ಅಪಾರ, ಮಹೇನ್ 'ವಾಕ್ ದ ಟಾಕ್' : ಡಬ್ಬಿ೦ಗ್, ಡಬ್ಬಿ೦ಗ್!!

– ಮಹೇನ್ ಸಿ೦ಹ   ನಾನು ಮತ್ತು ನಮ್ಮ ಅಪಾರ [Raghu Apara] ಸಂಜೆ ವಾಕಿಂಗು ಅಂತ ಹೊರ್ಡ್ತೀವಿ. ಆ ಕೆಲಸಕ್ಕೆ ಮುಹೂರ್ತ ಕೂಡಿಬರೋದೇ ಅಪರೂಪ. ಹಾಗೊಮ್ಮೆ ಸಿಕ್ಕಾಗ ಪ್ರಪಂಚದ ಸಮಸ್ಯಗಳೆಲ್ಲಾ ನಮ್ಮ ಮಾತು ಕಥೆಯಲ್ಲಿ ಬಂದು ಹೋಗುತ್ತೆ. ಒಸಾಮ ಬಿನ್ ಲಾದೆನ್ ನ ಸುಡಬೇಕಿತ್ತೋ..ಹೂಳ್ಬೇಕಿತ್ತೋ ಅನ್ನೂ ವಿಷ್ಯದಿಂದ ಹಿಡಿದು…ದೊಡ್ಡಣ್ಣ ಎಂಥ ನಟ ಅನ್ನೋದರಬಗ್ಗೆಯೂ ಚರ್ಚೆ ನಡೆಯುತ್ತೆ. ಇತ್ತೀಚಿಗೆ ನಮ್ಮನ್ನ ಕಾಡ್ತಾ ಇರೋದು ಕನ್ನಡ ಚಿತ್ರರಂಗ. ಸಹಜವಾಗಿಯೇ ಡಬ್ಬಿಂಗು ನಮ್ಮ ವಿಷಯ. ಇವತ್ತು ಅದು ಇದು ಮಾತಾಡ್ತ.. ನಾನು : ರ…ಘು, ಡಬ್ಬಿಂಗ್ ಒಂದು ಸಮಸ್ಯೆನೇ ಅಲ್ಲಾ ರಿ. ರಘು : ಹೆಂಗೆ? ನಾನು : ಅಲ್ಲ ಅದ್ಯಾಕೆ ಡಬ್ ಮಾಡ್ಬೇಕು ಅಂತ. ಅದಕ್ಕೊಂದು ಒಳ್ಳೇ ಪರಿಹಾರ ಇದೆ. ಯಾವುದೇ ಭಾಷೆ ಸಿನೆಮಾ ಇರಲಿ, ಕನ್ನಡದ “ಸಬ್ ಟೈಟಲ್” ಹಾಕೋದಪ್ಪ. ಡಬ್ಬಿಂಗ್ ಯಾಕ್ ಮಾಡ್ಬೇಕು. ನಾವೆಲ್ಲಾ ಇರಾನಿ ಸಿನೇಮಾ ನೋಡಲ್ಲವ ಹೀಗೆನೆ? ರಘು : ಕನ್ನಡ ಓದಕ್ಕೆ ಬರದೇ ಇರೊರು? ಅವರೇನ್ ಮಾಡ್ಬೇಕು ಅಂತ ಕೇಳ್ತಾರೆ? ಅಂತಹ ರೂರಲ್ ಕನ್ನಡಿಗರನ್ನೆ ಇಲ್ಲಿಯ ಕೆಲವು ನಿರ್ಮಾಪಕರು ಟಾರ್ಗೆಟ್ ಮಾಡಿ ಅವರಿಗೆ ಬೇರೆ ಭಾಷೆ ಸಿನಿಮಾನ ಕನ್ನಡದಲ್ಲಿ ತೋರಿಸಿ ಹಣಮಾಡ್ಬೇಕು ಅಂತಿರೋದು. ನಾನು : ನೋಡಿ ತೀರ ಕನ್ನಡ ಓದಕ್ಕೇ ಬರದೇ ಇರೋ ಬಡತನದಲ್ಲಿ ಬೆಳೆದ ಜನ ಸಿನೇಮಾ ಎಲ್ಲಿ ನೋಡ್ತಾರೆ? ಕನ್ನಡ ಎಷ್ಟು ಜನಕ್ಕೆ ಓದಕ್ಕೆ ಬರುತ್ತೆ ಅಂತ ಒಂದು ಸಮೀಕ್ಶೇ ಮಾಡಲಿ….ಅದು 60% ಗಿಂತ ಜಾಸ್ತಿ ಇದ್ರೆ, ಇನ್ನೇನ್ ಬೇಕು ನಿರ್ಮಾಪಕರಿಗೆ? ಅಷ್ಟು ದೊಡ್ಡ ಮಾಸ್ ಗೆ ಕನ್ನಡದ ಸಬ್ ಟೈಟಲ್ ಹಾಕಿ ತೋರಿಸಿ ದುಡ್ಡು ಮಾಡಬಹುದಲ್ಲ? ಹಾಗೊಮ್ಮೆ ಒಂದು ಸಣ್ಣ ವರ್ಗಕ್ಕೆ ಕನ್ನಡ ಓದಕ್ಕೆ ಬರಲ್ಲ, ಆದರೂ ತಮಿಳು, ತೆಲುಗು ಸಿನೇಮಾ ನೋಡಲೇ ಬೇಕು ಅನ್ನೊ ತೆವಲಿದೆ ಅಂದರೆ, ಅವರು ಕನ್ನಡ ಓದೋದು ಬರಿಯೋದು ಕಲೀಲಿ. ಅಲ್ವ? ಕನ್ನಡನೂ ಉದ್ಧಾರ ಅಗುತ್ತೆ, ಬೆಳೆಯುತ್ತೆ ರಘು : [ನಗುತ್ತ] ಹೌದ್ ಹೌದು…ನಾವು ಕನ್ನಡ ಕೋಚಿಂಗ್ ಕ್ಲಾಸ್ ಗಳು ತೆಗೆದು, ಕನ್ನಡ ಬೆಳಸಬಹುದು..”ಕನ್ನಡಕಲಿ, ತಮಿಳು ನೋಡಿ ನಲಿ” ಅಂತ ಸ್ಲೋಗನ್ನು. ಹ ಹ ಹ…ಇಷ್ಟು ಮಾತಾಡಿ ನಮ್ಮ ಬದಾಮಿ ಹಾಲು ಕುಡಿದು..”ಹೀಗೂ ಉಂಟಾಗುತ್ಯೆ?” ಅಂತ ತಲೆ ಕೆರೆದು ಯೋಚನೆ ಮಾಡಿ, ಏನೇ ಆಗಲಿ ಒಮ್ಮೆ ಬರೆದೇ ಬಿಡುವ ಅಂತ ಬರೆದೆ. ಹೇಳಿ ಎಷ್ಟು ಜನ್ ಇದ್ದೀರಿ ಕನ್ನಡ ಕ್ಲಾಸಿಗೆ. :)]]>

‍ಲೇಖಕರು G

May 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: