲಸ ಹಾಗಂತ ಸರ್ಕಾರ ಮಾಡುತ್ತಲ್ಲ ಹಾಗೆ ಹಣ ವೇಷ್ಟು ಆದಂಗೆ ತೀಕ್ಷವಾಗಿ, ನೇರವಾಗಿ ಆರೋಪ ಮಾಡುವವರನ್ನೂ ಎತ್ತಿ ಹಾಕೋದು ಬೇಡ ಅದರಿಂದ ನಾಲ್ಕು ಜನಕ್ಕೆ ಒಳ್ಳೇದು ಆಗಬೇಕು ಅಷ್ಟೇಯಾ.

‍ಲೇಖಕರು avadhi

August 21, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This