ಅಪಾರ- ಕುಡೀತಾರಾ?

ಅಪಾರ ಬರೆದ ‘ಮದ್ಯಸಾರ’ ಇವತ್ತು ಕೊನೆ ಹನಿ ಇರುವವರೆಗೂ ಬದುಕಲು ಬಯಸುವವರ ಬೈಬಲ್..
‘ಕಂಡ ಕಂಡ ಕಡೆ ಸೊಂಡಿಲ ಚಾಚುವ ಆನೆಗೆ ಅಂಕುಶವಿಲ್ಲ’ ಎಂಬಂತೆ ಅಪಾರರ ಈ ಮಧ್ಯದ ಹನಿಗಳು ಬಾಟಮ್ ಅಪ್ ಆಗುವವರೆಗೆ ಚಾಲ್ತಿಯಲ್ಲಿ ಇದ್ದೇ ಇರುತ್ತದೆ. ಮದ್ಯಸಾರ ನಡದದ್ದೇ ದಾರಿ.
ಅದೆಲ್ಲಾ ಹಾಗಿರಲಿ. ಈ ಬೆಳ್ಳಂಬೆಳಗ್ಗೆಯೂ ರುಚಿಸುವ ಈ ಹನಿಗಳನ್ನು ನೆಕ್ಕಿಕೊಳ್ಳೋಣ ಬನ್ನಿ

ಮದ್ಯಸಾರ~ ಹತ್ತನೇ ರೌಂಡು

*
ಕೊನೆಯ ಬಸ್ಸು ನಮಗೆಂದೇ ಇರೋದು
ನೆಟ್ಟಗೆ ನಿಲ್ಲಿ ಎಂದು ಗದರದಿರಿ
ಮನೆಯ ಸ್ಟಾಪಿನಲ್ಲಿ ಇಳಿದು ಹೋಗುವೆವು
ಕುಡುಕರ ಸಹವಾಸ ಎಂದು ಹೆದರದಿರಿ
*
ಬಾರಿನ ದೀಪವೇಕೆ ಸದಾ ಮಂಕು
ಪಬ್ಬು ಯಾಕಿರುತ್ತೆ ಹಾಗೆ ಮಬ್ಬು
ಬಂದೋರೆಲ್ಲ ಚಿಯರ್ಸ್ ಎಂದು ಚೀರಿದರೂ
ಗೆಲುವಾಗದಂಥ ನೋವೇನು ಅವಕ್ಕೆ!
*
ಪ್ರೇಮದಲಿ ಸೋತಿಲ್ಲ, ದುಃಖದ ಮಾತಿಲ್ಲ
ನಾನು ಕುಡಿಯುವುದು ಹೀಗೇ ಸುಮ್ಮನೆ
ತೀರದ ದಾಹ ನನಗೆ, ಕುಡಿತವೊಂದು ಚಟ
ನಿಮಗೇಕೆ ಕಾರಣ ಬೇಕೇಬೇಕೆಂಬ ಹಟ?
*
ಕುಂಟು ನೆಪ ಹೇಳಬೇಡ
ಮನೆಗೆ ಹೋಗಲಿನ್ನೂ ಹೊತ್ತಿದೆ
ಬರಲ್ಲ ಅಂದ್ರೆ ಬರಲ್ಲ ಅನ್ನು
ಬಾರಿನ ದಾರಿ ನನಗೂ ಗೊತ್ತಿದೆ
*
ನನ್ನ ನಶೆಗೆ ನಾನು ಬರೆವೆ
ಬೇಡ ಹಾರ ತುರಾಯಿ
ನಿಮ್ಮ ಖುಷಿಗೆ ಕುಡಿಸೆ ಕುಡಿವೆ
ಬಾಟಲಿ ಪೂರ ಸಾರಾಯಿ

‍ಲೇಖಕರು avadhi

March 10, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

24 ಪ್ರತಿಕ್ರಿಯೆಗಳು

  • keshava prasad b kidoor

   ವಿಜಯ ಕರ್ನಾಟಕದಲ್ಲಿದ್ದಾಗ ಅವರದ್ದೇ ಆದ ಶೈಲಿಯಲ್ಲಿ ಕೆಳಗಿನಿಂದ ಕಪ್ಪನ್ನು ಹಿಡಿದು ಕಾಫಿ ಕುಡಿಯುತ್ತಿದ್ದರು.
   ಕೇಶವ ಪ್ರಸಾದ್ ಬಿ ಕಿದೂರು

   ಪ್ರತಿಕ್ರಿಯೆ
  • goutam hegde

   ಬ್ರಹ್ಮ ಕೂಡ ಸುಮ್ನಿರ್ತಾನೆ
   ಅಪಾರ ಬರ್ಯೋವಾಗಂತೆ
   ನಾನೇ ಅಂದ್ರೆ ನಮ್ಮಪ್ಪ ಇವ್ನು
   ಬಲ್ನನ್ ಮಗನೆ ಅಂತಾವ್ನಂತೆ 🙂

   ಪ್ರತಿಕ್ರಿಯೆ
 1. ಸುಘೋಷ್ ಎಸ್. ನಿಗಳೆ

  ಬ್ರಹ್ಮ ಕೂಡ ಸುಮ್ನಿರ್ತಾನೆ
  ಅಪಾರ ಬರ್ಯೋವಾಗಂತೆ
  ………………………….
  ………………………..
  (ಮುಂದಿನ ಎರಡು ಸಾಲುಗಳನ್ನು ಯಾರು ಬೇಕಾದರೂ ಪೂರ್ತಿಗೊಳಿಸಬಹುದು)

  ಪ್ರತಿಕ್ರಿಯೆ
 2. ಜೋಗಿ

  ಎದುರಿರುವಾಗ ಅಪಾರ ಮದ್ಯ
  ನೆನಪಾಗುತಿರಲಿ ಅಪಾರ ಪದ್ಯ
  ಚಹಾದ ಜೋಡಿ ಚೂಡದ್ಹಾಂಗ
  ಬಿಯರಿನ ಜೋಡಿ ಈ ಅಭಂಗ

  ಪ್ರತಿಕ್ರಿಯೆ
 3. akshata

  ಅಪಾರ, ಚನ್ನಾಗಿದೆ ಚನ್ನಾಗಿದೆ! ಕೆಲವೇ ಚುಟುಕುಗಳಲ್ಲಿ ಅಪಾಅರವಾದ್ದನ್ನು ಹೇಳಿದ್ದೀರಿ. ಕಿಡ್ನಿ, ಲಿವರ್ ಸಾವಧಾನ! ಹಾ.ಹಾ.ಹಾ.ಹಾ
  ಅಕ್ಷತಾ.

  ಪ್ರತಿಕ್ರಿಯೆ
 4. Kallare

  ಮಧ್ಯಕ್ಕೆ ಬಂದಾಗಲೇ ತಿಳಿದದ್ದು
  ಮದ್ಯ ಅಲ್ಲೇ ಉಳಿದಿದೆ ಎಂದು
  ಅಪಾರ ಆಸೆಯಿಂದ ಕುಳಿತರೆ
  ಅವರು ಚೂರೂ ಬಿಡದೆ ಮುಗಿಸಿದ್ದು

  ಪ್ರತಿಕ್ರಿಯೆ
 5. Veeresh

  sarayige tumba khushiyagide yakandre adakke kaaranvillade preetisoru sikkidare………

  ಪ್ರತಿಕ್ರಿಯೆ
 6. ಶ್ರೀವತ್ಸ ಜೋಶಿ

  ಬ್ರಹ್ಮ ಕೂಡ ಸುಮ್ನಿರ್ತಾನೆ
  ಅಪಾರ ಬರ್ಯೋವಾಗಂತೆ
  ಇವ್ನೂ ಎಲ್ಲಿ ಜೋಡಿಸ್ತಾನೆ*
  ಅನ್ನೋದೊಂದೇ ಚಿಂತೆ!
  (* ಹೆಂಡ ಮುಟ್ಟಿದ್ ಕೈನ)

  ಪ್ರತಿಕ್ರಿಯೆ
 7. Sritri

  ಅಪಾರ- ಕುಡೀತಾರಾ?
  ಕುಡೀಬೇಡ ಕುಡೀಬೇಡ ಅಪಾರ
  ಮದುವೆ ಮಾರ್ಕೆಟ್ಟಲ್ಲಿ ಯೋಗ್ಯ ವರ
  ಕುಡಿಯದ ಹುಡುಗನೇ ಎಲ್ಲರಿಗಿಷ್ಟ
  ಹುಡುಗೀರು ಒಪ್ಪದಿದ್ರೆ ನಿಂಗೇನೆ ನಷ್ಟ 🙂

  ಪ್ರತಿಕ್ರಿಯೆ
 8. ಅಶೋಕ ಉಚ್ಚಂಗಿ

  ನನ್ನ ನಶೆಗೆ ನಾನು ಬರೆವೆ….ಇಷ್ಟವಾಯ್ತು..
  ಅಂದ ಹಾಗೆ ನನ್ನ ಬ್ಲಾಗ್ ನಲ್ಲಿ ಯುಗಾದಿಯ ಕಲ್ಪನೆಗೆ ಚಿತ್ರವನ್ನು ಹಾಕಿದ್ದೇನೆ…ನಿಮ್ಮೆಲ್ಲಾ ಬ್ಲಾಗ್ ಗೆಳೆಯರು ಇಲ್ಲಿಗೊಮ್ಮೆ ಭೇಟಿನೀಡಿ ಯುಗಾದಿಯ ಚಿಂತನೆಯನ್ನು,ನಿಸರ್ಗದ ವಿಸ್ಮಯವನ್ನು ಕಥೆ,ಕವಿತೆ,ಹಾಡು,ಪದಪುಂಜಗಳೊಂದಿಗೆ ಎಲ್ಲರೊಂದಿಗೂ ಹಂಚಿಕೊಳ್ಳಲು ಭೇಟಿ ನೀಡಲಿ ಎಂಬುದು ನನ್ನ ಆಕಾಂಕ್ಷೆ…ನೀವು ಬನ್ನಿ….ನಿಮ್ಮ ಸ್ನೇಹಿತರನ್ನೂ ಕರೆತನ್ನಿ…
  ಅಶೋಕ ಉಚ್ಚಂಗಿ
  http://mysoremallige01.blogspot.com

  ಪ್ರತಿಕ್ರಿಯೆ
 9. ಸಂದೀಪ್ ಕಾಮತ್

  “ಅಪಾರ ಕುಡೀತಾರಾ ,ಅಪಾರ ಕುಡೀತಾರಾ
  ಅಂತ ಎಲ್ಲ ಇಲ್ಲಿ ಕೇಳ್ತಾರ….
  ಕುಡಿಯೋದೇನೂ ತಪ್ಪಿಲ್ಲ ಬಿಡಿ
  ಆದ್ರೆ ನನ್ನೂ ಕರೀ ’ಬಾರ್’ ದಿತ್ತೆ ಅಂತ ಮೆಲ್ಲಗೆ ಗೊಣಗ್ತಾರ…”
  ತುಳು ನಾಟಕವೊಂದರಲ್ಲಿ ಒಂದು ಡೈಲಾಗ್ ಇದೆ.
  “ಇತ್ತೆದ ಕಾಲೊಡ್ ಆಣ್ ಪರ್ಪೆನಾ ಅಂದ್ ಕೇನ್ರೆ ಬಲ್ಲಿ .ಏತ್ ಪರ್ಪೆ ಅಂದ್ ಕೇನೋಡು !!”
  ಅಂದ್ರೆ “ಈಗಿನ ಕಾಲದಲ್ಲಿ ಹುಡುಗ ಕುಡೀತಾನಾ ಅಂತ ಕೇಳ್ಬಾರ್ದು .ಎಷ್ಟು ಕುಡೀತಾನೆ ಅಂತ ಕೇಳ್ಬೇಕು !!!”

  ಪ್ರತಿಕ್ರಿಯೆ
 10. :-)

  ಇದೇನಿದು??!!!
  ಅಪಾರನ ಮದ್ಯಸಾರ
  ಕಾಮೆಂಟ್ಸ್ ಗಳ ಮಹಾಪೂರ
  ‘ಪಬ್ಬಿಗರ ಕಾವ’ ಹುಟ್ಟಿತೇ???!!!
  (with apologies to Andayya -kabbigara kaava)

  ಪ್ರತಿಕ್ರಿಯೆ
 11. ಪ್ರವೀಣ್

  “ನಂದೂ ಇರಲಿ ಒಂದು………..!!!”
  ಮದಿರೆಯ ಮಧ್ಯೆ ಸಿಕ್ಕಿ
  ತಡೆಯಲಾರದೆ ಬಿಕ್ಕಿ
  ಹೀರುತ್ತಿದ್ದರೆ ‘ಮದ್ಯ’ಸಾರ
  ಉಘೆ ಉಘೆ ಅಪಾರ…..
  – ಬಣಗಿ

  ಪ್ರತಿಕ್ರಿಯೆ
 12. prakash hegde

  ಮತ್ತು..
  ಮತ್ತೂ…
  ಮತ್ತಷ್ಟು ಮತ್ತು…
  ಅಪಾರ..
  ನಿಮ್ಮ ಮತ್ತಿನ..
  ಅಣಿ ಮುತ್ತುಗಳು…

  ಪ್ರತಿಕ್ರಿಯೆ
 13. sirsipora

  ಪುಟ್ಟ ಮಕ್ಕಳಂತೆ ‘ಬಾರಿನ ದೀಪವೇಕೆ ಮಂಕು?’ ಎಂದು ಕೇಳಿದಾಗಲೇ ಗೊತ್ತಾಗಲಿಲ್ವ.. ಻ಪಾರ ಕುಡಿಯುವುದಿಲ್ಲ ಅಂತ!
  ವಿನಾಯಕ ತದ್ದಲಸೆ

  ಪ್ರತಿಕ್ರಿಯೆ
 14. apara

  ಇಂಥ ಪ್ರಶ್ನೆ ಕೇಳಿ ನನ್ನನ್ನು ಗೊಂದಲಕ್ಕೆ ಕೆಡವಿದ ನಿಮ್ಮ ಮೇಲೆ ನಾನೇಕೆ ‘ಪಾನ’ನಷ್ಟ ಮೊಕದ್ದಮೆ ಹಾಕ‘ಬಾರ್‌’ದು???!!!!

  ಪ್ರತಿಕ್ರಿಯೆ
 15. ದಿವ್ಯಾ

  ನನ್ನ ನಶೆಗೆ ನಾನು ಬರೆವೆ
  ಬೇಡ ಹಾರ ತುರಾಯಿ
  ನಿಮ್ಮ ಖುಷಿಗೆ ಕುಡಿಸೆ ಕುಡಿವೆ
  ಬಾಟಲಿ ಪೂರ ಸಾರಾಯಿ..
  ee saalugalu sooper… 🙂 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: