ಅಪಘಾತದಲ್ಲಿ ಮರ ಸತ್ತಿದೆ..

-ಶ್ರೀನಿವಾಸ ಗೌಡ

ಖಾಸಗಿ ಡೈರಿ

ಹಾಸನದ ಬಳಿಯ ಚಿಕ್ಕಕಡಲೂರು ಬಳಿ ನಡೆದ ಬೀಕರ ರಸ್ತೆ ಅಪಘಾತದಲ್ಲಿ ರಸ್ತೆ ಬದಿಯಲ್ಲಿ ಬೆಳೆದು ನಿಂತಿದ್ದ ಅರಳಿ ಮರ ಮುರಿದು ಬಿದ್ದಿದೆ, ಬಳ್ಳಾರಿಯಿಂದ ಅದಿರು ತುಂಬಿಕೊಂಡು ಬರುತ್ತಿದ್ದ ಲಾರಿಯ ಚಾಲಕ ಪಾನಪತ್ತನಾಗಿ ವಾಹನ ಚಾಲನೆ ಮಾಡಿ ಮರಕ್ಕೆ ಡಿಕ್ಕಿ ಹೊಡೆದಿದ್ದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಲಾರಿ ಚಾಲಕ ಸೇರಿದಂತೆ ಲಾರಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿರುವ ಇಬ್ಬರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ, ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

K.T.Sivaprasad_1_fs

ಈ ರೀತಿಯಲ್ಲಿ ಅಪಘಾತ ವರದಿಯನ್ನು ನಾನೇ ಬರೆದುಕೊಂಡು ನಾನೇ ಓದಿದೆ… ಯಾಕೋ ನನಗೆ ತಲೆ ಕೆಟ್ಚಿದೆ ಅನ್ನಿಸಿತು, ಬೇರೆ ಯಾರಿಗಾರೂ ತೋರಿಸಿದರೆ ನನಗೆ ತಲೆಕೆಟ್ಟಿರುವುದನ್ನು ಖಾತ್ರಿ ಮಾಡಿಬಿಡುತ್ತಾರೆ ಅಂದುಕೊಂಡು ಯಾರಿಗೂ ತೋರಿಸದೆ ನನ್ನನ್ನು ನಾನೇ ತಮಾಷೆ ಮಾಡಿಕೊಂಡು ಸುಮ್ಮನಾದೆ.

ಕೆ.ಟಿ.ಶಿವಪ್ರಾಸಾದ್ ಅವರು ಹೇಳಿದ ರೀತಿ ಏನಾದರು ಯೋಚನೆ ಮಾಡಿ ನಾನೇನಾದರೂ ಸುದ್ಧಿಗಳನ್ನು ಬೇರೆ ದಿಕ್ಕಿನಿಂದ ಯೋಚನೆ ಮಾಡಿ ಬರೆದಿದ್ದರೆ ಕಷ್ಟ ಆಗುತ್ತಿತ್ತೇನೋ…. ಆದರೆ ಶಿವಪ್ರಸಾದ್ ಅವತ್ತು ನನ್ನ ಜೊತೆ ಮಾತನಾಡುವಾಗ ನಾವು ಗ್ರಹಿಸದೇ ಹೊಗುವ ಮತ್ತೊಂದು ಲೋಕವನ್ನೇ ನನಗೆ ಪರಿಚಯ ಮಾಡಿಸಿದ್ದರು, ನಾವು ಮನುಷ್ಯರನ್ನು ಹೊರತು ಯಾರನ್ನು ಲೆಕ್ಕಕ್ಕೆ ಇಡುವುದೇ ಇಲ್ಲ, ಭೂಮಿಯ ಮೇಲೆ ಇರುವುದೆಲ್ಲ ನಮ್ಮದೇ ಎಂಬ ಮುನುಷ್ಯ ಕೇಂದ್ರಿತ ದೃಷ್ಠಿಯಲ್ಲಿ ಮಾತ್ರ ನೊಡುತ್ತೇವೆ, ಮನುಷ್ಯರಾಗಿ ಮಾತ್ರ ಯೋಚಿಸದೇ ನಮ್ಮ ಸುತ್ತಲಿನ ಇತರ ಜೀವಿಗಳ ಅಂತರಂಗಕ್ಕೆ ಇಳಿದು ಅವುಗಳ ಕಣ್ಣಿಂದ ನೋಡಿದರೇ ನಮ್ಮ ತಿಳಿವೇ ಬದಲಾಗುತ್ತದೆ ಎಂಬುದು ಅವರ ಕೆ.ಟಿ.ಶಿವಪ್ರಸಾದ್ ವಾದವಾಗಿತ್ತು ಇದನ್ನು ನನಗೆ ಅರ್ಥ ಮಾಡಿಸಲು ಅವರು ನನಗೆ ಹೇಳಿದ ಕತೆ ಹೀಗಿತ್ತು,

ಅಲ್ಲಯ್ಯಾ ಅರಸೀಕೆರೆ ರಸ್ತೆಯಲ್ಲಿ ಯಾವನೋ ಒಬ್ಬ ಕುಡುಕ ಡ್ರೈವರ್ ಮರಕ್ಕೆ ಲಾರಿ ಗುದ್ದಿಸಿ ಸತ್ತುಹೊದದ್ದನ್ನು ವರದಿ ಮಾಡುತ್ತೀರಿ, ಅವನೇ ಮಾಡಿಕೊಂಡ ತಪ್ಪಿಗೆ ಜನ ಮರುಗುವಂತೆ ಬರೆಯುತ್ತೀರಿ, ಎಷ್ಟು ಜನ ಸತ್ತರು ಹೇಗೆ ಸತ್ತರು ಅಂತೆಲ್ಲ ವಿವರಿಸುತ್ತೀರಿ ಆದರೆ ಧೂರ್ತ ಮನುಷ್ಯ ಮಾಡಿದ ತಪ್ಪಿನಿಂದ ನೆಲಕ್ಕೆ ಉರುಳಿದ ಮರ ಮಾಡಿದ ತಪ್ಪಾದರೂ ಏನಪ್ಪಾ,ಯಾವ ಮನುಷ್ಯನ ಹಂಗಿಲ್ಲದೆ ಬೆಳೆದ ಆ ಮರದ ನೋವು ನೋವಲ್ಲವಾ.. ಅದು ನಿಮ್ಮ ಕಣ್ಣಿಗೆ ಕಾಣೋದೆ ಇಲ್ಲವಲ್ಲ ಇದಕ್ಕೆ ಏನು ಹೇಳ್ತೀರಪ್ಪಾ ವರದಿಗಾರರು ಅಂದರು… ನಾನು ಅವರ ಮಾತನ್ನು ಒಪ್ಪಿಕೊಂಡೆ, ಅವರ ವಾದ ಕೇವಲ ಒಂದು ಘಟನೆಗೆ ಮಾತ್ರ ಸೀಮಿತವಾಗದ.. ಕಣ್ಣು ತೆರೆಸುವ ಕತೆಯಾಗಿತ್ತು.

ಬುದ್ಧನ ಬಗ್ಗೆ ಆಳವಾಗಿ ತಿಳಿದಕೊಂಡಿರುವ ಕೆ.ಟಿ. ಶಿವಪ್ರಸಾದ್ ಇಂತವೇ ಹತ್ತಾರು ವಿಷಯಗಳ ಬಗ್ಗೆ ಮಾತನಾಡಿದರು… ಅವರ ಮಾತುಗಳನ್ನು ಕೇಳುತ್ತಿದ್ದ ನನಗೆ ದೇಹದಲ್ಲಿ ಜ್ವರ ಬಂದಂತೆ ಆಗಿಬಿಡುತ್ತಿತ್ತು.

ಚಿತ್ರಕಾರರಾಗಿರುವ ಕೆ.ಟಿ.ಶಿವಪ್ರಸಾದ್ ತಮ್ಮ ಕಲಾಕೃತಿಗಳಲ್ಲಿ ಮೂಡಿರುವುದು ಇಂತವೇ ಅಪೂರ್ವ ಯೋಚನೆಗಳು ಅನಿಸುತ್ತದೆ… ತಮಗೆ ಇಷ್ಠವಾದದನ್ನು, ತಿಳಿದಿದ್ದನ್ನು, ಅನುಭವಿಸಿದ್ದನ್ನು ಮಾತ್ರ ಮಾಡುವ ಇಂತವರು ತಮ್ಮ ಅಭಿವ್ಯಕ್ತಿಯಲ್ಲಿ ಸ್ವಾತಂತ್ರ್ಯ ಅನುಭವಿಸುತ್ತಾರೆ, ತಮಗೆ ಅನಿಸಿದ್ದನ್ನ ಹೇಳುತ್ತಾರೆ…. ಆದರೆ ಮನುಷ್ಯರ ಮದ್ಯೆ ಇರುವ ನಾವು ಹಾಗೇನಾದರೂ ಮಾಡಿದರೆ ಕಷ್ಟ, ವಯಕ್ತಿಕ ನೆಲೆಯಲ್ಲಿ ಯೋಚಿಸಬಹುದೇನೋ……

ನೀವಾದರೂ ಶಿವಪ್ರಸಾದ್ ಅವರನನ್ನು ಬೇಟಿಮಾಡಬೇಕಿದ್ದರೆ ನಿಗದಿಯಾದ ಸಮಯಕ್ಕೆ ಹೋಗಿ ಇಲ್ಲವಾದರೆ ಬೈಗುಳ ಖಚಿತ.. ಅಥವಾ ಅವರು ಬಾಗಿಲೇ ತೆರೆಯದೆ ಹೋದರೆ ಅಚ್ಚರಿ ಪಡಬೇಕಾಗಿಲ್ಲ…ಹಾಸನದಂತ ಪುಟ್ಟ ಊರಲ್ಲಿದ್ದುಕೊಂಡು ಅಂತಾರಾಷ್ಠ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು.. ಅವರ ಒಂದೊಂದ್ದು ಕಲಾಕೃತಿ ಹತ್ತಾರು ಲಕ್ಷ ಕ್ಕೆ ಕಡಿಮೆ ಇಲ್ಲ… ಆದರೆ ಅದೇ ಊರಿನ ಎಷ್ಟೋ ಜನಕ್ಕೆ ಅವರು ಗೊತ್ತೇ ಇಲ್ಲ ಅಂತ ಕಾಣುತ್ತದೆ.

ತೀರಾ ಮೂಡಿ ಸ್ವಭಾವದ ವ್ಯಕ್ತಿಯಾದರೂ ಮಾತಿಗೆ ನಿಂತರೆ ಚೆಂದ… ರಾಜ್ಯದಲ್ಲಿ ರೈತ ಸಂಘ ಆರಂಭವಾಗಲಿಕ್ಕೆ ಮೂಲ ಪ್ರೇರಕರಲ್ಲಿ ಒಬ್ಬರು ಅವರ ಗೆಳೆಯ ಬನವಾಸೆ ರಾಜಶೇಖರ್ ಅವರೊಂದಿಗೆ ಜೊತೆಗೂಡಿ ಮಾಡಿದ್ದ ಬ್ಯಾಂಕ್ ಮರು ಜಪ್ತಿ ಚಳುವಳಿ… ರಾಜ್ಯದಾದ್ಯಂತ ಹಬ್ಬಿ ಹೆಸರುವಾಸಿಯಾಗಿತ್ತು…

ಕೆ.ಪಿ.ಪೂರ್ಣಚಂದ್ರ ತೇಜಸ್ಸಿ, ಕೆ.ರಾಮದಾಸ್, ಶಿವಪ್ರಸಾದ್ ಮೂವರೂ ಚಡ್ಡಿ ದೋಸ್ತರಂತಾರಲ್ಲಾ

ಹಾಗೆ… ಒಬ್ಬರಿಗಿಂತ ಒಬ್ಬರು ನಿಸ್ಸೀಮರು…ಕೆ.ಪಿ.ಪೂರ್ಣಚಂದ್ರ ತೇಜಸ್ಸಿ ಅವರ ಸಾಕಷ್ಠು ಕೃತಿಗಳಲ್ಲಿ ಶಿವಪ್ರಸಾದ್ ಚಿತ್ರಗಳಿವೆ… ಅವರ ಸ್ನೇಹದ ಬಗ್ಗೆ… ಅವರು ಜೊತೆ ಜೊತೆ ಕಳೆದ ಕ್ಷಣಗಳ ಬಗ್ಗೆ ಶಿವಪ್ರಸಾದ್ ಬಳಿ ಕೇಳಿದರೆ… ಅಸಕ್ತಿ ಕೆರಳಿಸುವ ವಿಷಯಗಳು ಹೊರಬರುತ್ತವೆ.

ಅವರ ಯೋಚನೆಗಳು ಅಷ್ಟೆ ಮೇಲುನೋಟಕ್ಕೆ ಹುಚ್ಚುಕಂಡಂತೆ ಕಂಡರೂ ನಿಜ ಅನಿಸುತ್ತವೆ ಅವಕಾಶ ಸಿಕ್ಕರೆ ಅವ್ರ ಕಲಾಕೃತಿಗಳನ್ನು ನೋಡಿ ಬನ್ನಿ… ಹೊಸ ಲೋಕ ಕಾಣುತ್ತೆ…

‍ಲೇಖಕರು avadhi

July 21, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

೧ ಪ್ರತಿಕ್ರಿಯೆ

  1. ರಾಮನ್ ಕೆ

    ಯಾರು ಈ ಶಿವಪ್ರಸಾದ್ ? ಕಲಾವಿದರಾ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: