ಅಮ್ಮ ಆಗ್ಲಿಕ್ಕೆ ಹೆರಲೇಬೇಕಾ?

“ಹಂಗಾಮ”ದಿಂದ ಹೆಕ್ಕಿದ್ದು

cayve10x.jpgಗಾನಾ ಜೋಯ್ಸ್

ಹೇಳ್ತಾರೆ ಎಲ್ಲರೂ. ಹೆಣ್ಣಿಗೆ ತಾಯ್ತನವೇ ಸಂಪೂರ್ಣತೆಯನ್ನ ತಂದುಕೊಡೋದು ಅಂತ. ಹೌದಲ್ಲಾ? ಮೊಲದ ಮರಿಯಂಥಾ ಮಗು (ಬಿಡು. ಹೆತ್ತೋರಿಗೆ ಹೆಗ್ಗಣ ಮುದ್ದು!), ಅದರ ಅಳು, ನಗು, ಉಚ್ಚೆ, ರಚ್ಚೆ, ಸ್ನಾನದ ಸಂಭ್ರಮ, ಲೋಬಾನದ ಘಮ, ಆಹಾ… ಅದರ ಸವಿಯೇ ಸವಿ.

ನನ್ನದೂ ಒಂದು ಖ್ವಾಯಿಶಿತ್ತು. ಚಳಿಗಾಲದಲ್ಲಿ ಕಂಬಳಿ ಹೊದ್ದು, ಮಫ್ಲರ್ ಕಟ್ಕೊಂಡು, ಹುಹ್ಹುಹ್ಹು ಅಂತ ಕಮ್ಮಗೆ ಬಾಣಂತನ ಮಾಡಿಸ್ಕೊಳ್ಳೋದು, ಅತ್ತಿಗೆಗೆ ಅತ್ತೆ ಮಾಡಿದ ಹಾಗೆ ಉಪಚಾರ ಮಾಡಿಸ್ಕೊಳ್ಳೋದು, ಮಗು ಹೆತ್ತು ನೋವು ನುಂಗೋದು, ಸೊಂಟಕ್ಕೆ ಹಳೇಸೀರೆ ಸುತ್ಕೊಂಡು ಪರದಾಡೋದು, ತಿಂಗಳುಗಟ್ಟಲೆ ಅವರನ್ನ ದೂರವಿಟ್ಟು ಕಾಡಿಸಿ ಮುಸಿ ಮುಸಿ ನಗೋದು; ಕರಕಿನ ಪುಡಿ-ತುಪ್ಪ ಜೀರಿಗೆ ಉಪ್ಪಿಟ್ಟು, ಅಂಟಿನುಂಡೆ ಎಲ್ಲಾ ಬೇಕಿತ್ತು. ನನ್ನದೇ ಜೀವದ ಮುಂದುವರಿಕೆ, ನನ್ನ ನಿರಂತರತೆ ಬೇಕಿತ್ತು.

ಪ್ರಾಬ್ಲಂ ಏನಿದ್ರೂ ಟೈಟು ಜೀನ್ಸ್ ಹಾಕ್ಕೊಂಡು ಕಂಪ್ಯೂಟರೆದುರು ಮೂರು ಹೊತ್ತೂ ಕೂರುವ ಅವರದ್ದೇ ಅಂದಿದ್ರು ಡಾಕ್ಟರು. ನಾನು ಹೇಳಿದ್ದೆ. ಟೆಸ್ಟ್ ಟ್ಯೂಬ್ ಬೇಬಿ ಮಾಡ್ಕೊಳ್ಳೋಣ ಅಂತ. ಬಹಳ ಒಳ್ಳೆಯವರು ನಮ್ಮವರು. ಆದರೂ (ಹುಟ್ಟಿಸೋ ತಾಕತ್ತು ಇರದಿದ್ರೂ) ಗಂಡಸಲ್ಲವೇ? ಅಪರೂಪಕ್ಕೆ ಉರಿದುಬಿದ್ದರು. ಯಾವನ್ಯಾವನದೋ ಸ್ಪರ್ಮು ತುರುಕಿಸಿಕೊಳ್ಳೋ ಬದಲು ಮಲಗೆದ್ದು ಬಾ ಅಂದುಬಿಟ್ಟರು! ಛೀ ಛೀ ಅಲ್ಲವೇನೇ ಅವನ ಅಂಥಾ ಮಾತು? ನನಗೋ, ಅವನೆಂದರೆ ಹುಚ್ಚಾಪಟ್ಟೆ ಪ್ರೀತಿ, ಮಿಗಿಲಾದ ಮಮತೆ. ಅವರನ್ನ ಕ್ಷಮಿಸಿಬಿಟ್ಟೆ. ಅವರಂದರು-ನಿನ್ನನ್ನು ಕ್ಷಮಿಸಿದ್ದೇನೆ!

ಪುರಾಣಗಳ ಪುಟ ಮಗುಚಿದೆ ನಾನು. ಕುಂತಿ ಸಿಕ್ಕಳು. ಕೇಳಿದೆ-ನಿನಗೆ ಮಕ್ಕಳು ಹೇಗಾದವು? ಆ ಮಹಾ ಮಾತೆ ಅಂದಳು. ನನ್ನ ಗಂಡ ಪೂರ್ಣ ಪುರುಷನಾಗಿರಲಿಲ್ಲ. ನನಗೋ, ಸಂಪೂರ್ಣ ಸ್ತ್ರೀತ್ವ ಬೇಕಿತ್ತು. ದೇವ ಪುರುಷರನ್ನು ಕೂಡಿದೆ. ಮಕ್ಕಳಾದವು! ನಾನು ಕೇಳಿದೆ-ಸ್ತ್ರೀತ್ವಕ್ಕೆ ಒಂದು ಮಗು ಸಾಕಿತ್ತಲ್ಲವೇ? ಮೂವರು ಯಾಕೆ ಬೇಕಿತ್ತು? ಮೊದಲ ತಪ್ಪೂ ಸೇರಿ ನಾಲ್ಕಲ್ಲವೇ ಮಕ್ಕಳು!? ಅವಳು ಉತ್ತರಿಸಲಿಲ್ಲ. ಅವಳಿಗೆ, ಅವಳಂಥವರಿಗೆಲ್ಲಾ ನಿಮಿತ್ತದ ನೂರೆಂಟು ಕಾರಣಗಳಿದ್ದವು ಮಕ್ಕಳನ್ನ ಹಡೆಯಲಿಕ್ಕೆ. ಪಾಂಡುರಕ್ತವೇ ಇಲ್ಲದ ಆ ಶೂರರನ್ನು ಜಗತ್ತು ಪಾಂಡವರೆಂದೇ ಕರೆಯಲಿಲ್ಲವೇ?

ನಾನು ತೀರಾ ಕುಂತಿಯಾಗಬಯಸಲಿಲ್ಲ. ನನಗೆ ಬೇಕಿದ್ದೆಲ್ಲಾ ಒಂದೇ ಒಂದು ಮಗು. ಅದೂ, ನಾನು ಹಡೆದು ಪಡೆಯಬಲ್ಲ ಮಗು. ಆದರೇನು? ಸೋತ ಗಂಡಸಿನ ನೋವು ಸೋತ ಹೆಂಗಸಿನದಕ್ಕಿಂತಾ ದೊಡ್ಡದು. ಗಂಡಸರು ಸೋಲು ಸಹಿಸಲಾರರು. ಎದುರಾಡಲಿಲ್ಲ ನಾನು ಅವರಿಗೆ. ನಾನೇ ಸೋತೆ. ಸೋತು ಗೆದ್ದೆ. ಅವರನ್ನೂ ಗೆಲ್ಲಿಸಿದೆ!

ನಮಗೀಗ ಮೂರರ ಕಂದ. ಮನೆ ತುಂಬಾ ಅವನ ಹೆಜ್ಜೆಗಳದೇ ಕಚಗುಳಿ. ಅವನದೇ ಚಿಲಿಪಿಲಿ. ನನ್ನವರ ಮುಖದಲ್ಲೂ ನಗೆಮಿಂಚು. ನನ್ನೆದೆಯೂ ಹಗುರ ಹಗುರ.

ಮಗುವಿಲ್ಲದ ಮಂದಿಯಷ್ಟೇ, ತಂದೆ-ತಾಯಿಗಳಿಲ್ಲದ ಮಕ್ಕಳೂ ಇದ್ದಾರಲ್ಲವೇ ಈ ಆಲಮ್ ನಲ್ಲಿ? ಅಂಥದರಲ್ಲೊಂದು ಈಗ-ನಮ್ಮ ತೆಕ್ಕೆಯಲ್ಲಿ!

‍ಲೇಖಕರು avadhi

July 25, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೇತನಾ ಎಂಬ ‘ಗಾನಾ ಜೋಯ್ಸ್

ಚೇತನಾ ಎಂಬ ‘ಗಾನಾ ಜೋಯ್ಸ್

' ಕನಸುಗಾರ ವೆಂಕಟ್ರಮಣ ಗೌಡರು 'ಹಂಗಾಮ' ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ...

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ...

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ...

5 ಪ್ರತಿಕ್ರಿಯೆಗಳು

 1. Tina

  ಗಾನಾ,
  ಜಿ.ಎನ್.ಮೋಹನ್ ನಿಮ್ಮ ಈ ಹೆಕ್ಕಿದ ಬರಹದ ಬಗ್ಗೆ ತಿಳಿಸಿದರು. ಅವಧಿಗೆ ಬಂದೆ. ಓದಿದೆ. ಸಖತ್ ಫೆಮಿನೈನ್ ಆಗಿದೆ. ಸ್ವಂತದ್ದನ್ನ ಆಚೆ ತರುವುದು, ಅದನ್ನು ಎಲ್ಲರಿಗೂ ಆಪ್ತವಾಗುವಂತೆ ಮಾಡುವುದು ಸುಲಭವೇನಲ್ಲ!! ಬಹಳ ಖುಶಿ ಕೊಟ್ಟಿತು. Wish to read more from you.

  ಟೀನಾ
  Afterthought:(ನಮ್ಮ ಹೆಸರುಗಳು Rhyming ಆಗಿವೆಯಲ್ಲ! ತಮಾಶೆ ಅನ್ನಿಸಿತು.)

  ಪ್ರತಿಕ್ರಿಯೆ
 2. chetanachaitanya

  ನಮಸ್ತೇ
  ನಿಮ್ಮ ಅಭಿಮಾನದ ಪ್ರತಿಕ್ರಿಯೆಗೆ ಧನ್ಯವಾದಗಳು. ಹಂಗಮಾ ನನ್ನ ನೆಚ್ಚಿನ ಪತ್ರಿಕೆಯಾಗಿತ್ತು. ಈಗ ಮತ್ತೆ ಅದರ ನೆನಪು ಮುದಕೊಡುತ್ತಿದೆ. ಹಂಗಾಮಾದ ಗಾನಾ ಈಗ ಚೇತನಾ ಆಗಿದ್ದಾಳೆ. ಗಾನಾಳಿಗೆ ದೊರೆತ ಪ್ರೀತಿ ಚೇತನಾಳಿಗೂ ದೊರೆಯಲಿ ಎಂದು ಆಶಿಸುತ್ತೇನೆ.

  ನಿಮ್ಮ
  ಚೇತನಾ ತೀರ್ಥಹಳ್ಳಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: