ಬುದ್ಧ ಪೂರ್ಣಿಮೆಯ ಸಂಜೆ ಇಷ್ಟು ಅದ್ಭುತವಾಗಬಹುದು ಎಂಬ ಅರಿವು ಇರಲಿಲ್ಲ…. ಸಂಜೆಯನ್ನು ಅರ್ಥಪೂರ್ಣವಾಗಿಸಿದ್ದು ಆತ್ಮೀಯ ಗೆಳೆಯ ಬಿ ಸುರೇಶ, “ಇಳೆ” ಡಾ. ವಿಜಯಮ್ಮ, ಮತ್ತು ನನ್ನ ರಂಗಭೂಮಿ ಹುಚ್ಚಿಗೆ ಕಾರಣರಾದ ನಾಗರಾಜ ಮೂರ್ತಿ.
ಗೆಳೆಯ ಬಿ ಸುರೇಶನ ಪುಸ್ತಕ “ಒಂಬತ್ತು ನಾಟಕಗಳು”, ಸುರೇಶನಿಗೆ ಮಾತ್ರವಲ್ಲ ,ನಾವು ರಂಗಭೂಮಿಯ ಎಲ್ಲಾ ಕಲಾವಿದರಿಗೂ ಸೂಪರ್ ಮದರ್ ಆಗಿರುವ ವಿಜಯಮ್ಮ ಅವರು ಬರೆದಿರುವ ಅವರ ಅಗಾಧ ಅನುಭವದ ತುಣುಕುಗಳು, ಆದರೆ ರಂಗಭೂಮಿಯ ಮಟ್ಟಿಗೆ ಅಷ್ಟೇ ಮಹತ್ವದ ಕೃತಿ “ರಂಗಸಾಂಗತ್ಯ” ಬಿಡುಗಡೆ ಆದ ಸಂಜೆ… ಸರಳ… ಸುಂದರ… ಕಾವ್ಯಮಯ…. ಸಂಗೀತಮಯ…. ಹಲವಾರು ಗೆಳೆಯರು ತುಂಬಾ ದಿನಗಳ ಮೇಲೆ ಭೇಟಿಯಾದದ್ದು ತುಂಬಾ ಖುಷಿಯಾಯ್ತು…
ಇಷ್ಟೊಂದು ಖುಷಿಯನ್ನು ಮೊಗೆದುಕೊಟ್ಟ ಗೆಳೆಯ ಬಿ ಸುರೇಶ….. ವಿಶ್ವಾಸಕ್ಕೆ ಧನ್ಯೋಸ್ಮಿ…. 🙂 🙂
-ರಮೇಶ್ ಗುರುರಾಜರಾವ್
ಒಬ್ಬ ತಾಯಿ ತನ್ನ ಕುಟುಂಬ ವರ್ಗಕ್ಕೆ `ಕೃತಜ್ಞತೆ` ಅರ್ಪಿಸುವುದು ಎಂತಹ ಅಪರೂಪದ ವಿಷಯ,ಆ ಘಳಿಗೆಯ ಅನುಭೂತಿ ವರ್ಣಿಸಲಸಾಧ್ಯ..
-ಶ್ರೀಧರ್ ತಿರುಮಲಯ್ಯ
‘ಪುಸ್ತಕ ಕೊಂಡು ಓದಬೇಡ, ಅದು ನಿನ್ನ ಆಸಕ್ತಿಯಲ್ಲ’ ಅಂದ ಅಮ್ಮ ತುಜೆ ಸಲಾಂ!
ನೀವು ಮಾತ್ರ ‘ಅಮ್ಮ’ ಆಗೋದು ಯಾಕೆ? ಅಂದರೆ ಇದಕ್ಕೇ.
ಪ್ರತಿ ಮಕ್ಕಳ ನಾಡಿ ಬಡಿತವನ್ನೂ ಹಿಡೀತೀರಲ್ಲ, ನಂಬೋಕೆ ಆಗಲ್ಲ!
ನಿಮಗೆ ಶರಣು, ಶರಣಾಗತಿ.
ವೀಜಿ