’ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ…

ಹತ್ತನೇ ವರ್ಷದ ’ಅಮ್ಮ ಪ್ರಶಸ್ತಿ’ಗಾಗಿ ನಾಡಿನ ಲೇಖಕರು, ಪ್ರಕಾಶಕರು,2009-10ನೇ ಸಾಲಿನಲ್ಲಿ ಪ್ರಕಟವಾದ ಸಾಹಿತ್ಯದ ಯಾವುದೇ ಪ್ರಕಾರದ ಕೃತಿಗಳನ್ನು ಕಳುಹಿಸಬಹುದು.ಪ್ರಕಟಿತ ಕೃತಿಗಳ ಎರಡು ಪ್ರತಿಗಳನ್ನು ಅಕ್ಟೋಬರ್ 30, 2010 ರೊಳಗಾಗಿ ಕಳುಹಿಸಲು ಕೋರಲಾಗಿದೆ. ಬರುವ ನವೆಂಬರ್26ರಂದು ’ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಪುಸ್ತಕ ಕಳುಹಿಸುವ ವಿಳಾಸ :  ಪ್ರಭಾಕರ ಜೋಶಿ, ’ವಾಹಿನಿವಿಹಾರ, ಬಸವನಗರ, ಸೇಡಂ – 585 222 ಗುಲಬರ್ಗ ಜಿಲ್ಲೆ. ಹೆಚ್ಚಿನ ಮಾಹಿತಿಗೆ :9449985695 ಮತ್ತು 9611365002  ಸಂಪರ್ಕಿಸಬಹುದು.]]>

‍ಲೇಖಕರು avadhi

October 15, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

 1. usha

  ಮಾನ್ಯರೇ,
  ೨೦೦೫ರಲ್ಲಿ ನನ್ನ ’ಹಕ್ಕಿ ಮತ್ತು ಗಿಡುಗ” ಕವನ ಸಂಕಲನಕ್ಕೆ ಅಮ್ಮ ಪ್ರಶಸ್ತಿ ಬಂದಿತ್ತು. ಅನಾರೋಗ್ಯದಿಂದ ಸಮಾರಂಭಕ್ಕೆ ಬರಲಾಗಿರಲಿಲ್ಲ. ಪ್ರಶಸ್ತಿಯ ಮೊತ್ತ ಕಳುಹಿಸಿಕೊಡುವುದಾಗಿ ಹೇಳಿದ್ದರೂ ಇವತ್ತಿನ ವರೆಗೂ ನನಗೆ ಆ ಹಣ ಬಂದಿಲ್ಲ. ಅದನ್ನು ಮರೆತೇ ಬಿಟ್ಟಿದ್ದೆ. ಈಗ ಇದನ್ನು ನೋಡಿ ನೆನಪಾಯಿತು.
  ಯಾಕೆ ಹೀಗಾಯಿತೆಂದು ತಿಳಿಯಲಿಲ್ಲ.
  ಕೆ. ಉಷಾ ಪಿ. ರೈ

  ಪ್ರತಿಕ್ರಿಯೆ
 2. lokesh mosale

  k usha avare :
  amma na bagge eruva pritige haage ettukondiraBahudu 🙂
  nimage prashasti patra thalupide allava?
  entha janaru….entha prashasti galu maana haalu maduttave allava….?

  ಪ್ರತಿಕ್ರಿಯೆ
  • avadhi

   ಪ್ರೀತಿಯ ಲೋಕೇಶ್ ಮೊಸಳೆ ಮತ್ತು ಉಷಾ ಪಿ ರೈ ಅವರಿಗೆ-
   ಪ್ರಶಸ್ತಿಗಳು ಈ ನಡುವೆ ಕಾಸಿಗೊಂದು ಕೊಸರಿಗೊಂದು ಎನ್ನುವಂತೆ ಆಗುತ್ತಿರುವುದು ವಿಷಾದನೀಯ.
   ಆದರೆ ‘ಅಮ್ಮ ಪ್ರಶಸ್ತಿ’ಯ ಬಗ್ಗೆ ತಪ್ಪು ಅಭಿಪ್ರಾಯ ಬರದಿರಲಿ ಎನ್ನುವ ಕಾರಣಕ್ಕೆ ಈ ಪತ್ರ.

   ಈ ಪ್ರಶಸ್ತಿಯನ್ನು ಗುಲ್ಬರ್ಗದ ಸೇಡಂ ನಲ್ಲಿರುವ ಇಬ್ಬರು ಸಹೃದಯಿಗಳು ನಡೆಸುತ್ತಿದ್ದಾರೆ.
   ನೀನಾಸಂ ನಲ್ಲಿ ತರಬೇತಿ ಪಡೆದ ಪತ್ರಕರ್ತರಾದ ಪ್ರಭಾಕರ ಜೋಷಿ ಅವರು ಈ ಪ್ರಶಸ್ತಿ ಸಮಿತಿಯ ಮುಖ್ಯಸ್ಥರು.
   ಈ ಪ್ರಶಸ್ತಿಯನ್ನು ಇನ್ನೊಬ್ಬ ಜನಪರ ಕಾಳಜಿಯುಳ್ಳ, ಉತ್ತಮ ಬರಹಗಾರರೂ ಆಗಿರುವ, ಪತ್ರಕರ್ತ ಮಹಿಪಾಲ ರೆಡ್ಡಿ ಮುನ್ನೂರ್ ಅವರ ತಾಯಿಯ ನೆನಪಿನಲ್ಲಿ ಸ್ಥಾಪಿಸಲಾಗಿದೆ,
   ಈ ಇಬ್ಬರೂ ನನಗೆ ಗೊತ್ತು. ಗುಲ್ಬರ್ಗದಲ್ಲಿದ್ದಾಗ ಈ ಇಬ್ಬರ ಸ್ನೇಹದ ಸವಿಯನ್ನು ಉಂಡಿದ್ದೇನೆ. ಅವರ ಪ್ರಾಮಾಣಿಕತೆ, ಕಾಳಜಿ ಗೊತ್ತಿದೆ.
   ಈ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ, ಕಾರ್ಯಕ್ರಮ ನಡೆಸುವ ರೀತಿಯನ್ನೂ ಹತ್ತಿರದಿಂದ ಬಲ್ಲೆ.
   ಈ ಪ್ರಶಸ್ತಿ ಪಡೆದ ಅನೇಕರು ಇಂದೂ ಆ ಪ್ರಶಸ್ತಿ ಸಮಿತಿಯೊಂದಿಗೆ ಕೈ ಜೋಡಿಸಿದ್ದಾರೆ ಅಷ್ಟೇ ಅಲ್ಲ ಕಾರ್ಯಕ್ರಮ ನಡೆಸುವ ನಿಟ್ಟಿನಲ್ಲಿ ಧನ ಸಹಾಯವನ್ನೂ, ಸಲಹೆಯನ್ನೂ ನೀಡುತ್ತಾ ಬಂದಿದ್ದಾರೆ.

   ಉಷಾ ಪಿ ರೈ ಅವರ ಪ್ರಕರಣದಲ್ಲಿ ಆಗಿರುವ ಸಮಸ್ಯೆಯನ್ನು ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇನೆ
   ಆ ಗೊಂದಲ ಖಂಡಿತಾ ಬಗೆಹರಿಯುತ್ತದೆ ಸಹಾ
   ಅಮ್ಮ ಪ್ರಶಸ್ತಿಗಿರುವ ಪ್ರಾಮಾಣಿಕತೆಯಿಂದಾಗಿಯೇ ಈ ಸಾಲಿನ ಅಮ್ಮ ದಶಮಾನೋತ್ಸವ ವರ್ಷದಲ್ಲಿ ನಾವು ಹಲವು ಗೆಳೆಯರು ಅವರ ಕೆಲಸದಲ್ಲಿ ಕೈಗೂಡಿಸಲು ನಿರ್ಧರಿಸಿದ್ದೇವೆ.
   ಅಮ್ಮ ಪ್ರಶಸ್ತಿಗೆ ಕಲೆ ಮೆತ್ತದಿರಲಿ ಎನ್ನುವ ಕಾರಣಕ್ಕೆ ಈ ಪತ್ರ.
   -ಜಿ ಎನ್ ಮೋಹನ್

   ಪ್ರತಿಕ್ರಿಯೆ
 3. amma prashsti samiti

  ಶ್ರೀಮತಿ ಉಷಾ ಪಿ. ರೈ
  ಅವರಿಗೆ,
  `ಅವಧಿ’ಯಲ್ಲಿ ಪ್ರಕಟವಾದ ತಮ್ಮ ಪತ್ರದ ಕುರಿತು.
  ಪ್ರಶಸ್ತಿಗೆ ತಮ್ಮ ಕೃತಿ ಆಯ್ಕೆಯಾದಾಗ ದೂರವಾಣಿ ಮುಖಾಂತರ ನಿಮಗೆ ತಿಳಿಸಿದೆವು. ನೀವು ತುಂಬಾ ಸಂತೋಷಪಟ್ಟಿರಿ. ಆದರೆ ಪ್ರಶಸ್ತಿ ಪ್ರದಾನದ ವೇಳೆಗೆ ತಾವು ಅನಾರೋಗ್ಯ ಪೀಡಿತರಾಗಿ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದಿರಿ. ಹೇಳಿಕೇಳಿ ಗುಲ್ಬರ್ಗ, ಅದರಲ್ಲಿಯೂ ಸೇಡಂ ನಲ್ಲಿ ನಡೆಯುವ ಕಾರ್ಯಕ್ರಮ ಇದು. ಸಾಹಿತಿಗಳನ್ನು ಕಂಡರಿಯದ ಊರು. ಹಾಗಾಗಿ ನೀವು ಮರು ವರ್ಷದ ಪ್ರಶಸ್ತಿ ಸಮಾರಂಭದಲ್ಲಾದರೂ ಭಾಗವಹಿಸಬೇಕು ಎನ್ನುವುದು ನಮ್ಮ ಆಸೆಯಾಗಿತ್ತು. ಅದನ್ನು ನಿಮ್ಮ ಜೊತೆ ಹಂಚಿಕೊಂಡೆವು. ನಮ್ಮ ಮನವಿಗೆ `ಆಗಲಿ ನೋಡೋಣ’ ಎಂದು ಹೇಳಿದ್ದೀರಿ.
  ತಾವು ನೀಡಿರುವ ಅನಾರೋಗ್ಯ ಮತ್ತು ಮುಂದಿನ ವರ್ಷದ ತಮ್ಮ ಬರುವಿಕೆಯ ನಿರೀಕ್ಷೆಯಿಂದಾಗಿ ಪ್ರಶಸ್ತಿಯ ಹಣ ಮತ್ತು ಪ್ರಶಸ್ತಿ ಫಲಕ ಕಳಿಸಿಲ್ಲ. ನಂತರದಲ್ಲಿ ನಿಮ್ಮಿಂದ ಉತ್ತರವೂ ಇಲ್ಲ.
  ಈಗಲೂ ಕೂಡ ಬರುವ ನವೆಂಬರ್ 26ರಂದು ಜರುಗಲಿರುವ `ಅಮ್ಮ ಪ್ರಶಸ್ತಿ’ಯ ಪ್ರದಾನದ `ದಶಮಾನೋತ್ಸವ’ದಂದು ತಾವು ಭಾಗವಹಿಸಿ, ತಮ್ಮ ಈ ಪ್ರಶಸ್ತಿಯನ್ನು ಸ್ವೀಕರಿಸಬೇಕಾಗಿ ವಿನಂತಿ.
  ಯಾವುದೇ ಕಾರಣಕ್ಕೂ ಅಂಚೆ ಮೂಲಕ ಪ್ರಶಸ್ತಿಯನ್ನು ಕಳಿಸುವುದಿಲ್ಲ. ಯಾಕೆಂದರೆ, ಪ್ರಶಸ್ತಿಯನ್ನು `ಕಾಸಿಗೆ ಮಾರಿಕೊಳ್ಳುವ’ವರ ಸಾಲಿನಲ್ಲಿ ಸೇರಲು ನಾವು ಬಯಸುವುದಿಲ್ಲ. ತಮಗೆ ಸಲ್ಲಬೇಕಾಗಿದ್ದ ಪ್ರಶಸ್ತಿಯ ಹಣ ಹಾಗೂ ಪ್ರಶಸ್ತಿಯ ಫಲಕ (ಅಂದಿನ ದಿನಾಂಕದಲ್ಲಿಯೇ ಪ್ರಕಟವಾಗಿದೆ. ಇವತ್ತೂ ಕೂಡ ಹಾಗೆಯೇ ಇದೆ) ಈ ಬಾರಿಯ ದಶಮಾನೋತ್ಸವದಲ್ಲಿ ತಾವು ಬರುವಿರಾದರೆ, ಅಂದಿನ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.
  -‘ಅಮ್ಮ’ ಪ್ರಶಸ್ತಿ ಸಂಘಟಕರು

  ಪ್ರತಿಕ್ರಿಯೆ
 4. LOKESH GOWDA

  mosale avare,
  prashasti bagge mattu kaaryakramada bagge maataduva munna omme gulbargakke bandu nodi. nimma abhipraya badalaguttade.
  yaavudannu nodade hige annodu sariyalla. usha joteyalle prashasti hanchikonda sri turuvekere prasad avarige omme keli. e baari dashamanotsava, banni nodi.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: