ಅನಿತಾ ನರೇಶ್ ಮ೦ಚಿ: ಏಕ್ ಕಹಾನಿ ಸುನೋ..

– ಅನಿತಾ ನರೇಶ್ ಮ೦ಚಿ

ನೀನು ತಂಟೆ ಮಾಡದೆ ಸುಮ್ಮನೆ ಕೂತ್ಕೊಂಡ್ರೆ ಒಂದು ಚಂದದ ಕತೆ ಹೇಳ್ತೀನಿ ನಿಂಗೆ.. ನಾನು ಕತೆ ಕೇಳಿದ್ರೆ ನೀವು ನಂಗೆ ಡೈರಿ ಮಿಲ್ಕ್ ಚಾಕೋಲೇಟ್ ಕೊಡ್ತೀರಾ.. ಹೂಂ.. ಆದ್ರೆ ಕತೆ ಮುಗಿದ ಮೇಲೆ.. ಈಗ ಸುಮ್ಮನೆ ಕೇಳು.. ಒಂದೂರು.. ಆಂಟೀ.. ಎಲ್ಲಾ ಕತೆ ಒಂದೂರಲ್ಲೇ ಯಾಕೆ ಇರೋದು.. ಬೇರೆ ಊರಲ್ಲಿ ಕತೆ ಇಲ್ವಾ.. ಒಂದೂರು ಅಂದ್ರೆ ಯಾವ ಊರು ಬೇಕಿದ್ರೂ ಆಗ್ಬಹುದು ಪುಟ್ಟಿ.. ಹುಂ.. ಅಲ್ಲೊಂದು ಸಣ್ಣ ಮನೆ.. ಅದ್ರಲ್ಲಿ ಒಂದಜ್ಜ ಒಂದಜ್ಜಿ ಇದ್ರು.. ಆಂಟೀ ಅದ್ಯಾಕೆ ಅಜ್ಜ ಅಜ್ಜಿ ಮಾತ್ರ.. ಅಲ್ಲಿ ಮಕ್ಳು ಎಲ್ಲಾ ಅಮೇರಿಕಾಗೆ ಹೋಗಿದಾರಾ… ಹುಂ .. ಹಾಗೆ ಅಂದ್ಕೋ.. ಅಜ್ಜ ತುಂಬಾ ಸೋಮಾರಿ. ಅಜ್ಜಿ ಪಾಪ ಎಲ್ಲಾ ಕೆಲ್ಸ ಮಾಡ್ತಾ ಇದ್ದಳು. ಆಂಟೀ ನಮ್ಮಲ್ಲೂ ಅಜ್ಜ ಏನೂ ಕೆಲ್ಸ ಮಾಡೋದೇ ಇಲ್ಲ. ಅಜ್ಜಿ ತಿಂಡಿ ಕಾಫೀ, ಊಟ ಎಲ್ಲಾ ಮಾಡ್ತಾರೆ.   ಹೌದಾ ಪುಟ್ಟಿ.. ಕತೆ ಕೇಳೀಗ.. ಒಮ್ಮೆ ಅವ್ರ ಮನೇಲಿ ಒಂದು ಶ್ರಾದ್ಧ ಮಾಡಿದ್ರು. ಆಂಟೀ.. ಶ್ರಾದ್ಧ ಅಂದ್ರೇನು.. ?? ಹಾಗಂದ್ರೆ ನಮ್ಮಲ್ಲಿ ಯಾರಾದ್ರು ದೇವ್ರತ್ರ ಹೋಗಿದ್ರೆ ಅವ್ರನ್ನು ನೆನಪು ಮಾಡ್ಕೊಳ್ಳೋ ದಿನ ಪುಟ್ಟಿ. ಆಂಟೀ ನಮ್ಮ ಸ್ಕೂಲಲ್ಲೂ ಶ್ರಾದ್ಧ ಮಾಡಿದ್ರು.ಆಗ ಮಕ್ಳಿಗೆಲ್ಲ ಲಾಡು ಕೊಟ್ಟಿದ್ರು. ಶ್ರಾದ್ಧನಾ.. ಪುಟ್ಟಿ.. ಸ್ಕೂಲಲ್ಲಾ..??? ಯಾರದೇ ..?? ಆಂಟೀ.. ಗಾಂಧೀ ತಾತಾ ಅಂತ ಇದ್ರಂತೆ ಅವ್ರದ್ದು.. ಹ್ಹೋ.. ಸರಿ ಸರಿ.. ಆ ದಿನ ಅಜ್ಜಿ ತುಂಬಾ ಕಜ್ಜಾಯ ಮಾಡಿದ್ರು .. ಕಜ್ಜಾಯ ಅಂದ್ರೇನು ಆಂಟೀ.. ಹಾಗಂದ್ರೆ ಸ್ವೀಟ್ಸ್ ಪುಟ್ಟಿ.. ಅಜ್ಜನಿಗೆ ಕಜ್ಜಾಯ ಅಂದ್ರೆ ತುಂಬಾ ಪ್ರೀತಿ. ಅವ್ನಿಗೆ ಅಜ್ಜಿ ಮಾಡಿಟ್ಟಿದೆಲ್ಲ ತಾನೊಬ್ನೇ ತಿನ್ಬೇಕು ಅನ್ನಿಸ್ತು. ಆಂಟೀ.. ಅವ್ನು ಮಿಹಿರ್ ತರಾನಾ..? ಮಿಹಿರ್ ಮೊನ್ನೆ ಅಪ್ಪ ತಂದಿದ್ದ ‘ಜೆಮ್ಸ್’ ಎಲ್ಲಾ ಅವ್ನೊಬ್ನೇ ತಿಂದಿದ್ದ.. ಹುಂ.. ಹೌದು ಪುಟ್ಟಿ.. ಅಜ್ಜ ಏನು ಮಾಡಿದ ಗೊತ್ತಾ.. ಒಂದು ಮಡಿಕೆ ತಂದು ಅದ್ರೊಳಗೆ ಕಜ್ಜಾಯ ಎಲ್ಲಾ ತುಂಬಿಸಿ, ಅಂಗಳದ ಮೂಲೆಯಲ್ಲಿ ಒಂದು ಹೊಂಡ ಮಾಡಿ ಅಡಗಿಸಿಟ್ಟ.. ರಾತ್ರಿಯಾದ ಮೇಲೆ ಯಾರಿಗೂ ಗೊತ್ತಾಗದ ಹಾಗೇ ತಿನ್ಬೇಕು ಅಂದ್ಕೊಂಡ. ಆಂಟೀ ಯಾರ್ಗೂ ಹೇಳ್ಬೇಡಿ .. ಮೊನ್ನೆ ಅಪ್ಪ ತಂದಿದ್ದ ಚಿಪ್ಸ್ ಪ್ಯಾಕೆಟ್ ದಿಂಬಿನೊಳಗೆ ಅಡಗಿಸಿ ಇಟ್ಟಿದ್ದೀನಿ. ಆಂಟೀ ನಾನೀಗ ಮನೆಗೆ ಹೋಗ್ಬೇಕು..ನಂಗೆ ಕತೆ ಬೇಡ ..ಚಿಪ್ಸ್ ಬೇಕೀಗ.. ನಂಗೆ ಬೇಗ ಡೈರಿ ಮಿಲ್ಕ್ ಕೊಡಿ..!!]]>

‍ಲೇಖಕರು G

April 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಡಲಂತರಾಳವ ಬಲ್ಲವರಾರು?

ಕಡಲಂತರಾಳವ ಬಲ್ಲವರಾರು?

ಶಿವಲೀಲಾ ಹುಣಸಗಿ ಯಲ್ಲಾಪುರ ಪ್ರತಿ ದಿನವೂ ಪ್ರೀತಿಯ ಹುಚ್ಚ ಹಿಡಿಸಿದವ ಒಮ್ಮಿಂದೊ ಮ್ಮೆಲೆ ಮೌನವಾಗಿದ್ದು, ಕೊನೆಗವನು ನನಗರಿವಿಲ್ಲದೆ ಮಂಪರು...

ಆರನೇ ಬೆರಳು

ಆರನೇ ಬೆರಳು

ಬಸವಣ್ಣೆಪ್ಪ ಕಂಬಾರ ಸುಂಕದ ಕಟ್ಟೇಲಿ ಚಿನ್ನವ್ವ ತುಂಬ ಅದೃಷ್ಟದ ಹೆಂಗಸು ಎಂದು ಮನೆಮಾತಾಗಿದ್ದಳು. ಮನೆ ಗುದ್ದಲಿ ಪೂಜೆ, ಬಾಣಂತನಕ್ಕೆ, ಮಗಳನ್ನು...

ಹಬ್ಬಿದಾ ಬಲೆ ಮಧ್ಯದೊಳಗೆ…

ಹಬ್ಬಿದಾ ಬಲೆ ಮಧ್ಯದೊಳಗೆ…

ರಾಜು ಎಂ ಎಸ್ ಸಾಲಿಗುಡಿ ಬಿಟ್ ಕೂಡ್ಲೇ ನಿಂಗಿ, ಗುಡ್ಲು ಕಡಿಕ್ ಹೊಂಟವ್ಳು... ತಾರ್ಸಿ ಮನೆ ಗುರ್ಲಿಂಗಪ್ಪನ್  ಮಗ್ಳು ಪರಿಮಳ ತನ್...

4 ಪ್ರತಿಕ್ರಿಯೆಗಳು

 1. Raghav Chandra

  Sadhya magu “Madake” andre enu aunty..? anta kelalilla..!! 😀
  hahahaha 🙂
  Anitakka chennagide…
  saralavagide…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: