ಅನುದಿನದ ಅ೦ತರಗ೦ಗೆ – ಪ್ರತಿಭಾ ನ೦ದಕುಮಾರ್

ಪ್ರತಿಭಾ ನ೦ದಕುಮಾರ್ ಬರೆದ ಅನುದಿನದ ಅ೦ತರಗ೦ಗೆ ಪುಸ್ತಕದ ಒ೦ದು ಭಾಗ ಅವಧಿ ಓದುಗರಿಗಾಗಿ

ಹೊಸಬದುಕು

ಯಾಕೋ ಆ ಮನೆ ಬಹಳ ಹಿಡಿಸಿತು. ಆದರೆ ಹಣಕ್ಕೇನು ಮಾಡುವುದು? ಹೇಗಾದರೂ ಹೊಂದಿಸಲೇಬೇಕಿತ್ತು. ನನ್ನ ಗೆಳೆಯನ ಹತ್ತಿರ ಏನು ಮಾಡಿದರೂ ಸಾಲ ಮಾತ್ರ ಇಸ್ಕೊಳ್ಳಬಾರದು ಅಂತ ಹಠ ತೊಟ್ಟಿದ್ದೆ. ಆದರೆ ಈಗ ಹಠಕ್ಕಿಂತ ಹೇಗಾದರೂ ಮಾಡಿ ಬದುಕು ಮುಂದೆ ಸಾಗಿಸಬೇಕಿತ್ತು. ಅವನ ಹತ್ತಿರ ಹೋಗಿ ಮೈಯೆಲ್ಲಾ ಹಿಡಿಯಾಗಿಸಿ ಸಾಲ ಕೇಳಿದೆ. ಹನ್ನೆರಡು ಸಾವಿರ ರೂಪಾಯಿಗಳಿಗೆ ಒಂದು ಚೆಕ್ ಬರೆದು ಕೊಟ್ಟ. ನಾನು ಅದನ್ನಿನ್ನೂ ವಾಪಾಸ್ಸು ಕೊಟ್ಟಿಲ್ಲ. ಆ ಚೆಕ್ನ ನನ್ನ ಅಕೌಂಟಿಗೆ ಹಾಕಿ ಬರುತ್ತಿದ್ದಾಗ ನನ್ನ ಗೆಳತಿ ಲತಾ ಸಿಕ್ಕಳು. ಅವಳು ಈಗ ಎಲ್ಐಸಿ ಏಜೆಂಟ್. ಮಾತಾಡುತ್ತಾ ‘ಒಂದು ಪಾಲಿಸಿ ಕೊಡೇ’ ಅಂದಳು. ನಾನು ಜೋರಾಗಿ ನಕ್ಕುಬಿಟ್ಟೆ. ನಗುತ್ತಲೇ ಕಣ್ಣಲ್ಲಿ ನೀರು ತುಂಬಿತು. ಅವಳು ಗಾಬರಿಯಾಗಿ ‘ಏನೇ ಏನೇ’ ಅಂದಳು. ಆಗ ನನ್ನ ಎಲ್ಲ ಕತೆ ಅವಳಿಗೆ ಹೇಳಿದೆ. ಅವಳೇ ಒಂದು ಉಪಾಯ ಕೊಟ್ಟಳು. ನನ್ನದೊಂದು ಹಳೆಯ ಎಲ್ಐಸಿ ಪಾಲಿಸಿ ಇತ್ತು. ನಾನು ಎನ್ಜಿಇಎಫ್ ಸೇರಿದಾಗ ಮಾಡಿಸಿದ್ದು. ಸಂಬಳದಲ್ಲೇ ಪ್ರೀಮಿಯಂ ಕಟ್ ಆಗುತ್ತಿತ್ತು. ಅದು ಇನ್ನೇನು ಮೆಚ್ಯೂರ್ ಆಗುವುದರಲ್ಲಿತ್ತು. ಅದರ ಮೇಲೆ ಸಾಲ ತಗೋ ಎಂದಳು. ಆದರೆ ಆ ಪಾಲಿಸಿ ಆ ಮನೆಯಲ್ಲೇ ಬಿಟ್ಟು ಬಂದಿದ್ದೆ. ಮತ್ತೆ ಒಂದು ದಿನ ಮೆಲ್ಲಗೆ ಅವನು ಇಲ್ಲದಿದ್ದಾಗ ಹೋಗಿ ಪಾಲಿಸಿ ತರಲು ಪ್ಲಾನ್ ಮಾಡಿದೆ. ಆದರೆ ಈ ಸಲ ಡೋರ್ಲಾಕ್ ಜೊತೆಗೆ ಇನ್ನೊಂದು ಬೀಗ ನನ್ನನ್ನು ಸ್ವಾಗತಿಸಿತು. ಛಲ ಬಿಡದೆ ತ್ರಿವಿಕ್ರಮಿಯಂತೆ ಎಲ್ಐಸಿ ಆಫೀಸಿಗೆ ಹೋಗಿ ಪಾಲಿಸಿ ನಂಬರು ಹುಡುಕಿ, ಅದು ಕಳೆದು ಹೋಗಿದೆ ಎಂದು ಕಂಪ್ಲೇಂಟ್ ಕೊಟ್ಟು, ಎರಡು ದಿನಗಳಲ್ಲಿ ಹೊಸಾ ಡೂಪ್ಲಿಕೆಟ್ ಪಾಲಿಸಿ ಮಾಡಿಸಿ ಅದರ ಮೇಲೆ ಸಾಲಕ್ಕೆ ಅಜರ್ಿ ಕೊಟ್ಟು ಬಂದೆ. ಅಷ್ಟಾಗಿಯೂ ನನಗೆ ಅಲ್ಲಿ ಸಿಕ್ಕಿದ್ದು ಮೂವತ್ತೈದು ಸಾವಿರ ರೂಪಾಯಿ ಮಾತ್ರ. ಉಳಿದ ಹಣವನ್ನು ಕೆಲವು ಗೆಳೆಯರು ಕೊಟ್ಟರು. ಹೇಗೋ ಅಂತೂ ಎಪ್ಪತ್ತು ಸಾವಿರ ಅಡ್ವಾನ್ಸ್ ಹೊಂದಿಸಿಕೊಂಡು ಹೋದೆ. ಮನೆ ಜನರುಗಳು ಯಾವತ್ತೂ ಯಾವುದೇ ತಾಪತ್ರಯ ಇಲ್ಲದೇ ಮನೆ ಬಾಡಿಗೆಗೆ ಕೊಡುವುದಿಲ್ಲವಲ್ಲಾ, ಈ ಸಲ ಅವರು ನನ್ನನ್ನು ಪರಿಪೂರ್ಣ ಠಡಿಚಿಟ ಜಥಚಿಟಟಿಚಿಣಠಟಿಗೆ ಒಳಪಡಿಸಿದರು. ‘ನೀವು ಯಾವ ಜನ? ಎಲ್ಲಿಯವರು? ತಂದೆ ತಾಯಿ? ಅತ್ತೆ ಮಾವ? ಗಂಡ? ಏನು ಕೆಲಸ? ಎಷ್ಟು ಸಂಬಳ? ಎಷ್ಟು ಮಕ್ಕಳು? ಅವರೇನು ಓದುತ್ತಿದ್ದಾರೆ? ನೀವು ವೆಜ್ಜೋ ನಾನ್ ವೆಜ್ಜೋ? ಯಾವ ಮಠ? ನೆಂಟರು ಇಷ್ಟರು ಎಲ್ಲಿದ್ದಾರೆ? ಮನೆಗೆ ತುಂಬಾ ಜನ ಬರುತ್ತಿರುತ್ತಾರಾ? ನಮಗೆ ಗಲಾಟೆ ಆಗುವುದಿಲ್ಲ. ನಿಮ್ಮ ಮಕ್ಕಳು ಗಲಾಟೆ ಮಾಡುತ್ತಾರಾ? ತುಂಬಾ ಸಾಮಾನಿದೆಯಾ? ಸಾಗಿಸುವಾಗ ಗೋಡೆ ಗೀರಾಗಬಾರದು. ವಾರಕ್ಕೊಮ್ಮೆ ಮನೆ ತೊಳಿಯಬೇಕು. ಗೋಡೆ ಹಾಳು ಮಾಡಬಾರದು…’ ನಾನು ಎಷ್ಟು ಚೆನ್ನಾಗಿ ಬಾಯಿಗೆ ಬಂದ ಉತ್ತರ ಕೊಟ್ಟೆ ಅಂದರೆ ಆಮೇಲೆ ನನಗೇ ನಾನೇನು ಸುಳ್ಳು ಹೇಳಿದ್ದೇನೆ ಅನ್ನುವುದೇ ಮರೆತು ಹೋಗಿ ಎಡವಟ್ಟಾದ ಪ್ರಸಂಗಗಳು ಬಂದವು! ಯಜಮಾನರು ಕಂಟ್ರಾಕ್ಟರ್, ತಿರುಪತಿಯಲ್ಲಿ ಬಿಲ್ಡಿಂಗ್ ಕಟ್ಟುತ್ತಿದ್ದಾರೆ ಮುಂದಿನವಾರ ಬರುತ್ತಾರೆ ಅಂತ ಹೇಳಿದ್ದೆ. ಅವರು ಯಾವ ಕಾರಣಕ್ಕೂ ಅಬ್ರಾಹ್ಮಣರಿಗೆ ಮನೆ ಕೊಡುವುದಿಲ್ಲ ಅಂತ ನನಗೆ ಗೊತ್ತಾಗಿತ್ತು. ನಮ್ಮ ಗೋತ್ರ ಕೇಳಿದರು. ಹರಿತ್ಸ ಅಂದೆ. ನಿಮ್ಮ ಮನೆಯವರದು? ಎಂದರು. ಭಾರದ್ವಾಜ ಅಂದೆ. ಹರಿತ್ಸ ಮತ್ತು ಭಾರದ್ವಾಜದವರು ಮದುವೆಯಾಗುತ್ತಾರಾ ಅಂದರು. ‘ಅದೂ ಚಿಛಿಣಣಚಿಟಟಥಿ ನಮ್ಮತ್ತೆ ಮನೆದು ಭಾರದ್ವಾಜ ನಮ್ಮವರದು ವಿಶ್ವಾಮಿತ್ರ ಗೋತ್ರ’ ಅಂದೆ. ಮನೆ ಚಿರಡಿಜಜಟಜಟಿಣ ಗೆ ಸಹಿ ಹಾಕಲು ಯಜಮಾನರೇ ಬರಲಿ ಅಂತ ಹಠ ಹಿಡಿದರು. ಒಂದು ನಿಮಿಷ ನನಗೆ ಯಾರಾದರೂ ಗೆಳೆಯನನ್ನು ಕರೆದು ಐದು ನಿಮಿಷದ ಮಟ್ಟಿಗೆ ನನ್ನ ಗಂಡನಂತೆ ಅಭಿನಯಿಸಯ್ಯಾ ಅಂತ ಹೇಳೋಣಾ ಅಂದುಕೊಂಡೆ. ನನ್ನ ಗೆಳೆಯನಿಗೆ ಕೇಳಿದೆ. ಅವನು ‘ಬಿಲ್ಕುಲ್ ಆಗುವುದಿಲ್ಲ, ಹೋಗೋ ಹೋಗೇ, ಕನಸಿನಲ್ಲೂ ಒಂದು ನಿಮಿಷವೂ ನಿನ್ನ ಗಂಡ ಅಂತ ಅಭಿನಯಿಸಕ್ಕೂ ನನಗೆ ಸಾಧ್ಯವಿಲ್ಲ’ ಅಂದು ಬಿಟ್ಟ. ಸರಿ ಹಾಳಾಗಿ ಹೋಗು ಅಂದುಕೊಂಡು ಓನರ್ ಹತ್ರ ಹೋಗಿ ‘ಯಜಮಾನರಿಗೆ ರಾತ್ರಿ ಫೋನ್ ಮಾಡಿದ್ದೆ, ಅವರು ನೀನೇ ಅಗ್ರಿಮೆಂಟ್ ಮಾಡಿಕೋ ಅಂತ ಹೇಳಿದ್ರು, ಇನ್ನು ಹದಿನೈದು ದಿನ ಬರಲ್ಲವಂತೆ, ಅದಾದ ಮೇಲೆ ಒಳ್ಳೇ ದಿನಗಳು ಇಲ್ಲವಂತೆ’ ಅಂದೆ. ನನ್ನ ಅದೃಷ್ಟಕ್ಕೆ ಅವರು ಒಪ್ಪಿಕೊಂಡರು. ಅಡ್ವಾನ್ಸ್ ಕೊಟ್ಟು ಅಗ್ರಿಮೆಂಟ್ ಮಾಡಿಕೊಂಡೆ. ಒಂದು ಆಟೋದಲ್ಲಿ ಮಕ್ಕಳ ಮತ್ತು ನನ್ನ ಬಟ್ಟೆ ತಂದೆವು. ‘ಉಳಿದ ಸಾಮಾನೆಲ್ಲಾ ಲಾರಿಯಲ್ಲಿ ಬರುತ್ತಾ? ಅಂತ ಕೇಳಿದರು ಮಾಲೀಕರು. ನಾನು ಮಕ್ಕಳು ನಕ್ಕೆವು, ಏನು ಸಾಮಾನು? ಅಂಗಡಿಗೆ ಹೋಗಿ ಎರಡು ಹಾಸಿಗೆ ಬೆಡ್ಶೀಟ್, ಒಂದು ಬೆತ್ತದ ಕುಚರ್ಿ ಸೆಟ್ ಖರೀದಿಸಿದೆ. ಅದು ಬಂದಾಗಲೂ ಓನರ್ ಹೊರಗೇ ಇದ್ದವರು ‘ಹೊಸಾದಿದ್ದ ಹಾಗಿದೆ? ಹಳೇದೇನಾಯ್ತು?’ ಅಂತ ಕ್ವೈರಿ ಮಾಡಿದರು. ಏನೋ ಉತ್ತರ ಕೊಟ್ಟು ಜಾರಿಕೊಂಡೆ. ಆ ರಾತ್ರಿ ಹೊಸಾ ಬಕೆಟ್, ಕಸಪರಿಕೆ, ಮಗ್ ಬಳಸಿ ಮನೆ ತೊಳೆದು ಸಾರಿಸಿ- ಸದ್ಯಕ್ಕೆ ಅಲ್ಲೇ ಫ್ಯಾನ್ ಇತ್ತು. ಹೊಸಾ ಹಾಸಿಗೆ ಹಾಸಿ ನಾನು ಮತ್ತು ಮಕ್ಕಳು ಮಲಗಿಕೊಂಡೆವು. ಸುಸ್ತಾಗಿದ್ದರಿಂದ ಮಕ್ಕಳು ತಕ್ಷಣ ಮಲಗಿದರು. ಇಡೀ ರಾತ್ರಿ ನಾನು ನಿದ್ದೆ ಮಾಡಲಿಲ್ಲ. ಒಂದು ಕ್ಷಣ ಅಳು. ಒಂದು ಕ್ಷಣ ಛಲ. ಇಷ್ಟೇನೇ ಸಂಸಾರ ಅಂದರೆ? ನನ್ನ ಮನೆ, ನನ್ನ ಮನೆ ಅಂತ ಅಷ್ಟು ದುಡಿದಿದ್ದು ಏನಕ್ಕೆ? ಯಾವ ಕ್ಷಣದಲ್ಲಿ ಬೇಕಾದರೂ ಗಂಡು ಅಲ್ಲಿಂದ ಅನಾಮತ್ತಾಗಿ ಹೆಣ್ಣನ್ನು ಎತ್ತಿ ಹೊರಗೆ ಒಗೆದು ಬಿಡಬಹುದು. ಆಗ ಯಾವುದೇ ಹಕ್ಕು ಸಾಧಿಸುವ ಮಾತಾಡದೇ ಹೆಣ್ಣು ಹೊರ ನಡೆಯಬೇಕು. ಆ ಮನೆ ಹಾಗಾದರೆ ನನ್ನ ಮನೆ ಅಲ್ಲ. ನನ್ನ ಮನೆ ಯಾವುದು? ಎಲ್ಲಿದೆ? ನನ್ನವರು ಎಂದರೆ ಯಾರು? ನಾನು ಯಾರನ್ನು ಪ್ರೀತಿಸಬೇಕು? ಯಾರಿಂದ ಪ್ರೀತಿ ಪಡೆಯಬೇಕು? ಪ್ರೀತಿಗೆ ಹೊಗೆಯ ಕಲ್ಲು ಚಪ್ಪಡಿ ಕಟ್ಟಿರುತ್ತಾರೆಯೇ? ಸ್ನೇಹ, ಪ್ರೀತಿಗೆ ಅದರ ಭಾರ ಇರುವುದಿಲ್ಲವೇ? ಎಷ್ಟೇ ಜಗಳ ಮನಸ್ತಾಪ ಇದ್ದರೂ ಪ್ರತಿರಾತ್ರಿ ನನ್ನ ಪಕ್ಕ ಒಂದು ವ್ಯಕ್ತಿ- ಒಬ್ಬ ಗಂಡಸು- ನನ್ನ ಗಂಡ ಮಲಗಿರುತ್ತಿದ್ದ. ಆ ಒಂದು ಭದ್ರತೆಯಾದರೂ ಇತ್ತು. ಅವತ್ತು ನಾನು ಒಬ್ಬಳೇ ತಾರಸಿ ದಿಟ್ಟಿಸುತ್ತಿದ್ದೆ. ನನ್ನ ಬಗ್ಗೆ ನನಗೇ ಅನುಕಂಪ ಉಕ್ಕುತ್ತಿತ್ತು. ನನಗಾಗಿ ‘ಅಯ್ಯೋ ಪಾಪ’ ಅನ್ನುವವರೂ ಇಲ್ಲ ಅನ್ನುವ ಜಟಜಿ ಠಿಣಥಿ. ಆದರೆ ಕ್ರಮೇಣ ಕೈ ಚಾಚಿ ಕಾಲು ಚಾಚಿ ಮಲಗುವುದರಲ್ಲಿ ಇರುವ ಸುಖದ ಅರಿವಾಗತೊಡಗಿತು. ಎಂತಹ ಸ್ವಾತಂತ್ರ್ಯ! ಎಂತಹ ಮುಕ್ತಿ! ಎಂತಹ ಸ್ವಚ್ಛ ಗಾಳಿ ! ಬೆಳಿಗ್ಗೆ ಎದ್ದು ಮುಖ ತೊಳೆಯಲು ಬ್ರಶ್ ಮತ್ತು ಪೇಸ್ಟ್ ತಂದೆ. ಹಾಗೆ ಅಲ್ಲಿಂದ ಒಂದೊಂದೇ ಸಾಮಾನು ಖರೀದಿಸುತ್ತಾ ನಿಧಾನವಾಗಿ ನನ್ನ ಮನೆ ನೆಲೆಗೊಳ್ಳುತ್ತಾ ಹೋಯಿತು. ನನ್ನ ಆಫೀಸಿನಲ್ಲಿದ್ದ ಎರಡು ಟೇಬಲ್ ಮತ್ತು ಚೇರ್ಗಳನ್ನು ತಂದು ಮಕ್ಕಳಿಗೆ ಹಾಕಿಕೊಟ್ಟೆ. ಎರಡು ರೂಂನ ಅವರು ಹಂಚಿಕೊಂಡರು. ಗೋಡೆಯ ತುಂಬ ನಮಗೆ ಬೇಕು ಬೇಕಾದ ಪೋಸ್ಟರ್ಗಳನ್ನು ಅಂಟಿಸಿಕೊಂಡರು. ನಾನು ಬೇಡಾ ಅನ್ನಲಿಲ್ಲ. ಇಬ್ಬರ ರಿಸಲ್ಟ್ ಬಂತು. ಇಬ್ಬರೂ ಪಾಸಾಗಿದ್ದರು. ಪಾಪ ಆ ಕಷ್ಟದ ಸಮಯದಲ್ಲೂ ಅವರು ಎಷ್ಟು ಚೆನ್ನಾಗಿ ನಿಭಾಯಿಸಿದ್ದರು. ನಾವು ಮೂವರೂ ತುಂಬ ಆತ್ಮೀಯ ಗೆಳೆಯರಾದೆವು. ಪ್ರತಿ ರಾತ್ರಿ ಕತೆ ಹೇಳಿಕೊಂಡು ನಕ್ಕು ಮಲಗುತ್ತಿದ್ದೆವು. ಅವರು ಜವಾಬ್ದಾರಿ ಕಲಿಯತೊಡಗಿದರು. ನಾನು ಹೊರಗೆ ಕೆಲಸದಲ್ಲಿ ನಿರತಳಾಗಿದ್ದಾಗ ಅವರಿಬ್ಬರೇ ಇರುವುದನ್ನು ಕಲಿತರು. ಎಷ್ಟು ಚೆನ್ನಾಗಿ ಕಲಿತರೆಂದರೆ ಅವರಿಂದ ನಾನು ಕಲಿತೆ! ಒಂದು ಕ್ಷಣಕ್ಕೂ ಬೇಸರ ಮಾಡಿಕೊಳ್ಳದೇ ಹೊಸ ಬದುಕನ್ನು ಅವರು ತಮ್ಮದಾಗಿಸಿಕೊಂಡು ಮುಂದುವರಿದರು. ಒಂದು ದಿನ ಸ್ಕೂಲಿನಿಂದ ಹಿಂದಿರುಗಿದ ಮಕ್ಕಳು ದೊಡ್ಡ ಪ್ಯಾಕೆಟ್ ಹಿಡಿದು ಬಂದಿದ್ದರು. ‘ಏನು?’ ಎಂದೆ. ‘ಅಪ್ಪಾಜಿ ಸಿಕ್ಕಿದ್ದರು. ಕರೆದುಕೊಂಡು ಹೋಗಿ ಬೇಕರಿಯಲ್ಲಿ ಬಿಸ್ಕತ್ತು, ಕೇಕು, ಬ್ರೆಡ್ ಎಲ್ಲ ಕೊಡಿಸಿದರು’ ಎಂದರು. ಮಕ್ಕಳು ಟಿವಿ ಇಲ್ಲದೇ, ಟೇಪ್ರೆಕಾರ್ಡರ್ ಇಲ್ಲದೇ, ರೇಡಿಯೋ ಇಲ್ಲದೇ, ಹಳೆಯ ಆಟದ ಸಾಮಾನುಗಳು ಯಾವುದೂ ಇಲ್ಲದೇ ಇದ್ದವರು ಅವತ್ತು ಬೇಕರಿಯ ತಿಂಡಿಯನ್ನು ಸಂತೋಷದಿಂದ ತಿನ್ನುತ್ತಿದ್ದರು. ನನಗೆ ಬಹಳ ರೋಷ ಉಕ್ಕಿ ಬಂದಿತ್ತು. ಹಟಾತ್ತಾಗಿ ಮಕ್ಕಳ ನೆನಪಾಗಿ ಅವನು ತಿಂಡಿ ಕೊಡಿಸಿಕೊಟ್ಟರೆ, ಅದೂ ಅಕಸ್ಮಾತ್ ಸಿಕ್ಕಿದಾಗ, ಅವನ ಕರ್ತವ್ಯ ಮುಗಿದಂತೆಯೇ? ‘ಬಿಸಾಕಿ ಅದನ್ನ’ ಅಂತ ಕಿರುಚಲು ಹೋದೆ. ಆದರೆ ಅವರು ಮಕ್ಕಳು. ತಿಂಡಿ ಯಾರು ಕೊಟ್ಟರು. ಯಾಕೆ ಕೊಟ್ಟರು ಅನ್ನುವುದೆಲ್ಲ ಅವರಿಗೆ ಮುಖ್ಯವಲ್ಲ. ತಿನ್ನುವುದು ಮಾತ್ರ ಮುಖ್ಯ. ಸುಮ್ಮನಾದೆ. ಅವರನ್ನೇ ನೋಡುತ್ತಾ ಯಾವತ್ತಿಗೂ ಮಕ್ಕಳಿಗೆ ಯಾವುದೋ ಕೊರತೆಯಾಗದ ಹಾಗೆ ನೋಡಿಕೊಳ್ಳಬೇಕು ನಾನಿಲ್ಲದಿದ್ದರೂ ಅವರು ಅನಾಥರಾಗಬಾರದು ಎಂದು ನಿರ್ಧರಿಸಿದೆ. ಮಾರನೆಯ ದಿನವೇ ಇಬ್ಬರನ್ನೂ ಕರೆದುಕೊಂಡು ಹೋಗಿ ಬ್ಯಾಂಕಿನಲ್ಲಿ ಸೇವಿಂಗ್ಸ್ ಅಕೌಂಟ್ ಓಪನ್ ಮಾಡಿಸಿದೆ. ಮೈನರ್ಗಳಾದರೂ ದುಡ್ಡು ಹೇಗೆ ಹಾಕಬೇಕು, ದುಡ್ಡು ಬೇಕೆಂದಾಗ ಹೇಗೆ ತೆಗೆಯಬೇಕು. ಅಕಸ್ಮಾತ್ ನನಗೇನಾದರೂ ಆದರೆ ದುಡ್ಡು ನಿಮ್ಮ ಅಕೌಂಟಿನಲ್ಲಿರುತ್ತದೆ ಅಂತ ಹೇಳಿ ತಿಳಿಸಿಕೊಟ್ಟೆ. ಅವತ್ತಿನಿಂದಲೇ ಅವರಿಬ್ಬರೂ ಹಣವನ್ನು ತಾವೇ ನಿಭಾಯಿಸುವುದನ್ನು ಕಲಿತರು.    ]]>

‍ಲೇಖಕರು G

May 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This