ಅಬ್ಬಾ ಮೂಗು!!

ಮೂಗಿನಲ್ಲಿ ಕಾದಿತ್ತು ವಿಸ್ಮಯ !!! – ಡಾ ಡಿ ಕೆ ಕೃಷ್ಣಮೂರ್ತಿ ಕೊಳಲು ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯ.ಊಟಕ್ಕೆ ಅವರೇ ಕಾಳಿನ ಸಾಂಬಾರ್ ಬೇರೆ ತಿಂದಿದ್ದರಿಂದ ಜೋರು ನಿದ್ರೆ.ಸ್ವತಹ ವೈದ್ಯರಾಗಿದ್ದ ಕನ್ನಡದ ಹಾಸ್ಯ ಸಾಹಿತಿ ರಾ.ಶಿ.(ಡಾ.ಶಿವರಾಂ ) ಹೇಳುತ್ತಿದ್ದ ಹಾಗೆ ಅದು ಡಾಕ್ಟರ್ ಗಳು ಮತ್ತು ದೆವ್ವಗಳು ಸ್ವಲ್ಪ ರೆಸ್ಟ್ ತೆಗೆದುಕೊಳ್ಳುವ ಸಮಯ !ಆದರೆ ಆ ಸಮಯದಲ್ಲೂ ನಮ್ಮನ್ನು ಪರೀಕ್ಷೆ ಮಾಡುವ ಸಲುವಾಗಿಯೇ,ಹಪ್ಪಳ ಮಾರುವವರು,ಉಪ್ಪಿನ ಕಾಯಿ ಮಾರುವವರು,ಬಿ.ಬಿ.ಎಮ್.ವಿದ್ಯಾರ್ಥಿಗಳೆಂದು ಹೇಳಿಕೊಂಡು ಬಂದು, ನಮಗೆ ಬೇಡದ ವಸ್ತು ಗಳನ್ನು ಮಾರಲೇ ಬೇಕೆಂದು ಬೇತಾಳಗಳ ಹಾಗೆ ಬೆನ್ನು ಬೀಳುವವರು ,ನಮ್ಮ ನಿದ್ರೆಯ ಶತ್ರುಗಳಂತೆ ಕಾಡುತ್ತಾರೆ!’ಕಿರ್ರೋ’ಎಂದು ಅರಚಿ ಕೊಳ್ಳುತ್ತಿದ್ದ ಡೋರ್-ಬೆಲ್ ನಿಂದ ನಿದ್ರಾ ಭಂಗ ವಾಗಿ ,ಹೋಗಿ ಬಾಗಿಲು ತೆಗೆದೆ.ಮೂಗು ಸೋರುತ್ತಿದ್ದ ನಾಲಕ್ಕು ವರುಷದ ಮಗನನ್ನು ಕರೆದು ಕೊಂಡು ಬಂದಿದ್ದ ವ್ಯಕ್ತಿಯೊಬ್ಬ “ನೀವು ಮೂಗಿನ ಡಾಕ್ಟರ್ರಾ ?”ಎಂದ.ನಿದ್ರೆ ಹಾಳಾಗಿದ್ದಕ್ಕೆ ಮೂಗಿನ ತನಕ ಬಂದ ಕೋಪವನ್ನು ತಡೆದುಕೊಂಡು ಹೌದೆಂದೆ.ಮಗನನ್ನು ಒಂದು ತಿಂಗಳಿಂದ ಮಕ್ಕಳ ಡಾಕ್ಟರ್ ಒಬ್ಬರ ಹತ್ತಿರ ತೋರಿಸುತ್ತಿರಿರುವುದಾಗಿಯೂ ,ಮೂಗಿನಿಂದ ಸಿಂಬಳ ಸೋರುವುದು ,ಕೆಟ್ಟ ವಾಸನೆ ಬರುವುದು ನಿಂತಿಲ್ಲವೆಂದೂ ,ಯಾರದೋ ಸಲಹೆಯ ಮೇರೆಗೆ ನನ್ನಲ್ಲಿಗೆ ಕರೆದು ಕೊಂಡು ಬಂದುದಾಗಿಯೂ ಹೇಳಿದ.ಸಂಜೆ ನಾಲಕ್ಕೂವರೆಗೆ ಆಸ್ಪತ್ರೆಗೆ ಬರುವಂತೆ ಹೇಳಿ ಕಳಿಸಿಕೊಟ್ಟೆ .ಸಂಜೆ ಆಸ್ಪತ್ರೆಯಲ್ಲಿ ಆ ಹುಡುಗನ ಪರೀಕ್ಷೆ ಮಾಡಿದೆ.ಮಾರು ದೂರಕ್ಕೇ, ಮೂಗಿನಿಂದ ಗಪ್ಪೆಂದು ಸಹಿಸಲು ಅಸಾಧ್ಯವಾದ ಕೆಟ್ಟ ವಾಸನೆ ಬರುತ್ತಿತ್ತು.ಮೂಗಿನಿದ ರಕ್ತ ಮಿಶ್ರಿತ ಸಿಂಬಳ ಸೋರುತ್ತಿತ್ತು.ನೋಡಿದ ತಕ್ಷಣ ಹುಡುಗ ಮೂಗಿನಲ್ಲಿ ಏನೋ ವಸ್ತುವೊಂದನ್ನು ಹಾಕಿ ಕೊಂಡಿರುವುದು ಖಾತ್ರಿಯಾಯಿತು.ಸೂಕ್ತ ಸಲಕರಣೆ ಗಳ ಸಹಾಯದಿಂದ ಬೆಳ್ಳಗಿನ ಮೂಳೆಯಂತೆ ಕಾಣುತ್ತಿದ್ದ ವಸ್ತುವೊಂದನ್ನು ಮೂಗಿನಿಂದ ಕಷ್ಟಪಟ್ಟು ಹೊರತೆಗೆದೆ.ಮೂಗಿನಿಂದ ಸಾಕಷ್ಟು ರಕ್ತ ಸ್ರಾವವಾಗುತ್ತಿತ್ತು.’ಮೂಗಿನ ಕಾರ್ಟಿಲೇಜ್ ಏನಾದರೂ ಕಿತ್ತು ಬಂತಾ ಸಾರ್ !?’ ಅಂತ ಅಲ್ಲೇ ಇದ್ದ ಸಹ ವೈದ್ಯರೊಬ್ಬರು ಗಾಭರಿಗೊಂಡು ಉದ್ಗಾರ ತೆಗೆದರು .ಮೂಗಿನ ರಕ್ತಸ್ರಾವ ನಿಲ್ಲುವಂತೆ ಮೂಗನ್ನು ಗಾಜ್ ನಿಂದ ಪ್ಯಾಕ್ ಮಾಡಿದ ಮೇಲೆ,”ಇಲ್ಲಿ ನೋಡಿ ನೀವು ಹೇಳಿದ ಮೂಗಿನ ಕಾರ್ಟಿಲೇಜ್ “ಎಂದು ಮೂಳೆಯಂತೆ ಕಾಣುತ್ತಿದ್ದ ತುಂಡನ್ನು ಎರಡು ಹೋಳು ಮಾಡಿ ತೋರಿಸಿದೆ .ಅದು ಮೇಲಿನ ಸಿಪ್ಪೆ ಹೋದ ಹುಣಿಸೇ ಬೀಜ ವಾಗಿತ್ತು!ಅದನ್ನು ಎರಡು ಹೋಳು ಮಾಡಿದಾಗ ಸುಮಾರು ಒಂದು ಇಂಚಿನ ಮೊಳಕೆ ಒಡೆದು ಹೊರ ಬರುತ್ತಿತ್ತು.ಇನ್ನೂ ಸ್ವಲ್ಪ ದಿನ ಬಿಟ್ಟಿದ್ದರೆ ಮೂಗಿನಿಂದ ಹುಣಿಸೇ ಸಸಿ ಬೆಳೆಯುತ್ತಿತ್ತೋ ಏನೋ !!!]]>

‍ಲೇಖಕರು G

June 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

 1. D.RAVI VARMA

  ಡಾಕ್ಟ್ರೆ ನಮಸ್ಕಾರ, ನಿಮ್ಮ ಚಿಂತನೆ ಹಾಗು ಒಂದು ಜೀವಂತ ಕಳಕಳಿಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಿಮ್ಮ ಲೇಖನ ಓದುತ್ತಿದ್ದಂತೆ ನನಗೆ ನನ್ನ ಇದೆ ಸಮಸ್ಯೆ ನೆನಪು ಬಂತು ನನ್ನೂರು ಕಮಲಾಪುರ, ಹಂಪಿ ಪಕ್ಕದಲ್ಲಿರುವ ಊರು. ನಾವು ಚಿಕ್ಕವರಿದ್ದಾಗ
  ಉನಸೆಹಣ್ಣು,ಬೆಲ್ಲ, ಉನಸೇ ಚಿಗುರು ಎಲ್ಲ ಕುಟ್ಟಿ ಉಂಡಿಮಾಡಿ ತಿನ್ನುತ್ತಿದ್ದವು ,ಅಸ್ತೆ ಅಲ್ಲ ನಮ್ಮ ಕಡೆ ಚಳ್ಳೆ ಹಣ್ಣು ಅಂದಲ್ಲಿ ಜಿಬ್ಬನ್ನು ತಿನ್ನಲು ಮರಹತ್ತಿ ಕೆನ್ಜರದಿಂದ ಕದೆಸಿಕೊಂಡು ಅದಕ್ಕೆ ಸಿಂಬಳ ಹಚ್ಚಿಕೊಂಡು ,ಅದರ ನೋವು,ಸುಖ ಎರಡನ್ನು ಅನುಭವಿಸುತ್ತಿದ್ದೆವು, ಕೆಲವೊಮ್ಮೆ ಹುನಸೆಬುಕ್ಕ ಅಂಚಿನಲ್ಲಿ ಉರುದು ತಿನ್ನೋದು,ಇನ್ನು ಹಲವೊಮ್ಮೆ ನೀರಲ್ಲಿ ಕುಡಿಸಿ ತಿನ್ನೋದು ,ಒಲೆಯ ಬೆಂಕಿಯಲ್ಲಿ ಸುತ್ತು ತಿನ್ನೋದು,ಆಗೆಲ್ಲ ವರ್ಷಕ್ಕಗುವಸ್ತು ಉನಸೆಹಣ್ಣು,ಬೆಲ್ಲ,ಅಕ್ಕಿ,ಬೇಳೆ. ಎಲ್ಲವನ್ನು ಆಗಾಗ್ಗೆ ಬಿಸಿಲಲ್ಲಿ ಒಣಗಿಸಿ ಹಾಕಿ ಮತ್ತೆ ತುಂಬಿ ಸಜ್ಜಾದ ಮೆಲಿಡೋದು ಇತ್ತು .ಅದೊಂದು ದಿನ ನಾನು ಒಂದು ಉನಸೇ ಬೀಜ ನನಗೆ ಗೊತ್ತಿಲ್ಲದ ಹಾಗೆ ಮೂಗಿನಲ್ಲಿ ಸೇರಿಸಿಕೊಂಡುಬಿತ್ತಿದ್ದೆ. ನಮ್ಮಪ್ಪನೂ ಉದ್ದಾನ ವೀರಭದ್ರ, ಆತನಿಗೆ ಗೊತ್ತಾದ್ರೆ ಅಡುಗೆ ಮನೆಯ ಮುದ್ದೆ ತಿರುವೋ ಕಟ್ಟಿಗೆ,ಪಲ್ಲೆ ಮಸಿಯೋ ಗುಂಡೊ.ಇಲ್ಲವಾದರೆ ಮೂಲೆಯಲ್ಲಿರೋ ಬೆತ್ತ ಕ್ಕೆ . ಪೂರ ಕೆಲಸ . ನನಗೆ ಭಯವಾಗಿ ಮೆಲ್ಲಗೆ ಮಮ್ಮನ್ನ ಸೆರಗಿಗೆ ಸೇರಿ ಅತ್ತುಬಿಟ್ಟೆ, ಆಕೆಗೋ ಭಯಂಕರ ಭಯ ,ಎನುಮಡಲು ತೋಚದೆ, hallnalli ಕೂತಿದ್ದ ನಮ್ಮಪ್ಪ ಉದ್ದಾನ ವೀರಭದ್ರ
  ಗುಡ್ಲುಮೆಸ್ತ್ರು{ ನಮ್ಮಪ್ಪನಿಗೆ ಬಹು ದೊಡ್ಡ ಕಣ್ಣುಗಳು, ನಮ್ಮ ಓಣಿಯ ಜನ,ಹುಡುಗರು ,ಶಾಲೆಯ ಕೆಲವು ಶಿಕ್ಷಕರು ಆತನ ಕಣ್ಣು ನೋಡೇ ಹೆದರುತ್ತಿದ್ದರು . ಹಾಗಾಗಿ ಆತನನ್ನು ಗುಡ್ಲು ಅಂದರೆ ದೊಡ್ಡ ಕಣ್ಣು ಮೇಸ್ಟ್ರು } ಅಂದೇ ಕರೆಯುತ್ತಿದ್ದರು ,ಮೆಲ್ಲಗೆ ಹಿಂದಿನ ಬಾಗಿಲಿನಿಂದ ನನ್ನನ್ನು ಎತ್ತಿಕೊಂಡು ಹೋಗಿ ಪಕ್ಕದ ಮನೆಯ ಅಂಗಡಿ ಬಸಣ್ಣ ಅವರ ಹತ್ತಿರ ಕರೆದುಕೊಂಡು ಹೋಗಿ ಅಳಲಾರಮ್ಬಿಸಿದಳು . ಆತ ಆ ಅಜ್ಜ ಒಂದುನಿಮಿಷ ಸುಮ್ನಿರರಲು ಹೇಳಿ ನಸೆದಬ್ಬಿ ಹೊರತಗೆದು ಇನ್ನೊಂದು ಮೂಗಿನ ಹೊರಳಿಗೆ ಇಟ್ಟು ಉಸಿರು ತಗೆದುಕೊಳ್ಳಲು ಹೇಳಿದ, ಜೋರಾಗಿ,ಇನ್ನು ಜೋರ್ರಾಗಿ ಅನ್ನುತಿದ್ದಂತೆ, ಅದೆಲ್ಲಿಂದ ಬನ್ತಿ ದೊಡ್ಡ ಸೀನಿನ ಶಬ್ದ ಅನ್ನುತಿದ್ದಂತೆ,ಆ ಹುನಸೆಪುಕ್ಕ ಹೊರ ಬಿದ್ದು ಸಿಡಿದು ದೂರಬಿತ್ತು, ನನಗೆ ಸಿಟ್ಟು ಬಂದು ಅದನ್ನು ಕಾಲಿನಿಂದ ತುಳಿದು ಪಕ್ಕಲಯುವೆಗೆ ಬಿಸಾಕಿದೆ,ನಮ್ಮಮ್ಮ ಆ ಅಜ್ಜನಿಗೆ ಕಾಲ್ಮುಗಿದು,ನನ್ನನ್ನು ಮುಗಿಸಿ ಕರೆದುಕೊಂಡು ಬಂದಿದ್ದು ನನಗೆ ಇನ್ನು ನೆನಪಿದೆ, ನಿಮ್ಮ ಮೂಗಿನ ಲೇಖನ ಓದುತಿದ್ದಂತೆ ನನಗೆ ಈಘಟನೆ ನೆನಪಿಗೆ ಬಂತು ಆ ಅಜ್ಜನ ಚಿತ್ರ ಮಾತ್ರ ಇನ್ನು ನನ್ನ ನೆನಪಲ್ಲೇ ಇದೆ.
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 2. Badarinath Palavalli

  ನಮ್ಮ ಪ್ರೀತಿಯ ಡಾಕ್ಟರ್ ಸಾಹೇಬರ ಕೊಳಲು ಬ್ಲಾಗಿನ ಈ ಅಮೋಘ ಲೇಖನ ಅವಧಿಯಲ್ಲಿ ಬೆಳಕು ಕಂಡಿದ್ದು ತುಂಬಾ ಖುಷಿ ತಂದಿತು.
  ಯಪ್ಪಾ ನನ್ನ ಬಾಲ್ಯ ಜ್ಞಾಪಕ್ಕೆ ಬಂತು.
  ನಾನೂ ಒಮ್ಮೆ ಮೂಗಿಗೆ ಪುಟ್ಟ ಬಾಲ್ ಬೇರಿಂಗಿನ ಕಬ್ಬಿಣದ ನುಣುಪಾದ ಬಾಲನ್ನು ತೂರಿಸಿಕೊಂಡು ಬಿಟ್ಟು ಪರಪಾಟಲು ಪಟ್ಟಿದೆ. ಅಂಚೆ ಮಾಸ್ತರ್ ಸುಬ್ಬರಾಯಪ್ಪ ಬಾಲು ತೂರಿಸಿಕೊಳ್ಳದ ಮೂಗಿಗೆ ತುಸು ನಶ್ಯ ವಾಸನೆ ತೋರಿಸಿ, ಅಕ್ಷೀ ಮಾಡಿಸಿ ಬಾಲ್ ತೆಗೆಸಿದ್ದರು. ಮಣ್ಣಲ್ಲಿ ಬಿದ್ದ ಬಾಲು ಎಲ್ಲು ಕಳೆಯಿತೋ? ಹುಡುಕಾಡಿ ಹುಡುಕಾಡಿ ತುಂಬಾ ರಚ್ಚೆ ಹಿಡಿದೆ ಅಂತ ನೆನಪು.
  ಶೀರ್ಷಿಕೆ ಪೊಗದಸ್ತಾಗಿದೆ, ಅಂತೆಯೇ ಬರಹವೂ…

  ಪ್ರತಿಕ್ರಿಯೆ
  • nandasuresh

   Yakri yellaru moogige hunise hannina beeja hakothira.anyway nice experience alva.adakke helodu anubhavavu saviyalla adare nenape saviyu antha alva

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: