'ಅಮ್ಮಾ' ಎಂಬ ಆಪ್ತ ಸಖಿ

venkatesh-mudgal           ವೆಂಕಟೇಶ ಮುದಗಲ್

ಜನನಿ ತಾನೆ ಮೊದಲ ಗುರುವು ಎಂಬ ಉಕ್ತಿ ಅಕ್ಷರಶ: ನಮ್ಮಮ್ಮ ಸೀತಾಬಾಯಿ ಮುದಗಲ್ ಅವರಿಗೆ ಅನ್ವಯಿಸುತ್ತದೆ.

ನಮ್ಮಪ್ಪ ಮುದಗಲ್ ರಾಘವೇಂದ್ರರಾವ್ ವೃತ್ತಿಯಿಂದ ಶಿಕ್ಷಕರಾದರೂ ನಮ್ಮ ಪಾಲಿಗೆ ಅವರು ಒಲುಮೆ ತುಂಬಿದ ಎಂದೂ  ಬತ್ತದ ಒರತೆ.

mothers hugಅದರೆ, ಅಮ್ಮ ಮಾತ್ರ ಓದಿನ ವಿಷಯದಲ್ಲಿ ವಜ್ರ ಹೃದಯಿ.

ಅವರ ಹೊಡೆತದಿಂದ ಪಾರಾಗಲು ಶ್ರದ್ಧೆಯಿಂದ ಓದಿ ಪಾಠ ಒಪ್ಪಿಸುವುದು ನಮಗಿದ್ದ ಏಕೈಕ ಆಯ್ಕೆ. ಅಮ್ಮನ ಹೊಡೆತಗಳಿಗೆ ಬ್ರೆಕ್ ಬೀಳುತ್ತಿದ್ದುದು  ಆಗಾಗ ಮುದಗಲ್ ಗೆ ನಮ್ಮ ದೊಡ್ಡಮ್ಮ  ಬಂದಾಗ ಮಾತ್ರ. ‘ಹಿಂಗ್ಯಾಕ ಹೊಡಿತಿಯೇ ಸೀತಾ’ ಎಂದು ತಂಗಿಯನ್ನು ಗದರಿ ಸುಮ್ಮನಾಗಿಸುತ್ತಿದ್ದರು.

ಈ ಮಧ್ಯಂತರ ಸುಖ ದೊಡ್ಡಮ್ಮ ಮರಳಿದೊಡನೆ ಮಾಯವಾಗುತ್ತಿತ್ತು. ‘ನೀವು ಉಢಾಳರಾಗದೆ  ಕಲಿತು ಅನ್ನಕ್ಕ ಹತ್ತಗೊಳ್ರಿ ಅಂತಾ ನಾ ಬಡಿಯೋದು’ ಎಂದು ತಬ್ಬಿಕೊಂಡು ಅಳುತ್ತಿರುವ ದೃಶ್ಯ ಮರೆಯಲಾಗದು.

ಆಮೇಲೆ,ಅಮ್ಮನ ಅನುಕಂಪದ ಟ್ರೀಟ್, ಹುರಿದ ಶೆಂಗಾ ಮತ್ತು ಬೆಲ್ಲ ಏಟಿನ ನೋವನ್ನು ಮರೆಸುತ್ತಿತ್ತು.

ಅಮ್ಮನ ಏಟುಗಳು ತೋರಿದ ದಾರಿದೀಪಗಳಿಂದ ನಾವು ಐದು ಮಕ್ಕಳು  ಜವಾಬ್ದಾರಿಯುತ ಸ್ಥಾನ ಗಳಿಸಿ ಬದುಕು ಸಾಗಿಸುತ್ತಿದ್ದೇವೆ.

ನಮ್ಮ ಇಂದಿನ ಸ್ಥಿತಿ ನೋಡಿ ಹಿರಿ ಹಿರಿ ಹಿಗ್ಗುವ ಅಪ್ಪ ಅಮ್ಮ ಇಬ್ಬರು ವೈಕುಂಠವಾಸಿಗಳಾಗಿದ್ದಾರೆ. ಅಪ್ಪನ ಪ್ರೀತಿ, ಅಮ್ಮನ ಏಟುಗಳು ನಮಗೆ ಕಲಿಸಿದ ಪಾಠ ಅಷ್ಟಿಷ್ಟಲ್ಲ. ನನ್ನ ಪ್ರಕಾರ ಅಮ್ಮ ಬರೀ ದೇವರು ಮಾತ್ರ ಅಲ್ಲ ಮಾರ್ಗದರ್ಶಿ ಸಹ ಹೌದು.

ನಿಮ್ಮ ವಿಶ್ವಾಸಿ,

ವೆಂಕಟೇಶ ಮುದಗಲ್

‍ಲೇಖಕರು Admin

December 5, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮ್ಯಾರಡೋನಾ, ಮ್ಯಾರಡೋನಾ….

ಮ್ಯಾರಡೋನಾ, ಮ್ಯಾರಡೋನಾ….

ಕೆ. ಪುಟ್ಟಸ್ವಾಮಿ ಡೀಗೋ ಮ್ಯಾರಡೋನಾ ನಿಧನರಾದ ಸುದ್ದಿಯನ್ನು ದರ್ಶನ್‌ ಜೈನ್‌ ಅವರ ವಾಲ್‍ನಲ್ಲಿ ಓದಿದಾಗ 1982,1986 ಮತ್ತು1990ರ...

ತಬ್ಬಲಿ ಜಾತಿಯ ಸೂಲಗಿತ್ತಿ ಮಲ್ಲಮ್ಮ…..!

ತಬ್ಬಲಿ ಜಾತಿಯ ಸೂಲಗಿತ್ತಿ ಮಲ್ಲಮ್ಮ…..!

ಶಿವರಾಜ್ ಮೋತಿ ಒಡಹುಟ್ಟಿದ ಹತ್ತು ಮಕ್ಕಳಿರುವ ತುಂಬು ಸಂಸಾರದಲ್ಲಿ ಜನಿಸಿ, ತಾನೂ ಸಹ ಹನ್ನೆರಡು ಮಕ್ಕಳ ಹೆತ್ತಿ, ಇಬ್ಬರು ತೀರಿದ್ದಾರೆ. ಈಗ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This