ಹೀಗಾಯ್ತು 'ತಾಮ್ರ ಪತ್ರ'

 

ಅಭಿನಯ ತರಂಗದ ವಿದ್ಯಾರ್ಥಿಗಳಿಂದ ‘ತಾಮ್ರ ಪತ್ರ’ ನಾಟಕದ ಪ್ರಯೋಗಗಳು ಇದೇ 17 ಮತ್ತು 18 ರಂದು ನಡೆದವು. ಹೊಟ್ಟೆ ಪಾಡಿಗಾಗಿ ತಿರುಮಲರಾಯನೆಂಬ ಸಾಮಾನ್ಯ ಅಮಾಯಕ ಬಡ ವ್ಯಕ್ತಿ ತಾನೊಬ್ಬ ‘ಸ್ವಾತಂತ್ರ್ಯ ಹೋರಾಟಗಾರ’ ಎಂದು ಖೊಟ್ಟಿ ಪ್ರಮಾಣಪತ್ರ ಹಾಜರುಪಡಿಸಿ, ಮಾಸಾಶನ ಮತ್ತು ‘ತಾಮ್ರಪತ್ರ’ ಪಡೆಯುತ್ತಾನೆ. ಜನರನ್ನು ತಾನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ನಂಬಿಸಲು ಆತ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಓದಿ ತಿಳಿಯಲು ತೊಡಗುತ್ತಾನೆ.

ಓದುತ್ತ ಓದುತ್ತ ಕ್ರಮೇಣ ಆತನಲ್ಲಿ ಬದಲಾವಣೆ ಕಾಣತೊಡಗುತ್ತದೆ. ಈಗಿನ ರಾಜಕಾರಣದ ಹುಳುಕುಗಳೆಲ್ಲ ಆತನಿಗೆ ಗೋಚರಿಸತೊಡಗುತ್ತವೆ. ಹೋದಲ್ಲೆಲ್ಲ ಅದರ ವಿರುದ್ಧ ಮಾತಾಡತೊಡಗಿ, ಇಲ್ಲದ ಆಪತ್ತನ್ನು ಮೈಮೇಲೆ ಹಾಕಿಕೊಳ್ಳುತ್ತಾನೆ. ಆತನ ಮೇಲೆ ರಾಜಕೀಯ ಗೂಂಡಾಗಳು ಹಲ್ಲೆಯೂ ಆಗುತ್ತದೆ. ಈ ಇಡೀ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಆತ ತಾನು ತೊಟ್ಟ ‘ಮುಖವಾಡ’ವನ್ನು ಕಳಚಿ ಮತ್ತೆ ಮೊದಲಿನಂತೆ ಪ್ರಾಮಾಣಿಕ ಬದುಕನ್ನು ಬದುಕಲು ನಿರ್ಧರಿಸುತ್ತಾನೆ. ಮಾಸಾಶನ ಮತ್ತು ತಾಮ್ರ ಪತ್ರವನ್ನು ಸರಕಾರಕ್ಕೆ ವಾಪಸು ಮಾಡುತ್ತಾನೆ. ‘ಅಮಿತಾಕ್ಷರ’ ಎಂಬ ಹೆಸರಿನ ಈ ನಾಟಕವನ್ನು ಮೂಲ ಬಂಗಾಲಿಯಲ್ಲಿ ಬರೆದವರು ದೇವಾಶಿಶ ಮುಜಮದಾರ. ಕನ್ನಡಕ್ಕೆ ರೂಪಾಂತರಿಸಿದವರು ಗೋಪಾಲ ವಾಜಪೇಯಿ. ವಿನ್ಯಾಸ ಮತ್ತು ನಿರ್ದೇಶನ ಪ್ರಮೋದ ಶಿಗ್ಗಾಂವ ಅವರದು. ಮೊದಲ ದಿನದ ಪ್ರಯೋಗಕ್ಕೆ ಹಿರಿಯ ನಾಟಕಕಾರ ಎ.ಎಸ್. ಮೂರ್ತಿ, ಹಿರಿಯ ನಟ ಎಚ್. ಜಿ. ದತ್ತಾತ್ರಯ (ದತ್ತಣ್ಣ), ಹಿರಿಯ ನಟ-ನಿರ್ದೇಶಕ ಡಿ.ಟಿ. ಚನ್ನಕೇಶವಮೂರ್ತಿ ಹಾಗೂ ನಾಟಕಕಾರ ಗೋಪಾಲ ವಾಜಪೇಯಿ ಹಾಜರಿದ್ದರು. ಎರಡನೆಯ ದಿನದ ಪ್ರಯೋಗಕ್ಕೆ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಅವರು ಬಂದದ್ದು ವಿಶೇಷವೆನಿಸಿತು. ಅವರು ನಾಟಕ ಪ್ರಯೋಗವನ್ನು ತುಂಬ ಮೆಚ್ಚಿಕೊಂಡು ಕಲಾವಿದರನ್ನು ಅಭಿನಂದಿಸಿದರು. ಅಲ್ಲದೆ ನಾಟಕಕಾರ ಡಾ. ಕೆ. ವೈ. ನಾರಾಯಣಸ್ವಾಮಿ ಮತ್ತು ರಂಗ ನಿರ್ದೇಶಕ ಮಂಜುನಾಥ ಬಡಿಗೇರ ಅವರೂ ಪ್ರಯೋಗವನ್ನು ವೀಕ್ಷಿಸಿ ಪ್ರಶಂಸಿಸಿದರು.  ಈ ಎರಡೂ ಪ್ರಯೋಗಗಳನ್ನು ಇತ್ತೀಚೆಗೆ ನಮ್ಮನ್ನಗಲಿದ ಅದ್ಭುತ ನಟ ಏಣಗಿ ನಟರಾಜ ಅವರ ನೆನಪಿಗೆ ಅರ್ಪಿಸಲಾಯಿತು.  

ಆ ಪ್ರಯೋಗದ ಕೆಲವು ದೃಶ್ಯಗಳು ನಿಮಗಾಗಿ. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

[gallery order="DESC" orderby="ID"]]]>

‍ಲೇಖಕರು G

June 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

2 ಪ್ರತಿಕ್ರಿಯೆಗಳು

  1. Pramod ambekar

    I special Thanks to Guruji Gopal Wajpyee and my one of best friend Mr. Pramod Shiggav, for TAMRAPATRA drama again comes on satge I saw this dram in Hubli at That time Mu Guru Jayateerth Joshi with us.
    Thanks to Wajapye sir and Pramod Shiggav

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: