ಅಪಾರ ಡೌನ್ ಡೌನ್…

‘ಬಾಟಮ್ ಅಪ್’ ಅಂದ್ರೆ ಏನು ಅಂತ ಗುಂಡು ಹಾಕುವ ಎಲ್ಲಾರ್ಗೂ ಗೊತ್ತು. ಆದರೆ ಅಪಾರ ಹಾಗೂ ಪ ಸ ಕುಮಾರ ಇಬ್ರೂ ಸೇರಿದ್ರೆ ಹಿಂಗಾಗುತ್ತೆ ನೋಡಿ. ಅಪಾರ ‘ಕಿಕ್’ ನೀಡುವಂತೆ ಬರೆದ ಮದ್ಯಸಾರ ಪುಸ್ತಕವಾಗುತ್ತಿದೆ.

ಹಬ್ಬದಲ್ಲಿ ಅಪಶಕುನ ಎಂಬಂತೆ ಅಪಾರ ‘ಇನ್ನು ಮುಂದೆ ಮದ್ಯಸಾರ ಬರೆಯುವುದಿಲ್ಲ’ ಎಂಬ ತೀರ್ಮಾನ ಮಾಡಿದ್ದಾರೆ. ಕೊಟ್ಟಿರುವ ಕಾರಣ ತೀರಾ ತೀರಾ ಸಿಲ್ಲಿ. ‘ಖಾಲಿಯಾಗಿದೆ ವಿಸ್ಕಿ, ಅರೆ ಇಸ್ಕಿ’ ಅಂತ ಕೈ ತೊಳೆದುಕೊಳ್ಳಲು ಟ್ರೈ ಮಾಡುತ್ತಿದ್ದಾರೆ. ಆದರೆ ಎಂತ ದಡ್ದನಿಗೂ ಗೊತ್ತು ಮಹಾತ್ಮಾ ಗಾಂಧಿ ದಿನವಾದರೂ ಸಹಾ ಹಿಂಬಾಗಿಲ ಮೂಲಕ ವಿಸ್ಕಿ ಸಿಗುತ್ತದೆ.

ಅಪಾರ ನಿಮ್ಮ ಬಾಟಲಿ ಅಕ್ಷಯಪಾತ್ರೆಯಂತೆ, ಸದಾ ತುಂಬಿರುತ್ತದೆ. ಖಾಲಿಯಾದಷ್ಟೂ ಉಕ್ಕುತ್ತದೆ.
ಅಪಾರರ ತೀರ್ಮಾನಕ್ಕೆ ಪ್ರತಿಭಟನೆ ಸೂಚಿಸಿ ಅವರಿಗೊಂದು “ಸ್ಟ್ರಾಂಗ್’ (ಪ್ರೀಮಿಯಮ್ ಅಲ್ಲ) ಪತ್ರ ಬರೆಯಿರಿ[email protected]

+++
ಅಳತೆ ಮೀರಿದರೆ ಆಪತ್ತು  ಅಂತ ತಿಳಿದು ಮದ್ಯಸಾರ’ವನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಒಂದಷ್ಟು ಕತೆಗಳನ್ನು ಬರೆದು ನಂತರ ಏನೂ ಬರೆಯಲಾಗದೆ ಒದ್ದಾಡುತ್ತಿದ್ದ ನನಗೆ ಈ ಪುಟ್ಟ ಪದ್ಯಗಳ ಮೂಲಕ ಏನೇನೋ ಮರಳಿ ಸಿಕ್ಕಿದೆ; ಬರೆಯಬಹುದು ಎಂಬ ವಿಶ್ವಾಸವೂ ಸೇರಿದಂತೆ. ಬ್ಲಾಗಿಗೆ ನಿಯಮಿತವಾಗಿ ಓದುಗರನ್ನು ಸೆಳೆಯಲು ಸ್ವಾರಸ್ಯವಾದ ಮತ್ತು ಚುಟುಕಾದ ಏನಾದರೂ ಬೇಕು ಎಂಬ ಉದ್ದೇಶದಿಂದ ಶುರು ಮಾಡಿದ ಈ ಮದ್ಯದ ಕವಿತೆಗಳು ಇಷ್ಟೊಂದಾಗಬಹುದು ಎಂದು ನನಗೂ ಗೊತ್ತಿರಲಿಲ್ಲ. ಈಗ ನಿಲ್ಲಿಸಬೇಕು ಎಂದು ತೀರ್ಮಾನಿಸಿರುವಾಗ ಕುಡಿತವನ್ನು ಬಿಡುವಷ್ಟೇ ಕಷ್ಟವಾಗುತ್ತಿದೆ!

ಖುಷಿಯ ವಿಷಯವೆಂದರೆ ಈ ಪದ್ಯಗಳೆಲ್ಲಾ ಪುಟ್ಟ ಪುಸ್ತಕ ರೂಪದಲ್ಲಿ ಬರುತ್ತಿವೆ. ಪ್ರಕಟಿಸುತ್ತಿರುವುದು ಗೆಳೆಯ ವಸುಧೇಂದ್ರ. ಪ ಸ ಕುಮಾರ್ ಕವಿತೆಗಳಿಗೆ ಮತ್ತಷ್ಟು ನಶೆ ಏರಿಸುವಂಥ ಅದ್ಭುತ ರೇಖಾಚಿತ್ರಗಳನ್ನು ಕೊಟ್ಟಿದ್ದಾರೆ.(ಸೆರೆ ನನ್ನದು ಗೆರೆ ಅವರದು!) ಮುಖಪುಟಕ್ಕೆ ಬಳಸಿಕೊಂಡಿರುವ ಅವರದೊಂದು ಚಿತ್ರದಲ್ಲಿ ಕುಡುಕನೊಬ್ಬ ಬಾಟಲಿಗಳ ರಾಶಿಯ ಮೇಲೇ ಕಲ್ಪಿಸಲಾಗದ ಸುಖದಲ್ಲಿ ಮಲಗಿಕೊಂಡಿದ್ದಾನೆ! (ಗೆಳೆಯನೊಬ್ಬ ಅದನ್ನು ‘ಸೆರೆ’ಶಯ್ಯೆ ಅಂದ. ಮತ್ತೊಬ್ಬರು ‘ಶೀಷಶಾಯಿ’ ಎಂದರು. ನೀವು ‘ಶೀಷಾಸನ’ ಅಂದರೂ ಹೊಂದುತ್ತೆ!).

ಇಷ್ಟು ದಿನ ಬ್ಲಾಗಿಗೆ ಬಂದು ಈ ಪದ್ಯಗಳನ್ನು ಓದಿದ ನಿಮಗೆಲ್ಲರಿಗೂ ವಂದನೆಗಳು. ಮುಂದಿನ ಭಾನುವಾರ 13ನೇ ತಾರೀಖು ಬೆಳಗ್ಗೆ 10.30ಕ್ಕೆ ಬಸವನಗುಡಿಯ ವರ್ಲ್ಡ್ ಕಲ್ಚರ್ ಇನ್ಸ್ಟಿಟ್ಯೂಟ್‌ನಲ್ಲಿ ಇತರ ಎರಡು ಪುಸ್ತಕಗಳೊಂದಿಗೆ ಮದ್ಯಸಾರವೂ ಬಿಡುಗಡೆಯಾಗಲಿದೆ. ಬಿಡುವು ಮಾಡಿಕೊಂಡು ಬನ್ನಿ.

ಯಾವ ಮಾಯದಲ್ಲೊ
ಮುಗಿದುಹೋಯ್ತಲ್ಲ
ಇಡೀ ಬಾಟಲ್ ವಿಸ್ಕಿ
ಅರೆ ಇಸ್ಕಿ!

‍ಲೇಖಕರು avadhi

April 7, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

 1. ತೀರ್ಥರೂಪಿ

  ಅಪರಂಪಾರ ಅಪಾರರಿಗೆ,
  ಪ್ರಾಣೇಶಾಚಾರ್ಯ ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ಅವರನ್ನು ಬಿಡಲಿಲ್ಲ ಅನ್ನುವ ಹಾಗೆ, ನೀವು ಮದ್ಯಸಾರ ಬಿಟ್ಟರೂ ಪದ್ಯಸಾರ ನಿಮ್ಮನ್ನು ಬಿಡುವುದಿಲ್ಲ. ಹಾಗೆಲ್ಲ `ಮದ್ಯ’ದಲ್ಲಿ ಎದ್ದು ಹೋಗೋದು ತಮಾಷೆ ಅಂದ್ಕೊಂಡ್ರಾ, ಹುಷಾರು.ಸಾರಾಯಿ ನಿಲ್ಲಿಸಿದರೆ ಕಳ್ಳಬಟ್ಟಿ ಶುರುವಾಗುತ್ತದೆ.
  ಇಷ್ಟು ದಿನ ಬ್ಲಾಗು ಗಡಂಗಿನಲ್ಲಿ ಪದಹೆಂಡ ಕುಡಿಸಿ,ಚಟ ಹಿಡಿಸಿ, ತಮಗೆ ಬೇಕೆಂದಾಗ ಎದ್ದು ಹೋಗುತ್ತೇನೆ ಅನ್ನುತ್ತೀರಲ್ಲಾ, ಕನಿಷ್ಟ ಜವಾಬ್ದಾರಿ ಬೇಡವೇ. ಕುಡುಕನಿಗೆ ನಿಯತ್ತಿರಬೇಕು. ಕುಡಿಯದ ವಾಚಾಳಿಗಳ ಸುದ್ದಿ ನಮಗೆ ಬೇಡ. ಕುಡಿದ ವಾಚಾಮಗೋಚರನನ್ನು ನಾವು ಸುಮ್ಮನೆ ಬಿಡುವುದಿಲ್ಲ.
  -ತೀರ್ಥರೂಪಿ

  ಪ್ರತಿಕ್ರಿಯೆ
 2. malathi S

  ಏನನ್ಯಾಯ. this is ba-bar-ism on Apara’s part. ನಮಗೆಲ್ಲಾ ಮದ್ಯಸಾರದ ’ಸೆರೆ’ಯಾಳಾಗಿಸಿ ಈಗ ಹೀಗೆ ನಡುಬೀರಿನಲ್ಲಿ …oops sorry (hic) ನಡುನೀರಿನಲ್ಲಿ ತೇಲಾಡಲು ಬಿಟ್ಟು ಹೋಗುವುದು ಶುದ್ದ ಅನ್ಯಾಯ. ಹಮೇ ‘ಪಾರ’ ಲಗಾಒ ಅಪಾರಾ ಜಿ.
  Best wishes for the function.
  🙂
  M S

  ಪ್ರತಿಕ್ರಿಯೆ
 3. chetana chaitanya

  apaararE, madyada ruchi hattisi heege eddu hOdare hEge?
  pratibhataneyalli nAnU sErikoLtene.
  ANYAAYA! ANYAAYA!!
  – Chetana

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ malathi SCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: